

ಊರ ಜಾತ್ರೆಯಲ್ಲಿ ಸಿದ್ದು ವೀರ ಕುಣಿತದ ಹೆಜ್ಜೆ: ಟ್ವೀಟರ್ ನಲ್ಲಿ ವಿಡಿಯೋ ಹಂಚಿಕೊಂಡ ಬಿಜೆಪಿ ಸಚಿವ!
ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ತಮ್ಮ ಹುಟ್ಟೂರು ಮೈಸೂರು ಜಿಲ್ಲೆ ಸಿದ್ದರಾಮನ ಹುಂಡಿಯಲ್ಲಿ ಸಕತ್ ಸ್ಟೇಪ್ ಹಾಕಿದ್ದಾರೆ. ಸಿದ್ದರಾಮೇಶ್ವರ ದೇವರ ಜಾತ್ರೆಯಲ್ಲಿ ತಮ್ಮ ಸಂಗಡಿಗರೊಂದಿಗೆ ತಮಟೆ ಸದ್ದಿಗೆ ತಕ್ಕಂತೆ ಸಿದ್ದರಾಮಯ್ಯ ವೀರಕುಣಿತದ ಹೆಜ್ಜೆ ಹಾಕಿದ್ದಾರೆ.

ಬೆಂಗಳೂರು: ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ತಮ್ಮ ಹುಟ್ಟೂರು ಮೈಸೂರು ಜಿಲ್ಲೆ ಸಿದ್ದರಾಮನ ಹುಂಡಿಯಲ್ಲಿ ಸಕತ್ ಸ್ಟೇಪ್ ಹಾಕಿದ್ದಾರೆ. ಸಿದ್ದರಾಮೇಶ್ವರ ದೇವರ ಜಾತ್ರೆಯಲ್ಲಿ ತಮ್ಮ ಸಂಗಡಿಗರೊಂದಿಗೆ ತಮಟೆ ಸದ್ದಿಗೆ ತಕ್ಕಂತೆ ಸಿದ್ದರಾಮಯ್ಯ ವೀರಕುಣಿತದ ಹೆಜ್ಜೆ ಹಾಕಿದ್ದಾರೆ. ಈ ವಿಡಿಯೋವನ್ನು ಸಿದ್ದರಾಮಯ್ಯ ಅವರ ಪುತ್ರ ಡಾ. ಯತೀಂದ್ರ ಸಿದ್ದರಾಮಯ್ಯ ಟ್ವೀಟರ್ ನಲ್ಲಿ ಹಂಚಿಕೊಂಡಿದ್ದಾರೆ.


ಡಾ. ಯತೀಂದ್ರ ಸಿದ್ದರಾಮಯ್ಯ ಅವರನ್ನು ಟ್ವೀಟರ್ ನ್ನು ರೀ ಟ್ವೀಟ್ ಮಾಡಿರುವ ಕೈಗಾರಿಕಾ ಸಚಿವ ಡಾ. ಮುರುಗೇಶ್ ನಿರಾಣಿ, ಜಾತ್ರೆಗಳೆಂದರೆ ಹಾಗೆ ಸಂಭ್ರಮ, ಸಡಗರ, ಸಂತೋಷ ಮನೆ ಮಾಡಿರುತ್ತದೆ. ನಾವು ಎಷ್ಟೇ ಎತ್ತರಕ್ಕೆ ಬೆಳೆದರೂ ನಮ್ಮ ಬೇರನ್ನು ಎಂದಿಗೂ ಮರೆಯಬಾರದು. ಅಂತೆಯೇ ಸಿದ್ದರಾಮೇಶ್ವರ ದೇವರ ಜಾತ್ರೆಯಲ್ಲಿ ಸಿದ್ದರಾಮಯ್ಯ ಅವರು ವೀರ ಕುಣಿತಕ್ಕೆ ಹೆಜ್ಜೆ ಹಾಕಿದ್ದನ್ನು ಕಂಡು ನಮ್ಮೂರಿನ ಜಾತ್ರೆ ನೆನಪಾಯಿತು ಎಂದಿದ್ದಾರೆ. (kpc)
