
ಅಗ್ನಿಪಥ್ ವಿರುದ್ಧ ಸಿಡಿದೆದ್ದ ಯುವಜನತೆ: ಒಂದು ಸಾವು, 8 ಜನರಿಗೆ ಗಾಯ – ವಯಸ್ಸಿನ ಮಿತಿ ಹೆಚ್ಚಳಕ್ಕೆ ಮುಂದಾದ ಕೇಂದ್ರ

ಅಗ್ನಿಪಥ ಬಹಳ ಉತ್ತಮ ಯೋಜನೆ, ಇದರಡಿ ತರಬೇತಿ ಪಡೆದವರನ್ನು ಪೊಲೀಸ್ ಇಲಾಖೆಗೂ ನೇಮಿಸಿಕೊಳ್ಳಬಹುದು: ಆರಗ ಜ್ಞಾನೇಂದ್ರ
ಭ್ರಷ್ಟ ಅಧಿಕಾರಿಗಳಿಗೆ ಚುರುಕು ಮುಟ್ಟಿಸುವ ಕೆಲಸ ಎಸಿಬಿ ಕಡೆಯಿಂದ ಆಗಾಗ ಆಗುತ್ತಿರುತ್ತದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಭ್ರಷ್ಟ ಅಧಿಕಾರಿಗಳ ವಿರುದ್ಧ ಎಸಿಬಿ ದಾಳಿ ಬಗ್ಗೆ ಪ್ರತಿಕ್ರಿಯಿಸಿದ್ದಾರೆ.

ಬೆಂಗಳೂರು: ಭ್ರಷ್ಟ ಅಧಿಕಾರಿಗಳಿಗೆ ಚುರುಕು ಮುಟ್ಟಿಸುವ ಕೆಲಸ ಎಸಿಬಿ ಕಡೆಯಿಂದ ಆಗಾಗ ಆಗುತ್ತಿರುತ್ತದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಭ್ರಷ್ಟ ಅಧಿಕಾರಿಗಳ ವಿರುದ್ಧ ಎಸಿಬಿ ದಾಳಿ ಬಗ್ಗೆ ಪ್ರತಿಕ್ರಿಯಿಸಿದ್ದಾರೆ.
ಬೆಂಗಳೂರಿನಲ್ಲಿಂದು ಸುದ್ದಿಗಾರರ ಜೊತೆ ಮಾತನಾಡಿದ ಅವರು ಕೇಂದ್ರ ಸರ್ಕಾರದ ಅಗ್ನಿಪಥ ಯೋಜನೆ ಬಗ್ಗೆ ಕೇಳಿಬರುತ್ತಿರುವ ಟೀಕೆಗಳ ಬಗ್ಗೆ ಪ್ರತಿಕ್ರಿಯಿಸಿದರು.
ಭವಿಷ್ಯದಲ್ಲಿ ಏನೋ ಆಗುತ್ತದೆ ಎಂದು ಈಗ ಬೆಂಕಿ ಹಚ್ಚುವ ಕೆಲಸ ಯಾರೂ ಮಾಡಬಾರದು. ಅಗ್ನಿಪಥ ಕೇಂದ್ರ ಸರ್ಕಾರದ ಉತ್ತಮವಾದ ಯೋಜನೆ. ಸಮಾಜದಲ್ಲಿ ಪರಿವರ್ತನೆಯಾಗಲು ಬಿಡುವುದಿಲ್ಲ ಎಂದು ಹೇಳುವ ಕೆಲವು ವರ್ಗಗಳಿವೆ. ಅಂತವರು ಇದರ ಬಗ್ಗೆ ಪ್ರತಿಭಟನೆ, ಅಪಪ್ರಚಾರ ಮಾಡುತ್ತಿದ್ದಾರೆ. ಈ ಯೋಜನೆ ಇನ್ನೂ ಜಾರಿಯಾಗಿಲ್ಲ, ಜಾರಿ ಮಾಡುತ್ತೇವೆ ಎಂದು ಹೇಳಿದಾಗಲೇ ಇಷ್ಟೆಲ್ಲಾ ಪ್ರತಿಭಟನೆ, ವಿರೋಧ ಏಕೆ ಎಂದು ಪ್ರಶ್ನಿಸಿದರು.
ಅಗ್ನಿಪಥ ತುಂಬಾ ಉತ್ತಮ ಯೋಜನೆ, ಇಸ್ರೇಲ್ ನಂತಹ ದೇಶಗಳಲ್ಲಿ ಕಡ್ಡಾಯವಾಗಿ ಮಿಲಿಟರಿ ತರಬೇತಿ ಪಡೆದಿರಬೇಕೆಂಬ ನಿಯಮವಿದೆ. ನಮ್ಮ ದೇಶದಲ್ಲಿ ಅಗ್ನಿಪಥ ಯೋಜನೆಯಡಿ ನಾಲ್ಕು ವರ್ಷ ತರಬೇತಿ ನೀಡಲಾಗುತ್ತದೆ. ಈ ಸಂದರ್ಭದಲ್ಲಿ ವೇತನ, ನಾಲ್ಕನೇ ವರ್ಷದಲ್ಲಿ ನಿವೃತ್ತಿಯಾದ ನಂತರ ಪ್ರೋತ್ಸಾಹಕ ಧನ, ಶೇಕಡಾ 25ರಷ್ಟನ್ನು ಮಿಲಿಟರಿಗೆ ತೆಗೆದುಕೊಳ್ಳಲಾಗುತ್ತದೆ. ಅಲ್ಲದೆ ನಾಲ್ಕು ವರ್ಷ ತರಬೇತಿ ಪಡೆದವರನ್ನು ಪೊಲೀಸ್ ಇಲಾಖೆಗೂ ಸೇರಿಸಲು ಅನುಕೂಲವಾಗುತ್ತದೆ, ಲಕ್ಷಾಂತರ ಯುವಕರಿಗೆ ಉದ್ಯೋಗ ದೊರಕುತ್ತದೆ ಎಂದರು. (kpc)
ಕೇಂದ್ರ ಸರ್ಕಾರ ಹೊಸದಾಗಿ ಘೋಷಿಸಿದ ಸೇನಾ ನೇಮಕಾತಿ ಕುರಿತ ಅಗ್ನಿಪಥ್ ಯೋಜನೆಗೆ ರಾಷ್ಟ್ರಾದ್ಯಂತ ತೀವ್ರ ವಿರೋಧ ವ್ಯಕ್ತವಾಗಿದೆ. ಉದ್ಯೋಗಾಕಾಂಕ್ಷಿ ಯುವಜನರು ಸಿಡಿದೆದ್ದಿದ್ದು 7 ರಾಜ್ಯಗಳಲ್ಲಿ ಭಾರೀ ಪ್ರತಿಭಟನೆ ನಡೆಸಿದ್ದಾರೆ. ಪ್ರತಿಭಟನೆ ತಡೆಯಲು ಪೊಲೀಸರು ಲಾಠೀ ಚಾರ್ಜ್ ಮಾಡಿದ್ದರಿಂದ ಪ್ರತಿಭಟನೆ ಹಿಂಸಾರೂಪ ಪಡೆದಿದೆ. ಇದುವರೆಗೂ ದೇಶಾದ್ಯಂತ ಒಂದು ಸಾವು ಸಂಭವಿಸಿದ್ದು, 8 ಜನರ ಗಾಯಗೊಂಡಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.
ತೆಲಂಗಾಣಕ್ಕೂ ಪ್ರತಿಭಟನೆಯ ಕಿಚ್ಚು ವ್ಯಾಪಿಸಿದ್ದು ಸಿಕಂದರಾಬಾದ್ ರೈಲ್ವೇ ನಿಲ್ದಾಣದಲ್ಲಿ ಪ್ರತಿಭಟನೆ ತೀವ್ರಗೊಂಡಾಗ ಪೊಲೀಸರು ಗುಂಡು ಹಾರಿಸಿದ್ದಾರೆ. ಆ ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಒಬ್ಬ ಯುವಕ ಸಾವನಪ್ಪಿದ್ದಾನೆ. ತದನಂತರ ಸಿಟ್ಟಿಗೆದ್ದ ಯುವಜನರು ರೈಲು ಬೋಗಿಗಳಿಗೆ ಕಲ್ಲು ತೂರಿ, ಸಾರ್ವಜನಿಕ ಬಸ್‌ಗಳನ್ನು ಜಖಂಗೊಳಿಸಿದ್ದಾರೆ ಎಂದು ಹಿಂದೂಸ್ತಾನ್ ಟೈಮ್ಸ್ ವರದಿ ಮಾಡಿದೆ.
ಬಿಹಾರ-ಉತ್ತರ ಪ್ರದೇಶದಲ್ಲಿ ಮೂರನೇ ದಿನವೂ ಪ್ರತಿಭಟನೆಗಳು ಹೆಚ್ಚಾಗುತ್ತಿವೆ. ರಸ್ತೆ ತಡೆ- ರೈಲು ತಡೆಗಳು ಸಾಮಾನ್ಯವಾಗಿವೆ. ಉತ್ತರ ಬಿಹಾರದ ಚಂಪಾರಣ್ ಜಿಲ್ಲೆಯಲ್ಲಿ ಉಪ ಮುಖ್ಯಮಂತ್ರಿ ರೇಣು ದೇವಿ ಮೇಲೆ ಪ್ರತಿಭಾನಾಕಾ ರರು ದಾಳಿ ನಡೆಸಿದ್ದಾರೆ.
ಪ್ರತಿಭಟನೆಗಳು ತೀವ್ರವಾಗುತ್ತಿದ್ದಂತ ಕೇಂದ್ರ ಸರ್ಕಾರ ನೇಮಕಾತಿಗೆ ಇದ್ದ ವಯಸ್ಸಿನ ಮಿತಿಯನ್ನು ಈ ವರ್ಷಕ್ಕೆ ಮಾತ್ರ ಅನ್ವಯವಾಗುವಂತೆ 21 ವರ್ಷದಿಂದ 23 ವರ್ಷಕ್ಕೆ ಹೆಚ್ಚಿಸಿದೆ. ಈ ಕುರಿತು ಗೃಹ ಸಚಿವ ಅಮಿತ್ ಶಾ ಟ್ವೀಟ್ ಮೂಲಕ ಮಾಹಿತಿ ನೀಡಿದ್ದಾರೆ.
ಕಳೆದ ಎರಡು ವರ್ಷಗಳಿಂದ ಕರೋನಾ ಸಾಂಕ್ರಾಮಿಕದಿಂದಾಗಿ ಸೇನೆಯಲ್ಲಿನ ನೇಮಕಾತಿ ಪ್ರಕ್ರಿಯೆ ನಡೆದಿಲ್ಲ.
‘ಅಗ್ನಿಪಥ್ ಯೋಜನೆ’ಯಲ್ಲಿ ಆ ಯುವಕರ ಕಾಳಜಿಗಾಗಿ ಮೊದಲ ವರ್ಷದಲ್ಲಿ ಎರಡು ವರ್ಷಗಳ ರಿಯಾಯಿತಿ ನೀಡುವ ಮೂಲಕ ವಯೋಮಿತಿಯನ್ನು 21 ವರ್ಷದಿಂದ 23 ವರ್ಷಕ್ಕೆ ಹೆಚ್ಚಿಸುವ ಸೂಕ್ಷ್ಮ ನಿರ್ಧಾರವನ್ನು ನರೇಂದ್ರ ಮೋದಿಯವರು ತೆಗೆದುಕೊಂಡಿದ್ದಾರೆ ಎಂದು ಅವರು ಟ್ವೀಟ್ ಮಾಡಿದ್ದಾರೆ. (nAnoo gouri)
