

ಸಾಗರ,ಸೊರಬ ಜನರಿಂದ ಪೊಲೀಸರ ಮೇಲೆ ಹಲ್ಲೆ…
ಕರ್ತವ್ಯದಲ್ಲಿದ್ದ ಪೊಲೀಸರಿಗೆ ಅವಾಚ್ಯ ಶಬ್ದದಿಂದ ಬೈದು ಕಲ್ಲಿನಿಂದ ಹಲ್ಲೆ ನಡೆಸಿರುವ 11 ಜನರ ಮೇಲೆ ಸಿದ್ದಾಪುರ ಠಾಣೆಯಲ್ಲಿ ದೂರು ದಾಖಲಾಗಿದೆ
ಕಾನುಗೋಡು ಕೆರೆ ಬೇಟೆಯಲ್ಲಿ ಕರ್ತವ್ಯದಲ್ಲಿದ್ದ ಸಿದ್ದಾಪುರ ಠಾಣೆಯ ಪಿ ಎಸ್ ಐ ಮಾಂತಪ್ಪ ಜಿ ಕುಂಬಾರ ಹಾಗೂ ಸಿಬ್ಬಂದಿಗಳ ಮೇಲೆ ಕೆರೆಯಲ್ಲಿ ಮೀನು ಸಿಗಲಿಲ್ಲ ಎಂದು ಆಕ್ರೋಶಗೊಂಡ ಮೀನುಗಾರರು ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಲ್ಲದೆ ಹಲ್ಲೆ ನಡೆಸಿರುವ ಬಗ್ಗೆ ದೂರು ದಾಖಲಾಗಿದೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆಯನ್ನು ಮುಂದುವರಿಸಿದ್ದಾರೆ ಠಾಣೆಯ ಪಿಎಸ್ಐ ಮಹಾಂತಪ್ಪ ಜಿ ಕುಂಬಾರ್ ಸಿಬ್ಬಂದಿಗಳಾದ ಪ್ರಕಾಶ್ ತಲ್ವಾರ್ ರಮೇಶ್ ಕೂಡಲ್ , ಸಂದೀಪ ನಾಯ್ಕ್ , ಮಹಮ್ಮದ್ ಗೌಸ್, ವಾಣಿ ನೇತ್ರೇಕರ್, ಸುಲೋಚನ ನಾಯ್ಕ್, ಸರ ಸ್ವತಿ ಗುಗ್ಗರಿ ಎನ್ನುವವರ ಮೇಲೆ ಹಲ್ಲೆ ಗಳಾಗಿದ್ದು
ಹಲ್ಲೆ ನಡೆಸಿದ ರಾಮಚಂದ್ರ ಈರಪ್ಪ ಸಾಗರ, ಮಂಜಪ್ಪ ಶಿವಪ್ಪ ಹುಲ್ತಿಕೊಪ್ಪ , ದೇವರಾಜ್ ಮೂಕಪ್ಪ ಮಡಿವಾಳ ಹಾನಗಲ್ , ಕೃಷ್ಣ ಕೆರಿಯಪ್ಪ ಕಮರೂರು, ಭರತ್ ಜಯಪ್ಪ ಚನ್ನಯ್ಯ ಸೊರಬ, ದೀಪಕ್ ಶಾಮಣ್ಣ ಜಿಗಳೆಮನೆ, ಮಾಲ್ತೇಶ್ ಈರಪ್ಪ ಚಂದ್ರಗುತ್ತಿ ,ಗಂಗಾಧರ ಈರಪ್ಪ ಹೊಸಳ್ಳಿ ಆನವಟ್ಟಿ, ಗಿರೀಶ್ ಮಂಜಪ್ಪ ಸುಳ್ಳುರ್, ಶ್ರೀಧರ್ ನೀಲಪ್ಪ ಹಾನಗಲ್ , ವೀರೇಶ್ ಮಾಲ್ತೇಶ್ ಹಾನಗಲ್ ಎನ್ನುವವರ ಮೇಲೆ ಪ್ರಕರಣ ದಾಖಲಾಗಿದ್ದು ಪೊಲೀಸರು ತನಿಖೆಯನ್ನು ಮುಂದುವರಿಸಿದ್ದಾರೆ.

ಕೆರೆಮೀನು ಬೇಟೆಗೆ ಬಂದ ಬೇಟೆಗಾರರು ಕೆರೆಯಲ್ಲಿ ಮೀನುಗಳು ಸಿಗಲಿಲ್ಲ ಎಂದು ಕೋಪಗೊಂಡವರು ಕಾನಗೋಡ್ ನಲ್ಲಿ ದುಂಡಾವರ್ತನೆ ಮಾಡಿದ್ದು ಮನೆ, ಅಂಗಡಿ ಒಳಗೆ ಅಕ್ರಮವಾಗಿ ಪ್ರವೇಶವನ್ನು ಮಾಡಿ ಹಲವಾರು ವಸ್ತುಗಳನ್ನು ಧ್ವಂಸ ಮಾಡಿ ನಾಶ ಪಡಿಸಿದ ಬಗ್ಗೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ
ವೀರಭದ್ರ ಮೈಲಾ ನಾಯ್ಕ ರವರ ಮನೆಯ ಸೌಂಡ್ ಬಾಕ್ಸ್, ಮೈಕ್, ಎಂಪಿ ಪ್ಲೇಯರ್ಸ್ ಒಡೆದು ನಾಶ ಮಾಡಿ ಒಟ್ಟು 1,26,000 ರೂ ನಷ್ಟಪಡಿಸಿದ್ದಾರೆ.
ಅದೇ ರೀತಿ ಮಾರುತಿ ರಾಮ ನಾಯ್ಕ್ ರವರ ಮನೆಗೆ ಅಕ್ರಮವಾಗಿ ಪ್ರವೇಶವನ್ನು ಮಾಡಿ ಫ್ರಿಜ್ಜು ಶೋಕೇಸ್ ಚಪ್ಪಡಿ ಕಲ್ಲು ನಾಶಪಡಿಸಿ ಅಕ್ರಮವಾಗಿ ಅಂಗಡಿಯ ಸೆಟ್ರೆಸ್ ಮುರಿದು ಒಳನುಗ್ಗಿ ಸಕ್ಕರೆಯ ಚೀಲ ನೋಟ್ಬುಕ್ ಹಾಗೂ 14 ಸಾವಿರ ನಗದು ಸೇರಿದಂತೆ ಎರಡು ಲಕ್ಷ ರೂಪಾಯಿ ನಷ್ಟ ಪಡಿಸಿದ್ದಾರೆ
ಮಂಜುನಾಥ್ ಸಣ್ಣ ನಾಯ್ಕ ರವರ ಅಂಗಡಿಯ ಬೀಗವನ್ನು ಒಡೆದು ಅಕ್ರಮವಾಗಿ ಒಳಪ್ರವೇಶಿಸಿ ಅಂಗಡಿಯಲ್ಲಿದ್ದ ಮಿಲ್ಕ್ ಆನ್ಲೈಸೆರ್, ತೂಕಮಾಡುವ ಎಲೆಕ್ಟ್ರಿಕಲ್ ಯಂತ್ರ, ಪ್ಲಾಸ್ಟಿಕ್ ಕುರ್ಚಿಗಳನ್ನು ಮುರಿದು ಒಟ್ಟು 60 ಸಾವಿರ ಮೌಲ್ಯದ ವಸ್ತುಗಳನ್ನು ನಾಶ ಪಡಿಸುವ ಬಗ್ಗೆ ದೂರು ನೀಡಿದ್ದಾರೆ
ಹಾಗೆ ವಾಸು ಚನ್ನ ನಾಯ್ಕ್ ಇವರ ಅಂಗಡಿಯಲ್ಲಿ ಫ್ರಿಡ್ಜು ಹಿಟ್ಟಿನ ಕಂಪ್ಯೂಟರ್ ಜೆರಾಕ್ಸ್ ಮಶೀನ್ ಎಲೆಕ್ಟ್ರಿಕಲ್ ತೂಕದ ಯಂತ್ರ ಅಂಗಡಿಯಲ್ಲಿದ್ದ ಕಿರಣಿ 1.50 ಲಕ್ಷ ನಗದು ಹಾಗೂ ವಸ್ತುಗಳ ಮೌಲ್ಯ ಒಟ್ಟು 1,80,000 ಮೌಲ್ಯ ದ ವಸ್ತು ನಾಶಪಡಿಸಿದ್ದಾರೆ ಘಟನೆ ಗೆ ಸಂಬಂಧಿಸಿದಂತೆ ಠಾಣೆಯಲ್ಲಿ ದೂರು ದಾಖಲಾಗಿದ್ದು ತನಿಖೆ ಮುಂದುವರೆದಿದೆ
ಕಾನಗೋಡು ಈಶ್ವರ ದೇವಸ್ಥಾನದ ಕಮಿಟಿಯವರು ಸುಲಭವಾಗಿ ಹಣ ಮಾಡುವ ಉದ್ದೇಶದಿಂದ ಊರಿನ ಕೆರೆಯಲ್ಲಿ ಮೀನು ಇಲ್ಲದಿರುವ ವಿಷಯ ತಿಳಿದಿದ್ದರೂ ಕೆರೆಯಲ್ಲಿ ದೊಡ್ಡ ದೊಡ್ಡ ಮೀನುಗಳಿವೆ ಎಂದು ಕರ ಪತ್ರ ಮುದ್ರಿಸಿ ಪ್ರಚಾರವನ್ನು ಮಾಡಿ ಮೋಸ ಮಾಡಿರುವ ಬಗ್ಗೆ ಹಾನಗಲ್ ಮೂಲದ ಹನುಮಂತಪ್ಪ ಎನ್ನುವವರು ಠಾಣೆಯಲ್ಲಿ ದೂರು ನೀಡಿದ್ದಾರೆ
ಒಂದು ಕೂಣಿ ಗೆ 600 ರೂ ನಿಗದಿಪಡಿಸಿ 4ಸಾವಿರ ಜನರಿಂದ ಒಟ್ಟು 24 ಲಕ್ಷ ರೂಪಾಯಿ ಸಂಗ್ರಹ ಮಾಡಿ ಮೋಸ ಮಾಡಿರುವ ಬಗ್ಗೆ ಸಿದ್ದಾಪುರ ಠಾಣೆಯಲ್ಲಿ ದೂರು ದಾಖಲಾಗಿದೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
