

ದ್ವಿತೀಯ ಪಿಯುಸಿ ಯಲ್ಲಿ 98% ಅಂಕ ಪಡೆದು ವಿದ್ಯಾರ್ಥಿನಿ ಸಾಧನೆ
ಎಸ್ ಡಿ ಎಂ ಕಾಲೇಜ್ ಉಜಿರೆಯಲ್ಲಿ ಓದುತ್ತಿದ್ದ ತಾಲೂಕಿನ ಬೇಡ್ಕಣಿಯ ಕೀರ್ತಿ ನಾಗರಾಜ್ ನಾಯ್ಕ್, ದ್ವಿತೀಯ ಪಿಯುಸಿಯಲ್ಲಿ 98% ಅಂಕಗಳನ್ನು ಪಡೆದು ಸಾಧನೆ ಮಾಡಿದ್ದಾಳೆ ಈಕೆಯು ಸಿದ್ದಾಪುರ ಬಿಜೆಪಿ ಮಂಡಲ ಅಧ್ಯಕ್ಷರಾದ ನಾಗರಾಜ್ ನಾಯ್ಕ್ ಬೇಡ್ಕಣಿ ರವರ ಪುತ್ರಿಯಾಗಿದ್ದಾಳೆ ಇವಳು ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲೂ ಸಹ
98% ಫಲಿತಾಂಶ ದೊಂದಿಗೆ ತೇರ್ಗಡೆ ಹೊಂದಿದ್ದಳು.
ಇವಳ ಸಾಧನೆಗೆ ಪಾಲಕ ಪೋಷಕರು ಹಾಗೂ ಸಮಾಜದವರು ಮತ್ತು ಪ್ರಮುಖರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ
ಇನ್ನು ಹೆಚ್ಚಿನ ಸಾಧನೆ ಮೂಲಕ ತಾಲೂಕಿಗೆ ಕೀರ್ತಿ ತರಲಿ ಎಂದು ಹಾರೈಸಿದ್ದಾರೆ.

ಶ್ರೀಕ್ಷೇತ್ರ ಧ.ರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸಿದ್ದಾಪುರ ತಾಲ್ಲೂಕಿನ ಗವಿನ ಗುಡ್ಡ ಕಾರ್ಯಕ್ಷೇತ್ರದಲ್ಲಿ ಶ್ರೀನಿಧಿ ಜ್ಞಾನ ವಿಕಾಸ ಕೇಂದ್ರವನ್ನು ಪ್ರಾರಂಭಿಸಿತು. ಈ ಕಾರ್ಯಕ್ರಮವನ್ನು ಯೋಜನಾಧಿಕಾರಿಗಳಾದ ಪ್ರಭಾಕರ್ ದೀಪ ಬೆಳಗಿಸುವದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಜ್ಞಾನವಿಕಾಸ ಕೇಂದ್ರ ದಿಂದ ಆಗುವ ಪ್ರಯೋಜನ ಹಾಗೂ ಇದರಿಂದ ಸಿಗುವ ಸೌಲಭ್ಯದ ಬಗ್ಗೆ ಮಾಹಿತಿಯ ಬಗ್ಗೆ ಸಮಗ್ರ ಮಾಹಿತಿ ಮಾರ್ಗದರ್ಶನವನ್ನು ನೀಡಿದರು ಈ ಕಾರ್ಯಕ್ರಮದಲ್ಲಿ ಒಕ್ಕೂಟದ ಅಧ್ಯಕ್ಷರು ಕೇಂದ್ರದ ಅಧ್ಯಕ್ಷರು ಮತ್ತು ಒಕ್ಕೂಟದ ಪದಾಧಿಕಾರಿಗಳು ಹಾಗೂ ತಾಲ್ಲೂಕಿನ ಜ್ಞಾನವಿಕಾಸ ಸಮನ್ವಯಾಧಿಕಾರಿ ಪ್ರಭಾವತಿ ಮತ್ತು ಸೇವಾ ಪ್ರತಿನಿಧಿ ಪ್ರಜ್ವಲ್ ಉಪಸ್ಥಿತರಿದ್ದರು.

