ಕ್ರಿ.ಪೂ.೫೦೦ ವರ್ಷಗಳ ಹಿಂದೆ ಪರ್ಶಿಯನ್ ರಾಜ ಭಾರತದ ಮೇಲೆ ದಾಳಿಮಾಡಿದಾಗ ಸಿಂಧೂ ನದಿ ಬಯಲಿನ ಪ್ರದೇಶವನ್ನು ಹಿಂದೂ ಎಂದ ಅಪಭ್ರಂಶ ಹಿಂದೂ ಎಂದಾಯಿತೆ ವಿನ: ಹಿಂದೂ ಎನ್ನುವ ಧರ್ಮ,ಅದರ ಪ್ರವರ್ತಕರು ಯಾರು ಎನ್ನುವುದು ಯಾರಿಗೂ ತಿಳಿದಿಲ್ಲ. ಆದರೂ ಈ ಪುರಾತನ ಧರ್ಮ ಉಳಿದು, ಬೆಳೆದು ಬಂದಿದೆಯೆಂದರೆ ಅದರ ರಕ್ಷಣೆಗೆ ಯಾರ ಅಗತ್ಯವೂ ಇಲ್ಲ ಅಂಥ ಹೆಚ್ಚುಗಾರಿಕೆಯ ಧರ್ಮವನ್ನು ಮಾನವೀಯ ಧರ್ಮ ಎಂದರೆ ತಪ್ಪಿಲ್ಲ ಎಂದು ಸಾಮಾಜಿಕ ಮುಖಂಡ ಡಾ. ಶಶಿಭೂಷಣ ಹೆಗಡೆ ಹೇಳಿದರು.
ಸಿದ್ಧಾಪುರದ ಯುಗಾದಿ ಉತ್ಸವ ಸಮೀತಿ ಆಯೋಜಿಸಿದ್ದ ಯುಗಾದಿ ಶೋಭಾಯಾತ್ರೆ ಮತ್ತು ಧಾರ್ಮಿಕ ಪ್ರವಚನ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಮಾತನಾಡಿದ ಅವರು ಈ ಮೇಲಿನ ಅಭಿಪ್ರಾಯ ಮಂಡಿಸಿದರು.
ಈ ಕಾರ್ಯಕ್ರಮಕ್ಕೆ ಕೆ.ಜಿ.ನಾಯ್ಕ ಹಣಜಿಬೈಲ್ ಸ್ವಾಗತಿಸಿ, ಪ್ರಾಸ್ಥಾವಿಕ ನುಡಿಗಳನ್ನು ಹೇಳಿದರು. ಈ ಕಾರ್ಯಕ್ರಮದಲ್ಲಿ ಮಾತನಾಡಿದ ರಾಜ್ಯ ವಿಧಾನಸಭಾ ಅಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಯುಗಾದಿ ಸಾರ್ವಜನಿಕವಾಗಿ ಹೊಸ ವರ್ಷವಾಗಿ ಮನ್ನಣೆ ಪಡೆಯುತ್ತಿದೆ ಎಂದರು.