

ಶಿರಸಿ, ಇಲ್ಲಿಯ ಅಂಬೇಡ್ಕರ್ ಭವನದಲ್ಲಿ ಮಂಗಳವಾರ ಮಧ್ಯಾನ್ಹ 2 ಗಂಟೆಗೆ ಹಿಂದುಳಿದ ವರ್ಗಗಳ ಸೌಹಾರ್ದ ಸಮಾವೇಶ ನಡೆಯಲಿದೆ. ಅಂಬೇಡ್ಕರ್ ಜಯಂತಿ ಅಂಗವಾಗಿ ಹಿಂದುಳಿದ ಹಿಂದೂಗಳ ಜಾಗೃತ ವೇದಿಕೆ ಕರ್ನಾಟಕ ದ ಉತ್ತರ ಕನ್ನಡ ಘಟಕ ಆಯೋಜಿಸಿರುವ ಈ ಸಮಾವೇಶದ ಸಾನಿಧ್ಯವನ್ನು ಬೈಲೂರು ನಿಷ್ಕಲ ಮಂಟಪ ಮುಂಡರಗಿ ಶಾಖಾಮಠದ ಪೂಜ್ಯ ಶ್ರೀ ಮ. ನಿ. ಪ್ರ. ನಿಜಗುಣಪ್ರಭು ತೋಂಟದಾರ್ಯ ಸ್ವಾಮೀಜಿ ಗಳು ವಹಿಸಲಿದ್ದಾರೆ. ಭಾ. ದ ಸಾ. ಅ. ರಾಷ್ಟ್ರೀಯ ಸಂಯೋಜಕ ಸುಭಾಷ್ ಕಾನಡೆ ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅಥಿತಿಗಳಾಗಿ ಮುಕುಂದರಾಜ್ (ಸಾಹಿತಿಗಳು ) ಸುಧೀರ್ ಕುಮಾರ್ ಮೊರೊಳ್ಳಿ (ಸಾಮಾಜಿಕ ಕಾರ್ಯಕರ್ತರು ) ಕನ್ನೇಶ್ ನಾಯ್ಕ ಕೋ ಲಶಿರಸಿ (ಹಿರಿಯ ಪತ್ರಕರ್ತರು ) ಪಾಲ್ಗೊಳ್ಳಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

ಬ್ರಹ್ಮಾನಂದರ ವಿರುದ್ಧ ಪೋಸ್ಟ್ ಮಾಡಿದ ಯುವಕನ ಬಂಧನ
ದಿನಾಂಕ:30-04-2022 ರಂದು ಪಿರ್ಯಾದಿ ಕೃಷ್ಣ ಗೋವಿಂದ ನಾಯ್ಕ, ಹಣಜಿ ಬೈಲ್, ಸಿದ್ದಾಪುರ ಶಹರ ಅಧ್ಯಕ್ಷರು ಸಿದ್ದಾಪುರ ತಾಲೂಕಾ ನಾಮದಾರಿ ಅಭಿವೃದ್ಧಿ ಸಂಘ (ರಿ)ಇವರು ಠಾಣೆಗೆ ಬಂದು ಸಾಮಾಜಿಕ ಜಾಲತಾಣದಲ್ಲಿ ಯಾರೋ ವ್ಯಕ್ತಿ ದಿನಾಂಕ:29-04-2022 ರಂದು12-16 ಗಂಟೆಗೆ ” ನಕಲಿ ಫೇಸ್ ಬುಕ್ ಖಾತೆಯನ್ನು ತೆರೆದು ಪೆಸ್ ಬುಕ್ ಪೆಜ್ ನಲ್ಲಿ ಅವಹೇಳನಕಾರಿಯಾಗಿ ಪೋಸ್ಟ್ ಮಾಡಿರುತ್ತಾರೆಂದು ತಮ್ಮ ಲಿಖಿತ ದೂರು ನೀಡಿದ್ದರಿಂದ ಸಿದ್ದಾಪುರ ಪೋಲಿಸ್ ಠಾಣೆಯಲ್ಲಿ ಮಾಹಿತಿ ತಂತ್ರಜ್ಞಾನ ಕಾಯ್ದೆ ಮತ್ತು ಐ.ಪಿ.ಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿತ್ತು ಸದರಿ ಫೇಸ್ಬುಕ್ ಖಾತೆಯ ಪ್ರಕರಣದ ಪತ್ತೆ ಕುರಿತು ಶ್ರೀಮತಿ ಡಾ// ಸುಮನ್ ಡಿ. ಪೆನ್ನೆಕರ್, ಮಾನ್ಯ ಪೊಲೀಸ್ ಅಧೀಕ್ಷಕರು ಉತ್ತರ ಕನ್ನಡ ಜಿಲ್ಲೆ. ಶ್ರೀ ಬದ್ರಿನಾಥ್ ಮಾನ್ಯ ಹೆಚ್ಚುವರಿ ಪೊಲೀಸ್ ಅಧೀಕ್ಷಕರು, ಉತ್ತರಕನ್ನಡ ಜಿಲ್ಲೆ. ಮಾನ್ಯ ಪೊಲೀಸ್ ಉಪಾಧೀಕ್ಷಕರು ಶ್ರೀ ರವಿ ನಾಯ್ಕ ಶಿರಸಿ ಉಪವಿಭಾಗ ಶಿರಸಿ ರವರ ಮಾರ್ಗದರ್ಶನದಲ್ಲಿ, ಶ್ರೀಕುಮಾರ್ ಕೆ ಮಾನ್ಯ ಪೊಲೀಸ್ ನಿರೀಕ್ಷಕರು ಸಿದ್ದಾಪುರ ಪೊಲೀಸ್ ಠಾಣೆ, ಶ್ರೀ ಎಮ್ ಜಿ ಕುಂಬಾರ್ ಪಿಎಸ್ಐ, ,,(ಕಾ&ಸು) ಶ್ರೀ ಮಲ್ಲಿಕಾರ್ಜುನಯ್ಯ ಕೊರನಿ. ಪಿಎಸ್ಐ ತನಿಖೆ ಸಿದ್ದಾಪುರ ಪೊಲೀಸ್ ಠಾಣೆ ಮತ್ತು ಪೋಲಿಸ್ ಸಿಬ್ಬಂದಿಗಳಾದ ಗಂಗಾಧರ ಹೊಂಗಲ್, ರಾಘವೇಂದ್ರ ನಾಯ್ಕ, ಇವರು ಪೇಸ್ ಬುಕ್ ಪೆಜ್ ನ ಮೂಲಕ ಅವಹೇಳನಕಾರಿ ಪೋಸ್ಟ್ ಮಾಡಿದ ಫೇಸ್ಬುಕ್ ಖಾತೆದಾರ ನಾದ ಶಿವರಾಜ್ ತಂದೆ ರಾಜು ಕಲಾದಗಿ ಪ್ರಾಯ:22 ವರ್ಷ ಬಾಗಲಕೋಟೆ ವಾಸ:ನೆಹರೂನಗರ ,ಕೆರೂರು,ತಾ// ಬಾದಾಮಿ, ಜಿ//ಬಾಗಲಕೋಟೆ, ಈತನನ್ನು ದಿನಾಂಕ-08-05-2022 ರಂದು ಪತ್ತೆಹಚ್ಚಿ ಠಾಣೆಗೆ ಕರೆತಂದು ವಿಚಾರಣೆ ಮಾಡಿ ತನಿಖೆ ಕೈಗೊಂಡಿದ್ದು ಇರುತ್ತದೆ.
ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಅವಹೇಳನಕಾರಿ ವಿಷಯದ ಕುರಿತು ಪೊಸ್ಟ್ ಮಾಡಿದ್ದಲ್ಲಿ ಸಾಮಾಜಿಕ ಜಾಲತಾಣದ ಮೇಲೆ ನಿಗಾಇಟ್ಟು ಮಾಹಿತಿ ತಂತ್ರಜ್ಞಾನ ಕಾಯ್ದೆ ಮತ್ತು ಐ.ಪಿ.ಸಿ ಅಡಿಯಲ್ಲಿ ಸೂಕ್ತ ಕಾನೂನು ಕ್ರಮ ಜರೂಗಿಸಲಾವವುದೆಂದು ಈ ಮೂಲಕ ಸಾರ್ವಜನಿಕರಿಗೆ ಸೂಚಿಸಲಾಗಿದೆ.
ಸಹಿ
ಪಿ.ಎಸ್ .ಐ ಸಿದ್ದಾಪುರ ಪೊಲೀಸ್ ಠಾಣೆ


