

ಪಕ್ಷದ ಸಾಮಾನ್ಯ ಕಾರ್ಯಕರ್ತರ ಕಡೆಗಣನೆ ನಿಷ್ಠಾವಂತರ ಅಪಹಾಸ್ಯ ಮಾಡುತ್ತಾ ಅನ್ಯಪಕ್ಷಗಳ ಜನರಿಗೆ ಪ್ರಶಸ್ತಿ,ಪುರಸ್ಕಾರ ಕೊಡಿಸುತ್ತಾ ಸ್ವಪಕ್ಷದಲ್ಲಿ ಒಡುಕು ಮೂಡಿಸಿ ಅನ್ಯ ಪಕ್ಷಗಳ ನಾಯಕರ ಜೊತೆಗೆ ಹೊಂದಾಣಿಕೆ ಮಾಡುವ ಸ್ಥಳಿಯ ಶಾಸಕ ಮತ್ತು ರಾಜ್ಯದ ಗೌರವಾನ್ವಿತ ವಿಧಾನಸಭಾ ಅಧ್ಯಕ್ಷರ ನಡವಳಿಕೆ ವಿರೋಧಿಸಿ ಸಿದ್ಧಾಪುರ ತಾಲೂಕಾ ಯುವಮೋರ್ಚಾ ಅಧ್ಯಕ್ಷತೆಗೆ ರಾಜೀನಾಮೆ ನೀಡಿರುವುದಾಗಿ ಹರೀಶ್ ಗೌಡರ್ ಮಳಲಿಕೊಪ್ಪ ಪ್ರಕಟಿಸಿದ್ದಾರೆ.
ಸಿದ್ಧಾಪುರ ಬಿ.ಜೆ.ಪಿ. ಕಛೇರಿಯಲ್ಲಿ ಮಾಧ್ಯಮಗೋಷ್ಠಿ ನಡೆಸಿ ವಿವರಣೆ ನೀಡಿದ ಅವರು ಹಿಂದಿನ ಚುನಾವಣೆಗಳಲ್ಲಿ ಬಿ.ಜೆ.ಪಿ. ಆಯ್ಕೆಯಾದರೆ ಅಕ್ರಮ ಮದ್ಯ ಮಾರಾಟ ನಿಯಂತ್ರಿಸುತ್ತೇವೆ ಎಂದು ಜನರ ಬಳಿ ಮತಯಾಚಿಸಿದ್ದೆವು. ಈಗ ಕ್ಷೇತ್ರದಲ್ಲಿ ಅಕ್ರಮ ಮದ್ಯ ಮಾರಾಟ ಮಿತಿ ಮೀರಿದೆ ನಾವೇ ಆಯ್ಕೆ ಮಾಡಿದ ಶಾಸಕರು ಅದಕ್ಕೆ ಸಹಕರಿಸುತಿದ್ದಾರೆ.

ಕಳೆದ ಹಲವು ವರ್ಷಗಳಿಂದ ಬಿ.ಜೆ.ಪಿ. ತತ್ವ-ಸಿದ್ಧಾಂತ ನಂಬಿ ನಾವು ಪ್ರಾಮಾಣಿಕವಾಗಿ ಕೆಲಸ ಮಾಡುತಿದ್ದೇವೆ ಆದರೆ ನಮ್ಮ ಶಾಸಕರು ಅನ್ಯ ಪಕ್ಷಗಳ ಜನರಿಗೆ ಪ್ರಶಸ್ತಿ ಪುರಸ್ಕಾರ ಕೊಡಿಸುವುದು, ಸರ್ಕಾರದ ನೇಮಕಾತಿಗಳಿಗೆ ಸಹಕರಿಸುವುದು ಮಾಡುತಿದ್ದಾರೆ. ಗುತ್ತಿಗೆ ಕೆಲಸ ನೀಡಿಕೆ, ಅನ್ಯರ ಓಲೈಕೆ ಮಾಡುತ್ತಾ ಪಕ್ಷ, ಸಂಘಟನೆಗೆ ದುಡಿದವರಿಗೆ ಅನ್ಯಾಯ ಮಾಡುತಿದ್ದಾರೆ.
ಈ ಅವ್ಯವಸ್ಥೆ, ನಿಷ್ಟಾವಂತರ ಕಡೆಗಣಗಳಿಂದ ಬೇಸತ್ತು ಬಿ.ಜೆ.ಪಿ. ತಾಲೂಕಾ ಯುವಮೋರ್ಚಾ ಅಧ್ಯಕ್ಷತೆಗೆ ರಾಜೀನಾಮೆ ನೀಡಿದ್ದೇನೆ. ನನ್ನೊಂದಿಗೆ ಚಂದನ ಶಾಸ್ತ್ರಿ ಕೂಡಾ ರಾಜೀನಾಮೆ ನೀಡಿದ್ದಾರೆ ಎಂದು ಹರೀಶ್ ಗೌಡರ್ ತಿಳಿಸಿದ್ದಾರೆ.
