

ಸಿದ್ಧಾಪುರ, ಪಿಕ್ ಅಪ್ ವಾಹನದಲ್ಲಿ ಆಕಳನ್ನು ತುಂಬಿಕೊಂಡು ಬೇಜವಾಬ್ದಾರಿತನದಿಂದ ಸಾಗಿಸುತ್ತಿದ್ದ ವೇಳೆ ವಾಹನದಿಂದ ಜಿಗಿದ ಆಕಳಿಗೆ ಗಾಯ ವಾಗಿ ಸ್ಥಳೀಯರು ಆಕಳಿನ ಪ್ರಾಣ ರಕ್ಷಿಸಿದ ಘಟನೆ ತಾಲೂಕಿನ ನಾಣಿಕಟ್ಟಾ ದಲ್ಲಿ ನಡೆದಿದೆ
ಹರೀಶಿ ರಸ್ತೆಯಿಂದ ವಾಹನದಲ್ಲಿ ಜಾನುವಾರು ತುಂಬಿಕೊಂಡು ಬರುತ್ತಿದ್ದ ವೇಳೆಯಲ್ಲಿ ವಾಹನದ ಹಿಂಬದಿ ರಸ್ತೆಯಲ್ಲಿ ವಾಹನದ ಜೊತೆಯಲ್ಲಿ ಆಕಳು ಎಳೆದುಕೊಂಡು ಬರುತ್ತಿದ್ದದ್ದನು ಸ್ಥಳೀಯರು ಗಮನಿಸಿ ಕೂಗಿ ಕರೆದರೂ ಚಾಲಕನು ವಾಹನ ನಿಲ್ಲಿಸದೆ ಹೋಗುತ್ತಿರುವಾಗ ಶಿರಸಿ-ಸಿದ್ದಾಪುರ ಮುಖ್ಯರಸ್ತೆಯ ನಾಣಿ ಕಟ್ಟಾದ ಜಾನುವಾರು ಆಸ್ಪತ್ರೆ ಬಳಿ ವಾಹನವನ್ನು ಅಡ್ಡಗಟ್ಟಿ ಸ್ಥಳೀಯ ಸಾರ್ವಜನಿಕರು ಆಕಳಿನ ಪ್ರಾಣ ರಕ್ಷಿಸಿದ ಘಟನೆ ನಡೆಯಿತು.
ಕೂಡಲೇ 112 ವಾಹನಕ್ಕೆ ಕರೆ ಮಾಡಿ ನಡೆದ ಘಟನೆ ವಿವರವನ್ನ ಪೊಲೀಸರಿಗೆ ಸ್ಥಳೀಯರು ಮಾಹಿತಿ ನೀಡಿದರು ಜಾನುವಾರು ವೈದ್ಯಾಧಿಕಾರಿಗಳು ಸ್ಥಳಕ್ಕೆ ಬಂದು ಜಾನುವಾರಿಗೆ ಚಿಕಿತ್ಸೆಯನ್ನು ಕೊಡಿಸಲಾಗಿದೆ ಆದರೆ ವಾಹನ ಚಾಲಕನ ನಿರ್ಲಕ್ಷತನದಿಂದ ಆಕಳು ತನ್ನ ಪ್ರಾಣವನ್ನೇ ಕಳೆದುಕೊಳ್ಳುವಂತಹ ಪರಿಸ್ಥಿತಿಯಿಂದ ಬಚಾವ್ ಆಗಿದೆ ಇಂತಹ ನಿರ್ಲಕ್ಷ ತನದ ಚಾಲಕನ ವಿರುದ್ಧ ಕಠಿಣ ಕ್ರಮ ಜರುಗಿಸುವಂತೆ ಸ್ಥಳೀಯರು ಒತ್ತಾಯಿಸಿದ್ದಾರೆ.

ಪ್ರವೀಣ್ ಅಧ್ಯಕ್ಷ, ದರ್ಶನ್ ಪ್ರ.ಕಾ.
ಸಿದ್ದಾಪುರ: ಭಾರತೀಯ ಜನತಾ ಪಾರ್ಟಿಯ ಸಿದ್ದಾಪುರ ಮಂಡಲದ ಯುವಮೋರ್ಚಾ ಅಧ್ಯಕ್ಷರನ್ನಾಗಿ ಪ್ರವೀಣ ನಾಯ್ಕ ವಾಟಗಾರ ಇವರನ್ನು ನೇಮಕ ಮಾಡಲಾಗಿದೆ.
ಹರೀಶ ಗೌಡರ್ ರಾಜೀನಾಮೆಯಿಂದ ತೆರವಾದ ಯುವಮೋರ್ಚಾ ಅಧ್ಯಕ್ಷ ಸ್ಥಾನಕ್ಕೆ ಪ್ರವೀಣ ನಾಯ್ಕ ಅವರನ್ನು ನೇಮಿಸಿ ಸಿದ್ದಾಪುರ ಮಂಡಲದ ಅಧ್ಯಕ್ಷ ನಾಗರಾಜ ನಾಯ್ಕ ಬೇಡ್ಕಣಿ ಆದೇಶ ಹೊರಡಿಸಿದ್ದಾರೆ. ಅದೇ ರೀತಿ ಯುವಮೋರ್ಚಾ ಪ್ರಧಾನ ಕಾರ್ಯದರ್ಶಿಯನ್ನಾಗಿ ದರ್ಶನ ದಿವಾಕರ ಶೇಟ್ ಇವರನ್ನು ನೇಮಕ ಮಾಡಿ ಆದೇಶಿಸಲಾಗಿದೆ.

