ಸಿದ್ಧಾಪುರ ತಾಲೂಕಿನ ಹೆಗ್ಗೋಡುಮನೆಯ ನಾಗರತ್ನ ಚೆನ್ನಯ್ಯ ಎನ್ನುವ ಮಹಿಳೆ ಪತಿಯಿಂದ ಹತಳಾಗಿದ್ದಾಳೆ. ಕೌಟುಂಬಿಕ ಕಲಹದ ಕಾರಣ ಪತ್ನಿ ನಾಗರತ್ನಳನ್ನು ಕತ್ತಿಯಿಂದ ಕೊಚ್ಚಿ ಕೊಲೆಮಾಡಿದ ಮಂಜುನಾಥ ಚೆನ್ನಯ್ಯ ಪತ್ನಿಯನ್ನು ಕೊಲೆ ಮಾಡಿ ಪರಾರಿಯಾಗಿದ್ದ. ನಾಗರತ್ನಳ ಸಾವನ್ನು ಧೃಡೀಕರಿಸಿದ ಸರ್ಕಾರಿ ಆಸ್ಪತ್ರೆಯ ವೈದ್ಯರು ಇದು ಕೊಲೆ ಎಂದು ಖಚಿತಪಡಿಸಿದ್ದಾರೆ.
ನಾಗರತ್ನ ಚೆನ್ನಯ್ಯ ಸೊರಬಾ ತಾಲೂಕು ಹೊಳೆಮರೂರಿನವರಾಗಿದ್ದು ಕೊಲೆಗಾರ ಪತಿ ಮಂಜುನಾಥ ಚೆನ್ನಯ್ಯನನ್ನು ಪೊಲೀಸರು ಕೋಲಶಿರ್ಸಿ ಬಳಿ ಬಂಧಿಸಿ ವಿಚಾರಣೆಗೆ ಒಳ ಪಡಿಸಿರುವ ಬಗ್ಗೆ ಮೂಲಗಳು ಮಾಹಿತಿ ನೀಡಿವೆ.