

ಮಂಡ್ಯ ಮೂಲದ ಉದ್ಯಮಿ ಚಂದನಕುಮಾರ್ ಬೆಂಗಳೂರಿಗೆ ಬಂದು ಚಿತ್ರರಂಗದಲ್ಲಿ ತೊಡಗಿಸಿಕೊಳ್ಳುತ್ತೇನಿ ಎಂದೇನೂ ಕನಸು ಕಟ್ಟಿಕೊಂಡಿರಲಿಲ್ಲ, ಆದರೆ ತಾನೊಂದು ಬಗೆದರೆ ದೈವವೊಂದು ಬಗೆಯಿತು ಎನ್ನುವಂತೆ ಚಂದನಕುಮಾರರಿಗೆ ಅಭಿರುಚಿಯಾಗಿದ್ದ ಸಿನೆಮಾ ಕ್ಷೇತ್ರ ವಿತರಕನನ್ನಾಗಿ ಆಹ್ವಾನಿಸಿತು!
ಚಿತ್ರರಂಗದ ಸೆಳೆತವಿದ್ದ ಚಂದನ್ ಕುಮಾರ್ ಹಿಂದೂ ಮುಂದೂ ನೋಡದೆ ವಿತರಕರಾಗೇ ಬಿಟ್ಟರು. ನೋಡುನೋಡುತ್ತಲೇ ಹೆಸರನ್ನೂ ಮಾಡಿಬಿಟ್ಟರು ಅವರೀಗ ಜನ ಅಲಿಯಾಸ್ ಜನಾರ್ಧನ ಎನ್ನುವ ಸಿನೆಮಾದ ಮೂಲಕ ಕನ್ನಡ ಬೆಳ್ಳಿ ಪರದೆಯ ದಿಗ್ಧರ್ಶಕರಾಗುತಿದ್ದಾರೆ. ಕನ್ನಡ ಹೋರಾಟಗಾರ ಅಣ್ಣ ಚೇತನ್ ಕುಮಾರ ಸಹಕಾರದಿಂದ ಜನ-ಜನಾರ್ಧನ ಚಿತ್ರದ ನಿರ್ಧೇಶನ, ನಿರ್ಮಾಣದ ಜೊತೆಗೆ ಇತರ ಜವಾಬ್ಧಾರಿಗಳನ್ನು ಹೊತ್ತುಕೊಂಡಿರುವ ಚಂದನ್ ಮಿತಭಾಶಿ ಸಿದ್ಧಾಪುರದ ಅಯ್ಯಪ್ಪ ಸ್ವಾಮಿ ದೇವಾಲಯದ ಆವರಣದಲ್ಲಿ ಸಮಾಜಮುಖಿ.ನೆಟ್ ನೊಂದಿಗೆ ಮಾತಗಿಳಿದ ಅವರು ತಮ್ಮ ಅಂತರಂಗದ ಕನಸಿಗೆ ಧ್ವನಿಯಾಗಿದ್ದ ಕಿರು ಸಂದರ್ಶನ ಇಲ್ಲಿದೆ.
ಸಿನೆಮಾ ಜಗತ್ತಿನ ನಿಮ್ಮ ಪಯಣದ ಬಗ್ಗೆ….
ನಾವು ಮಂಡ್ಯ ಮೂಲದ ತುಂಬು ಕುಟುಂಬದ ಸಾಮಾನ್ಯ ಜನ, ನಮ್ಮ ಕುಟುಂಬದಲ್ಲಿ ಯಾರಿಗೂ ಸಿನೆಮಾ ನಂಟಿರಲಿಲ್ಲ, ನನಗೆ ಸಿನೆಮಾ ಕ್ಷೇತ್ರದ ಬಗ್ಗೆ ಆಕರ್ಷಣೆ ಇತ್ತು, ಬೆಂಗಳೂರಿನಲ್ಲಿ ಉದ್ಯಮ ನಡೆಸುತ್ತಾ ಚಿತ್ರ ವಿತರಕನಾಗಿ ತೊಡಗಿಕೊಂಡೆ ವಿತರಕನಾಗಿ ಸಾಧನೆ ಮಾಡಿದೆ. ಹೆಸರು ಬಂತು ತಲೆಯಲ್ಲಿ ಮೊಳೆತಿದ್ದ ಕಥೆಗಳಿದ್ದವು ನಿರ್ಧೇಶನದ ಹುಚ್ಚು ನನ್ನನ್ನು ನಿರ್ಧೇಶಕ, ನಿರ್ಮಾಪಕರನ್ನಾಗಿ ಮಾಡಿದೆ.
ನಿಮ್ಮ ಸಿನೆಮಾ ಹೇಗೆ ಭಿನ್ನ?
ವಾಸ್ತವದಲ್ಲಿ ರಾಜ್ ಕುಮಾರ ಎಲ್ಲಾ ಕತೆಗಳನ್ನು,ಪ್ರಯೋಗಗಳನ್ನು ಮಾಡಿ ಹೋಗಿದ್ದಾರೆ. ನಮ್ಮ ಕತೆ ವಿಭಿನ್ನವಾಗಿದೆ. ಅದನ್ನು ಪ್ರಸೆಂಟ್ ಮಾಡುವ ರೀತಿಯಿಂದ ವಿಭಿನ್ನವಾಗಿ ಜನ ಅಲಿಯಾಸ್ ಜನಾರ್ಧನ ಜನರಿಗೆ ಇಷ್ಟವಾಗಲಿದೆ.
ತಾಂತ್ರಿವರ್ಗ, ಭೌತಿಕ ವರ್ಗ ಗಳ ಆಯ್ಕೆ ಆಗಿದೆಯೆ?
ಚಿತ್ರದ ಬಹುತೇಕ ಅಂಶಗಳ ಸಿದ್ಧತೆ, ತಯಾರಿ ಆಗಿ ಚಿತ್ರೀಕರಣದ ಶೆಡ್ಯೂಲ್ ಗಳನ್ನೂ ಪ್ಲಾನ್ ಮಾಡಕೊಂಡಿದ್ದೇವೆ.
ನಿಮ್ಮ ಅನುಭವ,ಆತ್ಮವಿಶ್ವಾಸದ ಬಗ್ಗೆ…
ವಿತರಕನಾಗಿ ಇದೇ ಕ್ಷೇತ್ರದಲ್ಲಿದ್ದೇನೆ ಈ ಕ್ಷೇತ್ರದ ಅನುಭವ,ಸಂಪರ್ಕಗಳಿಂದ ನಿರ್ಧೇಶನದ ಜವಾಬ್ಧಾರಿ ನಿರ್ವಹಿಸುತಿದ್ದೇನೆ, ನಿರ್ಧೇಶನ,ನಿರ್ಮಾಣ ಕ್ಷೇತ್ರಕ್ಕೆ ನಾನು ಹೊಸಬ, ಈಗಲೇ ಹೆಚ್ಚು ಮಾತನಾಡುವಷ್ಟು ದೊಡ್ಡವನಲ್ಲ ಸಿನೆಮಾ, ಚಿತ್ರಕತೆ ಏನು ಬಯಸುತ್ತೆ ಅದಕ್ಕೆ ತಕ್ಕಂತೆ ಎಲ್ಲಾ ವ್ಯವಸ್ಥೆ ಮಾಡುವ ಬಯಕೆಯಿಂದ ಸ್ನೇಹಿತರ ಬೆಂಬಲದಿಂದ ಇಪ್ಪತ್ತು ವರ್ಷಗಳ ಹಿಂದಿನ ಬಯಕೆ ಈಡೇರಿಸಿಕೊಳ್ಳುವ ಸಂದರ್ಭಕ್ಕೆ ಅಣಿಯಾಗಿದ್ದೇವೆ.
ಚಿತ್ರೀಕರಣದ ಸ್ಥಳಗಳ ಆಯ್ಕೆಯಾಗಿದೆಯೆ?
ಉತ್ತರ ಕನ್ನಡ ಜಿಲ್ಲೆ ಸೇರಿ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಎಲ್ಲಾ ಜಿಲ್ಲೆಗಳ ಕಲಾವಿದರನ್ನು ಸೇರಿಸಿಕೊಂಡು ಚಿತ್ರೀಕರಿಸುವ ಆಸೆ ಇದೆ.
