ಜಿ ಟಿ ವಿತ್ truth… 89
ಅಕ್ಷರ ಹಣತೆ ಬೆಳಗಲು ಜತೆಯಾಗಿ….
ಸಿಗಂದೂರು ಲಾಂಚ್ ನಿಲ್ದಾಣದಲ್ಲಿ ಟಿ ಮಂಡಕ್ಕಿ ಮಾರುವ ಪುಟ್ಟ ಟೀ ಸ್ಟಾಲ್ ನಲ್ಲಿ ಭಾನುವಾರ ಮತ್ತು ಇತರೆ ಕಾಲೇಜು ರಜೆ ದಿನಗಳಲ್ಲಿ ಅಪ್ಪನ ಜತೆ ಮಂಡಕ್ಕಿ ಮಾರಲು ಸಹಾಯ ಮಾಡುತ್ತಾ, ರಾತ್ರಿ ಅಮ್ಮನ ಜತೆಗೆ ಅಡಿಕೆ ಸೊಲಿಯುತ್ತ ಕೂಲಿ ಕಾರ್ಮಿಕ ಬಡವರ ನಮ್ಮೂರಿನ ಚಕ್ಕೋಡು ರಘುಪತಿ ಮಗಳು ದಿವ್ಯಶ್ರೀ ದ್ವಿತೀಯ ಪಿಯುಸಿ ಯಲ್ಲಿ 94% ಅಂಕವನ್ನ ವಾಣಿಜ್ಯ ವಿಭಾಗದಲ್ಲಿ ಗಳಿಸಿದ್ದಾಳೆ. ತುಮರಿ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಟಾಪರ್ ಆಗಿದ್ದಾಳೆ.
ಇವಳ ಅಕ್ಕ ಕಾವ್ಯಶ್ರೀ ಕೂಡಾ 2 ವರ್ಷ ಹಿಂದೆ 95% ದ್ವಿತೀಯ ಪಿಯುಸಿಯಲ್ಲಿ ಅಂಕ ಗಳಿಸಿ ತೇರ್ಗಡೆ ಆಗಿದ್ದಳು. ಈಗ ತಂಗಿಯ ಸರದಿ.
ತನ್ನ ಮಂಡಕ್ಕಿ ಟೀ ಅಂಗಡಿಯಲ್ಲಿ ಬರುವ ಆದಾಯದಲ್ಲಿ ಮಕ್ಕಳ ವಿದ್ಯಭ್ಯಾಸಕ್ಕಾಗಿ ಹಣ ಎಲ್ಲಿಂದ ತರಲಿ ಎಂಬುದು ರಘುಪತಿ ಅಂತರಾಳ. ಈ ಹಿಂದೆ ಕಾವ್ಯಶ್ರೀ ಗೆ ನೀವೆಲ್ಲ ಜಿ ಟಿ ವಿತ್ truth.. ನ ನನ್ನ ಕೋರಿಕೆಗೆ ನೀವೆಲ್ಲ ಸಹಕಾರ ನೀಡಿದ್ದೀರಿ. ಈಗ ಕಾವ್ಯಶ್ರೀ ಕುಂದಾಪುರದಲ್ಲಿ ವಾಣಿಜ್ಯ ದ್ವಿತೀಯ ಪದವಿ ಓದುತಾ ಇದ್ದಾಳೆ 95%ಸರಾಸರಿ ಕಾಯ್ದುಕೊಂಡಿದ್ದಾಳೆ.
ದಿವ್ಯಶ್ರೀ ಪದವಿ ಓದಲಿ….
ನಿಮ್ಮ ಸಹಕಾರ ಸಿಕ್ಕರೆ ಈ ಹಾದಿ ಸುಗಮ
ಪ್ಲೀಸ್ ಜತೆಯಾಗಿ…..
ತುಮರಿ ಕೆನರಾ ಬ್ಯಾಂಕ್ ಆಕೆಯ ವಯಕ್ತಿಕ ಖಾತೆ ಹೀಗಿದೆ….
Divyashree
19132200062857
CNRB0011913
ಪೋನ್ ಪೇ ಅವರ ಬಳಿ ಇಲ್ಲದೆ ಇರುವ ಕಾರಣ.
ಜಿ ಟಿ ವಿತ್ truth.. ನನ್ನ ಪೋನ್ ಪೇ, ಗೂಗಲ್ ಪೇ ಸಂಖ್ಯೆ 9482283612 ಬಳಸಬಹುದು.
ಬನ್ನಿ ಅಕ್ಷರ ಹಣತೆ ಬೆಳಗುವ…..
ಜಿ. ಟಿ ತುಮರಿ
9448018212