ಒಂದು ಧರ್ಮ, ಪಕ್ಷದ ಆಯಾಮದಲ್ಲಿ ಪುಸ್ತಕ ಬದಲಾಯಿಸುವುದು ಸರಿಯಲ್ಲ.. ಬಿಜೆಪಿ ಎಂಎಲ್‌ಸಿ ಹೆಚ್.ವಿಶ್ವನಾಥ್
ಕೇವಲ ಒಂದು ಧರ್ಮ, ಪಕ್ಷದ ಆಯಾಮದಲ್ಲಿ ಪುಸ್ತಕವನ್ನು ಬದಲಾಯಿಸುವುದು ಸರಿಯಲ್ಲ. ಮಕ್ಕಳು ಎಂದೂ ಏಕ ಪಕ್ಷದ ದೃಷ್ಟಿಕೋನದಲ್ಲಿ ಬೆಳೆಯಬಾರದು. ರೋಹಿತ್ ಚಕ್ರತೀರ್ಥ ಅವರ ಅಧ್ಯಕ್ಷತೆಯ ಪಠ್ಯ ಪರಿಷ್ಕರಣಾ ಸಮಿತಿಯನ್ನು ರದ್ದುಗೊಳಿಸಬೇಕು ಎಂದು ಹೆಚ್.ವಿಶ್ವನಾಥ್ ಆಗ್ರಹಿಸಿದ್ದಾರೆ..
ಬೆಂಗಳೂರು : ಪಠ್ಯ ಪುಸ್ತಕಗಳ ಪರಿಷ್ಕರಣೆಯನ್ನು ರದ್ದುಗೊಳಿಸಿ, ಶಿಕ್ಷಣವನ್ನು ಕೇಸರಿಕರಣ ಮಾಡುವುದರಿಂದ ತಪ್ಪಿಸಬೇಕು ಎಂದು ಶಿಕ್ಷಣ ಸಚಿವರಿಗೆ ವಿಧಾನ ಪರಿಷತ್ ಸದಸ್ಯ ಅಡುಗೂರು ಹೆಚ್. ವಿಶ್ವನಾಥ್ ಆಗ್ರಹಿಸಿದ್ದಾರೆ. ಮಂಗಳವಾರ ಪ್ರೆಸ್ಕ್ಲಬ್ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ರೋಹಿತ್ ಚಕ್ರತೀರ್ಥ ಅವರ ಅಧ್ಯಕ್ಷತೆಯ ಪಠ್ಯ ಪರಿಷ್ಕರಣಾ ಸಮಿತಿಯನ್ನು ರದ್ದುಗೊಳಿಸಬೇಕು.
ಅವರಲ್ಲಿ ಯಾರು ಸರಿಯಾದ ಶಿಕ್ಷಣ ತಜ್ಞರಲ್ಲ. ಅಲ್ಲದೇ, ಆ ಸಮಿತಿಯನ್ನು ಸ್ಥಾಪಿಸುವಾಗ ಆಗಲಿ ಅಥವಾ ಪುಸ್ತಕ ಪರಿಷ್ಕರಣೆ ಮಾಡುವಾಗ ಆಗಲಿ ಯಾವುದೇ ನಿಯಮಗಳನ್ನು ಪಾಲಿಸಿಲ್ಲ ಎಂದು ದೂರಿದರು.
.ಎಂಎಲ್‌ಸಿ ಹೆಚ್ ವಿಶ್ವನಾಥ್ ಸುದ್ದಿಗೋಷ್ಠಿಯಲ್ಲಿ ಮಾತನಾಡಿರುವುದು..
ಕೇವಲ ಒಂದು ಧರ್ಮ, ಪಕ್ಷದ ಆಯಾಮದಲ್ಲಿ ಪುಸ್ತಕವನ್ನು ಬದಲಾಯಿಸುವುದು ಸರಿಯಲ್ಲ. ಇದು ಮಕ್ಕಳ ಭವಿಷ್ಯದ ಪ್ರಶ್ನೆ. ಮಕ್ಕಳು ಎಂದೂ ಏಕ ಪಕ್ಷಾ ದೃಷ್ಟಿಕೋನದಲ್ಲಿ ಬೆಳೆಯಬಾರದು. ಅದು ಉತ್ತಮ ಬೆಳವಣಿಗೆ ಅಲ್ಲ. ಹಾಗಾಗಿ, ಈ ಪಠ್ಯವನ್ನು ರದ್ದುಗೊಳಿಸಬೇಕು ಎಂದರು.
ಪಠ್ಯ ಪುಸ್ತಕಗಳ ಪರಿಕ್ಷರಣೆ ತಪ್ಪಲ್ಲ: ಹಿಂದಿನ ಪಠ್ಯ ಪುಸ್ತಕಗಳು ಸಂಪೂರ್ಣವಾಗಿ ಸರಿ ಇದೆ ಎಂದು ಹೇಳುವುದಿಲ್ಲ. ಅದರಲ್ಲಿಯೂ ಅನೇಕ ತಪ್ಪಿತ್ತು. ಆದರೆ, ಅನೇಕ ಚರ್ಚೆಗಾಗಿ ನಂತರ ಆ ಪಠ್ಯ ಪುಸ್ತಕಗಳನ್ನು ಜಾರಿಗೆ ತರಲಾಗಿತ್ತು. ಇಲ್ಲಿ ಯಾವುದೇ ಒಂದು ನಿಯಮ, ಎನ್‌ಸಿಆರ್‌ಟಿ ವಿಷಯಗಳನ್ನು ಅನುಸರಿಸಿಲ್ಲ. ಅದು ತಪ್ಪು. ಹಾಗಾಗಿ, ಈ ಸಮಿತಿಯನ್ನು ರದ್ದು ಮಾಡಿ, ಉನ್ನತ ಮಟ್ಟದ ಸಮಿತಿ ರಚಿಸಿ ಪಠ್ಯ ಪುಸ್ತಕಗಳ ಪರಿಷ್ಕರಣೆ ಮಾಡಲಿ ಎಂದು ಆಗ್ರಹಿಸಿದರು. (etbk)