
ಪಶ್ಚಿಮ ಶಿಕ್ಷಕರ ಮತಕ್ಷೇತ್ರದ ಬಿ.ಜೆ.ಪಿ. ವಿಧಾನಪರಿಷತ್ ಚುನಾವಣೆಯ ಅಭ್ಯರ್ಥಿ ಬಸವರಾಜ್ ಹೊರಟ್ಟಿ ಯಾವುದೇ ನಾಯಕರು ಬಿ.ಜೆ.ಪಿ.ಗೆ ಬರುವುದು ಅವರ ವೈಯಕ್ತಿಕ ವಿಚಾರ ಮತ್ತು ಬಿ.ಜೆ.ಪಿ.ಪಕ್ಷದ ವಿಚಾರ ಅದರ ಬಗ್ಗೆ ನಾನೇನೂ ಹೇಳಲ್ಲ. ನಾನು ಬಿ.ಜೆ.ಪಿ.ಗೆ ಯಾರನ್ನೂ ಆಹ್ವಾನಿಸಿಲ್ಲ ಬಿ.ಜೆ.ಪಿ ಸೇರುತ್ತೇನೆ ಎಂದು ಬಂದ ಕೆಲವರಿಗೆ ನಾನೇ ಬೇಡ ಎಂದು ತಡೆದಿದ್ದೇನೆ ಎನ್ನುವ ಮೂಲಕ ಹೊರಟ್ಟಿ ಕತೂಹಲ ಮೂಡಿಸಿದ್ದಾರೆ.
ಜಾತ್ಯಾತೀತ ಜನತಾದಳದಿಂದ ನಾನು ಯಾರನ್ನೂ ಬಿ.ಜೆ.ಪಿ.ಗೆ ತಂದಿಲ್ಲ. ಜಾ.ದಳದಿಂದ ಬಿ.ಜೆ.ಪಿ. ಬರಲಿದ್ದ ಕೆಲವರನ್ನೂ ನಾನೇ ತಡೆದಿದ್ದೇನೆ ಎಂದು ನೇರವಾಗಿ ಹೇಳಿರುವ ಪಶ್ಚಿಮ ಶಿಕ್ಷಕರ ಕ್ಷೇತ್ರದ ವಿಧಾನಪರಿಷತ್ ಬಿ.ಜೆ.ಪಿ. ಅಭ್ಯರ್ಥಿ ಬಸವರಾಜ್ ಹೊರಟ್ಟಿ ನಾನು ಜೆ.ಡಿ.ಎಸ್. ಗೆ ದ್ರೋಹ ಬಗೆಯಲ್ಲ. ಸ್ವತಂತ್ರವಾಗಿ ಸ್ಫರ್ಧಿಸಿ,ರಾಮಕೃಷ್ಣ ಹೆಗಡೆಯವರ ಶಿಷ್ಯನಾಗಿ ನಾಲ್ವತ್ತೈದು ವರ್ಷ ರಾಜಕಾರಣ ಮಾಡಿದ್ದೇನೆ. ಜನತಾದಳ ಜಾತ್ಯಾತೀತ ಪಕ್ಷದಿಂದಲೂ ಆಯ್ಕೆಯಾಗಿ ಮಂತ್ರಿಯಾಗಿ ವಿಧಾನಪರಿಷತ್ ಸಭಾಪತಿಯಾಗಿ ಬೆಳೆದಿದ್ದೇನೆ. ನನ್ನಿಂದ ಜೆ.ಡಿ.ಎಸ್.ಗೆ ಮೋಸವಾಗಲ್ಲ ಎಂದು ಭರವಸೆ ನೀಡಿದರು.
ಉತ್ತರ ಕನ್ನಡ ಜಿಲ್ಲೆಯಲ್ಲಿ ಚುನಾವಣಾ ಪ್ರಚಾರದಲ್ಲಿರುವ ಹೊರಟ್ಟಿ ನಾನು ಯಾರಿಗೋ ಹೆದರಿ,ಯಾರದೋ ಒತ್ತಡಕ್ಕೆ ಮಣಿದು ಬಿ.ಜೆ.ಪಿ. ಸೇರಿಲ್ಲ ಕೆಲವು ಪ್ರಮುಖರು ವಿಶೇಶವಾಗಿ ಶಿಕ್ಷಕರು ಒತ್ತಾಯಿಸಿದ್ದರಿಂದ ಬಿ.ಜೆ.ಪಿ. ಸೇರಿದ್ದೇನೆ. ಜಾತ್ಯಾತೀತ ಜನತಾದಳದ ಅಭ್ಯರ್ಥಿ ನನ್ನ ಶಿಷ್ಯ, ಕಾಂಗ್ರೆಸ್ ಅಭ್ಯರ್ಥಿ ಬಿಟ್ಟರೆ ಉಳಿದ೫ ಅಭ್ಯರ್ಥಿಗಳು ನನಗೆ ಲೆಕ್ಕಕ್ಕಿಲ್ಲ ಎಂದರು. ಬಿ.ಜೆ.ಪಿ. ಅಭ್ಯರ್ಥಿಯಾಗಿ ಬಿ.ಜೆ.ಪಿ. ಪಕ್ಷಕ್ಕೆ ಅಹಿತಕರವಾಗಿ,ಜೆ.ಡಿ.ಎಸ್.ಗೆ ಪೂರಕವಾಗಿ ಮಾತನಾಡಿದ್ದು ಚರ್ಚೆಯ ವಿಷಯವಾಗಿದೆ.
