
ಪಡ್ಡೆ ಹುಡುಗರ ಎದೆಗೆ ಕಿಚ್ಚು ಹಚ್ಚಿದ ‘ವಿಕ್ರಾಂತ್ ರೋಣ’ನ ‘ರಾ ರಾ ರಕ್ಕಮ್ಮ’ ಲಿರಿಕ್ ವಿಡಿಯೋ!
ಕಿಚ್ಚ ಸುದೀಪ್ ನಟಿಸಿರುವ ಬಹುನಿರೀಕ್ಷಿತ ಸಿನಿಮಾ ವಿಕ್ರಾಂತ್ ರೋಣ ಚಿತ್ರತಂಡ ಇಂದು ಅಭಿಮಾನಿಗಳಿಗೆ ಗಿಫ್ಟ್ ನೀಡಿದೆ.

ಬೆಂಗಳೂರು: ಕಿಚ್ಚ ಸುದೀಪ್ ನಟಿಸಿರುವ ಬಹುನಿರೀಕ್ಷಿತ ಸಿನಿಮಾ ವಿಕ್ರಾಂತ್ ರೋಣ ಚಿತ್ರತಂಡ ಇಂದು ಅಭಿಮಾನಿಗಳಿಗೆ ಗಿಫ್ಟ್ ನೀಡಿದೆ.
ಈಗಾಗ್ಲೇ ಸಿನಿಮಾ ಪೋಸ್ಟರ್, ಫಸ್ಟ್ ಲುಕ್, ಟೀಸರ್ ನಿಂದ ಗಮನಸೆಳೆದಿರೋ ವಿಕ್ರಾಂತ್ ರೋಣ ಚಿತ್ರದ ಮೊದಲ ಲಿರಿಕಲ್ ಹಾಡು ಗಡಂಗ್ ರಕ್ಕಮ್ಮ ಬಿಡುಗಡೆಯಾಗಿದೆ. ಸಂಗೀತ, ಮತ್ತು ಸಾಹಿತ್ಯ ಕಿಕ್ಕೇರಿಸುವಂತಿದೆ. ಜಾಕ್ವೆಲಿನ್ ಫರ್ನಾಂಡಿಸ್ ಹಾಡಿನಲ್ಲಿ ಯುವಕರ ಎದೆಗೆ ಬೆಂಕಿ ಹಚ್ಚಿದ್ದು ಮಾಸ್ ಸಾಂಗ್ ಗೆ ಅಭಿಮಾನಿಗಳು ಫಿದಾ ಆಗಿದ್ದಾರೆ.
ಹಾಡಿಗೆ ಅನೂಪ್ ಭಂಡಾರಿಯವರ ಸಾಹಿತ್ಯವಿದ್ದು ಬಿ ಅಜನೀಶ್ ಲೋಕನಾಥ್ ಅವರ ಹೈವೋಲ್ಟೇಜ್ ಸಂಗೀತ ಜೋಶ್ ನೀಡಿದೆ. ಸುನಿಧಿ ಚೌಹಾಣ್ ಮತ್ತು ನಕಾಶ್ ಅಜೀಜ್ ಅವರ ದನಿಯಲ್ಲಿ ಹಾಡು ಮೂಡಿಬಂದಿದ್ದು, ಸಿನಿಮಾದ ಮೇಲಿನ ನಿರೀಕ್ಷೆ ಹೆಚ್ಚಾಗಿದೆ.
ಇದೇ ಲಿರಿಕಲ್ ಹಾಡು ಹಿಂದಿಯಲ್ಲಿ ಮೇ24 ರಂದು ಮಧ್ಯಾಹ್ನ 1:05ಕ್ಕೆ ತೆಲುಗಿನಲ್ಲಿ ಮೇ 25 ರಂದು, ತಮಿಳಿನಲ್ಲಿ ಮೇ 26 ಹಾಗು ಮಲಯಾಳಂನಲ್ಲಿ ಮೇ 27 ರಂದು ಮಧ್ಯಾಹ್ನ 1.05ಕ್ಕೆ ಬಿಡುಗಡೆಯಾಗಲಿದೆ. ನಿರೂಪ್ ಭಂಡಾರಿ ನಿರ್ದೇಶನದ ವಿಕ್ರಾಂತ್ ರೋಣ 3 ಡಿಯಲ್ಲಿ ಜುಲೈ 28ಕ್ಕೆ ಬಿಡುಗಡೆಯಾಗಲಿದೆ.
ಇದನ್ನೂ ಓದಿ…










