

ಸಿದ್ದಾಪುರ: ತಾಲೂಕಿನ ಹೆರವಳ್ಳಿಯ ಸ್ನೇಹ ಜೀವಿ, ಮಾಜಿ ಮುಖ್ಯ ಮಂತ್ರಿ ಬಂಗಾರಪ್ಪನವರ ಕಟ್ಟಾ ಅಭಿಮಾನಿ, ಸಾಮಾಜಿಕ ಕ್ಷೇತ್ರದಲ್ಲಿ ತೊಡಗಿಸಿಕೊಂಡು ಎಲ್ಲರ ಪ್ರೀತಿಯ ವಿಟಿಗೌಡ ಎಂದೇ ಪ್ರಸಿದ್ಧರಾಗಿದ್ದ ವೆಂಕಟೇಶ ತಿಮ್ಮಾ ಗೌಡ (75) ರವಿವಾರ ನಿಧನರಾದರು.
ಅವರು ಹೆರವಳ್ಳಿಯ ಶ್ರೀರಾಮ ಭಜನಾ ಮಂಡಳಿಯ ಸಂಸ್ಥಾಪಕ ಅಧ್ಯಕ್ಷರಾಗಿ ಗ್ರಾಮದಲ್ಲಿ ರಾಮ ಭಜನೆಗಳಿಗೆ ಪ್ರೋತ್ಸಾಹಿಸಿದ್ದರು. ಗ್ರಾಮ ಪಂಚಾಯತಿ ಸದಸ್ಯರಾಗಿ, ಭೂ ನ್ಯಾಯ ಮಂಡಳಿಯ ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ. ಅಲ್ಲದೆ ಸಾಮಾಜಿಕ, ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ಎಲ್ಲಾ ವಯೋಮಾನದವರಲ್ಲೂ ಅವರಂತೆಯೇ ಬೆರೆಯುತ್ತಾ ಎಲ್ಲರ ಪ್ರೀತಿ ಗಳಿಸಿದ್ದರು. ಅವರು ಪತ್ನಿ, ಓರ್ವ ಪುತ್ರ, ಪುತ್ರಿ ಹಾಗೂ ಅಪಾರ ಬಂಧುಗಳು, ಸ್ನೇಹಿತರನ್ನು ಅಗಲಿದ್ದಾರೆ.

ಕ್ಲೀನ್ ಸಿಟಿ ಪ್ರೋಗ್ರಾಮ್ ಗೆ ಶಿರ್ಸಿ ಸಿದ್ದಾಪುರ ಗ್ರಾಮಸ್ಥರಿಂದ ಬೆಂಬಲ
ಟೀಮ್ ಪರಿವರ್ತನೆ ವತಿಯಿಂದ ರವಿವಾರ ಕ್ಲೀನ್ ಸಿಟಿ ಪ್ರೋಗ್ರಾಮ್ ಗೆ ಕಾನಸೂರ್ ನಲ್ಲಿ ಚಾಲನೆ ನೀಡಲಾಯಿತು ಟೀಮ್ ಪರಿವರ್ತನೆ ಮುಖ್ಯಸ್ಥ ಹಿತೇಂದ್ರ ನಾಯ್ಕ್ ಹಾಗೂ ವಿವಿಧ ಸಂಘಟನೆ ಪದಾಧಿಕಾರಿಗಳು ಪುನೀತ್ ರಾಜಕುಮಾರ್ ರವರ ಭಾವ ಚಿತ್ರಕ್ಕೆ ಪೂಜಿಸಿ ಪುಷ್ಪ ನಮನ ಸಲ್ಲಿಸಿ ಸ್ವಚ್ಛತಾ ಕಾರ್ಯ ಆರಂಭಿಸಿದರು
ಕಾನಸೂರ್ ನಾಣಿಕಟ್ಟಾ ಶೇಲೂರ್ ಬಸ್ ನಿಲ್ದಾಣವನ್ನು ಸ್ವಚ್ಚ ಮಾಡಲಾಯಿತು. ಶಾಲಾ ಮಕ್ಕಳು, ಶಿಕ್ಷಕರು, ಪುನೀತ್ ರಾಜಕುಮಾರ್ ಅನಾಥಾಶ್ರಮ, ಡಿ ಬೋಸ್ ಅಭಿಮಾನಿ ಸಂಘ, ಘಜಸೇನೆ, ವಸಂತ್ ನಾಯ್ಕ ಅಭಿಮಾನಿ ಬಳಗ ಮತ್ತು ಮನು ವಿಕಾಸ್ ಸಂಘಟನೆಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದವು
ನಮ್ಮ ಸುತ್ತ ಮುತ್ತಲಿನ ಪರಿಸರವನ್ನು ಸ್ವಚ್ಚವಾಗಿ ಇಡೋದು ಬಹಳ ಮುಖ್ಯ. ಅದು ನಮ್ಮ ಮನಸ್ಸಿನ ಮೇಲೆ, ದೊಡ್ಡ ಪರಿಣಾಮ ಬೀರುತ್ತದೆ ಎಂದು ಸ್ವಚ್ಛತೆಯ ಬಗ್ಗೆ ಟೀಮ್ ಪರಿವರ್ತನೆರವರು ಆಯೋಜಿಸಿದ್ದ ಕ್ಲೀನ್ ಸಿಟಿ ಪ್ರೋಗ್ರಾಮ್ ನ ಉದ್ಘಾಟನೆ ಮಾಡಿದ ವಿಶ್ವನಾಥ್ ನಾಯ್ಕ ರವರು ತಮ್ಮ ಅನಿಸಿಕೆ ಹಂಚಿಕೊಂಡರು , ಮಲೆನಾಡಿನ ಪ್ರಕೃತಿಯ ಸಿರಿತನ ಬಗ್ಗೆ ಮಾತು ಆಡಿ, ನಮ್ಮ ಮಲೆನಾಡನ್ನು ಉಳಿಸಿಕೊಳ್ಳಬೇಕು, ಇದನ್ನ ನಮ್ಮೆಲ್ಲರ ಮುಂದಿನ ಪೀಳಿಗೆಗೆ ಕೊಡಬೇಕು ಎಂದು ಹೇಳಿದರು ನಾಗರಾಜ್ ನಾಯ್ಕ್, ಮಹೇಂದ್ರ ಗೌಡ, ರವಿ ಕೊಠಾರಿ,ಶಂಕರ್ ಮೂರ್ತಿ ಮುಂತಾದವರು ಉಪಸ್ಥಿತರಿದ್ದರು
ಸ್ವಚ್ಛತಾ ಕಾರ್ಯದಲ್ಲಿ ಆದರ್ಶ ಮೆರೆದ ಕಾನಸೂರಿನ ಕಾಳಿಕಾ ಭವಾನಿ ಪ್ರೌಡ ಶಾಲಾ ವಿದ್ಯಾರ್ಥಿಗಳು
ಭಾನುವಾರ ಆದರೆ ಸಾಕು ಶಾಲಾ ಮಕ್ಕಳೆಲ್ಲ ಆಟ ಆಡಲು ಹೋದರೆ ಈ ಮಕ್ಕಳು ಟೀಮ್ ಪರಿವರ್ತನೆ ಜೊತೆಗೂಡಿ ಬಸ್ಸ್ ನಿಲ್ದಾಣಗಳನ್ನು ಸ್ವಚ್ಛ ಗೊಳಿಸುವ ಕಾರ್ಯದಲ್ಲಿ ತೊಡಗಿದ್ದರು. ಮಕ್ಕಳ ಈ ಕೆಲಸವನ್ನು ನೋಡಿ ಜನರು ಮೆಚ್ಚುಗೆ ವ್ಯಕ್ತಪಡಿಸಿದರು . ಇವರ ತಂದೆ ತಾಯಿಗಳು ಮತ್ತು ಇವರಿಗೆ ಪಾಠ ಮಾಡಿದ ಗುರುಗಳು ಮಕ್ಕಳಲ್ಲಿನ ಸಾಮಾಜಿಕ ಕಳಕಳಿ ನೋಡಿ ಧನ್ಯರಾದರು.


