‘ಮರಳಿನ ಮೇಲೆ ಬರೆದು ಕನ್ನಡ ಅಕ್ಷರಾಭ್ಯಾಸ ಮಾಡುತ್ತಿದ್ದೆ’: ವಿಧಾನಸಭೆಯಲ್ಲಿ ತಮ್ಮ ಜೀವನದ ಕಥೆ ಹಂಚಿಕೊಂಡ ಸಿದ್ದರಾಮಯ್ಯ
‘ಮರಳಿನ ಮೇಲೆ ಬರೆದು ಕನ್ನಡ ಅಕ್ಷರಾಭ್ಯಾಸ ಮಾಡುತ್ತಿದ್ದೆ’: ವಿಧಾನಸಭೆಯಲ್ಲಿ ತಮ್ಮ ಜೀವನದ ಕಥೆ ಹಂಚಿಕೊಂಡ ಸಿದ್ದರಾಮಯ್ಯ
ಎಲ್ಲರಂತೆ ನಾನೂ ಬಳಪದೊಂದಿಗೆ ಕಪ್ಪು ಹಲಗೆ (ಸ್ಲೇಟ್) ಮೇಲೆ ಬರೆದು ಅಕ್ಷರಾಭ್ಯಾಸ ಮಾಡಲಿಲ್ಲ. ನೃತ್ಯ ಶಿಕ್ಷಕರ ಮಾರ್ಗದರ್ಶನದಲ್ಲಿ ಮರಳಿನ ಮೇಲೆ ಬರೆದು ಅಕ್ಷರಗಳ ಕಲಿತಿದ್ದೆ ಎಂದು ವಿಧಾನಸಭೆಯಲ್ಲಿ ಸದಸ್ಯರೊಂದಿಗೆ ತಮ್ಮ ಜೀವನದ ಕಥೆಯನ್ನು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಹಂಚಿಕೊಂಡರು.
ಬೆಂಗಳೂರು: ಎಲ್ಲರಂತೆ ನಾನೂ ಬಳಪದೊಂದಿಗೆ ಕಪ್ಪು ಹಲಗೆ (ಸ್ಲೇಟ್) ಮೇಲೆ ಬರೆದು ಅಕ್ಷರಾಭ್ಯಾಸ ಮಾಡಲಿಲ್ಲ. ನೃತ್ಯ ಶಿಕ್ಷಕರ ಮಾರ್ಗದರ್ಶನದಲ್ಲಿ ಮರಳಿನ ಮೇಲೆ ಬರೆದು ಅಕ್ಷರಗಳ ಕಲಿತಿದ್ದೆ ಎಂದು ವಿಧಾನಸಭೆಯಲ್ಲಿ ಸದಸ್ಯರೊಂದಿಗೆ ತಮ್ಮ ಜೀವನದ ಕಥೆಯನ್ನು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಹಂಚಿಕೊಂಡರು.
ವಿಧಾನಸಭೆಯಲ್ಲಿ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಚರ್ಚೆ ಆರಂಭ ಮಾಡಿದಾಗ ಬಿಜೆಪಿ ಸದಸ್ಯರು ಏನ್ ಕ್ಲೀನ್ ಶೇವ್ ಮಾಡಿಕೊಂಡು ಬಂದಿದ್ದೀರಿ ಎಂದು ಕಾಲೆಳೆದರು.https://imasdk.googleapis.com/js/core/bridge3.507.1_en.html#goog_332845601
ಇದಕ್ಕೆ ಸಿದ್ದರಾಮಯ್ಯ ಅವರು, ನನಗೆ 75 ವರ್ಷ ವಯಸ್ಸಾಗಿದೆ. ಆ ರೀತಿ ಕಾಣಬಾರದು ಎಂದು ಈ ರೀತಿ ಬಂದಿದ್ದೇನೆಂದು ನಗುತ್ತಾ ಉತ್ತರಿಸಿದರು.
ಈ ವೇಳೆ ಸಿದ್ದರಾಮಯ್ಯ ನಿಜವಾಗಿ ಹೇಳಬೇಕೆಂದರೆ ನನಗೆ ನನ್ನ ಹುಟ್ಟಿದ ದಿನಾಂಕ ಗೊತ್ತಿಲ್ಲ. ನಮ್ಮ ಅಪ್ಪ, ಅಮ್ಮ ಹೆಬ್ಬೆಟ್ಟುಗಳು. ಅವರು ಬರೆದಿಲ್ಲ. ಶಾಲೆಯಲ್ಲಿರುವ ದಾಖಲೆಗಳ ಪ್ರಕಾರ ನೋಡಿದರೆ ನನಗೆ 75 ವರ್ಷ ವಯಸ್ಸಾಗಿದೆ. ಆದರೆ, ಅದೂ ಕೂಡ ಅಧಿಕೃತವಲ್ಲ. 5ನೇ ತರಗತಿಗೆ ನಾನು ನೇರವಾಗಿ ಶಾಲೆಗೆ ಸೇರಿದ್ದೆ. ಶಿಕ್ಷಕರೇ ನನ್ನ ಜನ್ಮದಿನಾಂಕವನ್ನು ಬರೆದಿದ್ದರು. ಆ ದಿನಾಂಕವನ್ನೇ ಇದೀಗ ನಾನು ಬಳಕೆ ಮಾಡುತ್ತಿದ್ದೇನೆ. ಎಲ್ಲಾ ಅಧಿಕೃತ ದಾಖಲೆಗಳಲ್ಲೂ ಇದೇ ದಿನಾಂಕವೇ ಇದೆ. ಇದು ನನ್ನ ನಿಜವಾದ ಜನ್ಮದಿನಾಂಕವಲ್ಲ ಎಂದರು.
ಇದೇ ವೇಳೆ ತಮ್ಮ ಬಾಲ್ಯದ ದಿನಗಳ ನೆನೆದ ಅವರು, ನನ್ನ ತಂದೆ-ತಾಯಿ ಶಾಲೆಗೆ ಹೋಗಿಲ್ಲ. ನನ್ನ ತಂದೆ ವೀರ ಮಕ್ಕಳ ಕುಣಿತ ಸಿದ್ದರಾಮಯ್ಯ ಹುಂಡಿ ಗ್ರಾಮದಲ್ಲಿರುವ ಜಾನಪದ ನೃತ್ಯ ತಂಡಕ್ಕೆ ಸೇರ್ಪಡೆಗೊಳಿಸಿದ್ದರು. ಅದೃಷ್ಟವಶಾತ್ ನೃತ್ಯ ಶಿಕ್ಷಕಿಯೊಬ್ಬರು ತಮ್ಮ ಬಿಡುವಿನ ಸಮಯದಲ್ಲಿ ನನಗೆ ಅಕ್ಷರಾಭ್ಯಾಸ ಮಾಡಿಸುತ್ತಿದ್ದರು. ಮರಳಿನ ಮೇಲೆ ಬರೆದು ಅಕ್ಷರಗಳ ಕಲಿಸಿದ್ದರು. ಅಕ್ಷರಗಳು, ವ್ಯಾಕರಣ ಸೇರಿ ಸಾಕಷ್ಟು ಕಲಿಸಿದ್ದರು. ಇದನ್ನು ನಾನು ಎಂದಿಗೂ ಮರೆಯುವುದಿಲ್ಲ ಎಂದು ತಿಳಿಸಿದರು.
ನಾನು ಪ್ರಾಥಮಿಕ ಮತ್ತು ಪ್ರೌಢಶಾಲೆಯಲ್ಲಿ ಓದುತ್ತಿದ್ದ ಸಂದರ್ಭದಲ್ಲಿ, ಉತ್ಸಾಹದಿಂದ ಕಲಿಸುವ ಸಮರ್ಪಿತ ಶಿಕ್ಷಕರಿದ್ದರು. ಅವರ ಕಾರಣದಿಂದಾಗಿ ಓದಲು ಮತ್ತು ಬರೆಯಲು ಮತ್ತು ಸಾಕ್ಷರನಾಗಲು ಸಾಧ್ಯವಾಯಿತು ಎಂದರು.
ಈ ವೇಳೆ ಸಿದ್ದರಾಮಯ್ಯ ಅವರ ಕನ್ನಡ ಜ್ಞಾನವನ್ನು ಶ್ಲಾಘಿಸಿದ ಕಾಂಗ್ರೆಸ್ ಶಾಸಕ ಕೃಷ್ಣ ಬೈರೇಗೌಡ ಅವರು, ಸದನದಲ್ಲಿ ಸಿದ್ದರಾಮಯ್ಯನವರಿಗಿಂತ ಕನ್ನಡ ವ್ಯಾಕರಣದ ಬಗ್ಗೆ ಹೆಚ್ಚಿನ ಜ್ಞಾನ ಯಾರಿಗೂ ಇಲ್ಲ ಎಂದು ಹೇಳಿದರು.
“ಸಿದ್ದರಾಮಯ್ಯ ಅವರಿಗೆ ಹಣಕಾಸು ಮತ್ತು ಸಾಮಾಜಿಕ ನ್ಯಾಯ ಮಾತ್ರವಲ್ಲ, ಕನ್ನಡದ ಬಗ್ಗೆ ಉತ್ತಮ ಜ್ಞಾನವಿದೆ. ತಮ್ಮ ಅದ್ಭುತ ಜ್ಞಾನದಿಂದ ಶಾಲೆಗಳಲ್ಲಿ ಮಕ್ಕಳ ಭವಿಷ್ಯವನ್ನು ಉತ್ತಮವಾಗಿಸಬಹುದು ಎಂದು ತಿಳಿಸಿದರು.
ಈ ವೇಳೆ ಮಾತನಾಡಿದ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿಯವರು, ಸಿದ್ದರಾಮಯ್ಯ ಮಕ್ಕಳನ್ನು ಪ್ರಶ್ನಿಸಿದರೆ ಸಮಸ್ಯೆಯಾಗುವುದಿಲ್ಲ. ಆದರೆ, ಶಿಕ್ಷಕರನ್ನು ಪ್ರಶ್ನಿಸಿದರೆ ಸಮಸ್ಯೆಯಾಗಲಿದೆ ಎಂದು ಹಾಸ್ಯಧಾಟಿಯಲ್ಲಿ ಹೇಳಿದರು. (kpc)