harsha kugve -ವ್ಯಾಕರಣ ಧಿಕ್ಕರಿಸಿ ದಿನಬಳಕೆಯ ಭಾಷ್ಯ ಬರೆದ ಹುಡುಗ

ಪಟ್ಯಪರಿಸ್ಕರಣೆಹೋರಾಟದ_ರಿಪೋರ್ಟ

ನಲ್ಬೆಳಗು ಪ್ರೆಂಡ್ಸ…..

ನೆನ್ನೆ ಸಾವಿರಾರು ಕನ್ನಡಿಗರು ಬಾಗವಹಿಸಿ ಸಾದಿಸಿದ ಗೆಲುವು ಏನು ಅನ್ನುವುದನ್ನು ಮೊದಲು ತಿಳಿಯೋಣ.

  1. ನನ್ನ ಒಂದಸ್ಟು ಸ್ನೇಹಿತರು ಒಂದು ಮಹತ್ವದ ಅಂಶವನ್ನು ಈ ಹೋರಾಟದ ಹಿನ್ನೆಲೆಯಲ್ಲಿ ಗಮನಿಸಿದ್ದಾರೆ. ಅದು ಏನು ಅಂದರೆ ಇಲ್ಲಿಯವರೆಗೂ ಯಾವೆಲ್ಲ ರಾಜ್ಯಗಳಲ್ಲಿ ಬಿಜೆಪಿ ಅದಿಕಾರಕ್ಕೆ ಬಂದಿದೆ ಅಲ್ಲೆಲ್ಲ ಯಾವುದೇ ಪ್ರತಿರೋದವಿಲ್ಲದೆ ಪಟ್ಯ ಪುಸ್ತಕಗಳಲ್ಲಿ RSS ಅಜೆಂಡಾವನ್ನು ತುಂಬಿದ್ದಾರೆ. ಆದರೆ ಪಟ್ಯ ಪುಸ್ತಕಗಳಲ್ಲಿ ಬಂದಿರುವ RSS ಅಜೆಂಡಾವನ್ನು ಬಲವಾಗಿ ಪ್ರತಿರೋದಿಸುತ್ತಿರುವ ಮೊದಲಿಗರು ಕನ್ನಡಿಗರು ಆಗಿದ್ದಾರೆ.
  2. ಇಲ್ಲಿಯವರೆಗೂ ಸಂಗಿ ಬ್ರೆಮಿನ್ಸ ಗಳು ಏನೋ ನಾವೆಲ್ಲರೂ ಹಿಂದೂ ಅನ್ನುತ್ತಿದ್ದಾರೆ ಎಂದು ನಂಬಿದ್ದ ಇತರೆ ಎಲ್ಲ ಜಾತಿ ಸಮುದಾಯಗಳಿಗೆ ಸಂಗಿ ಬ್ರೆಮಿನ್ಸ ಗಳ ಪಿತೂರಿ ಏನು ಅನ್ನುವುದು ಸ್ಪಸ್ಟವಾಗಿ ಅರ್ತವಾಗಿದೆ.
  3. ದೇಶದಲ್ಲೇ ಮೊದಲ ಬಾರಿಗೆ RSS ಅನ್ನು ಸಾರ್ವಜನಿಕವಾಗಿ expose ಮಾಡುತ್ತಿರುವವರು ಕನ್ನಡಿಗರು ಆಗಿದ್ದಾರೆ.
  4. ಬಹಳ ವರುಶಗಳ ನಂತರ ಎಲ್ಲ ಜಾತಿ ಸಮುದಾಯದ ಜನರು ಕನ್ನಡ ಅಸ್ಮಿತೆಗಾಗಿ ಒಂದು ವೇದಿಕೆಗೆ ಬಂದಿದ್ದಾರೆ. ಅದರಲ್ಲೂ OBC ಗಳಿಗೆ ದಲಿತ ತತ್ವದ ಅರಿವು ಮೂಡುತ್ತಿದೆ. ಇದೊಂದು ಈ ಹೋರಾಟದ ದೊಡ್ಡ ಬೆಳವಣಿಗೆ.

ಹೋರಾಟದಮುಂದಿನದಾರಿ_ಏನು

  1. ನೆನ್ನೆಯ ಸಬೆಯಲ್ಲಿ ರಾಜ್ಯ ಸರ್ಕಾರಕ್ಕೆ ಪಟ್ಯ ಪುಸ್ತಕಗಳನ್ನು ಹಿಂಪಡೆಯಲು ಹತ್ತು ದಿನಗಳ ಗಡುವು ನೀಡಲಾಗಿದೆ. ಪುಸ್ತಕ ಹಿಂಪಡೆಯಲಿಲ್ಲ ಅಂದರೆ ಹೋರಾಟ ತೀವ್ರ ಸ್ವರೂಪದೊಂದಿಗೆ ಮುಂದುವರೆಯುತ್ತದೆ.
  2. ಹತ್ತು ದಿನಗಳ ಒಳಗಾಗಿ ಪುಸ್ತಕ ಹಿಂಪಡೆಯಲಿಲ್ಲ ಅಂದರೆ ಮೊದಲ ಪ್ರತಿರೋದವಾಗಿ ಸಾವಿರಾರು ಕನ್ನಡಿಗರು ತಿಪಟೂರು ಚಲೋ ಮಾಡಲಿದ್ದಾರೆ.
  3. ಪ್ರತಿಯೊಂದು ಜಿಲ್ಲೆ, ತಾಲ್ಲೂಕು ಗಳಲ್ಲಿ ದೊಡ್ಡ ಮಟ್ಟದ ಪ್ರತಿರೋದ ಸಬೆಗಳು ನಡೆಯಲಿವೆ.
  4. ಪಟ್ಯ ಪರಿಸ್ಕರಣೆಯ ಅವಾಂತರಗಳ ಸಂಪೂರ್ಣ ತಿಳುವಳಿಕೆ ಇದ್ದು ಪ್ರತಿರೋದ ತೋರದ ಮಟಾದೀಶರು, ಕಾಂಗ್ರೆಸ್ ಮತ್ತು ಜೆಡಿಎಸ್ ನ ನಾಯಕರ ವಿರುದ್ದ ಕೂಡ ಜನರು ತಮ್ಮ ಆಕ್ರೋಶ ವನ್ನು ವ್ಯಕ್ತಪಡಿಸಲಿದ್ದಾರೆ. ಅದರಲ್ಲೂ ಮಟಾದೀಶರ ವಿರುದ್ದ ಆ ಜಾತಿಗಳ ಸಮುದಾಯದ ಯುವಕ ಯುವತಿಯರು ದೊಡ್ಡ ಮಟ್ಟದ ವಿದ್ರೋಹ ತೋರಲಿದ್ದಾರೆ. ನಾಡಿನ ಅಸ್ಮಿತೆಗಾಗಿ ಹೋರಾಡದ ಮಟಾದೀಶರು ಮತ್ತು ರಾಜಕೀಯ ನಾಯಕರು ಇದ್ದರೆಸ್ಟು ಹೋದರೆಸ್ಟು ಅನ್ನುವ ಜನಾಬಿಪ್ರಾಯನ್ನು ಕೋಟ್ಯಂತರ ಕನ್ನಡಿಗರಲ್ಲಿ ತಪ್ಪದೇ ಮೂಡಿಸಲಿದ್ದಾರೆ.
  5. ಇಡೀ ಹೋರಾಟದ ಅಂತಿಮ ಗುರಿ RSS ಅಜೆಂಡಾವನ್ನು ಪುಸ್ತಕಗಳಿಂದ ಮಾತ್ರವಲ್ಲ ಕರ್ನಾಟಕದ ಮಣ್ಣಿನಿಂದಲೇ ಹಿಮ್ಮೆಟ್ಟಿಸುವುದು.

ಸಂಕ್ಶಿಪ್ತವಾಗಿ ಹೇಳುವುದಾದರೆ RSS ಮತ್ತು ಬ್ರಾಹ್ಮಣ್ಯದ ವಿರುದ್ದ ದೊಡ್ಡ ಮಟ್ಟದ ರಾಜಕೀಯ ಮತ್ತು ಸಾಂಸ್ಕ್ರತಿಕ ಪ್ರತಿರೋದ ಈ ಕನ್ನಡ ಮಣ್ಣಿನಲ್ಲಿ ಹುಟ್ಟಲಿದೆ…..

ಎಲ್ಲರೂ ಯೋಗದ ಗುಂಗಿನಲ್ಲಿದ್ದಾಗ ಸಾಮಾಜಿಕ ಜಾಲತಾಣದಲ್ಲಿ ಇಂಥದ್ದೊಂದು ಪೋಸ್ಟ್‌ ಕಂಡರೆ…. ಏನಾಗಬೇಕು? ಹೆಚ್ಚಿನವರಿಗೆ ಏನೂ ಆಗಲಿಕ್ಕಿಲ್ಲ, ಎನಿಸಲಿಕ್ಕಿಲ್ಲ. ಆದರೆ ಒಳಗೊಳಗೆ ಎಲ್ಲವನ್ನೂ ಇಟ್ಟುಕೊಂಡು ತಮ್ಮ ಸಿದ್ಧಾಂತ, ಅಸಲಿತನ ತೋರದವರಿಗೆ ಹರ್ಷಾ ಕುಗ್ವೆ ಎಂದರೆ ಗ್ರಾಮರ್‌ ಬರದ ಬರಹಗಾರ ಎನಿಸಬಹುದು.

ಸ್ವಲ್ಪ ಮತಾಂಧತೆಯ ಅಮಲುತುಂಬಿಕೊಂಡವನಾದರೆ ಸಹಜವಾಗಿ ಇದೇನ್‌ ಬಿಡು……. ಎಂದು ಪ್ರಾರಂಭಿಸಿ ಭಾರತೀಯತೆ ಎಂದರೆ ವಿದೇಶಿ ಪರಿವಾರವನ್ನು ಒಪ್ಪಿಕೊಳ್ಳುವುದು ಎನ್ನುವವರೆಗೆ ೧೦೧ ಪ್ಲಾಂಟೆಡ್‌ ಕಾರಣಗಳನ್ನು ಕೊಟ್ಟು ಹರ್ಷ ಮತ್ತವರ ಬಳಗ ಸರಿ ಇಲ್ಲ ಎಂದುಬಿಡಬಹುದು.

ವಿಷಯ ಏನಪಾ ಅಂದರೆ… ಅವರವರ ಭಾವಕ್ಕೆ ಭಕುತಿಗೆ ಎನ್ನುವ ಮೊದಲು ಹರ್ಷ ವಿದ್ಯಾವಂತ ಕುಟುಂಬದ ಸರ್ಕಾರಿ ಅರೆಸರ್ಕಾರಿ ನೌಕರರೇ ತುಂಬಿರುವ ಕುಟುಂಬ,ಸಂಬಂಧಗಳ ನೆರಳಲ್ಲಿ ಬೆಳೆದವರು. ಈ ಹೋರಾಟ,ಚಳವಳಿ ಎಂದೆಲ್ಲಾ ತಲೆ ಕೆಡಿಸಿಕೊಂಡು ಅಲೆಮಾರಿಯಾಗಿರದಿದ್ದರೆ ಹರ್ಷ ಏನು ಅವರಪ್ಪ ಶಿವಾನಂದ ಕುಗ್ವೆ ಕೂಡಾ ಕೈತುಂಬ ಸಂಬಳ ಕೊಡುವ ಉದ್ಯೋಗದಲ್ಲಿರುತಿದ್ದರು. ಆದರೆ ಶಿವಾನಂದ ಮತ್ತು ಹರ್ಷ ಅಪ್ಪಮಕ್ಕಳು ನಕ್ಷತ್ರದ ಧೂಳು ಅರಸಿ ಹೊರಟರು.‌

ಅಪ್ಪನ ದಾರಿ ಮಕ್ಕಳಿಗೆ ಇಷ್ಟವಾಗುವುದು ಬಲುಅಪರೂಪ ಎಲ್ಲೆಲ್ಲೋ ಕುವೆಂಪು ರಿಗೆ ತೇಜಸ್ವಿ, ಗೌರೀಶರಿಗೆ ಜಯಂತ ಕಾಯ್ಕಿಣಿ,ಲಂಕೇಶ್‌ ರಂಥ ಲಂಕೇಶ್‌ ರಿಗೆ ಗೌರಿ ಲಂಕೇಶ್‌, ರಂಥ ಅಪರೂಪದಲ್ಲಿ ಅನುರೂಪ ಮಕ್ಕಳು ಬೆಳೆಯುವುದು ಬಿಟ್ಟರೆ ಬಹುತೇಕ ಪ್ರಸಿದ್ಧರಿಗೆ ಇವರು ಅವರ ಅಪ್ಪ ಎನ್ನುವುದು ಬಿಟ್ಟರೆ ಜೈವಿಕ ಸಂಬಂಧಗಳ ಹೊರತಾಗಿ ಯಾವ ಸೋಂಕೂ ತಾಕಿರುವುದಿಲ್ಲ.

ಇಂಥ ಅಪರೂಪದ ಕುಗ್ವೆ ಹೋರಾಟ, ಚಳವಳಿ, ಸಂಶೋಧನೆ, ಅಧ್ಯಯನಗಳ ಜೊತೆಗೆ ಸಮಾಜಮುಖಿಯಾಗಿ ಬದುಕಲು ತಮ್ಮ ಬದುಕನ್ನು ಮುಡಿಪಾಗಿಟ್ಟವರು. ದಸಂಸ ಹೋರಾಟ, ಕಾಗೋಡು ಚಳವಳಿ, ಸಾಮಾಜಿಕ, ರಾಜಕೀಯ, ಸಾಂಸ್ಕೃತಿಕ ಚಟುವಟಿಕೆಗಳಿಂದಲೇ ಕ್ರೀಯಾಶೀಲರಾಗಿದ್ದ ಶಿವಾನಂದ ಕುಗ್ವೆ ಮಗ ಹರ್ಷರನ್ನು ಬೇರೆ ದಾರಿಯಲ್ಲಿ ಬೆಳೆಸಬಹುದಿತ್ತು. ಆದರೆ ಶಿವಾನಂದರ ಬದ್ಧತೆ ತಮ್ಮ ಬದುಕು,ಜೊತೆಗೆ ಕುಟುಂಬ, ಊರನ್ನೂ ಒಳಗೊಳ್ಳುತ್ತಾ ಜೀವಂತವಾಗಿದ್ದಕ್ಕೆ ಹರ್ಷ ಇಂದು ಪಟ್ಟಭದ್ರರ ವ್ಯಾಕರಣದ ಶುದ್ಧ ಕನ್ನಡಕ್ಕೆ ಸೆಡ್ಡು ಹೊಡೆದು ದಿನಬಳಕೆಯ, ಜನಬಳಕೆಯ ಭಾಷೆಯನ್ನೇ ಪ್ರತಿರೋಧದ ಅಸ್ತ್ರವನ್ನಾಗಿಸಿಕೊಂಡಿದ್ದಾರೆ.

ಅಕಾಡೆಮಿಕ್‌ ಕೆಲಸಗಳ ಜೊತೆಗೆ ಹೋರಾಟವನ್ನು ಬದುಕಾಗಿಸಿಕೊಂಡವರು ವಿರಳ ಅಂಥ ವಿರಳಾತಿವಿರಳರ ಪಂಕ್ತಿ ಯಲ್ಲಿರುವ ಹರ್ಷಾ ಪಂಕ್ತಭೇದದ ವಿರುದ್ಧದ ಚಳವಳಿ ಸೇರಿ ಅನೇಕ ಹೋರಾಟಗಳಲ್ಲಿ ಸಕ್ರೀಯವಾಗಿ ತೊಡಗಿಕೊಂಡವರು ಇಂಥವರಿಂದ ಈ ನಾಡು ಈಗಲೂ ವೈವಿಧ್ಯತೆಯಲ್ಲಿ ಏಕತೆಯನ್ನು ಕಾಣುತ್ತಿದೆ. ನಕಲಿದೇಶಪ್ರೇಮಿ ಅಧಿಕಾರದಾಹಿ ಲಾಭಕೋರರ ನಡುವೆ ಈ ನಾಡು ಸಮಾನತೆ,ಸೌಹಾರ್ಧತೆಗಾಗಿ ತುಡಿಯುತ್ತಿದೆ. ಈ ಆಶಾವಾದವೊಂದೇ ಈಗಿರುವ ಭರವಸೆ ಎನ್ನುವುದಕ್ಕಾಗಿ ನಾಲ್ಕಕ್ಷರ ಬರೆಯಬೇಕಾಯಿತು. -ಕನ್ನೇಶ್.

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ,...

ತರ್ತು ಪರಿಸ್ಥಿತಿ ಜಾರಿ ತಪ್ಪಲ್ಲ!

RSS ಕೂಡ ತುರ್ತು ಪರಿಸ್ಥಿತಿ ಬೆಂಬಲಿಸಿತ್ತು: MLC ಬಿ.ಕೆ. ಹರಿಪ್ರಸಾದ್ ಪ್ರಧಾನಿ ಮೋದಿಯವರು ಸಾಂವಿಧಾನಿಕ ಹುದ್ದೆಯನ್ನು ರಾಜಕೀಯ ಕೆಸರೆರಚಾಟಕ್ಕೆ ಬಳಸಿಕೊಳ್ಳುತ್ತಿರುವುದು ದುರದೃಷ್ಟಕರ ವಿಚಾರ. ಬಿಕೆ...

dr.vaidya feliciated @ ದೇರಳಕಟ್ಟೆಯಲ್ಲಿ ಡಾ. ಶ್ರೀಧರ್‌ ವೈದ್ಯರಿಗೆ ಸನ್ಮಾನ

ಸಿದ್ದಾಪುರ: ದೇರಳಕಟ್ಟೆಯ ಕೆ. ಎಸ್. ಹೆಗ್ಡೆ ಮೆಡಿಕಲ್ ಅಕಾಡೆಮಿ ಆಶ್ರಯದಲ್ಲಿ ವೈದ್ಯಕೀಯ ದಿನಾಚರಣೆ ಹಿನ್ನಲೆಯಲ್ಲಿ ಹೆಸರಾಂತ ವೈದ್ಯ, ಸಿದ್ದಾಪುರದ ಶ್ರೇಯಸ್ ಆಸ್ಪತ್ರೆಯ ಮುಖ್ಯಸ್ಥ ಡಾ....

ಹಾಲು ಉತ್ಫಾದಕರ ಋಣ ತೀರಿಸಲು ಸಾಧ್ಯವಿಲ್ಲ… -ಪರಶುರಾಮ ನಾಯ್ಕ‌

ಹಾಲು ಒಕ್ಕೂಟದ ನನ್ನ ಸೇವೆ ಅನುಲಕ್ಷಿಸಿ ಎರಡನೇ ಬಾರಿ ನನ್ನನ್ನು ಆಯ್ಕೆ ಮಾಡಿರುವುದಕ್ಕೆ ಖುಷಿಯಾಗಿದೆ ಎಂದು ಧಾರವಾಡ ಗದಗ ಉತ್ತರಕನ್ನಡ ಹಾಲು ಒಕ್ಕೂಟದ ನೂತನ...

ಬಾಬಾ ಜಲಪಾತ ಎಲ್ಲಿದೆ ಗೊತ್ತೆ?

ಭೋರ್ಗರೆಯುತ್ತಿದೆ ಕುಂಬ್ವಾಡೆ ಜಲಪಾತ: ವೈಭವ ನೋಡಲು ಪ್ರವಾಸಿಗರ ದಂಡು ಬೆಳಗಾವಿಯಿಂದ ಸುಮಾರು 87 ಕಿಮೀ ದೂರದಲ್ಲಿ ಖಾಸಗಿ ಒಡೆತನದ ಭೂಮಿಯಲ್ಲಿ ಈ ಜಲಪಾತವಿದೆ. ಕುಂಬ್ವಾಡೆ...

ಕನ್ನಡ ಓದಲು, ಬರೆಯಲು ಬಾರದ ಸಚಿವ ಮಧು ಬಂಗಾರಪ್ಪ ಸರ್ಕಾರಕ್ಕೆ ಕಪ್ಪು ಚುಕ್ಕೆ: ಕುಂ ವೀರಭದ್ರಪ್ಪ ವ್ಯಂಗ್ಯ

11ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದ ಅವರು, ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಿದೆ ಎಂಬ ಕಾರಣಕ್ಕೆ ಕನ್ನಡ ಶಾಲೆಗಳನ್ನು ಬಂದ್ ಮಾಡುವ...

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ, ಬಿಂದು, ಬಿಂದುಶ್ರೀ ಭುವನಶ್ರೀ, c – ಚಿರಶ್ಮಿ, ಚಿತ್ರ, ಚಿತ್ರಪ್ರಭಾ, ಚಿಂತನಾ, ಚಿನ್ಮಯಿ, ಚಿಂಗಾರಿ, ಚಿತ್ತಾಕರ್ಶಿನಿ, ಚಿತ್ತಾಕರ್ಶಿಣಿ, D- ಧರಣಿ, ಧನ್ವಿತಾ, ಧ🎇ಮನಿ, dhanamani ಧಾರಿಣಿ, ದಮಯಂತಿ ,ಧೃತಿ,ದುರ್ಗಾ,...

Recommended For You

About the Author: Kanneshwar Naik

Leave a Reply

Your email address will not be published. Required fields are marked *