

ಶನಿವಾರ ಅವರಗುಪ್ಪಾದಲ್ಲಿ ಅನ್ನಸಂಪರ್ಪಣೆ,ತಾಳಮದ್ದಲೆ-
ಸಿದ್ಧಾಪುರ ಅವರಗುಪ್ಪಾದಲ್ಲಿ ಧಾರ್ಮಿಕ ಕಾರ್ಯಕ್ರಮಗಳ ಹಿನ್ನೆಲೆಯಲ್ಲಿ ಮಾ.೨೬ ರ ಶನಿವಾರ ಮಧ್ಯಾಹ್ನ ಸಾಮೂಹಿಕ ಅನ್ನಸಂತರ್ಪಣೆ ಮತ್ತು ರಾತ್ರಿ ೮ ಗಂಟೆಯಿಂದ ತಾಳಮದ್ದಲೆ ಕಾರ್ಯಕ್ರಮ ನಡೆಯಲಿವೆ. ಗ್ರಾಮದ ಶಿರಗಳ್ಳೆ ಕುಟುಂಬ ಆಯೋಜಿಸಿರುವ ಈ ಕಾರ್ಯಕ್ರಮಗಳು ಅವರಗುಪ್ಪಾ ಗ್ರಾಮ ದೇವಸ್ಥಾನದಲ್ಲಿ ನಡೆಯಲಿವೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಗ್ರಾಹಕರೇ ಗಮನಿಸಿ; ಏಪ್ರಿಲ್ ನಲ್ಲಿ ಬ್ಯಾಂಕ್ ಗಳಿಗೆ 15 ದಿನ ರಜೆ
ಭಾರತವು ಏಪ್ರಿಲ್ 1, 2022 ರಿಂದ ಹೊಸ ಆರ್ಥಿಕ ವರ್ಷ ಪ್ರಾರಂಭವಾಗಲಿದೆ. ಬ್ಯಾಂಕ್ ರಜಾದಿನಗಳು ಯಾವಾಗಲೂ ನಮ್ಮ ಭಾರತೀಯರಲ್ಲಿ ಆಸಕ್ತಿಯ ವಿಷಯವಾಗಿದೆ ಏಕೆಂದರೆ ಬ್ಯಾಂಕುಗಳು ನಮ್ಮ ದೈನಂದಿನ ಜೀವನದ ಮುಖ್ಯ ಕೇಂದ್ರವಾಗಿದೆ.

ನವದೆಹಲಿ: ಭಾರತವು ಏಪ್ರಿಲ್ 1, 2022 ರಿಂದ ಹೊಸ ಆರ್ಥಿಕ ವರ್ಷ ಪ್ರಾರಂಭವಾಗಲಿದೆ. ಬ್ಯಾಂಕ್ ರಜಾದಿನಗಳು ಯಾವಾಗಲೂ ನಮ್ಮ ಭಾರತೀಯರಲ್ಲಿ ಆಸಕ್ತಿಯ ವಿಷಯವಾಗಿದೆ ಏಕೆಂದರೆ ಬ್ಯಾಂಕುಗಳು ನಮ್ಮ ದೈನಂದಿನ ಜೀವನದ ಮುಖ್ಯ ಕೇಂದ್ರವಾಗಿದೆ. ಏಪ್ರಿಲ್ 2022 ರಲ್ಲಿ 15 ದಿನಗಳವರೆಗೆ ಬ್ಯಾಂಕುಗಳು ಕಾರ್ಯನಿರ್ವಹಿಸುವುದಿಲ್ಲ.
ಈ 15 ದಿನಗಳಲ್ಲಿ 4 ಭಾನುವಾರ ಮತ್ತು ಎರಡನೇ ಮತ್ತು ನಾಲ್ಕನೇ ಶನಿವಾರಗಳು ಸೇರಿವೆ. ಈ ದಿನಗಳಲ್ಲಿ ಬ್ಯಾಂಕ್‌ಗಳು ಭಾರತದಲ್ಲಿ ಅಧಿಕೃತವಾಗಿ ಮುಚ್ಚಲ್ಪಡುತ್ತವೆ. ಇವುಗಳ ಹೊರತಾಗಿ, 9 ಇತರ ರಜಾದಿನಗಳು ವಿವಿಧ ರಾಜ್ಯಗಳಲ್ಲಿ ಬ್ಯಾಂಕುಗಳು ಮುಚ್ಚಲ್ಪಡುತ್ತವೆ.

ಭಾರತದಲ್ಲಿ, ಬ್ಯಾಂಕ್ ರಜಾದಿನಗಳನ್ನು ಭಾರತೀಯ ರಿಸರ್ವ್ ಬ್ಯಾಂಕ್ (RBI) ನಿರ್ಧರಿಸುತ್ತದೆ. RBI ಪ್ರಕಾರ ಮೂರು ವಿಧದ ಬ್ಯಾಂಕ್ ರಜಾದಿನಗಳಿವೆ, ಅವುಗಳೆಂದರೆ ರಾಜ್ಯ ಹಬ್ಬಗಳು, ಧಾರ್ಮಿಕ ರಜಾದಿನಗಳು ಮತ್ತು ರಾಷ್ಟ್ರೀಯ ಹಬ್ಬಗಳು.
ಏಪ್ರಿಲ್ 1: ವಾರ್ಷಿಕ ಮುಕ್ತಾಯ
ಏಪ್ರಿಲ್ 2: ಗುಡಿ ಪಾಡ್ವಾ/ ಯುಗಾದಿ/ ನವರಾತ್ರಿ ಬೇಲಾಪುರ್, ಬೆಂಗಳೂರು, ಚೆನ್ನೈ, ಹೈದರಾಬಾದ್, ಇಂಫಾಲ್, ಜಮ್ಮು, ಮುಂಬೈ, ನಾಗ್ಪುರ, ಪಣಜಿ, ಶ್ರೀನಗರ
ಏಪ್ರಿಲ್ 3: ಭಾನುವಾರ (ಅಖಿಲ ಭಾರತ)
ಏಪ್ರಿಲ್ 4: ಸರ್ಹುಲ್ ರಾಂಚಿ
ಏಪ್ರಿಲ್ 5: ಬಾಬು ಜಗಜೀವನ್ ರಾಮ್ ಅವರ ಜನ್ಮದಿನ (ಹೈದರಾಬಾದ್)
ಏಪ್ರಿಲ್ 9: ಎರಡನೇ ಶನಿವಾರ (ಅಖಿಲ ಭಾರತ)
ಏಪ್ರಿಲ್ 10: ಭಾನುವಾರ (ಅಖಿಲ ಭಾರತ)
ಏಪ್ರಿಲ್ 14: ಮಹಾವೀರ ಜಯಂತಿ/ ಬಾಬಾ ಅಂಬೇಡ್ಕರ್ ಜಯಂತಿ (ಅಖಿಲ ಭಾರತ) (ಶಿಮ್ಲಾ, ಶಿಲ್ಲಾಂಗ್ ಹೊರತುಪಡಿಸಿ)
ಏಪ್ರಿಲ್ 15: ಶುಭ ಶುಕ್ರವಾರ (ಅಖಿಲ ಭಾರತ) (ಜೈಪುರ, ಜಮ್ಮು ಮತ್ತು ಶ್ರೀನಗರ ಹೊರತುಪಡಿಸಿ)
ಏಪ್ರಿಲ್ 16: ಬೊಹಾಗ್ ಬಿಹು ಗುವಾಹಟಿ
ಏಪ್ರಿಲ್ 17: ಭಾನುವಾರ (ಅಖಿಲ ಭಾರತ)
ಏಪ್ರಿಲ್ 21: ಗಡಿಯಾ ಪೂಜಾ (ಅಗರ್ತಲಾ)
ಏಪ್ರಿಲ್ 23: ನಾಲ್ಕನೇ ಶನಿವಾರ (ಅಖಿಲ ಭಾರತ)
ಏಪ್ರಿಲ್ 24: ಭಾನುವಾರ (ಅಖಿಲ ಭಾರತ)
ಏಪ್ರಿಲ್ 29: ಶಬ್-ಎ-ಕದರ್ (ಜಮ್ಮು ಮತ್ತು ಶ್ರೀನಗರ) (kpc)

ಸಿದ್ದಾಪುರ: ದೈವಾನುಷ್ಠಾನ ಕೊರತೆಯೇ ಮಾನಸಿಕ ಅಶಾಂತಿಗೆ ಕಾರಣ. ಇದರ ನಿವಾರಣೆಗೆ ನಮ್ಮ ಆದಾಯದ ಒಂದು ಭಾಗ ದೇವರಿಗೆ ಎತ್ತಿಟ್ಟರೆ ಕೊರತೆ ಆಗದು ಎಂದು ಪ್ರಸಿದ್ಧ ಜೋತಿಷಿ ಡಾ. ಕಮಲಾಕರ ಭಟ್ಟ ಹೇಳಿದರು.
ಗುರುವಾರ ಅವರು ತಾಲೂಕಿನ ಬೊಗ್ರಿಮಕ್ಕಿ ಶೀರಳ್ಳಿಯ ಶ್ರೀಗಂಗಾಕಲ್ಲೇಶ್ವರ ದೇವಸ್ಥಾನದಲ್ಲಿ ಪುನರ್ ಪ್ರತಿಷ್ಠಾಪಿತ ದೇವರ ಪುನರ್ ಪ್ರತಿಷ್ಠಾಪನಾ ಮಹೋತ್ಸವದ ಪ್ರಥಮ ವಾರ್ಷಿಕೋತ್ಸವದಲ್ಲಿ ಪಾಲ್ಗೊಂಡು ಮಾತನಾಡಿದರು.
ಕಾಶಿಯ ಪಕ್ಕದಲ್ಲಿ ಗಂಗೆ ಹರಿಯುತ್ತದೆ. ಆದರೆ ಇಲ್ಲಿನ ಕಲ್ಲೇಶ್ವರನ ಬಳಿಯೇ ಗಂಗಾಷ್ಟಮಿಯಂದು ಗಂಗೋದ್ಭವ ಆಗುತ್ತದೆ. ನಮಗೆಲ್ಲ ಕಾಶಿಗೆ ಹೋಗಲಾಗುವದಿಲ್ಲ. ಅವರಿಗೆಲ್ಲ ಈ ನೆಲ ಪುಣ್ಯಕ್ಷಣವಾಗಿಸುತ್ತದೆ ಎಂದ ಅವರು, ಅನ್ಯ ಕ್ಷೇತ್ರ ಮಾಡುವ ಪಾಪ ಪುಣ್ಯ ಕ್ಷೇತ್ರದಲ್ಲಿ ಕಳೆಯುತ್ತದೆ. ಪುಣ್ಯಕ್ಷೇತ್ರದ ಕಾರ್ಯ ಪರದಲ್ಲಿ ವಜ್ರಲೇಪವಾಗಿ ಕಾಪಾಡುತ್ತದೆ ಎಂದರು.
ಸಾಮಾಜಿಕ ಪ್ರಮುಖ ಡಾ. ಶಶಿಭೂಷಣ ಹೆಗಡೆ ದೊಡ್ಮನೆ, ನಮ್ಮ ಬದ್ಧತೆಯನ್ನು ಧಾರ್ಮಿಕ, ದೇವಸ್ಥಾನಗಳ ಬಗ್ಗೆ ತೋರಬೇಕು. ಹತ್ತು ಜನರ ಜವಬ್ದಾರಿ ಇಬ್ಬರು ಹೊರಬೇಕಾಗಿದೆ. ಇದನ್ನು ನಿತ್ಯ ಧಾರ್ಮಿಕ ಸಂಸ್ಕ್ರತಿ ಉಳಿಸಿ ಮುನ್ನಡೆಯಬೇಕು ಎಂದರು.
ನಾಟ್ಯ ವಿನಾಯಕ ದೇವಸ್ಥಾನದ ವಿಶ್ವಸ್ಥ ವಿನಾಯಕ ಹೆಗಡೆ ಕಲಗದ್ದೆ, ದೇವರ ದೇವ, ಮಹಾದೇವನ ಬಳಿ ಶುದ್ಧ ಮನಸ್ಸಿನಿಂದ ಮಾಡಿ ಹೊರಟರೆ ಯಶಸ್ವಿಯಾಗಿ ಪೂರ್ಣ ಮಾಡಿಕೊಳ್ಳಲಾಗುತ್ತದೆ. ನಮ್ಮ ಪ್ರತಿಷ್ಠೆ ಮಾಡದೇ ದೇವರ ಪ್ರತಿಷ್ಠೆ ಮಾಡಿದರೆ ಸಮಸ್ತ ಅಭಿವೃದ್ದಿ ಆಗುತ್ತದೆ. ಮನಸ್ಸಿನ ಪಾಪ ಕಳೆಯುವ ಲೋಕ ಪಾವನ ಪರಮೇಶ್ವರ ನೈಸರ್ಗಿಕ ಅಭಿಷೇಕ ಆಗುತ್ತದೆ ಎಂಬುದೂ ವಿಶೇಷವಾಗಿದೆ ಎಂದರು.
ಹೆಮ್ಮನಬೈಲು ಸೊಸೈಟಿ ಅಧ್ಯಕ್ಷ ಬಿ.ಆರ್.ನಾಯ್ಕ, ಪ್ರಸಿದ್ದ ಭಾಗವತ ಕಪ್ಪೆಕೆರೆ ಸುಬ್ರಾಯ ಭಾಗವತ್,
ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷ ರಾಮಚಂದ್ರ ರಾ. ಹೆಗಡೆ, ಪಂಚಾಯ್ತ ಮಾಜಿ ಅಧ್ಯಕ್ಷ ಸೀತಾರಾಮ ಭಟ್ಟ, ಸಾಮಾಜಿಕ ಧುರೀಣ ಎನ್.ಎಲ್.ಗೌಡ, ಸೋವಿನಕೊಪ್ಪ ಪಂಚಾಯತ್ ಅಧ್ಯಕ್ಷ ಮೋಹನ ಗೌಡ, ಸದಸ್ಯರಾದ ಗಿರೀಶ ಶೇಟ್, ಗಣಪತಿ ಗೌಡ, ಕಾರ್ಯದರ್ಶಿ ರಾಜು ಹೆಗಡೆ ಇತರರು ಇದ್ದರು. ಪ್ರಣವ ಭಟ್ ನಿರ್ವಹಿಸಿದರು.
ಇದೇ ವೇಳೆ ಸಾಧಕರಾದ ಎನ್.
ಜಿ.ಹೆಗಡೆ ಬೊಗ್ರಿಮಕ್ಕಿ ಅವರಿಗೆ ಸೇವಾ ಮಾಣಿಕ್ಯ ಹಾಗೂ ಕಲಾವಿದ ಶಿವರಾಮ ನಾ. ಹೆಗಡೆ ಹುಟ್ಲಿ ಅವರನ್ನು ಕಲಿಯುಗದ ಧರ್ಮರಾಯ ಎಂದು ಬಿರುದು ನೀಡಿ ಆತ್ಮೀಯವಾಗಿ ಗೌರವಿಸಲಾಯಿತು. ವಿವಿಧ ಸ್ಪರ್ಧಾ ವಿಜೇತರಿಗೆ ಬಹುಮಾನ ಕೂಡ ವಿತರಿಸಲಾಯಿತು.
ಮುಂಜಾನೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು, ರುದ್ರಕುಂಭಾಭಿಷೇಕ, ಶತರುದ್ರಮಹಾಯಾಗಗಳು ವಿ.ಮಂಜುನಾಥ ಭಟ್ಟ ಕಲ್ಲಾಳ ಇತರರು ನಡೆಸಿಕೊಟ್ಟರು.

