


‘ಮುಸಲ್ಮಾನರು ಯಾರೂ ಮಾವು ಬೆಳೆಯೋದಿಲ್ಲ, ಹಿಂದೂ ರೈತರು ಬೆಳೆದ ಮಾವನ್ನು ಅವ್ರು ಖರೀದಿಸೋದು’
ರೈತ ಸಂಘಗಳ ಮುಖಂಡರ ಜೊತೆ ಸಂವಾದ ಕಾರ್ಯಕ್ರಮದ ನಂತರ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಮುಸಲ್ಮಾನರ ಬಳಿ ಖರೀದಿ ಮಾಡಬೇಡಿ ಅಂದರೆ ಅದಕ್ಕಿಂತ ದೊಡ್ಡ ರಾಷ್ಟ್ರದ್ರೋಹ ಬೇರೊಂದಿಲ್ಲ. ರೈತರು ಶೀಘ್ರದಲ್ಲಿಯೇ ಬಿಜೆಪಿ ಅಂಗ ಸಂಸ್ಥೆಗಳ ವಿರುದ್ಧ ತಿರುಗಿ ಬೀಳುತ್ತಾರೆ ಎಂದು ಎಚ್ಚರಿಕೆ ನೀಡಿದರು..
ಬೆಂಗಳೂರು : ಮುಸ್ಲಿಂ ಸಮುದಾಯದವರಿಂದ ಮಾವು ಖರೀದಿಸದಂತೆ ಹಿಂದೂ ಸಂಘಟನೆಗಳ ಕರೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರು, ರೈತರ ಬೆಳೆಯನ್ನು ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಅಥವಾ ರಾಜ್ಯ ಬಿಜೆಪಿ ಸರ್ಕಾರ ಖರೀದಿ ಮಾಡುತ್ತಾ? ಎಂದು ಪ್ರಶ್ನಿಸಿದ್ದಾರೆ.
ಮುಸ್ಲಿಂ ವ್ಯಾಪಾರಿಗಳ ವಿರುದ್ಧದ ದ್ವೇಷದ ಕುರಿತಂತೆ ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಪ್ರತಿಕ್ರಿಯೆ ನೀಡಿರುವುದು..
ರೈತ ಸಂಘಗಳ ಮುಖಂಡರ ಜೊತೆ ಸಂವಾದ ಕಾರ್ಯಕ್ರಮದ ನಂತರ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಮುಸಲ್ಮಾನರ ಬಳಿ ಖರೀದಿ ಮಾಡಬೇಡಿ ಅಂದರೆ ಅದಕ್ಕಿಂತ ದೊಡ್ಡ ರಾಷ್ಟ್ರದ್ರೋಹ ಬೇರೊಂದಿಲ್ಲ. ರೈತರು ಶೀಘ್ರದಲ್ಲಿಯೇ ಬಿಜೆಪಿ ಅಂಗ ಸಂಸ್ಥೆಗಳ ವಿರುದ್ಧ ತಿರುಗಿ ಬೀಳುತ್ತಾರೆ ಎಂದು ಎಚ್ಚರಿಕೆ ನೀಡಿದರು.
ಮಾವಿನ ಹಣ್ಣನ್ನು ಮುಸಲ್ಮಾನರು ಯಾರ ಬಳಿ ಖರೀದಿ ಮಾಡ್ತಾರೆ. ಮುಸಲ್ಮಾನರು ಯಾರೂ ಮಾವು ಬೆಳೆಯಲ್ಲ. ಬೆಳೆಯೋರೆಲ್ಲಾ ನಮ್ಮ ರೈತರು, ಹಿಂದೂಗಳು ಎಂದರು. ಇದಕ್ಕೆಲ್ಲ ಒಂದು ಅಂತ್ಯ ಇದ್ದೇ ಇರುತ್ತದೆ. ಹಿಂದೂಪರ ಜನರೇ ತಿರುಗಿ ಬೀಳುತ್ತಾರೆ ನೋಡುತ್ತಿರಿ ಎಂದರು.
ಮುಸ್ಲಿಮರು ಕೆಮಿಕಲ್ ಹಾಕಿ ಮಾವು ಮಾರಾಟ ಮಾಡುತ್ತಾರೆ ಎಂಬ ಆರೋಪಕ್ಕೆ ಪ್ರತಿಕ್ರಿಯಿಸಿದ ಹೆಚ್ಡಿಕೆ, ನೂರಾರು ವರ್ಷ ಎಲ್ಲವನ್ನು ತಿನ್ನುತ್ತಾ ಬಂದಿದ್ದಾರೆ. ಇಂತಹ ವಿಚಾರವೆಲ್ಲ, ಚುನಾವಣೆ ವೇಳೆಯಲ್ಲೇಕೆ ಬಂತು ಎಂದು ಪ್ರಶ್ನಿಸಿದರು. (ಈಟಿಬಿಕೆ)
