ಜೂನ್ ೨೫ ರಂದು ಜಿಲ್ಲಾ ಆಡಳಿತದಿಂದ ನಡೆಯುವ ಅಮೃತಭಾರತಿಗೆ ಕನ್ನಡದಾರತಿ ಕಾರ್ಯಕ್ರಮ ಅದ್ದೂರಿಯಾಗಿ ನಡೆಯಲಿದೆ. ಈ ಕಾರ್ಯಕ್ರಮದ ಅಂಗವಾಗಿ ಸ್ವಾತಂತ್ರ್ಯ ಹೋರಾಟದ ಸ್ಮರಣೆಗಾಗಿ ಅಮೃತಭಾರತಿಗೆ ಕನ್ನಡದಾರತಿ ಶಿಲಾಫಲಕ ಅನಾವರಣ ನಡೆಯಲಿದೆ.
ಈ ಕಾರ್ಯಕ್ರಮಗಳು ಎಲ್ಲಾ ಜಿಲ್ಲೆಯ ಕೆಲವು ತಾಲೂಕುಗಳಲ್ಲಿ ನಡೆಯಲಿವೆ. ಈ ಕಾರ್ಯಕ್ರಮದ ಪೂರ್ವತಯಾರಿ ಸಭೆಯಲ್ಲಿ ಸಿದ್ದಾಪುರದಲ್ಲಿ ಸ್ಥಾಪನೆಯಾಗಲಿರುವ ಶಿಲಾಫಲಕ ಎಲ್ಲಿ ಸ್ಥಾಪಿಸಬೇಕು ಎನ್ನುವ ಬಗ್ಗೆ ಚರ್ಚೆ ನಡೆಯಿತು.
ಈ ಪ್ರಸ್ಥಾಪ ಮಾಡಿದ ಶಿರಸಿ ಉಪವಿಭಾಗಾಧಿಕಾರಿ ದೇವರಾಜ್ ಆರ್. ಸ್ವಾತಂತ್ರ್ಯೋತ್ಸವ ಅಮೃತಫಲಕ ಎಲ್ಲಿ ಸ್ಥಾಪಿಸಬೇಕು ಎಂದು ಸಲಹೆ ಕೇಳಿದಾಗ ಪತ್ರಕರ್ತ ಗಣೇಶ್ ಭಟ್ ತಹಸಿಲ್ಧಾರ ಕಛೇರಿಯ ಆವರಣದಲ್ಲಿ ಈ ಫಲಕ ಸ್ಥಾಪಿಸುವುದು ಸೂಕ್ತ ಎನ್ನುವ ಸಲಹೆ ನೀಡಿದರು.
ನಂತರ ವಕೀಲ ರವಿ ಹೆಗಡೆ ನಗರದ ಗಾರ್ಡನ್ ವೃತ್ತ ಅಂದರೆ ರಾಮಕೃಷ್ಣ ಹೆಗಡೆ ಸರ್ಕಲ್ ನಲ್ಲಿ ಈ ಫಲಕ ಸ್ಥಾಪನೆಯಾದರೆ ಒಳ್ಳೆಯದು ಎಂದರು.
ಈ ಚರ್ಚೆಗೆ ಧ್ವನಿ ಜೋಡಿಸಿದ ಪತ್ರಕರ್ತ ಕನ್ನೇಶ್ ಕೋಲಶಿರ್ಸಿ ಶಿಲಾಫಲಕ ನೆಟ್ಟು ನಿರ್ವಹಣೆ ಮಾಡುವುದು ವ್ಯವಸ್ಥೆಯ ಜವಾಬ್ಧಾರಿ ಪಟ್ಟಣ ಪಂಚಾಯತ್ ನಿರ್ವಹಣೆಯಲ್ಲಿ ಈ ಶಿಲಾಫಲಕ ಗಾರ್ಡನ್ ಸರ್ಕಲ್ ನಲ್ಲಿ ಸ್ಥಾಪನೆಯಾದರೆ ಸ್ಥಳಿಯರೊಂದಿಗೆ ಹೊರ ಊರುಗಳ ಪ್ರವಾಸಿಗರಿಗೆ ಕೂಡಾ ಸಿದ್ಧಾಪುರದ ಸ್ವಾತಂತ್ರ್ಯ ಹೋರಾಟದ ಚರಿತ್ರೆ ಪರಿಚಯವಾಗಬಹುದು ಎಂದರು.
ಈ ಸಭೆಯ ನಂತರ ಸಾಧ್ಯಾಸಾಧ್ಯತೆಗಳನ್ನು ಪರಿಗಣಿಸಿ ಉಳಿದ ಅಂಶಗಳನ್ನು ಗಣನೆಗೆ ತೆಗೆದುಕೊಂಡು ಸೂಕ್ತ ಸ್ಥಳದಲ್ಲಿ ಈ ಅಮೃತಮಹೋತ್ಸವದ ಸ್ಮರಣೆಯ ಶಿಲಾಫಲಕ ಸ್ಥಾಪಿಸುವುದಾಗಿ ತಿಳಿಸಿದರು. ಈ ವರೆಗೆ ಸಭೆ, ಸಾರ್ವಜನಿಕರ ಅಭಿಪ್ರಾಯ ಸಂಗ್ರಹಣೆ, ಚರ್ಚೆಗಳಾಗಿವೆ. ಆದರೆ ಈ ಮಹತ್ವದ ಶಿಲಾಫಲಕ ಸಿದ್ಧಾಪುರದ ಯಾವ ಪ್ರದೇಶದಲ್ಲಿ ಸ್ಥಾಪನೆಯಾದರೆ ಒಳ್ಳೆಯದು ಈ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ದಾಖಲಿಸಲು ಸಾಧ್ಯವೆ? ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರೀಯಿಸುವ ಮೂಲಕ ಈ ಜನಾಭಿಪ್ರಾಯವನ್ನೂ ಬೆಂಬಲಿಸಬಹುದು.