local news-ಏಪ್ರಿಲ್ ನಲ್ಲಿ ಬ್ಯಾಂಕ್ ಗಳಿಗೆ 15 ದಿನ ರಜೆ

ಶನಿವಾರ ಅವರಗುಪ್ಪಾದಲ್ಲಿ ಅನ್ನಸಂಪರ್ಪಣೆ,ತಾಳಮದ್ದಲೆ-

ಸಿದ್ಧಾಪುರ ಅವರಗುಪ್ಪಾದಲ್ಲಿ ಧಾರ್ಮಿಕ ಕಾರ್ಯಕ್ರಮಗಳ ಹಿನ್ನೆಲೆಯಲ್ಲಿ ಮಾ.೨೬ ರ ಶನಿವಾರ ಮಧ್ಯಾಹ್ನ ಸಾಮೂಹಿಕ ಅನ್ನಸಂತರ್ಪಣೆ ಮತ್ತು ರಾತ್ರಿ ೮ ಗಂಟೆಯಿಂದ ತಾಳಮದ್ದಲೆ ಕಾರ್ಯಕ್ರಮ ನಡೆಯಲಿವೆ. ಗ್ರಾಮದ ಶಿರಗಳ್ಳೆ ಕುಟುಂಬ ಆಯೋಜಿಸಿರುವ ಈ ಕಾರ್ಯಕ್ರಮಗಳು ಅವರಗುಪ್ಪಾ ಗ್ರಾಮ ದೇವಸ್ಥಾನದಲ್ಲಿ ನಡೆಯಲಿವೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಗ್ರಾಹಕರೇ ಗಮನಿಸಿ; ಏಪ್ರಿಲ್ ನಲ್ಲಿ ಬ್ಯಾಂಕ್ ಗಳಿಗೆ 15 ದಿನ ರಜೆ

ಭಾರತವು ಏಪ್ರಿಲ್ 1, 2022 ರಿಂದ ಹೊಸ ಆರ್ಥಿಕ ವರ್ಷ ಪ್ರಾರಂಭವಾಗಲಿದೆ. ಬ್ಯಾಂಕ್ ರಜಾದಿನಗಳು ಯಾವಾಗಲೂ ನಮ್ಮ ಭಾರತೀಯರಲ್ಲಿ ಆಸಕ್ತಿಯ ವಿಷಯವಾಗಿದೆ ಏಕೆಂದರೆ ಬ್ಯಾಂಕುಗಳು ನಮ್ಮ ದೈನಂದಿನ ಜೀವನದ ಮುಖ್ಯ ಕೇಂದ್ರವಾಗಿದೆ.

Two-Day Strike Called By Two Bank Unions Next Week

ನವದೆಹಲಿ: ಭಾರತವು ಏಪ್ರಿಲ್ 1, 2022 ರಿಂದ ಹೊಸ ಆರ್ಥಿಕ ವರ್ಷ ಪ್ರಾರಂಭವಾಗಲಿದೆ. ಬ್ಯಾಂಕ್ ರಜಾದಿನಗಳು ಯಾವಾಗಲೂ ನಮ್ಮ ಭಾರತೀಯರಲ್ಲಿ ಆಸಕ್ತಿಯ ವಿಷಯವಾಗಿದೆ ಏಕೆಂದರೆ ಬ್ಯಾಂಕುಗಳು ನಮ್ಮ ದೈನಂದಿನ ಜೀವನದ ಮುಖ್ಯ ಕೇಂದ್ರವಾಗಿದೆ. ಏಪ್ರಿಲ್ 2022 ರಲ್ಲಿ 15 ದಿನಗಳವರೆಗೆ ಬ್ಯಾಂಕುಗಳು ಕಾರ್ಯನಿರ್ವಹಿಸುವುದಿಲ್ಲ.

ಈ 15 ದಿನಗಳಲ್ಲಿ 4 ಭಾನುವಾರ ಮತ್ತು ಎರಡನೇ ಮತ್ತು ನಾಲ್ಕನೇ ಶನಿವಾರಗಳು ಸೇರಿವೆ. ಈ ದಿನಗಳಲ್ಲಿ ಬ್ಯಾಂಕ್‌ಗಳು ಭಾರತದಲ್ಲಿ ಅಧಿಕೃತವಾಗಿ ಮುಚ್ಚಲ್ಪಡುತ್ತವೆ. ಇವುಗಳ ಹೊರತಾಗಿ, 9 ಇತರ ರಜಾದಿನಗಳು ವಿವಿಧ ರಾಜ್ಯಗಳಲ್ಲಿ ಬ್ಯಾಂಕುಗಳು ಮುಚ್ಚಲ್ಪಡುತ್ತವೆ.

https://imasdk.googleapis.com/js/core/bridge3.507.1_en.html#goog_1861887529

ಭಾರತದಲ್ಲಿ, ಬ್ಯಾಂಕ್ ರಜಾದಿನಗಳನ್ನು ಭಾರತೀಯ ರಿಸರ್ವ್ ಬ್ಯಾಂಕ್ (RBI) ನಿರ್ಧರಿಸುತ್ತದೆ. RBI ಪ್ರಕಾರ ಮೂರು ವಿಧದ ಬ್ಯಾಂಕ್ ರಜಾದಿನಗಳಿವೆ, ಅವುಗಳೆಂದರೆ ರಾಜ್ಯ ಹಬ್ಬಗಳು, ಧಾರ್ಮಿಕ ರಜಾದಿನಗಳು ಮತ್ತು ರಾಷ್ಟ್ರೀಯ ಹಬ್ಬಗಳು.

ಏಪ್ರಿಲ್ 1:  ವಾರ್ಷಿಕ ಮುಕ್ತಾಯ
ಏಪ್ರಿಲ್ 2: ಗುಡಿ ಪಾಡ್ವಾ/ ಯುಗಾದಿ/ ನವರಾತ್ರಿ ಬೇಲಾಪುರ್, ಬೆಂಗಳೂರು, ಚೆನ್ನೈ, ಹೈದರಾಬಾದ್, ಇಂಫಾಲ್, ಜಮ್ಮು, ಮುಂಬೈ, ನಾಗ್ಪುರ, ಪಣಜಿ, ಶ್ರೀನಗರ
ಏಪ್ರಿಲ್ 3: ಭಾನುವಾರ (ಅಖಿಲ ಭಾರತ)
ಏಪ್ರಿಲ್ 4: ಸರ್ಹುಲ್ ರಾಂಚಿ
ಏಪ್ರಿಲ್ 5: ಬಾಬು ಜಗಜೀವನ್ ರಾಮ್ ಅವರ ಜನ್ಮದಿನ (ಹೈದರಾಬಾದ್)
ಏಪ್ರಿಲ್ 9: ಎರಡನೇ ಶನಿವಾರ (ಅಖಿಲ ಭಾರತ)
ಏಪ್ರಿಲ್ 10: ಭಾನುವಾರ (ಅಖಿಲ ಭಾರತ)
ಏಪ್ರಿಲ್ 14: ಮಹಾವೀರ ಜಯಂತಿ/ ಬಾಬಾ ಅಂಬೇಡ್ಕರ್ ಜಯಂತಿ (ಅಖಿಲ ಭಾರತ) (ಶಿಮ್ಲಾ, ಶಿಲ್ಲಾಂಗ್ ಹೊರತುಪಡಿಸಿ)
ಏಪ್ರಿಲ್ 15: ಶುಭ ಶುಕ್ರವಾರ (ಅಖಿಲ ಭಾರತ) (ಜೈಪುರ, ಜಮ್ಮು ಮತ್ತು ಶ್ರೀನಗರ ಹೊರತುಪಡಿಸಿ)
ಏಪ್ರಿಲ್ 16: ಬೊಹಾಗ್ ಬಿಹು ಗುವಾಹಟಿ
ಏಪ್ರಿಲ್ 17: ಭಾನುವಾರ (ಅಖಿಲ ಭಾರತ)
ಏಪ್ರಿಲ್ 21: ಗಡಿಯಾ ಪೂಜಾ (ಅಗರ್ತಲಾ)
ಏಪ್ರಿಲ್ 23: ನಾಲ್ಕನೇ ಶನಿವಾರ (ಅಖಿಲ ಭಾರತ)
ಏಪ್ರಿಲ್ 24: ಭಾನುವಾರ (ಅಖಿಲ ಭಾರತ)
ಏಪ್ರಿಲ್ 29: ಶಬ್-ಎ-ಕದರ್ (ಜಮ್ಮು ಮತ್ತು ಶ್ರೀನಗರ) (kpc)

ನಮ್ಮ ಆದಾಯದ ಒಂದು ಭಾಗ ಭಗವಂತನಿಗೆ ಎತ್ತಿಡಬೇಕು: ವಿ.ಕಮಲಾಕರ
ಸಿದ್ದಾಪುರ: ದೈವಾನುಷ್ಠಾನ ಕೊರತೆಯೇ ಮಾನಸಿಕ‌ ಅಶಾಂತಿಗೆ ಕಾರಣ. ಇದರ ನಿವಾರಣೆಗೆ ನಮ್ಮ ಆದಾಯದ‌ ಒಂದು ಭಾಗ ದೇವರಿಗೆ ಎತ್ತಿಟ್ಟರೆ ಕೊರತೆ ಆಗದು ಎಂದು ಪ್ರಸಿದ್ಧ ಜೋತಿಷಿ ಡಾ. ಕಮಲಾಕರ ಭಟ್ಟ ಹೇಳಿದರು.
ಗುರುವಾರ ಅವರು ತಾಲೂಕಿನ ಬೊಗ್ರಿಮಕ್ಕಿ ಶೀರಳ್ಳಿಯ ಶ್ರೀಗಂಗಾಕಲ್ಲೇಶ್ವರ ದೇವಸ್ಥಾನದಲ್ಲಿ ಪುನರ್ ಪ್ರತಿಷ್ಠಾಪಿತ ದೇವರ ಪುನರ್ ಪ್ರತಿಷ್ಠಾಪನಾ ಮಹೋತ್ಸವದ ಪ್ರಥಮ ವಾರ್ಷಿಕೋತ್ಸವದಲ್ಲಿ ಪಾಲ್ಗೊಂಡು‌ ಮಾತನಾಡಿದರು.

ಕಾಶಿಯ ಪಕ್ಕದಲ್ಲಿ ಗಂಗೆ ಹರಿಯುತ್ತದೆ. ಆದರೆ ಇಲ್ಲಿ‌ನ ಕಲ್ಲೇಶ್ವರನ ಬಳಿಯೇ ಗಂಗಾಷ್ಟಮಿಯಂದು ಗಂಗೋದ್ಭವ ಆಗುತ್ತದೆ. ನಮಗೆಲ್ಲ ಕಾಶಿಗೆ ಹೋಗಲಾಗುವದಿಲ್ಲ. ಅವರಿಗೆಲ್ಲ ಈ ನೆಲ ಪುಣ್ಯಕ್ಷಣವಾಗಿಸುತ್ತದೆ ಎಂದ ಅವರು, ಅನ್ಯ ಕ್ಷೇತ್ರ ‌ಮಾಡುವ‌ ಪಾಪ‌ ಪುಣ್ಯ ಕ್ಷೇತ್ರದಲ್ಲಿ‌ ಕಳೆಯುತ್ತದೆ. ಪುಣ್ಯ‌ಕ್ಷೇತ್ರದ ಕಾರ್ಯ ಪರದಲ್ಲಿ ವಜ್ರಲೇಪವಾಗಿ ಕಾಪಾಡುತ್ತದೆ ಎಂದರು.
ಸಾಮಾಜಿಕ ಪ್ರಮುಖ ಡಾ. ಶಶಿಭೂಷಣ‌ ಹೆಗಡೆ ದೊಡ್ಮನೆ, ನಮ್ಮ ಬದ್ಧತೆಯನ್ನು‌ ಧಾರ್ಮಿಕ, ದೇವಸ್ಥಾನಗಳ ಬಗ್ಗೆ ತೋರಬೇಕು. ಹತ್ತು‌ ಜನರ ಜವಬ್ದಾರಿ ಇಬ್ಬರು ಹೊರಬೇಕಾಗಿದೆ. ಇದನ್ನು ನಿತ್ಯ ಧಾರ್ಮಿಕ ಸಂಸ್ಕ್ರತಿ ಉಳಿಸಿ‌ ಮುನ್ನಡೆಯಬೇಕು ಎಂದರು.
ನಾಟ್ಯ ವಿನಾಯಕ ದೇವಸ್ಥಾನದ ವಿಶ್ವಸ್ಥ ವಿನಾಯಕ ಹೆಗಡೆ ಕಲಗದ್ದೆ, ದೇವರ ದೇವ,‌ ಮಹಾದೇವನ ಬಳಿ ಶುದ್ಧ ಮನಸ್ಸಿನಿಂದ ‌ಮಾಡಿ ಹೊರಟರೆ ಯಶಸ್ವಿಯಾಗಿ ಪೂರ್ಣ ಮಾಡಿಕೊಳ್ಳಲಾಗುತ್ತದೆ. ನಮ್ಮ ಪ್ರತಿಷ್ಠೆ ಮಾಡದೇ ದೇವರ ಪ್ರತಿಷ್ಠೆ ಮಾಡಿದರೆ ಸಮಸ್ತ ಅಭಿವೃದ್ದಿ ಆಗುತ್ತದೆ. ಮನಸ್ಸಿನ ಪಾಪ ಕಳೆಯುವ ಲೋಕ ಪಾವನ ಪರಮೇಶ್ವರ ನೈಸರ್ಗಿಕ ಅಭಿಷೇಕ ಆಗುತ್ತದೆ‌ ಎಂಬುದೂ ವಿಶೇಷವಾಗಿದೆ ಎಂದರು.
ಹೆಮ್ಮನಬೈಲು ಸೊಸೈಟಿ ಅಧ್ಯಕ್ಷ ಬಿ.ಆರ್.ನಾಯ್ಕ, ಪ್ರಸಿದ್ದ ಭಾಗವತ ಕಪ್ಪೆಕೆರೆ ಸುಬ್ರಾಯ ಭಾಗವತ್,
ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷ ರಾಮಚಂದ್ರ ರಾ. ಹೆಗಡೆ, ಪಂಚಾಯ್ತ‌ ಮಾಜಿ ಅಧ್ಯಕ್ಷ ಸೀತಾರಾಮ ಭಟ್ಟ, ಸಾಮಾಜಿಕ ಧುರೀಣ ಎನ್.ಎಲ್.ಗೌಡ, ಸೋವಿನಕೊಪ್ಪ ಪಂಚಾಯತ್ ಅಧ್ಯಕ್ಷ ‌ಮೋಹನ ಗೌಡ, ಸದಸ್ಯರಾದ ಗಿರೀಶ ಶೇಟ್, ಗಣಪತಿ ಗೌಡ, ಕಾರ್ಯದರ್ಶಿ ರಾಜು ಹೆಗಡೆ ಇತರರು ಇದ್ದರು. ಪ್ರಣವ ಭಟ್ ನಿರ್ವಹಿಸಿದರು.
ಇದೇ ವೇಳೆ ಸಾಧಕರಾದ ಎನ್.
ಜಿ.ಹೆಗಡೆ ಬೊಗ್ರಿಮಕ್ಕಿ ಅವರಿಗೆ ಸೇವಾ ಮಾಣಿಕ್ಯ ಹಾಗೂ ಕಲಾವಿದ‌ ಶಿವರಾಮ ನಾ. ಹೆಗಡೆ ಹುಟ್ಲಿ ಅವರನ್ನು ಕಲಿಯುಗದ ಧರ್ಮರಾಯ ಎಂದು‌ ಬಿರುದು ನೀಡಿ ಆತ್ಮೀಯವಾಗಿ ಗೌರವಿಸಲಾಯಿತು. ವಿವಿಧ ಸ್ಪರ್ಧಾ ವಿಜೇತರಿಗೆ ಬಹುಮಾನ ಕೂಡ ವಿತರಿಸಲಾಯಿತು.
ಮುಂಜಾನೆ ವಿವಿಧ‌ ಧಾರ್ಮಿಕ ಕಾರ್ಯಕ್ರಮಗಳು, ರುದ್ರ‌ಕುಂಭಾಭಿಷೇಕ, ಶತರುದ್ರ‌ಮಹಾಯಾಗಗಳು ವಿ.ಮಂಜುನಾಥ ಭಟ್ಟ ಕಲ್ಲಾಳ ಇತರರು ನಡೆಸಿಕೊಟ್ಟರು.
ತಾಲೂಕ ವಕೀಲರ ಸಂಘದ ವತಿಯಿಂದ ಸಹಕಾರ ರತ್ನ ಪ್ರಶಸ್ತಿ ಪುರಸ್ಕೃತ ಟಿ. ಎಂ. ಎಸ್ ಅಧ್ಯಕ್ಷರಾದ ಆರ್. ಎಂ. ಹೆಗಡೆ ಬಾಳೆಸರ ಇವರನ್ನು ಪಟ್ಟಣದ ನ್ಯಾಯಾಲಯದ ಸಭಾಂಗಣದಲ್ಲಿ ಸನ್ಮಾನಿಸಿ ಗೌರವಿಸಿದರು ಈ ಸಂದರ್ಭದಲ್ಲಿ ನ್ಯಾಯದೀಶರಾದ ಸಿದ್ದರಾಮ ಎಸ್, ಎ. ಪಿ. ಪಿ. ಚಂದ್ರಶೇಖರ ಎಚ್. ಎಸ್, ವಕೀಲರ ಸಂಘದ ಅಧ್ಯಕ್ಷರಾದ ದಿನೇಶ್ ಕುಮಾರ್ ನಾಯ್ಕ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು ಈ ವೇಳೆಯಲ್ಲಿ ವಕೀಲರ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು

_______________________________________________________________

ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi

_______________________________________________________________

Latest Posts

ಕಡವೆ ಪ್ರಕರಣ: ಅಧಿಕಾರಿಗಳ ಮೇಲೆ ದೌರ್ಜನ್ಯ ಪ್ರಕರಣ ದಾಖಲಿಸಿದ ಸಂತ್ರಸ್ತ!

ಹುಸೂರಿನ ಕಡವೆ ಪ್ರಕರಣ ಮರೆಮಾಚುವ ಮುನ್ನ ಸಿದ್ಧಾಪುರದ ತ್ಯಾಗಲಿ (ನಾಣಿಕಟ್ಟಾದಲ್ಲಿ)  ಯಲ್ಲಿ ಕಡವೆ ಭೇಟೆ ಮಾಡಿದ ಪ್ರಕರಣ ನಡೆದಿದ್ದು ಈ ಪ್ರಕರಣದಲ್ಲಿ ಆತುರದಿಂದ ವ್ಯಕ್ತಿಯೊಬ್ಬರನ್ನು...

ಸರ್ಕಾರಿ ಕಚೇರಿಗಳಿಗೆ ಅರ್ಧದಿನ ರಜೆ ಘೋಷಣೆ……

ಡಿಕೆಶಿ ಪದಗ್ರಹಣಕ್ಕೆ ಸಿದ್ಧತೆ; ವಿಧಾನಸೌಧದ ಸುತ್ತಮುತ್ತ ಇರುವ ಸರ್ಕಾರಿ ಕಚೇರಿಗಳಿಗೆ ಅರ್ಧದಿನ ರಜೆ ಘೋಷಣೆ ಕರ್ನಾಟಕ ರಾಜ್ಯಪಾಲರ ಹೆಸರಿನಲ್ಲಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ...

ಭಟ್ಕಳ: ತಟ್ಟೆಹಕ್ಕಲು ನದಿಯಲ್ಲಿ ಮುಳುಗಿ ಒಂದೇ ಕುಟುಂಬದ 8 ಮಂದಿ ನೀರುಪಾಲು, ತಲಾ 5 ಲಕ್ಷ ಪರಿಹಾರ ಘೋಷಿಸಿದ ಸರ್ಕಾರ!

ಉತ್ತರ ಕನ್ನಡ ಜಿಲ್ಲೆಯ ಭಟ್ಕಳದ ತಟ್ಟೆಹಕ್ಕಲು ನದಿಯಲ್ಲಿ ಕಪ್ಪೆ ಚಿಪ್ಪು ತೆಗೆಯಲು ಹೋದ ಎಂಟು ಮಂದಿ ಜಲಸಮಾಧಿಯಾಗಿರುವ ದಾರುಣ ಘಟನೆ ನಡೆದಿದ್ದು ಇಬ್ಬರು ನಾಪತ್ತೆಯಾಗಿದ್ದಾರೆ....

forest land issue… ಅರಣ್ಯ ಭೂಮಿ ಹಕ್ಕು: ಅಧಿಕಾರಿಗಳ ನಿರ್ಲಕ್ಷ, ಮುಖ್ಯಮಂತ್ರಿಗಳ ಬಳಿ ನಿಯೋಗ ತೆರಳಲು ಎಚ್ಚರಿಕೆ!

ಸಿದ್ದಾಪುರ ತಾಲೂಕು ಸೇರಿದಂತೆ ಉತ್ತರ ಕನ್ನಡ ಜಿಲ್ಲೆಯಾದ್ಯಂತ ಅರಣ್ಯ ಭೂಮಿ ಸಾಗುವಳಿ ಹಕ್ಕು ಅರ್ಜಿ ಪಡೆಯುವ ಪ್ರಕ್ರೀಯೆ ನಾಮಕಾವಾಸ್ಥೆ ನಡೆದಿದ್ದು ಇದಕ್ಕೆ ೧೫ ದಿವಸಗಳ...

ಮುಂಗಾರು ಪೂರ್ವ ಬರ ಸಿಡಿಲು….. ಕೋಟ್ಯಾಂತರ ಹಾನಿ! ಎಚ್ಚೆತ್ತ ಜಿಲ್ಲಾಡಳಿತ…

ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ಸೇರಿದಂತೆ ಮಲೆನಾಡಿನಲ್ಲಿ ಸುರಿದ ಮುಂಗಾರು ಪೂರ್ವ ಮಳೆ ಅಪಾರ ಹಾನಿ ಮಾಡಿದೆ. ಒಣ ಬಿಸಿಲಿನಿಂದ ಕಂಗೆಟ್ಟ ಜನಜೀವನಕ್ಕೆ ಮಳೆ...

Latest Posts

ಕಡವೆ ಪ್ರಕರಣ: ಅಧಿಕಾರಿಗಳ ಮೇಲೆ ದೌರ್ಜನ್ಯ ಪ್ರಕರಣ ದಾಖಲಿಸಿದ ಸಂತ್ರಸ್ತ!

ಹುಸೂರಿನ ಕಡವೆ ಪ್ರಕರಣ ಮರೆಮಾಚುವ ಮುನ್ನ ಸಿದ್ಧಾಪುರದ ತ್ಯಾಗಲಿ (ನಾಣಿಕಟ್ಟಾದಲ್ಲಿ)  ಯಲ್ಲಿ ಕಡವೆ ಭೇಟೆ ಮಾಡಿದ ಪ್ರಕರಣ ನಡೆದಿದ್ದು ಈ ಪ್ರಕರಣದಲ್ಲಿ ಆತುರದಿಂದ ವ್ಯಕ್ತಿಯೊಬ್ಬರನ್ನು ಥಳಿಸಿದ ಆರೋಪದ ಮೇಲೆ ಅರಣ್ಯಾಧಿಕಾರಿಗಳ ಮೇಲೆ ದೌರ್ಜನ್ಯ ಪ್ರಕರಣ ದಾಖಲಾದ ಮಾಹಿತಿ ಬಹಿರಂಗವಾಗಿದೆ. ನಾಣಿಕಟ್ಟಾ ಪ್ರದೇಶದಲ್ಲಿ ಆಗಂತುಕರು ಕಡವೆಯನ್ನು ಕೊಂದು ಪರಾರಿಯಾಗಿದ್ದರು. ಈ ಭೇಟೆ ಪ್ರಕರಣದ ಜಾಡು ಹಿಡಿದ...

Recommended For You

About the Author: Kanneshwar Naik

Leave a Reply

Your email address will not be published. Required fields are marked *