
ಗ್ರಾಮೀಣ ಪ್ರದೇಶಗಳಲ್ಲಿ ಕ್ರೀಡಾ ಸಂಘಟನೆಗಳಿಗೆ ಕೊಡುವ ಪ್ರಾಮುಖ್ಯತೆಯನ್ನು ಕ್ರೀಡಾಪಟುಗಳ ತರಬೇತಿ,ಪ್ರೋತ್ಸಾಹಕ್ಕೆ ನೀಡುವ ಅಗತ್ಯವಿದೆ ಎಂದು ಸಾಮಾಜಿಕ ಕಾರ್ಯಕರ್ತ ತಿಮ್ಮಪ್ಪ ಎಂ.ಕೆ. ಹೇಳಿದ್ದಾರೆ. ಸಿದ್ಧಾಪುರದ ಗೋಳಗೋಡಿನಲ್ಲಿ ನಡೆದ ಭೂತೇಶ್ವರ ಗೆಳೆಯರ ಬಳಗದ ೬ ನೇ ವರ್ಷದ ಹೊನಲು ಬೆಳಕಿನ ಕಬ್ಬಡ್ಡಿ ಪಂದ್ಯಾವಳಿಯನ್ನು ಉದ್ಘಾಟಿಸಿ ಮಾತನಾಡಿದ ಅವರು ಮಲೆನಾಡಿನಲ್ಲಿ ಪ್ರತಿ ಗ್ರಾಮದಲ್ಲಿ ಕ್ರೀಡಾಕೂಟ,ಪಂದ್ಯಾಟಗಳನ್ನು ಸಂಘಟಿಸಲಾಗುತ್ತದೆ ಆದರೆ ಅದರ ಫಲಿತಾಂಶವೇನು ಎನ್ನುವ ಬಗ್ಗೆ ಯಾರೂ ಯೋಚಿಸುವುದಿಲ್ಲ ಎಂದು ವಿಶಾದಿಸಿದರು. ಭೂತೇಶ್ವರ ಗೆಳೆಯರ ಬಳಗದಿಂದ ಶಿಕ್ಷಕ ಬಿ.ವಿ.ನಾಯ್ಕ ಕರ್ಕಿ ದಂಪತಿಗಳನ್ನು ಸನ್ಮಾನಿಸಿ, ಗೌರವಿಸಲಾಯಿತು.
ಈ ಸಭಾ ಕಾರ್ಯಕ್ರಮದ ಮುಖ್ಯ ಅತಿಥಿ ಕನ್ನೇಶ್ವರ ನಾಯ್ಕ ಕೋಲಶಿರ್ಸಿ ಮಾತನಾಡಿ ಸಾಧನೆ, ಸಂಘಟನೆಗಳಿಗೆ ಶ್ರಮ, ಶೃದ್ದೆ,ತಾಳ್ಮೆ ಬೇಕು. ಜಗತ್ತಿನ ಯಾವ ಸಾಧಕನೂ ಶ್ರಮವಿಲ್ಲದೆ ಮೇಲೆ ಬಂದ ದೃಷ್ಟಾಂತಗಳೇ ಇಲ್ಲ ಎಂದರು.
ರೈತ ಸಂಘದ ಅಧ್ಯಕ್ಷ ವೀರಭದ್ರ ನಾಯ್ಕ, ಬಿ.ಜೆ.ಪಿ. ಯುವ ಮೋರ್ಚಾ ಅಧ್ಯಕ್ಷ ಹರೀಶ್ ಗೌಡರ್, ಶಿಕ್ಷಕ ಬಿ.ವಿ. ನಾಯ್ಕ,ಗ್ರಾಮಾಭಿವೃದ್ಧಿ ಸಮೀತಿ ಅಧ್ಯಕ್ಷ ಟಿ.ಎಸ್. ನಾಯ್ಕ, ಯಕ್ಷಗಾನ ಕಲಾವಿದ ಕನ್ನಪ್ಪ ನಾಯ್ಕ ತಡಗಳಲೆ ಮಾತನಾಡಿ ಶುಭಹಾರೈಸಿದರು. ಗ್ರಾ.ಪಂ. ಅಧ್ಯಕ್ಷ ಜಿ.ಟಿ.ನಾಯ್ಕ ಅಧ್ಯಕ್ಷತೆ ವಹಿಸಿದ್ದರು. ಮುಂಜುನಾಥ ಮಡಿವಾಳ ನಿರೂಪಿಸಿದರು.


