


ಹಿರಿಯ ಪತ್ರಕರ್ತ ಅಮಿನ್‌ಮಟ್ಟು ಸಂಪಾದಕತ್ವದ ‘ಬೇರೆಯೇ ಮಾತು’ ಪುಸ್ತಕ ಅನಾವರಣ..
ಮುಂಗಾರು ಪತ್ರಿಕೆಯ ಸಂಪಾದಕರಾಗಿದ್ದ ವಡ್ಡರ್ಸೆ ರಘುರಾಮ ಶೆಟ್ಟರ ಬರಹಗಳ ಸಂಕಲನ ‘ಬೇರೆಯೇ ಮಾತು’ ಪುಸ್ತಕ ಬಿಡುಗಡೆ ಗಾಂಧಿ ಭವನದಲ್ಲಿಂದು ನಡೆಯಿತು. ಈ ಪುಸ್ತಕವನ್ನ ಹಿರಿಯ ಪತ್ರಕರ್ತ ದಿನೇಶ್ ಅಮಿನ್‌ಮಟ್ಟು ಸಂಪಾದಿಸಿದ್ದಾರೆ. ಮಾಧ್ಯಮ ವಿದ್ಯಾರ್ಥಿಗಳಿಗೆ ಮತ್ತು ಮಾಧ್ಯಮದಲ್ಲಿರುವವರಿಗೆ ಇದು ಒಂದ್ರೀತಿ ಕೈಪಿಡಿಯಂತಾಗಲಿದೆ..

ಬೆಂಗಳೂರು : ಮುಂಗಾರು ಪತ್ರಿಕೆಯ ಸಂಪಾದಕ ವಡ್ಡರ್ಸೆ ರಘುರಾಮ ಶೆಟ್ಟರ ಬರಹಗಳ ಸಂಕಲನ ‘ಬೇರೆಯೇ ಮಾತು’ ಪುಸ್ತಕ ಬಿಡುಗಡೆ ಗಾಂಧಿ ಭವನದಲ್ಲಿಂದು ನಡೆಯಿತು. ಬೇರೆಯೇ ಮಾತು ಪುಸ್ತಕದ ಸಂಪಾದಕ ದಿನೇಶ್ ಅಮಿನ್ ಮಟ್ಟು, ಸಾಹಿತಿ ಮರುಳ ಸಿದ್ದಪ್ಪ, ಸಾಹಿತಿ ದೇವನೂರ ಮಹಾದೇವ, ಕನ್ನಡ ಅಭಿವೃದ್ಧಿ ಪ್ರಾಧಿಕರದ ಮಾಜಿ ಅಧ್ಯಕ್ಷ ಎಸ್ ಜಿ ಸಿದ್ದರಾಮಯ್ಯ ಸೇರಿದಂತೆ ಇತರರು ಪುಸ್ತಕ ಬಿಡುಗಡೆ ಮಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಸಾಹಿತಿ ದೇವನೂರ ಮಹಾದೇವ ಅವರು, ವಡ್ಡರ್ಸೆ ರಘರಾಮ ಶೆಟ್ಟರು ಇಂದು ಕಣ್ಮರೆಯಾಗುತ್ತಿರುವ ಸಾಮಾಜಿಕ ನ್ಯಾಯದ ಪ್ರತೀಕವಾಗಿದ್ದವರು. ಬಂಟರ ಸಮುದಾಯಕ್ಕೆ ಸೇರಿದ ಶೆಟ್ಟರನ್ನು ಇಂದು ಬಂಟರು ನೆನಪಿಸಿಕೊಳ್ತಿಲ್ಲ. ಹಾಗೆಯೇ ತಳ ಸಮುದಾಯದವರು ಸಹ ನೆನಪಿಸಿಕೊಳ್ತಿಲ್ಲ. ಈ ಸಂಕಟಕ್ಕೆ ನಾನು ಪುಸ್ತಕ ಬಿಡುಗಡೆ ಕಾರ್ಯಕ್ರಮಕ್ಕೆ ಬಂದೆ. ಶೆಟ್ಟರ ಆಗಿನ ಮುಂಗಾರು ಪತ್ರಿಕೆಯನ್ನು ನಾನೇ ಬಿಡುಗಡೆ ಮಾಡಿದ್ದೆ. ಇದೀಗ ಅವರು ನಮ್ಮೊಂದಿಗಿಲ್ಲ. ಆದರೆ, ಅವರ ಬರಹ ಸಂಕಲನವನ್ನು ಇಂದು ನಾನೇ ಬಿಡುಗಡೆ ಮಾಡಿದ್ದೇನೆಂದರು.
ಹಿರಿಯ ಪತ್ರಕರ್ತ ದಿನೇಶ್ ಅಮಿನ್‌ಮಟ್ಟು ಸಂಪಾದಿಸಿದ ವಡ್ಡರ್ಸೆ ರಘುರಾಮಶೆಟ್ಟರ ‘ಬೇರೆಯೇ ಮಾತು’ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಸಾಹಿತ್ಯ ದಿಗ್ಗಜರು..
ದೃಶ್ಯ ಮಾಧ್ಯಮ ತನ್ನ ಘನತೆ ತಾನೇ ತುಳಿದಿದೆ : ಶೆಟ್ಟರು ನಾಯಕನೋ ಅಥವಾ ದುರಂತ ನಾಯಕನೋ ಅನ್ನೋ ಪ್ರಶ್ನೆ ಕಾಡುತ್ತೆ. ಯಾಕೆಂದರೆ, ದೊಡ್ಡ ಕನಸ್ಸು ಕಂಡು, ಅದಕ್ಕೊಂದು ಮನೆ ಕಟ್ಟಿ, ಮನೆಯ ಭಾರವನ್ನೂ ಹೊತ್ತು, ಅದು ಕುಸಿಯುತ್ತಿದ್ದರೂ ಛಲ ಬಿಡದಿದ್ದರೂ ನೆಲಕಚ್ಚುತ್ತಲ್ಲ ಇದನ್ನ ನೋಡಿದರೆ ದುರಂತ ನಾಯಕ ಅನ್ನಿಸುತ್ತೆ ಅಂದರು. ಆದರೆ, ಅದೇ ಕ್ಷಣಕ್ಕೆ ಅವ್ರ ಒಡೆತನದ ಸಂಸ್ಥೆ ಕಟ್ಟುತ್ತರಲ್ಲ ಇಂತಹ ಪ್ರಯೋಗ ಈಗಿನ ಪತ್ರಿಕಾ ಮಾಧ್ಯಮದಲ್ಲಿ ಆಗಬೇಕು. ಮಾಧ್ಯಮ ಕ್ಷೇತ್ರ ಅದರಲ್ಲೂ ದೃಶ್ಯ ಮಾಧ್ಯಮ ತನ್ನ ಘನತೆಯನ್ನು ತಾನೇ ತುಳಿದು ನಿಂತಿದೆ. ಇಂತಹ ಸಂದರ್ಭದಲ್ಲಿ ರಘುರಾಮ ಶೆಟ್ಟರು ನೆನಪಾಗುತ್ತಾರೆಂದರು.
ಬೇರೆಯೇ ಮಾತು ಕೈಪಿಡಿಯಾಗಬೇಕು : ಬಳಿಕ ಮಾತನಾಡಿದ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಪ್ರೊ. ಸಿದ್ದರಾಮಯ್ಯ, ಪ್ರಾದೇಶಿಕ ಭಾಷೆಯ ದಮನಕ್ಕೆ ಪೂರಕವಾಗುವ ರೀತಿಯ ವಾತಾವರಣವಿತ್ತು. ಆದರೂ ಅದಕ್ಕೆ ಹೆದರದೇ ಸಂವಿಧಾನ ಬದ್ಧ ರೀತಿಯಲ್ಲೇ ಸೊಗಸಾಗಿ ಲೇಖನಗಳನ್ನು ಬರೆಯುತ್ತಿದ್ದರು. ಅಮಿತಾ ಷಾ ಅವ್ರಿಗೆ ಇದೊಂದು ಲೇಖನವನ್ನು ತರ್ಜುಮೆ ಮಾಡಿ ಕಳುಸಿದರೆ ಅವರಿಗೆ ತಕ್ಕ ಉತ್ತರ ಕೊಟ್ಟಂತೆ ಆಗುತ್ತದೆಯೆಂದು ಅಂತಾ ಹಿಂದಿ ಹೇರಿಕೆ ಕುರಿತು ತಿರುಗೇಟು ಕೊಟ್ಟರು. ರಘುರಾಮರ ಲೇಖನಗಳು ಪತ್ರಿಕೋದ್ಯಮ ವಿದ್ಯಾರ್ಥಿಗಳಿಗೆ, ಮಾಧ್ಯಮ ಕ್ಷೇತ್ರದಲ್ಲಿ ಕೆಲಸ ಮಾಡುವವರಿಗೆ ಕೈಪಿಡಿ ಆಗಬೇಕೆಂದು ತಿಳಿಸಿದರು.
ಭ್ರಷ್ಟಾಚಾರದ ಮೂಲ ರಾಜಕಾರಣ : ಸಾಹಿತಿ ಮರುಳ ಸಿದ್ದಪ್ಪ ಮಾತನಾಡಿ, ಎಲ್ಲ ಭ್ರಷ್ಟಾಚಾರದ ಮೂಲ ಅಂದರೆ ರಾಜಕಾರಣ ಎಂಬುದು ವಡ್ಡರ್ಸೆ ರಘುರಾಮರ ನಂಬಿಕೆಯಾಗಿತ್ತು. ವ್ಯಕ್ತಿ ಪ್ರಧಾನ ರಾಜಕೀಯ ವ್ಯವಸ್ಥೆ ಇದ್ದರೆ ಅದು ಭ್ರಷ್ಟಾಚಾರದ ಮೂಲ ಅಂತಾ ತಮ್ಮ ಬರಹಗಳ ಮೂಲಕ ಹೇಳುತ್ತಿದ್ದರು. ಏನೇ ತಪ್ಪು ಮಾಡಿದರೂ ತಪ್ಪು ಕಾಣಿಕೆ ಸಲ್ಲಿಸಿದರೆ ಎಂತಹ ಪಾಪ ಮಾಡಿದ್ದರೂ ಉಳಿಯಬಹುದು ಎಂಬ ಧರ್ಮ ನಮ್ಮದು. ಹೀಗಾಗಿ, ಭ್ರಷ್ಟಾಚಾರದ ಮೂಲವೇ ನಮ್ಮ ಧರ್ಮದಲ್ಲಿದೆ.
ಮಠಗಳೇ ಕಪ್ಪು ಹಣದ ಕೇಂದ್ರಗಳು : ಎಲ್ಲರಿಗೂ ಗೊತ್ತಿದೆ ನಮ್ಮ ದೇಶದಲ್ಲಿ ಮಠಗಳೇ ಒಂದು ರೀತಿಯ ಕಪ್ಪು ಹಣದ ಕೇಂದ್ರಗಳು. ಯಾರ ಬಳಿ ಕಪ್ಪು ಹಣ ಇದೆಯೋ ಅದನ್ನ ಬ್ಯಾಂಕಿನಲ್ಲಿ ಇಡೋಲ್ಲ, ಅದು ಮಠದಲ್ಲಿ ಇರುತ್ತೆ. ಇಂತಹ ಒಂದು ಸಂದರ್ಭದಲ್ಲಿ ಸರ್ಕಾರಿ ಒಡೆತನದ ಮಾಧ್ಯಮಗಳು ಹಲ್ಲು ಕಿತ್ತ ಹಾವಿನಂತೆ ಆಗಿವೆ. ಸಮಾಜದಲ್ಲಿ ಹರಡುತ್ತಿರುವ ಕೋಮುವಾದ, ಭ್ರಷ್ಟಾಚಾರ ಇವೆಲ್ಲವನ್ನೂ ಬಗೆಹರಿಸಬಹುದಾದ ಮಾಧ್ಯಮವೂ ಅವನತಿ ಮುಟ್ಟಿವೆ.
ಇದು ನಿಜಕ್ಕೂ ಡಿಪ್ರೆಶನ್ಗೆ ಹೋಗುವಂತೆ ಮಾಡುತ್ತದೆ. ಇದಕ್ಕೆ ರಘುರಾಮರ ಲೇಖನದಲ್ಲೇ ಹೇಳಿದಂತೆ ಅಸ್ಥಿರತೆಯೇ ಬೇಕು. ಸ್ಥಿರತೆಯಿಂದ ಒಳ್ಳೆಯದು ಆಗಲ್ಲ. ಅಸ್ಥಿರತೆ ಉಂಟಾದರೆ ಹೊಸತು ಹುಟ್ಟುತ್ತದೆಯಂತೆ. ಇದು ಬದಲಾವಣೆಗೆ ಕಾರಣವಾಗುತ್ತೆ ಅಂತಾ ಹೇಳುತ್ತಿದ್ದರು ಎಂದು ನೆನಪಿಸಿಕೊಂಡರು. (kpc)
_______________________________________________________________
ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi
_______________________________________________________________
