

ಸಿದ್ದಾಪುರ ಗ್ರೀನ್ ವ್ಯಾಲಿ ಸ್ಫೈಸಿಸ್ ಮುಖ್ಯಸ್ಥ ರಾಘವೇಂದ್ರ ಶಾಸ್ತ್ರಿ ಕೋಟೆಗದ್ದೆ ಕೆ.ಡಿ.ಸಿ.ಸಿ. ಬ್ಯಾಂಕ್ ನಿರ್ಧೇಶಕರಾಗಿ ಆಯ್ಕೆಯಾಗಿದ್ದಾರೆ. ಸಿದ್ಧಾಪುರದ ಪ್ರತಿನಿಧಿಯಾಗಿದ್ದ ಷಣ್ಮುಖಗೌಡರ್ ನಿಧನದಿಂದ ತೆರವಾಗಿದ್ದ ಕೆ.ಡಿ.ಸಿ.ಸಿ. ಬ್ಯಾಂಕ್ ನಿರ್ದೇಶಕ ಸ್ಥಾನಕ್ಕೆ ತಾ.ಪಂ. ಸದಸ್ಯ ವಿವೇಕ ಭಟ್ರಿಗೆ ಎದುರಾಗಿ ಸ್ಫರ್ಧಿಸಿದ್ದರು.
ಈ ಹಿಂದೆ ಹಿರಿಯ ಸಹಕಾರಿ ಧುರೀಣ ಷಣ್ಮುಖ ಗೌಡರ್ ಎದುರಾಳಿಯಾಗಿ ೧೨ ಮತಗಳ ಸಮಾನ ಸಂಖ್ಯೆಯ ಮತಗಳನ್ನು ಪಡೆದು ಭರವಸೆ ಮೂಡಿಸಿದ್ದ ವಿವೇಕ್ ಭಟ್ ಗಡಿಹಿತ್ಲುಗೆ ರಾಘವೇಂದ್ರ ಶಾಸ್ತ್ರಿ ಎದುರಾಳಿಯಾಗಿದ್ದರು. ಮೊದಲ ಬಾರಿ ಕೆ.ಡಿ.ಸಿ.ಸಿ. ಬ್ಯಾಂಕ್ ಗೆ ಸ್ಫರ್ಧಿಸಿ ಅಭೂತಪೂರ್ವ ಜಯ ಗಳಿಸಿರುವ ಶಾಸ್ತ್ರಿ ಪಡೆದ ಮತಗಳು ಒಟ್ಟೂ ಮತಗಳಲ್ಲಿ ಬರೋಬ್ಬರಿ ದುಪ್ಪಟ್ಟು. ಒಟ್ಟೂ ೨೪ ಮತಗಳಲ್ಲಿ ೧೬ ಮತಗಳನ್ನು ಗಳಿಸಿರುವ ಶಾಸ್ತ್ರಿ ಈಗ ಬಿ.ಜೆ.ಪಿ. ಬೆಂಬಲಿತ ಸದಸ್ಯರಾಗಿದ್ದರು. ಒಟ್ಟೂ ಮತಗಳಲ್ಲಿ ಮೂರರಲ್ಲಿ ಒಂದು ಭಾಗ ಅಂದರೆ ೮ ಮತಗಳನ್ನು ಪಡೆದಿರುವ ವಿವೇಕ್ ಭಟ್ ಶಾಸ್ತ್ರಿ ಎದುರು ಸೋಲು ಒಪ್ಪಿಕೊಂಡಿದ್ದಾರೆ.

ಟಿ.ಎಂ.ಎಸ್. ವಿರೋಧಿ ವಿವೇಕ ಭಟ್ ರಿಗೆ ಕೈಕೊಟ್ಟಿರುವ ಕಾಂಗ್ರೆಸ್ ಬೆಂಬಲಿತ ಮತದಾರರು ಮಾಜಿ ಕಾಂಗ್ರೆಸ್ ಸದಸ್ಯ ಶಾಸ್ತ್ರಿಯವರನ್ನು ಬಿ.ಜೆ.ಪಿ. ಯಿಂದ ಬೆಂಬಲಿಸಿ ಬಿ.ಜೆ.ಪಿ. ಸೇರ್ಪಡೆಯಾಗುವ ಯೋಜನೆಯೊಂದಿಗೆ ಶಾಸ್ತ್ರಿ ಜೊತೆ ಬಹುತೇಕ ಕಾಂಗ್ರೆಸ್ ಬೆಂಬಲಿತ ಸದಸ್ಯರು ನಿಂತಿದ್ದಾರೆ ಎನ್ನಲಾಗುತ್ತಿದೆ. ಕಾಂಗ್ರೆಸ್ ಪ್ರಮುಖರು ಕೂಡಾ ಪಕ್ಷ ವಿರೋಧಿ ಚಟುವಟಿಕೆ ಮಾಡುವ ಮೂಲಕ ವಿವೇಕ ಭಟ್ ರಿಗೆ ಕೈಕೊಟ್ಟು ಶಾಸ್ತ್ರಿ ಬೆಂಬಲಿಸಿದ್ದಾರೆ ಎನ್ನಲಾಗುತ್ತಿದೆ.
ಶಿಕ್ಷಿತ,ನಿಷ್ಣಾತ ರಾಜಕೀಯ, ವ್ಯವಹಾರಿಕ ಚತುರರಾಗಿರುವ ಶಾಸ್ತ್ರಿ ಕೆ.ಡಿ.ಸಿ.ಸಿ. ಬ್ಯಾಂಕ್ ಗೆ ಸಿದ್ಧಾಪುರದ ಸಮರ್ಥ ಪ್ರತಿನಿಧಿಯಾಗಿದ್ದಾರೆ ಎನ್ನುವ ಮೆಚ್ಚುಗೆ ಇದೆ.

