ಸಾರಾಯಿ ಅಂಗಡಿಗೆ ಶಾಸಕರಿಂದ ಶಿಫಾರಸು ಆರೋಪ; ಸ್ಥಳೀಯರ ತೀವ್ರ ವಿರೋಧ

ಶಾಲೆ ಬಳಿ ಸಾರಾಯಿ ಅಂಗಡಿಗೆ ಶಾಸಕರಿಂದ ಶಿಫಾರಸು ಆರೋಪ; ಸ್ಥಳೀಯರ ತೀವ್ರ ವಿರೋಧ

ಉತ್ತರಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಬಾಡ ಹುಬ್ಬಣಗೇರಿ ಗ್ರಾಮದಲ್ಲಿ ಎಂಎಸ್‌ಐಎಲ್ ಮಳಿಗೆ ತೆರೆಯಲು ವ್ಯಕ್ತಿಯೋರ್ವರು ಅರ್ಜಿ ಸಲ್ಲಿಸಿದ್ದಾರೆ. ಈ ವ್ಯಕ್ತಿ ಬಾಡ ಗ್ರಾಮದ ಬಿಜೆಪಿ ಶಕ್ತಿ ಕೇಂದ್ರದ ಅಧ್ಯಕ್ಷರಾಗಿರುವ ಕಾರಣ ಕುಮಟಾ-ಹೊನ್ನಾವರ ಕ್ಷೇತ್ರದ ಶಾಸಕ ದಿನಕರ ಶೆಟ್ಟಿಯೇ ಅಬಕಾರಿ ಇಲಾಖೆಗೆ ಪರವಾನಗಿಗಾಗಿ ಶಿಫಾರಸ್ಸು ಪತ್ರ ಕಳುಹಿಸಿದ್ದಾರೆ ಎಂದು ಆರೋಪಿಸಲಾಗಿದೆ.

ಕಾರವಾರ: ಶಿಕ್ಷಣ ಸಂಸ್ಥೆಗಳ ಸುತ್ತಮುತ್ತ 100 ಮೀಟರ್ ವ್ಯಾಪ್ತಿಯಲ್ಲಿ ಗುಟ್ಕಾ, ತಂಬಾಕು ಹಾಗೂ ಮದ್ಯದಂತಹ ಮಾದಕ ವಸ್ತುಗಳನ್ನ ಮಾರಾಟ ಅಥವಾ ಸೇವನೆ ಮಾಡುವುದು ಕಾನೂನಿಗೆ ವಿರುದ್ಧವಾಗಿದೆ. ಆದರೆ, ಇಲ್ಲೊಂದು ಗ್ರಾಮದಲ್ಲಿ ಶಾಲೆಯ 100 ಮೀಟರ್ ಒಳಗೇ ಮದ್ಯದಂಗಡಿ ತೆರೆಯಲು ಸುಳ್ಳು ಮಾಹಿತಿ ನೀಡಿದ್ದು, ಖುದ್ದು ಶಾಸಕರೇ ತಮ್ಮ ಅಧಿಕೃತ ಪತ್ರದ ಮೂಲಕ ಅಂಗಡಿಗೆ ಪರವಾನಗಿ ನೀಡುವಂತೆ ಶಿಫಾರಸು ಮಾಡಿದ್ದಾರೆ ಎನ್ನಲಾಗ್ತಿದ್ದು, ಇದು ಗ್ರಾಮಸ್ಥರ ಕೆಂಗಣ್ಣಿಗೆ ಗುರಿಯಾಗಿದೆ. ಈ ಕುರಿತು ಒಂದು ವರದಿ ಇಲ್ಲಿದೆ ನೋಡಿ.https://prod.suv.etvbharat.com/v2/smart_urls/6249b7cb71d60097bf978ef8/embedplayer1?player_version=v3&notplay=true&autoplay=false&mute=false&thumbnailurl=https://etvbharatimages.akamaized.net/etvbharat/prod-

ತಾಲೂಕು ವಕೀಲರ ಸಂಘದ ಅಧ್ಯಕ್ಷರಾದ ಆರ್​. ಜಿ ನಾಯ್ಕ ಅವರು ಮಾತನಾಡಿದರು

ಉತ್ತರಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಬಾಡ ಹುಬ್ಬಣಗೇರಿ ಗ್ರಾಮದಲ್ಲಿ ಎಂಎಸ್‌ಐಎಲ್ ಮಳಿಗೆ ತೆರೆಯಲು ವ್ಯಕ್ತಿಯೋರ್ವರು ಅರ್ಜಿ ಸಲ್ಲಿಸಿದ್ದಾರೆ. ಈ ವ್ಯಕ್ತಿ ಬಾಡ ಗ್ರಾಮದ ಬಿಜೆಪಿ ಶಕ್ತಿ ಕೇಂದ್ರದ ಅಧ್ಯಕ್ಷರಾಗಿರುವ ಕಾರಣ, ಕುಮಟಾ-ಹೊನ್ನಾವರ ಕ್ಷೇತ್ರದ ಶಾಸಕ ದಿನಕರ ಶೆಟ್ಟಿಯೇ ಅಬಕಾರಿ ಇಲಾಖೆಗೆ ಪರವಾನಗಿಗಾಗಿ ಶಿಫಾರಸು ಪತ್ರ ಕಳುಹಿಸಿದ್ದಾರೆ ಎಂದು ಆರೋಪಿಸಲಾಗಿದೆ. ಶಾಲೆಯ ಸಮೀಪದಲ್ಲಿ ಎಂಎಸ್‌ಐಲ್ ಮಳಿಗೆ ತೆರೆಯಲು ಇದೀಗ ಭಾರಿ ವಿರೋಧ ವ್ಯಕ್ತವಾಗಿದೆ.

ಚುಟುಕು ಬ್ರಹ್ಮ ದಿನಕರ ದೇಸಾಯಿಯವರು ಕೆನರಾ ವೆಲ್​ಫೇರ್​ ಟ್ರಸ್ಟ್​ನ ಮೂಲಕ ಬಾಡ ಗ್ರಾಮದಲ್ಲಿ ಜನತಾ ವಿದ್ಯಾಲಯವನ್ನ 1945ರಲ್ಲಿ ತೆರೆದಿದ್ದರು. ಉದ್ದೇಶಿತ ಎಂಎಸ್‌ಐಎಲ್ ಮಳಿಗೆಗೂ ಈ ಶಾಲೆಯ ಕಾಂಪೌಂಡ್‌ಗೂ ಇರುವ ನೇರ ಅಂತರ ಕೇವಲ 60 ಮೀಟರ್. ಅಬಕಾರಿ ನಿಯಮದ ಪ್ರಕಾರ, ಏರಿಯಲ್ ಸರ್ವೆ ಮಾಡಿದರೂ ಕೂಡ ಕನಿಷ್ಠ ಅಂತರ 100 ಮೀಟರಾದರೂ ಇರಬೇಕು. ಆದರೆ, ಈ ನಿಯಮವನ್ನ ಇಲ್ಲಿ ಗಾಳಿಗೆ ತೂರಿ, ಪರವಾನಗಿ ಪಡೆಯುವ ಹುನ್ನಾರದಿಂದ ಎಂಎಸ್ಐಎಲ್ ಮಳಿಗೆ ಪ್ರವೇಶ ದ್ವಾರವನ್ನ ಖಾಸಗಿಯವರ ಜಾಗದ ಕಡೆಗೆ ತೋರಿಸಿ ಅಲ್ಲಿಂದ ಶಾಲೆಗೆ 100 ಮೀಟರ್ ದೂರವಿದೆ ಎಂದು ತೋರಿಸಲಾಗಿದೆಯಂತೆ.

ಆದರೆ, ಅಸಲಿಗೆ ಹೇಗೆ ಮಾರ್ಗ ನೀಡಿದರೂ ಸಹ ಉದ್ದೇಶಿತ ಎಂಎಸ್ಐಎಲ್ ಮಳಿಗೆಯಿಂದ ಶಾಲೆ 100 ಮೀಟರ್ ಅಂತರದ ಒಳಗೆ ಬರುತ್ತಿದೆ. ಹೀಗಾಗಿ, ಯಾವುದೇ ಕಾರಣಕ್ಕೂ ಇಲ್ಲಿ ಹೆಂಡದ ಮಳಿಗೆ ಬೇಡ ಅನ್ನೋದು ಗ್ರಾಮಸ್ಥರ ಆಗ್ರಹವಾಗಿದೆ. ಈ ಎಂಎಸ್ಐಎಲ್‌ಗೆ ಪರವಾನಗಿ ಪಡೆಯಲು ಕಾನೂನಿನ ನಿಯಮಗಳನ್ನೇ ಗಾಳಿಗೆ ತೂರಿದ್ದು, ಗ್ರಾಮದ ನಕ್ಷೆಯನ್ನೇ ತಿದ್ದುಪಡಿ ಮಾಡಿ ಅಬಕಾರಿ ಇಲಾಖೆಗೆ ಸಲ್ಲಿಸಲಾಗಿದೆ. ಖಾಸಗಿ ಸಂಸ್ಥೆಯೊಂದು ತಯಾರಿಸಿರುವ ಈ ನಕ್ಷೆಯಲ್ಲಿ ಶಾಲೆಯ ಸುಳಿವೇ ಇಲ್ಲ. ಇಷ್ಟೊಂದು ದೊಡ್ಡ ಪ್ರಮಾದವೆಸಗಿ ಎಂಎಸ್ಐಎಲ್ ಮಳಿಗೆ ತೆರೆಯುವುದರ ಹಿಂದಿರುವ ಕಾರಣವಾದರೂ ಏನು ಅನ್ನೋದು ಇಲ್ಲಿನವರ ಪ್ರಶ್ನೆಯಾಗಿದೆ.

ವಿದ್ಯಾರ್ಥಿಗಳ ಮೇಲೆ ವ್ಯತಿರಿಕ್ತ ಪರಿಣಾಮ: ಸರ್ಕಾರಕ್ಕೆ ಆದಾಯ ತಂದುಕೊಡುವ ಯಾವುದೇ ಯೋಜನೆಗಳಿಗೆ ನಮ್ಮ ವಿರೋಧವಿಲ್ಲ. ಆದರೆ, ಶಿಕ್ಷಣ ಸಂಸ್ಥೆ, ದೇಗುಲಗಳಿರುವ ಸ್ಥಳದಲ್ಲಿ ಎಂಎಸ್ಐಎಲ್ ಬೇಡ ಅನ್ನೋದು ಗ್ರಾಮಸ್ಥರ ಅಭಿಪ್ರಾಯವಾಗಿದೆ. ಗ್ರಾಮದಲ್ಲಿ ಇದೊಂದೇ ಪ್ರೌಢಶಾಲೆಯಿದ್ದು, ಸಮೀಪದಲ್ಲೇ ಕಾಲೇಜು ಸಹ ಇದೆ. ಸಾವಿರಾರು ವಿದ್ಯಾರ್ಥಿಗಳು ಪ್ರತಿನಿತ್ಯ ಓಡಾಟ ನಡೆಸುವ ಪ್ರದೇಶದಲ್ಲಿ ಮದ್ಯದಂಗಡಿ ತೆರೆದಲ್ಲಿ ವಿದ್ಯಾರ್ಥಿಗಳ ಶಿಕ್ಷಣದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲಿದ್ದು, ಈ ಬಗ್ಗೆ ಗಂಭೀರವಾಗಿ ಪರಿಗಣಿಸಿ ಎಂಎಸ್ಐಎಲ್‌ ಅನ್ನು ಬೇರೆಡೆಗೆ ನಿರ್ಮಿಸಿ ಅನ್ನೋದು ಗ್ರಾಮಸ್ಥರ ಬೇಡಿಕೆಯಾಗಿದೆ.

ಒಂದು ವೇಳೆ ಜನರ ವಿರೋಧವನ್ನೂ ಲೆಕ್ಕಿಸದೇ ಶಾಲೆಯ ಬಳಿ ಎಂಎಸ್ಐಎಲ್ ಸ್ಥಾಪಿಸಿದ್ದಲ್ಲಿ ಹೈಕೋರ್ಟ್ ಮೆಟ್ಟಿಲೇರುವ ಎಚ್ಚರಿಕೆಯನ್ನ ಗ್ರಾಮಸ್ಥರು ನೀಡಿದ್ದಾರೆ. ಒಟ್ಟಾರೆ ಕೆಲವರ ಹಿತಾಸಕ್ತಿಗಾಗಿ ಶಿಕ್ಷಣ ಸಂಸ್ಥೆಯ ಬಳಿ ಮದ್ಯದಂಗಡಿ ಸ್ಥಾಪಿಸುತ್ತಿರುವುದು ಎಷ್ಟು ಸರಿ ಎನ್ನುವುದು ಸ್ಥಳೀಯರ ಪ್ರಶ್ನೆಯಾಗಿದೆ. ಈ ಬಗ್ಗೆ ಸಂಬಂಧಿಸಿದ ಇಲಾಖೆ ಅಧಿಕಾರಿಗಳು, ಜನಪ್ರತಿನಿಧಿಗಳು ಪರಿಶೀಲಿಸಿ ಸೂಕ್ತ ನಿರ್ಧಾರ ಕೈಗೊಳ್ಳಬೇಕಿದೆ. (ಈಟಿಬಿ.ಕೆ)

ಬೇಸಿಗೆ ಶಿಬಿರ-ಚಿಣ್ಣರ ಕಲರವ
ಸಿದ್ದಾಪುರ
ತಾಲೂಕಾ ಸರಕಾರಿ ನಿವೃತ್ತ ನೌಕರರ ಸಂಘ ಹಾಗೂ ಲಯನ್ಸ ಕ್ಲಬ್ ಸಹಯೋಗದಲ್ಲಿ ಪಟ್ಟಣದ ಬಾಲಭವನದಲ್ಲಿ ಆಯೋಜಿಸಿದ ೭ ದಿನಗಳ ಚಿಣ್ಣರ ಬೇಸಿಗೆ ಶಿಬಿರದ ಉದ್ಘಾಟನಾ ಕಾರ್ಯಕ್ರಮ ಜರುಗಿತು.
ಶಿಬಿರ ಉದ್ಘಾಟಿಸಿ ಮಾತನಾಡಿದ ಧನ್ವಂತರಿ ಆಯುರ್ವೇದ ಮಹಾವಿದ್ಯಾಲಯದ ಪ್ರಾಚಾರ್ಯೆ ಡಾ| ರೂಪಾ ಭಟ್ಟ ಕೇವಲ ಶಿಕ್ಷಣವಿದ್ದರೆ ಸಾಲದು, ಮೌಲ್ಯ ಹಾಗೂ ಉತ್ತಮ ಗುಣಗಳನ್ನು ಅಳವಡಿಸಿಕೊಳ್ಳುವದು ಮುಖ್ಯ. ಮುಂದಿನ ಪ್ರಜೆಗಳಾಗಿರುವ ಮಕ್ಕಳ ವ್ಯಕ್ತಿತ್ವ ವಿಕಸನವಾದರೆ ಮುಂದಿನ ಸಮಾಜಕ್ಕೆ ಅತ್ಯುತ್ತಮ ಕೊಡುಗೆ ದೊರೆಯುತ್ತದೆ. ಮಕ್ಕಳು ಒಟ್ಟಾಗಿ ಸೇರಿ, ಪರಸ್ಪರರ ಜೊತೆ ಬರೆಯುವದರಿಂದ ಅವರಿಗೂ ಮಾನಸಿಕ ನೆಮ್ಮದಿ ದೊರೆಯುತ್ತದೆ. ಶಿಬಿರದಲ್ಲಿ ಕಲಿತದ್ದನ್ನು ಜೀವನದಲ್ಲಿ ಅಳವಡಿಸಿಕೊಳ್ಳುವತ್ತ ಮಕ್ಕಳು ಗಮನ ಹರಿಸಬೇಕು ಎಂದರು.
ಮುಖ್ಯ ಅತಿಥಿಗಳಾಗಿ ಪಾಲ್ಗೊಂಡ ಲಯನ್ಸ ಕ್ಲಬ್ ಅಧ್ಯಕ್ಷೆ ಶ್ಯಾಮಲಾ ಹೆಗಡೆ ಹೂವಿನಮನೆ ಮುಂದಿನ ಜೀವನದಲ್ಲಿ ಎಂತದ್ದೇ ಸಮಸ್ಯೆ ಬಂದರೂ ಎದುರಿಸುವ ಶಕ್ತಿಯನ್ನು ಮಕ್ಕಳು ಈಗಿನಿಂದಲೇ ಪಡೆದುಕೊಳ್ಳಬೇಕು. ಭ್ರಮೆಯಲ್ಲಿ ಬದುಕಿದಂತಾಗಿರುವ ಕೊರೊನಾ ಕಾಯಿಲೆಯ ಸಂದರ್ಭದಲ್ಲಿ ಮಕ್ಕಳು ಬಹಳಷ್ಟು ಸಂಕಷ್ಠ ಅನುಭವಿಸಿದ್ದಾರೆ. ಹಣ ಮತ್ತು ಸ್ಥಾನದಿಂದ ಸಂತೋಷ ದೊರೆಯುವದಿಲ್ಲ. ಸಂಘಜೀವಿಯಾದ ನಮಗೆ ಜನರ ಜೊತೆ ಬೆರೆಯುವದರಿಂದ ಹೆಚ್ಚಿನ ಸಂತೋಷ ದೊರೆಯುತ್ತದೆ. ಮಕ್ಕಳು ಉತ್ತಮ ವ್ಯಕ್ತಿಗಳಾಗಬೇಕು ಎಂದರು.


ಇನ್ನೊರ್ವ ಮುಖ್ಯ ಅತಿಥಿ ಪತ್ರಕರ್ತ,ಸಾಹಿತಿ ಗಂಗಾಧರ ಕೊಳಗಿ ಮಕ್ಕಳ ಮನಸ್ಸು ಶುದ್ಧ ಹಾಗೂ ಸ್ವಚ್ಛವಾಗಿರುತ್ತದೆ. ಹಿರಿಯರ ರೀತಿ ಪೂರ್ವಾಗ್ರಹಪೀಡಿತ ಮನಸ್ಸು ಅವರದ್ದಲ್ಲ. ಕೇಳಿದ್ದು, ನೋಡಿದ್ದು ಎಲ್ಲ ಗ್ರಹಿಕೆಗಳನ್ನು ಹಾಗೇಯೇ ಸ್ವೀಕರಿಸುತ್ತಾರೆ. ಒಳ್ಳೆಯ ಅಭಿರುಚಿ, ಉತ್ತಮವಾದ ಬದುಕಿನ ಆದರ್ಶ,ಮೌಲ್ಯಗಳನ್ನು ಅವರಿಗೆ ಮನವರಿಕೆಮಾಡಿದಾಗ ಅವರು ಭವಿಷ್ಯದಲ್ಲಿ ಉತ್ತಮ ನಾಗರಿಕರಾಗುತ್ತಾರೆ. ಆ ನಿಟ್ಟಿನಲ್ಲಿ ಇಂಥ ಶಿಬಿರಗಳ ಅಗತ್ಯ ಹೆಚ್ಚಿನದು ಎಂದರು.
ಮಿಮಿಕ್ರಿ ಕಲಾವಿದ ಜಯಂತ ಹೆಗಡೆ ಕಲ್ಲಾರೆಮನೆ ಮಾತನಾಡಿ ಮಕ್ಕಳ ಆಸಕ್ತಿಗಳನ್ನು ಪ್ರೋತ್ಸಾಹಿಸಿ ಅವರನ್ನು ಕ್ರೀಯಾಶೀಲರಾಗಿಸುವದು ಮುಖ್ಯ. ಕಲಾಭಿರುಚಿಯನ್ನು ಅವರಲ್ಲಿ ಬೆಳೆಸಬೇಕು. ಹಿರಿಯರನ್ನು ಗೌರವಿಸುವ, ಗೆಳೆಯರನ್ನು ಮರೆಯದಿರುವ ಗುಣಗಳು ಅವರಲ್ಲಿ ಇರಬೇಕು ಎಂದರು.


ಅಧ್ಯಕ್ಷತೆವಹಿಸಿದ್ದ ಸರಕಾರಿ ನಿವೃತ್ತ ನೌಕರರ ಸಂಘದ ಅಧ್ಯಕ್ಷ ಸಿ.ಎಸ್.ಗೌಡರ್ ಶಿಬಿರದ ವಿವರಗಳನ್ನು ನೀಡಿ ಮಕ್ಕಳಿಗೆ ಉತ್ತಮ ಅಭಿರುಚಿಯ ವಿಷಯಗಳನ್ನು ತಲುಪಿಸುವ ದೃಷ್ಟಿಯಿಂದ ಈ ಶಿಬಿರ ಆಯೋಜಿಸಿದ್ದೇವೆ. ಇದು ಮೊದಲ ಶಿಬಿರವಾಗಿದ್ದು, ಮುಂದಿನ ವರ್ಷಗಳಲ್ಲಿ ಇನ್ನಷ್ಟು ಪರಿಣಾಮಕಾರಿಯಾಗಿ ಆಯೋಜಿಸುವ ಉದ್ದೇಶವಿದೆ ಎಂದರು.
ಸ.ನಿ.ನೌ.ಸಂಘದ ಉಪಾಧ್ಯಕ್ಷ ಎನ್.ವಿ.ಹೆಗಡೆ, ಲಯನ್ಸ ಕ್ಲಬ್ ಕಾರ್ಯದರ್ಶಿ ರಾಘವೇಂದ್ರ ಭಟ್ಟ ಉಪಸ್ಥಿತರಿದ್ದರು.
ಕ್ಷಮಾ, ತನ್ಮಯಿ ಪ್ರಾರ್ಥಿಸಿದರು. ಜಿ.ಜಿ.ಹೆಗಡೆ ಬಾಳಗೋಡ ನಿರೂಪಿಸಿದರು.


ಸಾಹಿತ್ಯ,ಕಲೆಗಳು ಜೀವನದ ತಂಗುದಾಣಗಳು- ಆರ್.ಎನ್.ಭಟ್ಟ ಧುಂಡಿ
ಸಿದ್ದಾಪುರ
ಉದ್ಯಮಶೀಲತೆ ಎನ್ನುವದು ಆಧುನಿಕ ಮಾರ್ಪಾಡಿನೊಂದಿಗೆ ಅತ್ಯಂತ ವೇಗವಾಗಿ ಪಸರಿಸುತ್ತಿದೆ. ಸಾವಿರಾರು ವರ್ಷಗಳ ನಮ್ಮ ನಂಬಿಕೆ,ಸ0ಸ್ಕೃತಿಯ ಜೊತೆ ಯುದ್ಧ ನಡೆಸುತ್ತಿದೆ. ಹೊರ ದೇಶದಲ್ಲಿ ನಡೆಯುತ್ತಿರುವ ಯುದ್ಧ ಒಂದು ರೂಪಕದಂತೆ ಕಾಣುತ್ತಿದ್ದು ಈಗ ನಮ್ಮ ಅಕ್ಕಪಕ್ಕದಲ್ಲೇ ಕಣ್ಣಿಗೆ ಕಾಣದಂತೇ ಯುದ್ಧ ಆವರಿಸಿಕೊಳ್ಳುತ್ತಿದೆ ಎಂದು ಹಿರಿಯ ರಂಗಕರ್ಮಿ ಆರ್.ಎನ್.ಭಟ್ಟ ಧುಂಡಿ ಮಂಚಿಕೇರಿ ಹೇಳಿದರು.
ಅವರಿ ಒಡ್ಡೋಲಗ ಹಿತ್ಲಕೈ, ರಂಗಸೌಗ0ಧ ಸೀತಾರಾಮ ಶಾಸ್ತಿç ಹುಲಿಮನೆ ಸ್ಮರಣೆಯಲ್ಲಿ ಆಯೋಜಿಸಿದ ಎರಡು ದಿನಗಳ ನಾಟಕೋತ್ಸವದ ಉದ್ಘಾಟನಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.
ಯುದ್ಧದ ಸಂದರ್ಭದಲ್ಲಿ ರಕ್ಷಿಸಿಕೊಳ್ಳುವ ಬಂಕರ್‌ಗಳ0ತೆ ಕಲೆ,ಸಾಹಿತ್ಯ,ನಾಟಕ ಮುಂತಾದವು ತಂಗುದಾಣಗಳು. ಇವು ಕೇವಲ ಬಚಾವ್ ಆಗಲು ಮಾತ್ರವಲ್ಲದೇ ಹೊರಗಿನ ಅಸಹನೀಯವಿದ್ಯಮಾನಗಳನ್ನು ತಡೆಯುವ ಚಿಂತನೆಗೆ ಅಗತ್ಯವಾಗಿವೆ. ಇಂಥ ತಂಗುದಾಣಗಳನ್ನು ಹೆಚ್ಚು ಜಾಗೃತ,ಕ್ರೀಯಾಶೀಲವಾಗಿಟ್ಟಾಗ ಸಮಾಜ,ಸಮೂಹಕ್ಕೆ ಒಳ್ಳೆಯದಾಗುತ್ತದೆ ಎಂದರು.


ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಸ್ಥಳೀಯ ಲಯನ್ಸ ಕ್ಲಬ್ ಅಧ್ಯಕ್ಷೆ ಶ್ಯಾಮಲಾ ಹೆಗಡೆ ಹೂವಿನಮನೆ ರಂಗ ತಂಡವನ್ನು ಕಟ್ಟುವದು ಕಷ್ಟದ ಕಾರ್ಯವಾದ ಸಂದರ್ಭದಲ್ಲಿ ಇಲ್ಲಿ ರಂಗಭೂಮಿಯ ಕುರಿತಾಗಿ ಉತ್ತಮ ಕಾರ್ಯ ನಡೆಯುತ್ತಿದೆ. ಕಲೆ ನಿರಂತರವಾಗರಲು ಕಲಾ ಪೋಷಕರು ಬೇಕು. ಕರ್ನಾಟಕದ ಬಾರ್ಡೋಲಿ ಎಂದು ಪ್ರಸಿದ್ಧವಾದ ಸಿದ್ದಾಪುರದಲ್ಲಿ ಕಲೆ.ಸಾಹಿತ್ಯ, ರಂಗಭೂಮಿ ಚಟುವಟಿಕೆ ನಿರಂvತರವಾಗಿದ್ದರೂ ಅದರ ಕಾರ್ಯಕ್ರಮಗಳಿಗೆ ಸೂಕ್ತ ಕಟ್ಟಡವಿಲ್ಲ. ವ್ಯವಸ್ಥಿತವಾದ ಕಟ್ಟಡ ರೂಪುಗೊಳ್ಳಲು ಜನಪ್ರತಿನಿಧಿಗಳು, ಕಲಾವಿದರು, ಕಲಾಸಕ್ತರು ಮುಂದಾಗಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ದ ಟಿ.ಎಸ್.ಎಸ್.ನಿರ್ದೇಶಕ ಆರ್.ಟಿ.ಹೆಗಡೆ ಮಾತನಾಡಿ ನಮಲ್ಲ್ಮಿನ ಗ್ರಾಮೀಣ ಭಾಗದ ,ವೃತ್ತಿ ರಂಗಭೂಮಿಯ ನಾಟಕಗಳು ನಿತ್ಯದ, ಸಾಮಾನ್ಯ ಜನರಿಗೆ ತಲುಪುವ ಕಥಾವಸ್ತುವನ್ನು ಹೊಂದಿರುತ್ತವೆ. ಆದರೆ ಅವುಗಳಲ್ಲಿ ಉತ್ತಮವಾದ ಸಂದೇಶ ನೀಡುವ, ಪ್ರಜ್ಞೆಯನ್ನು ಹೆಚ್ಚಿಸುವ ಗುಣ ಇರುವದಿಲ್ಲ. ಶಿಸ್ತುಬದ್ದವಾಗಿ ಪ್ರಯೋಗ ನೀಡುವ ಆಧುನಿಕ ಹವ್ಯಾಸಿ ನಾಟಕಗಳು ಸಾಮಾನ್ಯ ಜನರನ್ನು ತಲುಪುವ, ಅವರ ಪ್ರಜ್ಞೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ತಮ್ಮ ನಾಟಕಗಳನ್ನು ಕಟ್ಟಬೇಕು ಎಂದರು.
ಒಡ್ಡೋಲಗ ಸಂಸ್ಥೆಯ ಅಧ್ಯಕ್ಷ ಗಣಪತಿ ಬಿ.ಹಿತ್ಲಕೈ ಪ್ರಾಸ್ತಾವಿಕ ಮಾತನಾಡಿದರು. ಪ್ರೊ|ಎಂ.ಕೆ.ನಾಯ್ಕ ನಿರೂಪಿಸಿದರು. ನಂತರ ಮಂಚಿಕೇರಿಯ ರಂಗಸಮೂಹ ತಂಡದವರಿಂದ ಕಾಲಚಕ್ರ ನಾಟಕ ಪ್ರದರ್ಶನಗೊಂಡಿತು.

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ,...

ಕನ್ನಡ ಓದಲು, ಬರೆಯಲು ಬಾರದ ಸಚಿವ ಮಧು ಬಂಗಾರಪ್ಪ ಸರ್ಕಾರಕ್ಕೆ ಕಪ್ಪು ಚುಕ್ಕೆ: ಕುಂ ವೀರಭದ್ರಪ್ಪ ವ್ಯಂಗ್ಯ

11ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದ ಅವರು, ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಿದೆ ಎಂಬ ಕಾರಣಕ್ಕೆ ಕನ್ನಡ ಶಾಲೆಗಳನ್ನು ಬಂದ್ ಮಾಡುವ...

ಜನಜಾತ್ರೆಯಂತಾದ ಜನಸ್ಪಂದನ, ಪಟ್ಟಣ ಪಂಚಾಯತ್‌ ಬಗ್ಗೆ ತಕರಾರು

ಸಿದ್ದಾಪುರ: ಸರ್ಕಾರಿ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಸಾರ್ವಜನಿಕರ ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸದಿದ್ದರೆ ಅಂತಹವರ ಮೇಲೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಶಿರಸಿ-ಸಿದ್ದಾಪುರ ಕ್ಷೇತ್ರದ ಶಾಸಕ...

ಸಮಾಜಮುಖಿ ಡಾಟ್‌ ನೆಟ್‌ ಬ್ರೇಕಿಂಗ್……‌ ಅವರಗುಪ್ಪಾದ ಮಹಿಳೆ ಸೊರಬಾದಲ್ಲಿ ಆತ್ಮಹತ್ಯೆ

ಸೊರಬಾದ ವಸತಿನಿಲಯದ ಮುಖ್ಯ ಅಡುಗೆ ಸಿಬ್ಬಂದಿ ಮಹಿಳೆ ವಸತಿ ನಿಲಯದಲ್ಲೇ ಆತ್ಮಹತ್ಯೆ ಮಾಡಿಕೊಂಡ ಘಟನೆ ವರದಿಯಾಗಿದೆ. ಸಿದ್ಧಾಪುರದ ಅವರಗುಪ್ಪಾ ಮೂಲದ ನೇತ್ರಾವತಿ ನಾಯ್ಕ ಆತ್ಮಹತ್ಯೆಗೆ...

ಹೋರಾಟಗಳ ಮೂಲಕ ಸುಧಾರಣೆ ಇಂದಿನ ಅನಿವಾರ್ಯತೆ

ಬಹುಜನ ಚಳವಳಿಗಳಿಗೆ ನಾರಾಯಣ ಗುರುಗಳು ಮತ್ತು ಡಾ. ಬಾಬಾ ಸಾಹೇಬ್‌ ಅಂಬೇಡ್ಕರ್‌ ಚಿಂತನೆಗಳು ಪೂರಕ ಎಂದಿರುವ ಯುವ ಚಿಂತಕ ಲೋಹಿತ್‌ ನಾಯ್ಕ ಈಗಲೂ ಸೈದ್ಧಾಂತಿಕ...

ಅಕ್ರಮ ಮದ್ಯ ಮಾರಾಟ, ಮದ್ಯ ಸೇವಿಸಿ ವಾಹನ ಚಾಲನೆ ನಿಯಂತ್ರಣಕ್ಕೆ ಭೀಮಣ್ಣ ಆದೇಶ

ಶಿರಸಿ-ಸಿದ್ಧಾಪುರಗಳಲ್ಲಿ ಸಾಮಾಜಿಕ ಪಿಡುಗಾಗಿ ಜನರ ಜನಜೀವನಕ್ಕೆ ತೊಂದರೆ ಕೊಡುತ್ತಿರುವ ಅಕ್ರಮ ಮದ್ಯ ಮತ್ತು ಮದ್ಯ ಸೇವಿಸಿ ವಾಹನ ಚಲಾಯಿಸುವ ಬಗ್ಗೆ ಸ್ಥಳೀಯ ಶಾಸಕ ಭೀಮಣ್ಣ...

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ, ಬಿಂದು, ಬಿಂದುಶ್ರೀ ಭುವನಶ್ರೀ, c – ಚಿರಶ್ಮಿ, ಚಿತ್ರ, ಚಿತ್ರಪ್ರಭಾ, ಚಿಂತನಾ, ಚಿನ್ಮಯಿ, ಚಿಂಗಾರಿ, ಚಿತ್ತಾಕರ್ಶಿನಿ, ಚಿತ್ತಾಕರ್ಶಿಣಿ, D- ಧರಣಿ, ಧನ್ವಿತಾ, ಧ🎇ಮನಿ, dhanamani ಧಾರಿಣಿ, ದಮಯಂತಿ ,ಧೃತಿ,ದುರ್ಗಾ,...

Recommended For You

About the Author: Kanneshwar Naik

Leave a Reply

Your email address will not be published. Required fields are marked *