ಚಿತ್ರ ವಿತರಕರಾಗಿ ಹೆಸರುಮಾಡಿರುವ ಚಂದನಕುಮಾರ ನಿರ್ಧೇಶನದ ಹೊಸ ಚಿತ್ರ ಜನ ಅಲಿಯಾಸ್ ಜನಾರ್ಧನ ಚಿತ್ರದ ಶೀರ್ಷಿಕೆ ಬಿಡುಗಡೆ ಸಿದ್ಧಾಪುರದ ಅಯ್ಯಪ್ಪ ಸ್ವಾಮಿ ದೇವಾಲಯದಲ್ಲಿ ನಡೆಯಿತು. ಶೀರ್ಷಿಕೆ ಅನಾವರಣ ಮಾಡಿದ ಖ್ಯಾತ ವೈದ್ಯ ಡಾ. ಶೀಧರ ವೈದ್ಯ ಹೊಸ ತಂಡದ ವಿನೂತನ ಪ್ರಯತ್ನಕ್ಕೆ ಶುಭ ಹಾರೈಸಿದರು.
ಚಿತ್ರದ ನಿರ್ಧೇಶಕ ಚಂದನ್ ಕುಮಾರ ತಮ್ಮ ಬದುಕಿನ ಕನಸಿನ ಸಾಕಾರಕ್ಕೆ ಎಲ್ಲರ ಬೆಂಬಲ ಕೇಳಿದರು. ಪತ್ರಕರ್ತ ಕನ್ನೇಶ್ ಕೋಲಶಿರ್ಸಿ ಮಾತನಾಡಿ ಸ್ಫರ್ಧಾತ್ಮಕ ವಾತಾವರಣದಲ್ಲಿ ವಿಭಿನ್ನತೆ, ವಿನೂತನಕ್ಕೆ ಬೆಂಬಲ ದೊರೆಯುತ್ತದೆ. ಕನ್ನಡದ ಹೊಸಬರ ಪ್ರಯತ್ನದಿಂದಲೇ ಚಿತ್ರರಂಗ ಇಂದು ಜಾಗತಿಕವಾಗಿ ಗುರುತಿಸಿಕೊಂಡಿದೆ ಎಂದರು. ಅಯ್ಯಪ್ಪ ಸೇವಾ ಸಮೀತಿ ಉಪಾಧ್ಯಕ್ಷ ಎ.ಆರ್. ನಾಯ್ಕ, ಆಕಾಶ್ ಕೊಂಡ್ಲಿ, ರೈತಸಂಘದ ತಾಲೂಕಾಧ್ಯಕ್ಷ ವೀರಭದ್ರ ನಾಯ್ಕ, ಕನ್ನಡ ಸಾಂಮ್ರಾಜ್ಯದ ಚೇತನ್ ಕುಮಾರ್, ರಾಮಪ್ಪ, ದಿವಾಕರ ನಾಯ್ಕ ಹೆಮ್ಮನಬೈಲ್ ಚಿತ್ರಕ್ಕೆ ಶುಭ ಕೋರಿದರು. ಶಂಕರಮೂರ್ತಿ ಸ್ವಾಗತಿಸಿದರು, ರವಿಕುಮಾರ್ ನಿರೂಪಿಸಿದರು.