ವಿಧಾನಸಭೆ ಸಚಿವಾಲಯದ ವಿವಿಧ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದೆ.
ಬೆಂಗಳೂರು: ವಿಧಾನಸಭೆ ಸಚಿವಾಲಯದ ವಿವಿಧ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದೆ.
ಕರ್ನಾಟಕ ವಿಧಾನ ಸಭೆ ಸಚಿವಾಲಯದಲ್ಲಿ ಖಾಲಿ ಇರುವ ವಿವಿಧ ವೃಂದದ ಹುದ್ದೆಗಳನ್ನು ಭರ್ತಿ ಮಾಡುವ ಸಂಬಂಧ ಅಧಿಸೂಚನೆ ಸಂಖ್ಯೆ:ಕವಿಸಸ/ಆ-1/54/ನೇನೇಭಮಾ-1/2021, ದಿನಾಂಕ:26.04.2022 ಮಾತೃ ವೃಂದದಡಿ ವರದಿಗಾರರು – 02, ಕಂಪ್ಯುಟರ್ ಆಪರೇಟರ್ – 04, ಕಿರಿಯ ಸಹಾಯಕ – 10, ಬೆರಳಚ್ಚುಗಾರರು – 01, ದಲಾಯತ್ – 23 ಹೀಗೆ ಒಟ್ಟು 43 ಹುದ್ದೆಗಳು, ಹಾಗೂ ಅಧಿಸೂಚನೆ ಸಂಖ್ಯೆ:ಕವಿಸಸ/ಆ-1/54/ನೇನೇಭಮಾ-2/2021, ದಿನಾಂಕ:26.04.2022 ಸ್ಥಳೀಯ ವೃಂದದಡಿ ವರದಿಗಾರರು – 03, ಶೀಘ್ರಲಿಫಿಗಾರರು – 02, ಕಿರಿಯ ಸಹಾಯಕರು – 03, ಸ್ವಾಗತಕಾರರು – 01, ಬೆರಳಚ್ಚುಗಾರರು – 03, ಬಡಗಿ – 01, ವಾಹನಚಾಲಕರು – 08, ದಲಾಯತ್ – 11, ಸ್ವೀಪರ್ – 02 ಹೀಗೆ ಒಟ್ಟು 34 ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿಗಳನ್ನು ಆಹ್ವಾನಿಸಲಾಗಿದೆ.