

ರಾಜ್ಯ ವಿಧಾನಪರಿಷತ್ ಪ್ರತಿಪಕ್ಷದ ನಾಯಕ ಬಿ.ಕೆ. ಹರಿಪ್ರಸಾದ್ ಕಾಂಗ್ರೆಸ್ ಹೈಕಮಾಂಡ್ ಆಪ್ತವಲಯದ ನಾಯಕರಲ್ಲಿ ಒಬ್ಬರು. ದೇಶದ ಅರ್ಧದಷ್ಟು ರಾಜ್ಯಗಳ ವೀಕ್ಷಕರಾಗಿ ಚುನಾವಣಾ ಉಸ್ತುವಾರಿಗಳಾಗಿ ದುಡಿದಿರುವ ಬಿ.ಕೆ. ಹರಿಪ್ರಸಾದ್ ರಾಜ್ಯಸಭೆ ಸದಸ್ಯರಾಗಿ, ವಿಧಾನ ಪರಿಷತ್ ಸದಸ್ಯರಾಗಿ ಆಯ್ಕೆಯಾಗಿ ಪಕ್ಷದ ಸಂಘಟನೆಯಲ್ಲಿ ಸದಾ ತೊಡಗಿಸಿಕೊಂಡವರು.ಕಾಂಗ್ರೆಸ್ ಆಸೆಯಂತೆ ಬಿ.ಕೆ.ಹರಿಪ್ರಸಾದ್ ಸದಾ ಜನಪ್ರತಿನಿಧಿಯಾಗಿರಬೇಕು. ಶಾಸಕ,ಸಂಸದ, ರಾಜ್ಯಸಭೆ, ವಿಧಾನಸಭೆಯ ಸದಸ್ಯತ್ವ ಯಾವ ಅವ ಕಾಶ ಕೇಳಿದರೂ ಕಾಂಗ್ರೆಸ್ ಈ ವರೆಗೆ ಅವರಿಗೆ ಅಸ್ತು ಎಂದಿದೆ. ಈಗ ಬಿ.ಕೆ. ಹರಿಪ್ರಸಾದ್ ರಾಜ್ಯದ ಮುಖ್ಯಮಂತ್ರಿ ಸ್ಥಾನದ ಮೇಲೆ ಕಣ್ಣಿಟ್ಟಿರುವುದರಿಂದ ಕಾಂಗ್ರೆಸ್ ಅವರ ಆಸೆಯನ್ನು ಮನ್ನಿಸುವುದಿಲ್ಲ ಎಂದು ಹೇಳಲು ಕಾರಣಗಳಿಲ್ಲ.

https://samajamukhi.net/2022/03/23/sirsi-new-face-cong-cm-candidate/
ಬೆಂಗಳೂರು ದಕ್ಷಿ ಣದಿಂದ ಲೋಕಸಭೆಯ ಅಭ್ಯ ರ್ಥಿಯಾಗಿ ಪರಾಜಿತರಾಗಿರುವ ಹರಿಪ್ರಸಾದ್ ವಿಧಾನಪರಿಷತ್ ಸದಸ್ಯರಾಗಿ ಮುಖ್ಯಮಂತ್ರಿ ಹುದ್ದೆ ಕೇಳುತ್ತಾರೋ? ವಿಧಾನಸಭೆ ಪ್ರವೇಶಿಸಿ ಶಾಸಕಾಂಗ ನಾಯಕರಾಗಿ ಮುಖ್ಯಮಂತ್ರಿ ಅಭ್ಯರ್ಥಿಯಾಗುತ್ತಾರೋ ಎನ್ನುವ ಕುತೂಹಲದ ಪ್ರಶ್ನೆಗೆ ಸಧ್ಯಕ್ಕೆ ಹರಿಪ್ರಸಾದ್ ಉತ್ತರ ನೀಡುವ ಸ್ಥಿತಿಯಲ್ಲಿಲ್ಲ. ಆದರೆ ಹರಿಪ್ರಸಾದ್ ಸಂಪರ್ಕ,ಸಂಬಂಧದ ವ್ಯಕ್ತಿಗಳು ಹೇಳುವ ಪ್ರಕಾರ ಕಾಂಗ್ರೆಸ್ ನಲ್ಲಿ ಈಗಿರುವ ಸಮರ್ಥ ನಾಯಕರಲ್ಲಿ ಬಿ.ಕೆ. ಹರಿಪ್ರಸಾದ್ ಒಬ್ಬರು. ಕೆಲವು ದಶಕಗಳ ಗಾಂಧಿ ಮನೆತನದ ನಿಷ್ಠೆಯ ಹಿನ್ನೆಲೆಯಲ್ಲಿ ಹರಿಪ್ರಸಾದ್ ರಿಗೆ ರಾಷ್ಟ್ರೀಯ ನಾಯಕರ ಸ್ಥಾನಮಾನವಿದೆ. ರಾಜ್ಯಸಭೆಯಲ್ಲಿರಲಿ, ವಿಧಾನಪರಿಷತ್ ನಲ್ಲಿರಲಿ, ವೇದಿಕೆ,ಸಾರ್ವಜನಿಕ ಸಮಾವೇಶಗಳಿರಲಿ ಹರಿಪ್ರಸಾದ್ ತಮ್ಮ ಅನುಭವ, ಅಧ್ಯಯನಗಳ ಮೂಲಕ ಜನಮಾನಸ ಮೋಡಿ ಮಾಡುವ ನಾಯಕ. ಕಾಂಗ್ರೆಸ್ ನ ಕೆಲವೇ ಪ್ರಬಲ ನಾಯರಲ್ಲಿ ಒಬ್ಬರಾಗಿರುವ ಬಿ.ಕೆ. ಹರಿಪ್ರಸಾದ್ ಮುಂದೆ ಎರಡು ಆಯ್ಕೆಗಳಿವೆ. ಒಂದು ವಿಧಾನಪರಿಷತ್ ನಲ್ಲಿ ಪರಿಣಾಮಕಾರಿಯಾಗಿ ಕೆಲಸ ಮಾಡಿಕೊಂಡು ಆ ಪ್ರಭಾವ ಹೆಸರಿನೊಂದಿಗೆ ರಾಜ್ಯ ಕಾಂಗ್ರೆಸ್ ಸರ್ಕಾರದ ನೇತೃತ್ವ ವಹಿಸುವುದು ಅಥವಾ ಬರಲಿರುವ ಸಾರ್ವತ್ರಿಕ ಚುನಾವಣೆಯಲ್ಲಿ ವಿಧಾನಸಭೆಗೆ ಸ್ಫರ್ಧಿಸಿ ಮುಖ್ಯಮಂತ್ರಿಯಾಗುವುದು.
ಕಾಂಗ್ರೆಸ್ ಮುಖ್ಯಮಂತ್ರಿ ಆಕಾಂಕ್ಷಿಗಳಲ್ಲಿ ಪ್ರಮುಖರಾಗಿರುವ ಬಿ.ಕೆ. ಹರಿಪ್ರಸಾದ್ ವಿಧಾನಸಭೆ ಪ್ರವೇಶಿಸುವುದಾದರೆ ಬೆಂಗಳೂರಿನಲ್ಲಿ ಒಂದು ಕ್ಷೇತ್ರ ಆಯ್ಕೆ ಮಾಡಬಹುದು. ಮೂಲತ: ಮಂಗಳೂರಿನ (ದಕ್ಷಿಣಕನ್ನಡ) ಹರಿಪ್ರಸಾದ್ ತಮ್ಮ ಹುಟ್ಟೂರಿನಲ್ಲಿ ಕ್ಷೇತ್ರ ಒಂದನ್ನು ಕೇಳಿ ಪಡೆಯಬಹುದು. ಆದರೆ ಈ ಎರಡು ಸಾಧ್ಯತೆಗಳ ನಡುವೆ ಬಿ.ಕೆ.ಹರಿಪ್ರಸಾದ್ ಬೆಂಬಲಿಗರು ಅವರನ್ನು ಉತ್ತರ ಕನ್ನಡಕ್ಕೆ ಆಹ್ವಾನಿಸುತಿದ್ದಾರೆ. ಉತ್ತರ ಕನ್ನಡ ಜಿಲ್ಲೆಯ ಭಟ್ಕಳ, ಶಿರಸಿ, ಕುಮಟಾಗಳಲ್ಲಿ ಯಾವ ಕ್ಷೇತ್ರದಿಂದಾದರೂ ಹರಿಪ್ರಸಾದ್ ಸ್ಫರ್ಧಿಸಿ ಗೆಲ್ಲುವ ಅವಕಾಶವಿದೆ ಎನ್ನುವ ಅವರ ಆಪ್ತರು ಹರಿಪ್ರಸಾದ್ ಉತ್ತರ ಕನ್ನಡ ಜಿಲ್ಲೆಯ ಲೋಕಸಭಾ ಕ್ಷೇತ್ರ ಅಥವಾ ಯಾವುದೇ ವಿಧಾನಸಭಾ ಕ್ಷೇತ್ರದಿಂದ ಸ್ಫರ್ಧಿಸಬಹುದು ಅವರು ಉತ್ತರ ಕನ್ನಡದ ಪ್ರತಿನಿಧಿಯಾದರೆ ಜಿಲ್ಲೆಗೆ ಲಾಭ ಎನ್ನುತ್ತಾರೆ.
ಸುಧೀರ್ಘ ಅವಧಿಯುದ್ದಕ್ಕೂ ಕಾಂಗ್ರೆಸ್ ಪಕ್ಷದ ಅಣತಿಯಂತೆ ಕೆಲಸ ಮಾಡಿರುವ ಹರಿಪ್ರಸಾದ್ ಈಗ ವಿಧಾನಪರಿಷತ್ ನಲ್ಲಿ ಸಮರ್ಥವಾಗಿ ಪ್ರತಿಪಕ್ಷದ ನಾಯಕನ ಸ್ಥಾನ ತುಂಬಿದ್ದಾರೆ. ಗಾಂಧಿ ಕುಟುಂಬದ ಆಪ್ತ, ಪಕ್ಷನಿಷ್ಠ ಹರಿಪ್ರಸಾದ್ ಮುಖ್ಯಮಂತ್ರಿಯಾದರೆ ರಾಜ್ಯದಲ್ಲಿ ಹಿಂದುಳಿದವರ ಕೋಟಾ, ಗಾಂಧಿ ಕುಟುಂಬದ ಆಸೆ ಕರ್ನಾಟಕಕ್ಕೆ ಒಬ್ಬ ಪ್ರಬಲ ನಾಯಕನಾಗಿ ಹೊರಹೊಮ್ಮುವ ಅವಕಾಶಗಳ ಹಿನ್ನೆಲೆಯಲ್ಲಿ ಹರಿಪ್ರಸಾದ್ ವಿಧಾನ ಪರಿಷತ್ ನಿಂದ ರಾಜ್ಯದ ಮುಖ್ಯಮಂತ್ರಿಯಾಗುವ ಅವಕಾಶಗಳಿವೆ ಆದರೆ ಕಾಂಗ್ರೆಸ್ ಕಳೆದುಕೊಂಡ ರಾಜ್ಯದ ಕರಾವಳಿ,ಮಲೆನಾಡಿನ ಬಿಗಿಹಿಡಿತವನ್ನು ಪ್ರತಿಷ್ಠಾಪಿಸುವ ಹಿನ್ನೆಲೆಯಲ್ಲಿ ಬಿ.ಕೆ. ಹರಿಪ್ರಸಾದ್ ರಿಗೆ ರಾಜ್ಯದ ನಾಯಕತ್ವ ನೀಡಿ ಪಕ್ಷಪುನಶ್ಚೇತನ ಮಾಡುವ ಮೂಲಕ ಹರಿಪ್ರಸಾದ್ ರ ಅನುಭವ, ಜಾತಿ,ಪ್ರಾದೇಶಿಕ ಅನುಕೂಲಗಳ ಲಾಭ ಪಡೆಯಲು ಕಾಂಗ್ರೆಸ್ ಮುಂದಾಗಿರುವ ಸಾಧ್ಯ ತೆ ಹೆಚ್ಚು.
ರಾಜ್ಯದಲ್ಲಿ ಮಲ್ಲಿಕಾರ್ಜುನ ಖರ್ಗೆ, ಡಿ.ಕೆ.ಶಿವಕುಮಾರ್,ಸಿದ್ಧರಾಮಯ್ಯ, ಶಾಮನೂರ್ ಶಿವಶಂಕರಪ್ಪ ರಂಥ ಪ್ರಭಾವಿ ನಾಯಕರು ಮುಖ್ಯಮಂತ್ರಿಯಾಗಬೇಕೆಂಬ ಪ್ರಯತ್ನದಲ್ಲಿರುವಾಗ ಹೈಕಮಾಂಡ್ ತನ್ನ ಆಪ್ತ ಹರಿಪ್ರಸಾದ್ ರಿಗೆ ನೇತೃತ್ವ ನೀಡುವ ಮೂಲಕ ರಾಜ್ಯ ಕಾಂಗ್ರೆಸ್ ನ ನಾಯಕತ್ವದ ಮೇಲಾಟಕ್ಕೂ ಬ್ರೇಕ್ ಹಾಕಲಿದೆ ಎನ್ನಲಾಗುತ್ತಿದೆ. ಕರಾವಳಿ, ಮಲೆನಾಡಿನಲ್ಲಿ ನಾಯಕತ್ದ ಅಭಾವದಿಂದ ಸೊರಗುತ್ತಿರುವ ಕಾಂಗ್ರೆಸ್ ಗೆ ಬಿ.ಕೆ.ಹರಿಪ್ರಸಾದ್ ನೇತೃತ್ವ ನವಚೈತನ್ಯ ಮೂಡಿಸಲಿದೆ ಎನ್ನಲಾಗುತ್ತಿದೆ. (-ಕನ್ನೇಶ್ವರ ನಾಯ್ಕ ಕೋಲಶಿರ್ಸಿ ವಿ.ಕ. ವೆಬ್ ನ್ಯೂಸ್ ಉತ್ತರ ಕನ್ನಡ)
_______________________________________________________________
ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi
_______________________________________________________________
