

ಸಿದ್ಧಾಪುರ, ಅಣಲೇಬೈಲ್ ಗ್ರಾಮ ಪಂಚಾಯತ್ ಹೇರೂರ ಸಿದ್ದಿ ವಿನಾಯಕ ದೇವಸ್ಥಾನ ದ ಸಭಾಂಗಣದಲ್ಲಿ ಜಿಲ್ಲಾಧಿಕಾರಿ ಗಳ ನಡೆ ಹಳ್ಳಿ ಕಡೆ ಕಾರ್ಯಕ್ರಮ ನಡೆಸಲಾಯಿತು.
ತಹಶಿಲ್ದಾರ ಸಂತೋಷ ಭಂಡಾರಿ ದೀಪ ಬೆಳಗುವುದರ ಮೂಲಕವೇ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಕಾರ್ಯ ನಿರ್ವಾಣಾಧಿಕಾರಿಗಳಾದ ಶ್ರೀ ಪ್ರಶಾಂತ ರಾವ್,ಅಣಲೇಬೈಲ್ ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ಸುಮಂಗಲಾ ಹೆಗಡೆ, ಉಪಾಧ್ಯಕ್ಷ ರಾದ ಶ್ರೀ ಚಂದ್ರಶೇಖರ ಗೌಡ, ಸೇ.ಸ.ಸಂಘದ ಅಧ್ಯಕ್ಷರಾದ ಶ್ರೀ ಜಿ.ಬಿ.ಭಟ್ ನೆಲೆಮಾವ,ಮಾಜಿ ಜಿ.ಪಂ.ಸದಸ್ಯರಾದ.ಎಂ.ಜಿ.ಹೆಗಡೆ,ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು, ಸಾರ್ವಜನಿಕರು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ೩೫ ಅರ್ಜಿಗಳು ಸ್ವೀಕೃತ ವಾದವು.ಈ ಪೈಕಿ ಸ್ಥಳದಲ್ಲಿ ಕೆಲವು ಅರ್ಜಿಗಳನ್ನು ನಿಖಾಲೆ ಗೊಳಿಸ ಲಾಯಿತು.ಹಾಗೂ ವಿವಿಧ ಯೋಜನೆಯಡಿಯಲ್ಲಿ ಮಂಜೂರಾದ ಮಾಶಾಸನಗಳ ಆದೇಶ ಪ್ರತಿಯನ್ನು ಹಾಗೂ ಪಡಿತರ ಚೀಟಿಗಳನ್ನು ಫಲಾನುಭವಿಗಳಿಗೆ ವಿತರಿಸಲಾಯಿತು. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಿಂದ ಪೋಷಣಾ ಪಕ್ವಾಡ ಕಾರ್ಯಕ್ರಮ ನಡೆಸಲಾಯಿತು.ಸರಕಾರಿ ಆಸ್ಪತ್ರೆ ಯ ಆವಾರದಲ್ಲಿ ಸಸಿಗಳನ್ನು ನೆಡಲಾಯಿತು.ಹಾಗೂ ನೆಲೆಮಾವ ಪರಿಶಿಷ್ಟ ಜನಾಂಗದವರ ಕಾಲನಿಗೆ ಭೆಟಿ ನೀಡಿ ಕುಂದುಕೊರತೆಗಳನ್ನು ವಿಚಾರಮಾಡಲಾಯಿತು.

ಬಿಳಗಿ ಕಾಲೇಜ್ ಫಲಿತಾಂಶ… ಸಿದ್ದಾಪುರ: ತಾಲೂಕಿನ ಬಿಳಗಿಯ ಜ್ಞಾನಸಾಗರ ಪದವಿಪೂರ್ವ ಕಲಾ ಮತ್ತು ವಾಣಿಜ್ಯ ಕಾಲೇಜ್ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಶೇಕಡ 77. 65 ಫಲಿತಾಂಶ ದಾಖಲಿಸಿರುತ್ತದೆ.
ಪರೀಕ್ಷೆಗೆ ಹಾಜರಾದ 85 ವಿದ್ಯಾರ್ಥಿಗಳಲ್ಲಿ 66 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಕಲಾವಿಭಾಗದಲ್ಲಿ 71.19 % ವಾಣಿಜ್ಯ ವಿಭಾಗದಲ್ಲಿ 92.31 ಫಲಿತಾಂಶ ದಾಖಲಾಗಿದ್ದು, ಕಲಾವಿಭಾಗದಲ್ಲಿ ಮೂರು, ಮತ್ತು ವಾಣಿಜ್ಯ ವಿಭಾಗದಲ್ಲಿ ನಾಲ್ಕು ವಿದ್ಯಾರ್ಥಿಗಳು ಉನ್ನತ ಶ್ರೇಣಿಯಲ್ಲಿ ಪಾಸಾಗಿದ್ದಾರೆ. ಇವರ ಸಾಧನೆಗೆ ಪ್ರಾಚಾರ್ಯರು, ಪಾಲಕರು, ಸಿಬ್ಬಂದಿಗಳು ಅಭಿನಂದನೆ ಸಲ್ಲಿಸಿದ್ದಾರೆ.

ಸಿದ್ದಾಪುರ: ಪಟ್ಟಣದ ಎಂ ಜಿ ಸಿ ಪದವಿ ಪೂರ್ವ ಮಹಾವಿದ್ಯಾಲಯವು 2021-22 ಸಾಲಿನ ದ್ವಿತೀಯ ಪಿ ಯು ಸಿ ಪರೀಕ್ಷೆಯಲ್ಲಿ
92% ಫಲಿತಾಂಶ ದಾಖಲಿಸಿದೆ.
ವಾಣಿಜ್ಯ ವಿಭಾಗದಲ್ಲಿ 94% ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದು 8 ವಿದ್ಯಾರ್ಥಿಗಳು ಉನ್ನತ ಶ್ರೇಣಿಯಲ್ಲಿ ಪಾಸಾಗಿದ್ದಾರೆ. ಕಲಾ ವಿಭಾಗದಲ್ಲಿ 84% ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು 7 ವಿದ್ಯಾರ್ಥಿಗಳು ಉನ್ನತ ಶ್ರೇಣಿಯಲ್ಲಿ ಪಾಸಾಗಿದ್ದಾರೆ. ಸಂಖ್ಯಾಶಾಸ್ತ್ರದಲ್ಲಿ ಎರಡು, ಲೆಕ್ಕಶಾಸ್ತ್ರದಲ್ಲಿ ಒಬ್ಬರು, ಹಾಗೂ ಸಂಸ್ಕೃತದಲ್ಲಿ ಒಬ್ಬ ವಿದ್ಯಾರ್ಥಿ ನೂರಕ್ಕೆ ನೂರು ಅಂಕ ಪಡೆದು ಸಾಧನೆ ಮಾಡಿದ್ದಾರೆ. ಇವರ ಸಾಧನೆಗೆ ಶಿಕ್ಷಣ ಪ್ರಸಾರಕ ಸಮಿತಿಯ ಛೇರ್ಮನ್ ವಿನಾಯಕರಾವ್ ಜಿ ಹೆಗಡೆ, ಪ್ರಚಾರ್ಯರು ಹಾಗೂ ಸಿಬ್ಬಂದಿ ಗಳು ಅಭಿನಂದನೆ ಸಲ್ಲಿಸಿದ್ದಾರೆ.





