

ಬೀದಿ ಫೋಕರಿಯೊಬ್ಬ ನಾಡಿನ ಮಕ್ಕಳ ಶಿಕ್ಷಣ ನಿರ್ಧರಿಸುವುದು ಕರ್ನಾಟಕದ ದೌರ್ಭಾಗ್ಯ- ಕಾಂಗ್ರೆಸ್ ಟೀಕೆ
ಶುದ್ಧ ಬೀದಿ ಫೋಕರಿಯೊಬ್ಬ ಇಡೀ ನಾಡಿನ ಮಕ್ಕಳು ಏನು ಕಲಿಯಬೇಕೆಂದು ನಿರ್ಧರಿಸುತ್ತಿರುವುದು ಕರ್ನಾಟಕದ ದೌರ್ಭಾಗ್ಯವಾಗಿದೆ ಎಂದು ಕಾಂಗ್ರೆಸ್ ಟೀಕಿಸಿದೆ.

ಬೆಂಗಳೂರು: ಶುದ್ಧ ಬೀದಿ ಫೋಕರಿಯೊಬ್ಬ ಇಡೀ ನಾಡಿನ ಮಕ್ಕಳು ಏನು ಕಲಿಯಬೇಕೆಂದು ನಿರ್ಧರಿಸುತ್ತಿರುವುದು ಕರ್ನಾಟಕದ ದೌರ್ಭಾಗ್ಯವಾಗಿದೆ ಎಂದು ಕಾಂಗ್ರೆಸ್ ಟೀಕಿಸಿದೆ.
ಶಿಕ್ಷಣ ತಜ್ಞರು ಇರಬೇಕಾದ ಜಾಗದಲ್ಲಿ ಕೊಳಕು ಮಂಡಲ ಹಾವಿನಂತಹಾ ಕೊಳಕು ವಿಷಕಾರಿ ವ್ಯಕ್ತಿಯನ್ನು ಕೂರಿಸಿದ್ದು, ಸರ್ಕಾರದ ಬೌದ್ಧಿಕ ದಿವಾಳಿತನವನ್ನು ತೋರಿಸುತ್ತದೆ.ಕುವೆಂಪು ಅಂತವರಿಗೆ, ನಾಡಗೀತೆಗೆ, ನಾಡು ನುಡಿಗೆ ಅವಮಾನಿಸುವ ಈತ ಮಕ್ಕಳ ಕಲಿಕೆಯನ್ನು ನಿರ್ಧರಿಸುವುದಕ್ಕಿಂತ ಬೇರೆ ಅವಮಾನವಿದೆಯೇ? ಎಂದು ಪ್ರಶ್ನಿಸಿದೆ.
ಕನಿಷ್ಠ ಪ್ರಜ್ಞಾವಂತಿಕೆ, ಪ್ರಬುದ್ಧತೆ ಇಲ್ಲದಿರುವ ಈತ ಇನ್ನೆಂತಹಾ ಪಠ್ಯ ಸೇರಿಸಬಹುದು. ಸರ್ಕಾರ ಕೂಡಲೇ ಈತನನ್ನು ಕಿತ್ತು ಹಾಕಬೇಕು ಎಂದು ಸರಣಿ ಟ್ವೀಟ್ ಮೂಲಕ ಕಾಂಗ್ರೆಸ್ ಒತ್ತಾಯಿಸಿದೆ. ಸುಳ್ಳು ತಜ್ಞ, ಬಿಜೆಪಿಯ ಬಾಡಿಗೆ ಭಾಷಣಕಾರನೊಬ್ಬನ ಬರಹವನ್ನು ಪಠ್ಯ ಪುಸ್ತಕದಲ್ಲಿ ಸೇರಿಸಿದ ಸರ್ಕಾರಕ್ಕೆ ಕನಿಷ್ಠ ಮಾರ್ಯಾದೆಯೂ ಇಲ್ಲದಾಗಿದೆ. ಬಿಜೆಪಿ ಮಾಜಿ ಮುಖ್ಯಮಂತ್ರಿ ಸದಾನಂದಗೌಡ ಅವರಿಂದ ದೇಶದ್ರೋಹಿ ಬಿರುದು ಪಡೆದವನ ಬರಹವನ್ನು ಪಠ್ಯದಲ್ಲಿ ಅಳವಡಿಸುವುದು ದೇಶದ್ರೋಹವಲ್ಲವೇ?ಎಂದು ಪ್ರಶ್ನಿಸಿದೆ.
ಶಿಕ್ಷಣ ಸಚಿವರು, ಪಠ್ಯ ಪುಸ್ತಕ ಸಮಿತಿಯ ಫೋಕರಿ ಅಧ್ಯಕ್ಷನನ್ನು ಸಮರ್ಥಿಸುತ್ತಾ ಸಿಇಟಿ ಪ್ರೊಫೆಸರ್ ಆಗಿದ್ದರು ಎಂದಿದ್ದಾರೆ. ಸಿಇಟಿ ಯೂನಿರ್ವಸಿಟಿ ಇದೆಯೇ?ಎಲ್ಲಿದೆ? ಅಥವಾ ವಾಟ್ಸಾಪ್ ಯೂನಿವರ್ಸಿಟಿ ರೀತಿ ಅದೂ ನಿಮ್ಮ ಪ್ರೊಫೆಗಂಡಾ ಯೂನಿವರ್ಸಿಟಿಯೇ? ಎಂಬುದನ್ನು ಸ್ಪಷ್ಪಪಡಿಸಿದೆ. ಇಲ್ಲದಲ್ಲಿ ಶಿಕ್ಷಣ ಇಲಾಖೆ ಶತಮೂರ್ಖರ ಕೈಯಲ್ಲಿದೆ ಎಂದು ಒಪ್ಪಿಕೊಳ್ಳಿ ಎಂದು ಕಾಂಗ್ರೆಸ್ ಕಿಡಿಕಾರಿದೆ. (kpc)
