ಇತರ ಸರ್ಕಾರಿ ನೌಕರರಿಗೆ ಸಿಗುವ ಆರೋಗ್ಯ ಅನುಕೂಲಗಳಿಲ್ಲದ ರಾಜ್ಯ ಸಾರಿಗೆ ಸಂಸ್ಥೆ ನೌಕರರಿಗೆ ಆರೋಗ್ಯ ಸಂಬಂಧಿ ಅನುಕೂಲ ಕಲ್ಪಿಸುವುದು, ಈ ನೌಕರರ ನಿವೃತ್ತಿ ಅನುಕೂಲಗಳನ್ನು ವ್ಯವಸ್ಥೆ ಮಾಡುವುದು ಸಾರಿಗೆ ನೌಕರರ ವೇತನ ಪರಿಷ್ಕರಣೆ ಸೇರಿದಂತೆ ಹಲವು ಸೌಲಭ್ಯಗಳ ಜಾರಿಗೆ ಅವಶ್ಯ ಹಣಕಾಸಿನ ನೆರವಿನ ಅನುದಾನವನ್ನು ನೀಡಲು ಮುಖ್ಯಮಂತ್ರಿಗಳಿಗೆ ಮನವಿ ಮಾಡಿರುವುದಾಗಿ ತಿಳಿಸಿರುವ ಸಾರಿಗೆ ಸಚಿವ ಬಿ.ಶ್ರೀರಾಮುಲು ಇದೇ ವರ್ಷ ಈ ಬೇಡಿಕೆಗಳನ್ನು ಈಡೇರಿಸುವುದಾಗಿ ಭರವಸೆ ನೀಡಿದ್ದಾರೆ.
ಬುಧವಾರ ಮತ್ತು ಗುರುವಾರಗಳ ಎರಡು ದಿವಸ ಉತ್ತರ ಕನ್ನಡ ಜಿಲ್ಲೆಯ ಪ್ರವಾಸದಲ್ಲಿರುವ ಶ್ರೀರಾಮುಲು ಮುಂಡಗೋಡು,ಸಿದ್ಧಾಪುರಗಳಲ್ಲಿ ನೂತನ ಬಸ್ ನಿಲ್ಧಾಣಗಳನ್ನು ಲೋಕಾರ್ಪಣೆ ಮಾಡಿ ಮಾತನಾಡಿದರು.
ಜನಸಾಮಾನ್ಯರಿಗೆ ಅನುಕೂಲ ಮಾಡುವ ಸಾರಿಗೆ ಇಲಾಖೆಯ ನೌಕರರು ಪ್ರಾಮಾಣಿಕವಾಗಿ ದುಡಿಯುತಿದ್ದಾರೆ. ಇವರ ಪ್ರಾಮಾಣಿಕ ದುಡಿಮೆಗೆ ಸಿಗಬೇಕಾದ ಸೌಲಭ್ಯಗಳು ಇವರಿಗೆ ಸಿಗುತ್ತಿಲ್ಲ. ಈ ಬಗ್ಗೆ ಸಂಸ್ಥೆಯ,ಇಲಾಖೆಯ ಸಚಿವನಾಗಿ ನನ್ನ ಪ್ರಯತ್ನ ಸಾಗಿದೆ.೪ರಿಂದ ೫ ಸಾವಿ ಹೊಸ ಬಸ್ ಗಳನ್ನು ನೀಡುತಿದ್ದೇವೆ. ಇದರಿಂದ ಸಾರಿಗೆ ವ್ಯವಸ್ಥೆ ಸುಧಾರಿಸಲಿದೆ.ಸಾರಿಗೆ ನೌಕರರ ಆರೋಗ್ಯ ವ್ಯವಸ್ಥೆ, ನಿವೃತ್ತಿ ನಂತರದ ಅನುಕೂಲಗಳ ನೀಡಿಕೆ ಸರಿಯಾಗಬೇಕಾಗಿದೆ. ವೇತನ ಪರಿಷ್ಕರಣೆ ಸೇರಿ ಉಳಿದ ಅನುಕೂಲಗಳನ್ನು ಒದಗಿಸಲು ತಮ್ಮ ಪ್ರಯತ್ನ ಸಾಗಿದೆ ಎಂದರು.
ಸಿದ್ದಾಪುರ: ,ಕೆಲವೇ ದಿನಗಳಲ್ಲಿ ೪ ಸಾವಿರ ಬಸ್ ಬರಲಿದ್ದು, ಉತ್ತರ ಕನ್ನಡ ವಿಭಾಗಕ್ಕೂ ಹೆಚ್ಚಿನ ಬಸ್ ನೀಡಲಾಗುವುದು. ರಾಜ್ಯದ ಎಲ್ಲಾ ಬಸ್ ನಿಲ್ದಾಣದಲ್ಲಿ ದಿನಪತ್ರಿಕೆ ಮಾರಾಟಕ್ಕೆ ಮಳಿಗೆ ಹಾಗೂ ಕುಳಿತು ಓದಲು ಬೇಕಾದ ರೂಮ್ ವ್ಯವಸ್ಥೆ ಮಾಡಲಾಗುವುದು. ಸಾರಿಗೆ ನೌಕರರ ವೇತನ ಪರಿಷ್ಕರಣೆ ಕುರಿತು ಮುಖ್ಯಮಂತ್ರಿ ಜತೆ ಮಾತನಾಡಿದ್ದು, ಶೀಘ್ರದಲ್ಲಿ ವೇತನ ಹೆಚ್ಚಿಸಲಾಗುವುದು . ಎಂದು ಸಾರಿಗೆ ಸಚಿವ ಬಿ.ಶ್ರೀರಾಮುಲು ಹೇಳಿದರು.
ಅವರುವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಸಿದ್ದಾಪುರ ಬಸ್ ನಿಲ್ದಾಣವನ್ನು ಉದ್ಘಾಟಿಸಿ ಮಾತನಾಡಿದರು.
ಕೋವಿಡ್ ಬಂದ ನಂತರ ವ್ಯವಸ್ಥೆ ಸಂಪೂರ್ಣ ಕುಸಿದು ಹೋಗಿದೆ. ಸಾರಿಗೆ ಸಂಸ್ಥೆ ಲಾಭದಾಯಕ ಮಾಡುವ ಇಚ್ಚಾಶಕ್ತಿ ಯಾರಿಗೂ ಇಲ್ಲ. ಸಿದ್ದಾಪುರ ಹಳೆ ಬಸ್ ನಿಲ್ದಾಣದ ಜಾಗದಲ್ಲಿ ವಾಣಿಜ್ಯ ಸಂಕೀರ್ಣ ನಿರ್ಮಿಸಲು ಕೂಡಲೇ ಅನುದಾನ ನೀಡುತ್ತೇನೆ.
ಕಲುಷಿತಗೊಳ್ಳುತ್ತಿರುವ ಇಂದಿನ ರಾಜಕಾರಣದಲ್ಲಿ ವಿಶ್ವೇಶ್ವರ ಹೆಗಡೆ ಕಾಗೇರಿ ಕಿತ್ತೂರ ಕರ್ನಾಟಕದ ಆಧುನಿಕ ಗಾಂಧಿಯಿದ್ದಂತೆ ಸ್ವಾರ್ಥಿಗಳೇ ತುಂಬಿರುವ ರಾಜಕಾರಣದಲ್ಲಿ ಕಾಗೇರಿಯವರಂತವರು ಇರುವುದು ತೀರಾ ವಿರಳ. ಅವರನ್ನು ಉಳಿಸುವ ಕೆಲಸ ಮಾಡಬೇಕು.ಎಂದರು.
ವಿಧಾನಸಭಾ ಅಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಮಾತನಾಡಿ, ಸಿದ್ದಾಪುರದ ಜನರ ಬೇಡಿಕೆ ಇಡೇರಿಸಲು ಅನೇಕಾರು ಅಭಿವೃದ್ಧಿ ಕೆಲಸ ಮಾಡಲಾಗುತ್ತಿದೆ. ನನಗೆ ಬೇರೆಯವರಂತೆ ಡಂಗುರ ಬಾರಿಸಲು ಬರುವುದಿಲ್ಲ. ಅಭಿವೃದ್ಧಿ ಕಾರ್ಯ ಮಾಡುತ್ತಲೆ ಇರುತ್ತೇನೆ. ಸಂಸ್ಥೆಯ ಇಂಜನಿಯರಿಂಗ್ ವಿಭಾಗ ಸಾಕಷ್ಟು ಸುಧಾರಿಸಬೇಕಿದೆ. ಸಿದ್ದಾಪುರದ ಹಳೆ ಬಸ್ ನಿಲ್ದಾಣದ ಜಾಗ ಖಾಲಿಯಾಗಿಡದೇ ವಾಣಿಜ್ಯ ಸಂಕೀರ್ಣ ನಿರ್ಮಿಸಬೇಕು. ಸಿದ್ದಾಪುರಕ್ಕೆ ಅಕ್ಕುಂಜಿಯಲ್ಲಿ ೭ ಎಕರೆ ಜಾಗ ಗುರುತಿಸಲಾಗಿದ್ದು, ಡಿಪೋ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಬೇಕು ಎಂದರು.
ವಾಕರಸಾ ಸಂಸ್ಥೆ ಅಧ್ಯಕ್ಷ ವಿ.ಎಸ್.ಪಾಟೀಲ್ ಮಾತನಾಡಿ, 2019 ರಿಂದ ಆದಾಯವಿಲ್ಲದೇ ಸಾಕಷ್ಟು ನಷ್ಟದಲ್ಲಿದ್ದರೂ ಸಾರ್ವಜನಿಕರ ಸೇವೆಯಲ್ಲಿ ಯಾವುದೇ ಅಡಚಣೆಯಾಗದಂತೆ ನೋಡಿಕೊಳ್ಳಲಾಗಿದೆ. ಸಂಸ್ಥೆಯಲ್ಲಿ ೨ ಸಾವಿರ ಚಾಲಕ-ನಿರ್ವಾಹಕರು ನಿವೃತ್ತರಾಗಿದ್ದು, ಕೊರತೆಯಿರುವ ಸಿಬ್ಬಂದಿಗಳನ್ನು ತುಂಬಲು ಸಚಿವರಿಗೆ ಮನವಿ ಮಾಡಲಾಗಿದೆ.
ಸಿದ್ಧಾಪುರದ ಹೊಸ ಬಸ್ ನಿಲ್ಧಾಣದ ಅಧೀಕೃತ ಉದ್ಘಾ ಟನೆ ಕಾರ್ಯಕ್ರಮದಲ್ಲಿ ಪರಸ್ಪರ ಹೊಗಳಿಕೆಗಳಿಗೆ ಸಮಯ ನೀಡಿದ ರಾಜ್ಯ ವಿಧಾನಸಭಾ ಅಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಮತ್ತು ಸಚಿವ ಬಿ.ಶ್ರೀರಾಮುಲು ಇನ್ನೇನು ಚುನಾವಣೆ ಹೊಸ್ತಿಲಲ್ಲಿದೆಯೇನೋ ಎನ್ನುವ ಭಾವನೆ ಬರುವಂತೆ ಪರಸ್ಪರ ಪ್ರಶಂಸಿಸಿದರು.
ಸಿದ್ದಾಪುರ: ರಾಜ್ಯ ದಲ್ಲಿ ರುವ ಬಿಜೆಪಿ ಸರಕಾರ ತೋಲಗಬೇಕು ಎಂದು ಸಾಗರದ ಮಾಜಿ ಶಾಸಕ ಗೋಪಾಲಕೃಷ್ಣ ಹೇಳಿದರು.
ಅವರು ತಾಲೂಕಿನ ಕೋಲಶಿರ್ಸಿಯ ಬಾಲಕೃಷ್ಣನಾಯ್ಕ ಕತ್ತಿ ಯವರ ಮನೆಯಲ್ಲಿ ವರದಿಗಾರರೊಂದಿಗೆ ಮಾತನಾಡಿದರು.
ರಾಜ್ಯದಲ್ಲಿ ಬಿಜೆಪಿ ಸರಕಾರ ಆಡಳಿತ ನಡೆಸುತ್ತಿದೆ. ಇದು ಮುಂದಿನ ದಿನಗಳಲ್ಲಿ ಕೇವಲ ರಾಜ್ಯದಲ್ಲಿ ಮಾತ್ರವಲ್ಲ ದೇಶಾದ್ಯಂತ ಮುಂದೆ ಗೊಂದಲ ಸೃಷ್ಟಿಯಾಗುವ ಸಾಧ್ಯತೆ ಇದೆ. ಆದ್ದರಿಂದ ಶಾಂತಿ ನೆಮ್ಮದಿಯಿಂದ ಕೂಡಿ ಬಾಳಲು ಎಲ್ಲರೂ ಕಲಿಯಬೇಕು.
ಸಣ್ಣ ಘಟನೆಯನ್ನು ಬಿಂಬಿಸಿಕೊಂಡು ಹೋಗುವುದು ದುರಂತ. ಯಾರು ಕೊಲೆಯಾಗುತ್ತಾರೆ ಅಥವಾ ಯಾರ ಮೇಲೆ ಹಲ್ಲೆ ಆಗುತ್ತೋ ಸರ್ಕಾರ ತಕ್ಷಣ ಕ್ರಮಕೈಗೊಳ್ಳಬೇಕು. ಪ್ರತಿ ಅಹಿತಕರ ಘಟನೆಗಳು ನಡೆದಾಗಲೂ ಸರ್ಕಾರ ಕಾಂಗ್ರೆಸ್ ಕೈವಾಡ ಇದೆ ಎಂದು ಹೇಳುತ್ತದೆ. ಯಾವುದೇ ಘಟನೆಯಲ್ಲಿ ನಮ್ಮ ಯಾವುದೇ ಕೈವಾಡ ಇಲ್ಲ.
ಕರೋನಾ ಅಲೆಯಲ್ಲಿ ಜನ ಬಹಳ ತತ್ತರಿಸಿಹೋಗಿದ್ದಾರೆ ಆ ವೇಳೆಯಲ್ಲಿ ಸರ್ಕಾರ ಏನು ಮಾಡಿಲ್ಲ. ರಾಜ್ಯದಲ್ಲಿ ದಿನಬಳಕೆ ವಸ್ತುಗಳು ಹಾಗೂ ಕೃಷಿ ಚಟುವಟಿಕೆಗೆ ಬೇಕಾಗುವ ಸಾಮಾನುಗಳ ಬೆಲೆ ವಿಪರೀತವಾಗಿ ಏರಿದೆ. ಈ ಸರ್ಕಾರದಲ್ಲಿ ಇಂದಿಗೂ ಸಹ ಬಡವರಿಗೆ ಮನೆಗಳು ಸರಿಯಾಗಿ ಸಿಗುತ್ತಿಲ್ಲ. ಮನೆ ಕಳೆದುಕೊಂಡ ಬಹಳಷ್ಟು ಜನರಿಗೆ ಸರ್ಕಾರದಿಂದ ಪರಿಹಾರ ಬಂದಿಲ್ಲ. ಸರ್ಕಾರದ ಮಾತು ನಂಬಿ ಪಾಯ ಹಾಕಿಕೊಂಡು ಮನೆಗೆ ತಾಡಪಲ್ ಮುಚ್ಚಿಕೊಂಡು ಜೀವನ ನಡೆಸುತ್ತಿದ್ದಾರೆ.
5ಲಕ್ಷ ಪರಿಹಾರ ಕೊಡುವುದಾಗಿ ಹೇಳಿದ್ದ ಸರ್ಕಾರ ಈಗ ಕೇವಲ 90 ಸಾವಿರ ರೂಪಾಯಿ ಕೊಟ್ಟಿದೆ. ಕೇಳಿದರೆ ಸರ್ಕಾರದಲ್ಲಿ ದುಡ್ಡಿಲ್ಲ ಎಂಬ ಸಬೂಬು ಹೇಳುತ್ತಾರೆ. ಇದನ್ನೆಲ್ಲ ಗಮನಿಸಿದರೆ ರಾಜ್ಯದಲ್ಲಿ ಸರ್ಕಾರ ಇದೆಯೋ ಅಥವಾ ಸತ್ತಿದೆಯೋ ಎಂದು ತಿಳಿಯುತ್ತಿಲ್ಲ.
ಇಂತಹ ಸರ್ಕಾರಗಳನ್ನು ನಂಬಿ ಜನರು ಮುಂದೆ ಬರಲು ಸಾಧ್ಯವಿಲ್ಲ. ಬಿಜೆಪಿ ಪಕ್ಷದಲ್ಲಿ ಬಹಳ ಗೊಂದಲವಿದೆ ತಮ್ಮ ಪಕ್ಷದಲ್ಲಿ ಗೊಂದಲ ಇಟ್ಟುಕೊಂಡು ನಮ್ಮ ಕಾಂಗ್ರೆಸ್ ಪಕ್ಷದ ಮೇಲೆ ಗೂಬೆ ಕೂರಿಸಲು ಹೊರಟಿದ್ದಾರೆ. ಈಶ್ವರಪ್ಪ 40 ಪರ್ಸೆಂಟ್ ಕಮಿಷನ್ ಪಡೆದ ಬಗ್ಗೆ ಸಂತೋಷ್ ಪಾಟೀಲ್ ಹೇಳಿಕೆ ನೀಡಿ ನನಗೆ ಬಿಲ್ ಬಂದಿಲ್ಲ ಅಂತ ಹೇಳಿ ಉಡಪಿ ಹೋಟೆಲ್ ನಲ್ಲಿ ಆತ್ಮಹತ್ಯೆ ಮಾಡಿಕೊಂಡಾಗ ನನ್ನ ಸಾವಿಗೆ ಈಶ್ವರಪ್ಪನವರೇ ಕಾರಣ ಎಂದು ಸಂದೇಶ ಕಳಿಸಿದ್ದಾನೆ ಆದರೆ ಈ ಪ್ರಕರಣದಲ್ಲಿ ಈಶ್ವರಪ್ಪ ರಾಜೀನಾಮೆ ಕೊಟ್ಟಿದ್ದಾರೆ ಹೊರತು ಇವರೆಗೆ ಅವರ ಬಂಧನವಾಗಿಲ್ಲ. ಇವೆಲ್ಲ ನೋಡಿದರೆ ಬಿಜೆಪಿ ಗರಲ್ಲಿ ಯಾವುದು ಸರಿ ಇಲ್ಲ ಎಂಬುದು ತಿಳಿದುಬರುತ್ತದೆ
ಎಂದು ಹೇಳಿದರು.
ಇದೆ ಸಂದರ್ಭದಲ್ಲಿ ಅವರನ್ನು ಸನ್ಮಾನಿಸಲಾಯಿತು. ರಾಮಚಂದ್ರ ನಾಯ್ಕ ಕೊಠಾರಿ, ಬಾಲಕೃಷ್ಣ ಕತ್ತಿ, ರಾಮಕೃಷ್ಣ ಕಟ್ರನ್, ರಾಜೇಶ ಕತ್ತಿ, ಪಾಂಡುರಂಗ ನಡವಿನಕೇರಿ, ಪಾಂಡು ಚನಮಾವ, ದೇವಪ್ಪ ಕತ್ತಿ, ಸೋಮೇಶ್ವರ ಕೊಠಾರಿ, ರವಿಕುಮಾರ ಕೊಠಾರಿ, ಸೋಮು ಹೊನ್ನುಕಾರ ಉಪಸ್ಥಿತರಿದ್ದರು.