ಎಲೆಗಳಲ್ಲಿ ರಾಷ್ಟ್ರಗೀತೆ ಬರೆದು ಲಿಮ್ಕಾ ಬುಕ್ ಆಫ್ ರೆಕಾರ್ಡ್ಸ್ ಸೇರುವ ಮೂಲಕ ಸಿದ್ಧಾಪುರ ಯುವತಿಯೊಬ್ಬಳು ಸಾಧನೆ ಮಾಡಿದ್ದಾಳೆ. ಬಿಳಗಿ ಸಮೀಪದ ಹೊಸಮಂಜು ಗ್ರಾಮದ ತೃಪ್ತಿ ಮೂಜುನಾಥ ನಾಯ್ಕ ಈ ದಾಖಲೆ ಮಾಡಿದ ಯುವತಿಯಾಗಿದ್ದು ಈ ಸಾಧನೆಗೆ ತಾಲೂಕಿನ ಜನತೆ ಸಂಬ್ರಮಿಸಿದ್ದಾರೆ.
ಶಿಕ್ಷಕಿಯಾಗುವ ಕನಸು ಹೊತ್ತಿರುವ ಎಂ.ಕಾಂ ಪದವಿಧರೆ ತೃಪ್ತಿ ಲೀಫ್ ಆರ್ಟ್ ನಲ್ಲಿ ಸಾಧನೆ ಮಾಡುತಿದ್ದು ಕಾರವಾರದ ಶಿವಾಜಿ ಮಹಾವಿದ್ಯಾಲಯದ ಬಿಎಡ್ ವಿದ್ಯಾರ್ಥಿನಿಯಾಗಿದ್ದಾಳೆ. ಗ್ರಾಮೀಣ ಪ್ರದೇಶದ ರೈತ ಕುಟುಂಬದ ತೃಪ್ತಿ ಸಾಧನೆಗೆ ಜಿಲ್ಲೆಯೇ ಸಂತ್ರಪ್ತಿ ವ್ಯಕ್ತಪಡಿಸಿದೆ. ಎಲೆಗಳ ಮೇಲೆ ಹಿಂದಿಯಲ್ಲಿ ರಾಷ್ಟ್ರಗೀತೆ ಬರೆದು ಲಿಮ್ಕಾ ಬುಕ್ ಆಫ್ ರೆಕಾರ್ಡ್ಸ್ ಸೇರಿರುವ ಬಗ್ಗೆ ದಾಖಲೆಗಳು ಇವರ ಮನೆ ತಲುಪಿವೆ.