


ಮೋದಿ ಪ್ರಧಾನಿಯಾದ ಬಳಿಕ ಯಾವ ಅಭಿವೃದ್ಧಿ ಕಾರ್ಯ ಮಾಡಿದ್ದಾರೆ ಎಂದು ಹೇಳಲಿ. ರಾಜ್ಯದಲ್ಲಿರುವ 26 ಡ್ಯಾಂ ಪೈಕಿ 20 ಡ್ಯಾಂಗಳನ್ನ ಕಾಂಗ್ರೆಸ್ ಕಟ್ಟಿದೆ ಎಂದು ವಿಧಾನಪರಿಷತ್ ಪ್ರತಿಪಕ್ಷದ ನಾಯಕ ಬಿ. ಕೆ ಹರಿಪ್ರಸಾದ್ ಹೇಳಿದರು.
ಕಾರವಾರ: ಖಾಕಿ ಚಡ್ಡಿ, ಕರಿ ಟೋಪಿಯಿಂದ ಯಾವ ಧರ್ಮ ಉಳಿಸೋಕೆ ಸಾಧ್ಯ? ಎಂದು ವಿಧಾನಪರಿಷತ್ ಪ್ರತಿಪಕ್ಷದ ನಾಯಕ ಬಿ. ಕೆ ಹರಿಪ್ರಸಾದ್ ವಾಗ್ದಾಳಿ ನಡೆಸಿದ್ದಾರೆ. ಕುಮಟಾದಲ್ಲಿ ನಡೆದ ಅಭಿನಂದನಾ ಸಮಾರಂಭದಲ್ಲಿ ಈ ಹೇಳಿಕೆ ನೀಡಿದ ಹರಿಪ್ರಸಾದ್ ದೇಶದ ರಕ್ಷಣೆಗೆ ಭೂಸೇನೆ, ವಾಯುಸೇನೆ, ನೌಕಾಸೇನೆ ಇದೆ. ಆದರೆ, ಜರ್ಮನಿಯ ಹಿಟ್ಲರ್ ಸೇನೆಯಂತೆ ಖಾಕಿ ಚಡ್ಡಿ, ಕರಿ ಟೋಪಿ ಹಾಕಿದವರು ಏನು ರಕ್ಷಣೆ ಮಾಡ್ತಾರೆ ಅನ್ನೋದು ಗೊತ್ತಾಗುತ್ತಿಲ್ಲ ಎಂದರು.
ಬಿ. ಕೆ ಹರಿಪ್ರಸಾದ್ ಅವರು ಮಾತನಾಡಿದರು
ಛಪ್ಪನ್ ಇಂಚ್ ಕಾ ಛಾತಿ ಹೊಂದಿರುವ ಮೋದಿ ಒಂದು ದಿನ ಚೀನಾ ಎಂದು ಹೇಳಲಿ. ಚೀನಾ ಎಂದು ಹೇಳಲು ಅವರಿಗೆ ಧೈರ್ಯವಿಲ್ಲ. ಮೋದಿ ಪ್ರಧಾನಿಯಾದ ಬಳಿಕ ಯಾವ ಅಭಿವೃದ್ಧಿ ಕಾರ್ಯ ಮಾಡಿದ್ದಾರೆ ಎಂಬುದನ್ನು ಹೇಳಲಿ. ರಾಜ್ಯದಲ್ಲಿರುವ 26 ಡ್ಯಾಂ ಪೈಕಿ 20 ಡ್ಯಾಂಗಳನ್ನ ಕಾಂಗ್ರೆಸ್ ಕಟ್ಟಿದೆ ಎಂದರು.
ಬಿಜೆಪಿ ಒಂದು ಕೆರೆಯನ್ನೂ ಕಟ್ಟಿಸಿಲ್ಲ. ಎಲ್ಲಾ ಜಾಗವನ್ನು ನುಂಗಿ ಹಾಕಿದ್ದಾರೆ. ಬಿಜೆಪಿ ಲೂಟಿ ಸರ್ಕಾರ, ವೈಫಲ್ಯ ಮುಚ್ಚಿಸಲು ಧರ್ಮಗಳ ನಡುವೆ ಬಿರುಕು ಮೂಡಿಸ್ತಾರೆ. ದೇಶದ ಪ್ರಪ್ರಥಮ ಉಗ್ರವಾದಿ ನಾಥೂರಾಮ್ ಗೋಡ್ಸೆ ಗಾಂಧಿಯನ್ನು ಕೊಂದಿದ್ದ. ಬಾಬರಿ ಮಸೀದಿ ಕೆಡವಿ ರಾಮಮಂದಿರ ನಿರ್ಮಿಸಿದ್ರು ಎಂದು ಹರಿಪ್ರಸಾದ್ ವಾಗ್ದಾಳಿ ನಡೆಸಿದರು.https://ee25872a0221f6ebfb4bd50b1cb23ba3.safeframe.googlesyndication.com/safeframe/1-0-38/html/container.html
ಆದರೆ, ಬಿಜೆಪಿಯವರು ಯಾರೂ ಪ್ರಾಣ ತ್ಯಾಗ ಮಾಡಿಲ್ಲ. ಕಂಡವರ ಮಕ್ಕಳನ್ನು ಬಾವಿಗೆ ಹಾಕಿ ಆಳ ನೋಡುವವರು, ತಮ್ಮ ಮಕ್ಕಳನ್ನು ವಿದೇಶದಲ್ಲಿ ಓದಿಸುತ್ತಿದ್ದಾರೆ ಅಂತಾ ಕುಮಟಾದಲ್ಲಿ ವಿಧಾನಪರಿಷತ್ ವಿಪಕ್ಷ ನಾಯಕ ಬಿ. ಕೆ ಹರಿಪ್ರಸಾದ್ ಹೇಳಿಕೆ ನೀಡಿದ್ದಾರೆ. (etbk)
