

ನಟ-ರಾಜಕಾರಣಿ ಶತ್ರುಘ್ನ ಸಿನ್ಹಾ ಅವರು “ಅಗ್ನಿಪಥ್” ನೇಮಕಾತಿ ಯೋಜನೆಯನ್ನು ದೋಷಪೂರಿತ ನೀತಿ ಎಂದು ಘೋಷಿಸಿದ್ದಾರೆ . ಮತ್ತು ಅದನ್ನ ಹಿಮ್ಮೆಟ್ಟಿಸಲು ಪ್ರತಿಭಟನೆಗಳು ಅನಿವಾರ್ಯವಾಗಿದೆ ಎಂದು ಹೇಳಿದ್ದಾರೆ.

ನವದೆಹಲಿ: ನಟ-ರಾಜಕಾರಣಿ ಶತ್ರುಘ್ನ ಸಿನ್ಹಾ ಅವರು “ಅಗ್ನಿಪಥ್” ನೇಮಕಾತಿ ಯೋಜನೆಯನ್ನು ದೋಷಪೂರಿತ ನೀತಿ ಎಂದು ಘೋಷಿಸಿದ್ದಾರೆ . ಮತ್ತು ಅದನ್ನ ಹಿಮ್ಮೆಟ್ಟಿಸಲು ಪ್ರತಿಭಟನೆಗಳು ಅನಿವಾರ್ಯವಾಗಿದೆ ಎಂದು ಹೇಳಿದ್ದಾರೆ.
ಅಗ್ನಿಪಥ್ ಯೋಜನೆ ಕಿರಿಯ ಮತ್ತು ಹೆಚ್ಚು ತಂತ್ರಜ್ಞಾನ-ಬುದ್ಧಿವಂತ ಪಡೆಯನ್ನು ರಚಿಸಲು ಸಹಾಯ ಮಾಡುತ್ತದೆ ಎಂಬ ಸರ್ಕಾರದ ದೃಷ್ಟಿಕೋನವನ್ನು ಸಿನ್ಹಾ ಟೀಕಿಸಿದ್ದಾರೆ. ಹಾಗಾದರೆ ಇಷ್ಟು ಸಮರ್ಥರು ಕೇವಲ ನಾಲ್ಕು ವರ್ಷಗಳ ನಂತರ ಹೇಗೆ ನಿವೃತ್ತರಾಗುತ್ತಾರೆ ಎಂದು ಪ್ರಶ್ನಿಸಿದ್ದಾರೆ.
ಬಿಜೆಪಿ ಕಚೇರಿಯಲ್ಲಿ ಭದ್ರತಾ ಸಿಬ್ಬಂದಿಯಾಗಲು ನೀವು ನಾಲ್ಕು ವರ್ಷಗಳ ನಂತರ ಅವರನ್ನು ಹೊರಹಾಕುತ್ತೀರಾ? ಈ ನೀತಿಯ ವಿರುದ್ಧ ಸೇನೆಯ ಅತ್ಯುತ್ತಮ ಜನರು ಮಾತನಾಡುವುದನ್ನು ನಾನು ನೋಡಿದ್ದೇನೆ ಎಂದು ತೃಣಮೂಲ ಸಂಸದ ಕುಟುಕಿದ್ದಾರೆ.
“ಜನರಲ್ ರಾವತ್ (ಬಿಪಿನ್ ರಾವತ್) ಕೂಡ ಸೇನೆಯ ಜನರು 58 ವರ್ಷಕ್ಕೆ ನಿವೃತ್ತಿ ಪಡೆಯಬೇಕೆಂದು ಹೇಳಿದ್ದರು. ಮತ್ತು ಈಗ ವಿಭಿನ್ನ ರಾಗ ಮತ್ತು ವಿಭಿನ್ನ ಸ್ವರ. ಇದೆಲ್ಲ ಏಕೆ? ಅವರು ನಮ್ಮ ರಾಷ್ಟ್ರದ ಜನರು, ಅವರು ನಮ್ಮ ಮಕ್ಕಳು. ಅವರನ್ನು ನೋಡಿಕೊಳ್ಳಬೇಕು ಅಷ್ಟು ಮಾತ್ರವಲ್ಲದೆ ಅವರ ಕುಟುಂಬಗಳನ್ನೂ ಕೂಡ ಎಂದು ಹೇಳಿದರು.
ನಾಲ್ಕು ವರ್ಷದ ನಂತರ ಶೇಕಡಾ 25 ರಷ್ಟು ಸಿಬ್ಬಂದಿಯನ್ನ ಸೇನೆಯಲ್ಲಿ ಮುಂದುವರೆಸಲಾಗುತ್ತೆ ಎಂದು ಹೇಳಿದ್ದೀರ. ಹಾಗಾದರೆ ಆ ಶೇಕಡಾ 25 ರಷ್ಟು ಮಂದಿ ಯಾರು? ಅವರು ನಿಮ್ಮ ಸ್ವಂತ ಜನರೇ? ನೀವು ಯಾರಿಗೆ ಒಲವು ತೋರುತ್ತೀರಿ?” ಎಂದು ಸಿನ್ಹಾ ಪ್ರಶ್ನಿಸಿದ್ದಾರೆ. (kpc)
