



ಕಾರವಾರ ತಾಲೂಕು ಯುವ ಮೀನುಗಾರರ ಸಂಘರ್ಷ ಸಮಿತಿ ಏ.17ರಂದು ಗಾಳ ಹಾಕಿ ‘ಮೀನು ಹಿಡಿಯುವ ಸ್ಪರ್ಧೆ’ ಆಯೋಜಿಸಿದೆ. ಆಸಕ್ತರು 250 ರೂ. ಪ್ರವೇಶ ಶುಲ್ಕದೊಂದಿಗೆ ಸ್ಪರ್ಧೆಯಲ್ಲಿ ಭಾಗವಹಿಸಬಹುದು..
ಕಾರವಾರ : ಸಾಂಪ್ರದಾಯಿಕ ಮೀನುಗಾರಿಕೆ ಉಳಿಸಿ ಬೆಳೆಸುವ ನಿಟ್ಟಿನಲ್ಲಿ ತಾಲೂಕು ಯುವ ಮೀನುಗಾರರ ಸಂಘರ್ಷ ಸಮಿತಿ ಏ.17ರಂದು ಗಾಳ ಹಾಕಿ ‘ಮೀನು ಹಿಡಿಯುವ ಸ್ಪರ್ಧೆ’ ಆಯೋಜಿಸಿದೆ. ಕಾರವಾರದ ಸಚಿನ್ ಜುವೆಲ್ಲರ್ಸ್ ಸ್ಪರ್ಧೆಯ ಪಾಯೋಜಕತ್ವ ವಹಿಸಿದೆ. ಬೈತಖೋಲ ಮೀನುಗಾರಿಕೆ ಬಂದರು ಸಮೀಪವಿರುವ ಬ್ರೇಕ್ ವಾಟರ್ನ ಎರಡೂ ದಂಡೆಯಲ್ಲಿ ಈ ಸ್ಪರ್ಧೆ ನಡೆಯಲಿದೆ.
ಸಾಮಾನ್ಯ ಗಾಳ ಮತ್ತು ರೇಡಿಯಂ ಗಾಳ ಎರಡು ವಿಭಾಗದಲ್ಲಿ ಸ್ಪರ್ಧೆ ಏರ್ಪಡಿಸಲಾಗಿದೆ. ಆಸಕ್ತರು 250 ರೂ. ಪ್ರವೇಶ ಶುಲ್ಕದೊಂದಿಗೆ ಸ್ಪರ್ಧೆಯಲ್ಲಿ ಭಾಗವಹಿಸಬಹುದು. ಸ್ಪರ್ಧಾಳುಗಳಿಗೆ ಮಧ್ಯಾಹ್ನ ಊಟದ ವ್ಯವಸ್ಥೆ ಇದೆ. ಬೆಳಗ್ಗೆ 10 ರಿಂದ ಮಧ್ಯಾಹ್ನ 3 ಗಂಟೆವರೆಗೆ ಗಾಳ ಹಾಕುವ ಸ್ಫರ್ಧೆ ನಡೆಯಲಿದೆ. ಮೀನುಗಳ ಸಂಖ್ಯೆ, ತೂಕದ ಆಧಾರದ ಮೇಲೆ ವಿವಿಧ ಬಹುಮಾನಗಳನ್ನು ನೀಡಲಾಗುತ್ತದೆ.
ಸಾಮಾನ್ಯ ಗಾಳ ಹಾಕಿ ಮೀನು ಹಿಡಿಯುವವರಿಗೆ ಮೊದಲ ಬಹುಮಾನ-5 ಸಾವಿರ ರೂ., ಎರಡನೇ ಬಹುಮಾನ 2,500 ರೂ. ಮತ್ತು ಮೂರನೇ ಬಹುಮಾನ 1200 ರೂ. ಮತ್ತು ಟ್ರೋಫಿ. ರೇಡಿಯಂ ಗಾಳ ಹಾಕಿ ಮೀನು ಹಿಡಿಯುವ ವಿಭಾಗದಲ್ಲಿ ಮೊದಲ ಬಹುಮಾನ- 4 ಸಾವಿರ ರೂ., ಎರಡನೇ ಬಹುಮಾನ 2 ಸಾವಿರ ಮತ್ತು ಮೂರನೇ ಬಹುಮಾನ ಸಾವಿರ ರೂ. ಹಾಗೂ ಟ್ರೋಫಿ. ಸ್ಪರ್ಧೆಗೆ ಭಾಗವಹಿಸುವ ಎಲ್ಲರಿಗೂ ಪ್ರಮಾಣ ಪತ್ರ ನೀಡಲಾಗುತ್ತದೆ.
ಆಸಕ್ತರು ಅವಿನಾಶ್ 8970194985, ಸಚಿನ್ 9741247750, ಶ್ರೀನಿವಾಸ ಅಂಬಿಗ+918431397983 ವಿಕ್ರಾಂತ ಅವರ್ಸೆಕರ +919844997738 ಇವರ ಬಳಿ ಹೆಸರು ನೋಂದಾಯಿಸಿಕೊಳ್ಳಬೇಕು ಎಂದು ಸಂಘದ ಅಧ್ಯಕ್ಷ ವಿನಾಯಕ ಹರಿಕಂತ್ರ ಕೋರಿದ್ದಾರೆ. (etbk)
ಸಿದ್ದಾಪುರ: ಬಿಜೆಪಿ ತಾಲ್ಲೂಕು ಮಂಡಲದ ವತಿಯಿಂದ ಬಿಜೆಪಿ ಸಂಸ್ಥಾಪನ ದಿನ ಆಚರಣೆ ಹಾಗೂ ಕಾರ್ಯಕಾರಿಣಿ ಸಭೆ ಬುಧವಾರ ನಡೆಯಿತು.
ಪಟ್ಟಣದ ಶ್ರೀ ಗಂಗಾಂಬಿಕ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿ ಬಳಿಕ ಮಂಡಲದ ಅಧ್ಯಕ್ಷ ನಾಗರಾಜ ನಾಯ್ಕ ಬೇಡ್ಕಣಿ ಅವರ ನೇತೃತ್ವದಲ್ಲಿ ಪಕ್ಷದ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಶೋಭಾಯಾತ್ರೆ ನಡೆಸಿದರು. ಸಂಸ್ಥಾಪನ ದಿನಾಚರಣೆಯ ಅಂಗವಾಗಿ ಮಂಡಲ ವ್ಯಾಪ್ತಿಯಲ್ಲಿ ಬರುವ ಬೂತ್ ಅಧ್ಯಕ್ಷರುಗಳ ಮನೆ ಮೇಲೆ ಪಕ್ಷದ ಧ್ವಜ ಹಾರಿಸಿ ಸಂಭ್ರಮಾಚರಣೆ ಮಾಡಿ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು. ನಂತರ ಪಟ್ಟಣದ ಬಾಲಭವನದಲ್ಲಿ ಕಾರ್ಯಕಾರಿಣಿ ಸಭೆಯನ್ನು ಅಧ್ಯಕ್ಷ ನಾಗರಾಜ ನಾಯ್ಕ ಬೇಡ್ಕಣಿ ಅವರು ಉದ್ಘಾಟಿಸಿ ಮಾತನಾಡಿದರು.
ಈ ಸಂದರ್ಭದಲ್ಲಿ ಮಂಡಲದ ಪ್ರಭಾರಿ ಕುಮಾರ ಮಾರ್ಕಂಡೆ ಅವರು ಕಾರ್ಯಕ್ರಮದ ಬಗ್ಗೆ ಮಾಹಿತಿ ನೀಡಿದರು. ರಾಜ್ಯ ಕಾರ್ಯಕಾರಣಿ ಸದಸ್ಯ ಕೆ.ಜಿ.ನಾಯ್ಕ ಹಣಜೀಬೈಲ, ಪ್ರಧಾನ ಕಾರ್ಯದರ್ಶಿಗಳಾದ ಸುರೇಶ್ ಮೇಸ್ತ, ಪ್ರಸನ್ನ ಹೆಗಡೆ, ಪಟ್ಟಣ ಪಂಚಾಯತ್ ಅಧ್ಯಕ್ಷೆ ಚಂದ್ರಕಲಾ ಸುರೇಶ ನಾಯ್ಕ, ಉಪಾಧ್ಯಕ್ಷ ರವಿಕುಮಾರ ನಾಯ್ಕ, ಸ್ಥಾಯಿ ಸಮಿತಿ ಅಧ್ಯಕ್ಷ ವಿನಯ ಹೊನ್ನೆಗುಂಡಿ, ಸದಸ್ಯರಾದ ಮಾರುತಿ ನಾಯ್ಕ, ನಂದನ ಬೋರ್ಕರ್, ಸುಧೀರ್ ನಾಯ್ಕ, ರಾಧಿಕಾ ಕಾನಗೋಡ, ಜಿಲ್ಲಾ ಕಾರ್ಯದರ್ಶಿಗಳಾದ ಗುರುಪ್ರಸಾದ ಹೆಗಡೆ ಹಾಗೂ ಕೃಷ್ಣಮೂರ್ತಿ ಮಡಿವಾಳ ಕಡಕೇರಿ, ನೇತ್ರಾವತಿ ನಾಯ್ಕ, ಹರೀಶ ಗೌಡರ್, ಸುಮನಾ ಕಾಮತ್, ಮಹಾಬಲೇಶ್ವರ ಹೆಗಡೆ, ತೋಟಪ್ಪ ನಾಯ್ಕ, ಶಿವಕುಮಾರ್ ನಾಯ್ಕ, ಸಚೀನ ಶೇಟ್ ಇತರರು ಹಾಜರಿದ್ದರು.


