

ವೈರಲ್ ಆಯ್ತು ಪುನೀತ್ ರಾಜಕುಮಾರ್ ಹಳೇಯ ಪೋಸ್ಟ್: ಕಣ್ಣೀರಿಟ್ಟ ಅಭಿಮಾನಿಗಳು!
ಆರಾಮಾಗಿ ಇದ್ದೀನಿ.. ಏನೂ ಚಿಂತಿಸಬೇಕಾಗಿಲ್ಲ.. ನಿಮ್ಮೆಲ್ಲರ ಕಾಳಜಿಗೆ ಧನ್ಯವಾದಗಳು.. ಹೀಗೆಂದು ಹೇಳಿರುವ ಪುನೀತ್ ರಾಜ್‌ಕುಮಾರ್ ಅವರ ಫೇಸ್‌ಬುಕ್ ಪೋಸ್ಟ್ ಒಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಬೆಂಗಳೂರು: ಆರಾಮಾಗಿ ಇದ್ದೀನಿ.. ಏನೂ ಚಿಂತಿಸಬೇಕಾಗಿಲ್ಲ.. ನಿಮ್ಮೆಲ್ಲರ ಕಾಳಜಿಗೆ ಧನ್ಯವಾದಗಳು.. ಹೀಗೆಂದು ಹೇಳಿರುವ ಪುನೀತ್ ರಾಜ್‌ಕುಮಾರ್ ಅವರ ಫೇಸ್‌ಬುಕ್ ಪೋಸ್ಟ್ ಒಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಪವರ್‌ಸ್ಟಾರ್ ಪುನೀತ್ ರಾಜ್‌ಕುಮಾರ್ ಇಹಲೋಕ ತ್ಯಜಿಸಿ ಏಳು ತಿಂಗಳಾದರೂ, ಅಭಿಮಾನಿಗಳು ಅವರ ಹೆಸರಿನಲ್ಲಿ ವಿವಿಧ ಕಾರ್ಯಕ್ರಮ ನಡೆಸುವ ಮೂಲಕ ಅಪ್ಪು ನೆನಪನ್ನು ಹಸಿರಾಗಿರಿಸಿದ್ದಾರೆ.
ಇದೇ ಸಂದರ್ಭದಲ್ಲಿ ಪುನೀತ್ ರಾಜ್‌ಕುಮಾರ್ ಅವರ ನಾಲ್ಕು ವರ್ಷಗಳ ಹಿಂದಿನ ಫೇಸ್‌ಬುಕ್ ಪೋಸ್ಟ್ ಒಂದು ವೈರಲ್ ಆಗಿದೆ. 2018ರ ಜೂನ್ 7ರಂದು ಪುನೀತ್ ರಾಜ್‌ಕುಮಾರ್ ಅವರ ಕಾರು ಅಪಘಾತವಾಗಿತ್ತು. ಆ ಸಂದರ್ಭದಲ್ಲಿ ಅಭಿಮಾನಿಗಳು ಅಪ್ಪುವಿನ ಕುರಿತು ಆತಂಕಕ್ಕೆ ಒಳಗಾಗಿರುವಾಗ, ಫೇಸ್‌ಬುಕ್ ಮೂಲಕ ಪುನೀತ್ ತಾನು ಕ್ಷೇಮವಾಗಿರುವ ಬಗ್ಗೆ ಪೋಸ್ಟ್ ಮಾಡಿದ್ದರು.
ಹೌದು, ನಾಲ್ಕು ವರ್ಷಗಳ ಹಿಂದೆ 2018 ಜೂನ್ 7 ರಂದು ಅಪ್ಪು ಅವರ ಕಾರು ಅಪಘಾತವಾಗಿತ್ತು, ಇದು ಅಭಿಮಾನಿಗಳ ಚಿಂತೆಗೆ ಕಾರಣವಾಗಿತ್ತು. ಅಪ್ಪು ಆರೋಗ್ಯದ ಬಗ್ಗೆ ಅಭಿಮಾನಿಗಳು ಆತಂಕಗೊಂಡಿದ್ರು, ಆ ಸಮಯದಲ್ಲಿ ಅಪ್ಪು ಒಂದು ಟ್ವೀಟ್ ಮಾಡಿದ್ದರು. ಆ ಟ್ವೀಟ್ನಲ್ಲಿ ಆರಾಮಾಗಿದ್ದೀನಿ, ಡೋಂಟ್ ವರಿ, ನಿಮ್ಮ ಕಾಳಜಿಗೆ ಧನ್ಯವಾದಗಳು ಎಂದು ಬರೆದಿದ್ದರು. ಇದೀಗ ಆ ಟ್ವೀಟ್ ವೈರಲ್ ಆಗುತ್ತಿದ್ದು, ಅಭಿಮಾನಿಗಳು ಕಳೆದ ಅಕ್ಟೋಬರ್ 29ರಂದು ಈ ಟ್ವೀಟ್ ಬಂದಿದ್ದರೆ ಚೆನ್ನಾಗಿತ್ತು ಎಂದು ಬೇಸರ ವ್ಯಕ್ತಪಡಿಸುತ್ತಿದ್ದಾರೆ. ಈ ಮಾತನ್ನು ನೀವು 29ರ ಅಕ್ಟೋಬರ್ 2021ರ ಸಂಜೆ ಹೇಳಬೇಕಿತ್ತು. ನಿಮ್ಮನ್ನು ಮಿಸ್ ಮಾಡಿಕೊಳ್ಳುತ್ತಿದ್ದೇವೆ, ಮತ್ತೆ ಹುಟ್ಟಿ ಬನ್ನಿ ಎಂದು ಕಾಮೆಂಟ್ ಮೂಲಕ ಕೇಳಿಕೊಳ್ಳುತ್ತಿದ್ದಾರೆ.(kpc)
