
ಉತ್ತರ ಕನ್ನಡ ಜಿಲ್ಲೆಯಲ್ಲಿ ಈ ವರ್ಷದ ಮಳೆ ಆರ್ಭಟ ಪ್ರಾರಂಭವಾಗಿದ್ದು ಬಹುನಿರೀಕ್ಷೆಯ ಮಲೆಗಾಲ ಸಾರ್ವಜನಿಕರಲ್ಲಿ ಮಿಶ್ರ ಅಭಿಪ್ರಾಯ ಮೂಡಿಸಿದೆ. ಉತ್ತರ ಕನ್ನಡ ಜಿಲ್ಲೆಯಲ್ಲಿ ಸರಾಸರಿ ಗರಿಷ್ಠ ನೂರು ಸೆಂ.ಟಿ. ಮೀಟರ್ಗಳ ವರೆಗೆ ಮಳೆಯಾದ ಉದಾಹರಣೆಗಳಿವೆ. ಕಳೆದ ವರ್ಷದ ಒಂದೆರಡು ದಿವಸಗಳ ಮಳೆಯ ಆರ್ಭಟ ಜಿಲ್ಲೆಯ ಜನರನ್ನು ಕಂಗಾಲುಗೊಳಿಸಿತ್ತು.
ಈ ವರ್ಷ ಮುಂಗಾರಿನ ಪೂರ್ವ ಬಂದಿದ್ದ ಮಳೆ ಒಂದೆರಡು ದಿವಸಗಳಲ್ಲೇ ಪ್ರವಾಹದ ಭೀತಿ ಹೆಚ್ಚಿಸಿತ್ತು. ಈಗ ಪ್ರಾರಂಭವಾಗಿರುವ ಮಳೆ ಈ ವಾರ ಪೂರ್ತಿ ಸುರಿಯುವ ಬಗ್ಗೆ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಘಟ್ಟದ ಕೆಳಗಿನ ತಾಲೂಕುಗಳಲ್ಲಿ ಎರಡು ದಿವಸಗಳ ಮಳೆ ಸಾರ್ವಜನಿಕ ಜನಜೀವನವನ್ನು ಅಸ್ತವ್ಯಸ್ತಗೊಳಿಸಿದೆ. ಘಟ್ಟದ ಮೇಲೆ ಮಳೆಯ ಪ್ರಮಾಣ ಅಷ್ಟು ವಿಪರೀತವಲ್ಲದಿದ್ದರೂ ಮಂಗಳವಾರ,ಬುಧವಾರಗಳ ಸಂತೆಗೆ ಮಳೆ ಅಡ್ಡಿಯಾಗಿತ್ತು.ಸಿದ್ಧಾಪುರದಲ್ಲಿ ಬುಧವಾರ ಮುಂಜಾನೆಯಿಂದ ಸುರಿದ ಮಳೆಯಿಂದಾಗಿ ವಾರದ ಸಂತೆ ಪ್ರಾರಂಭವಾಗುವುದೇ ವಿಳಂಬವಾಯಿತು. ಮಳೆಯ ರಭಸ ನೋಡಿ ಸಂತೆ ಪ್ರಾರಂಭಿಸಬೇಕಿದ್ದ ವ್ಯಾಪಾರಸ್ಥರು ತಮ್ಮ ಮೂಟೆಗಳೊಂದಿಗೆ ಎರಡ್ಮೂರು ಗಂಟೆ ಕಾಯುವಂತಾಯಿತು. ಜೂನ್ ತಿಂಗಳಲ್ಲಿ ಮೊದಲೆಂಬಂತೆ ಪ್ರಾರಂಭವಾದ ಈ ವಾರದ ಮಳೆ ಆರಿದ್ರಮಳೆ ಹಬ್ಬಕ್ಕೂ ಅಡಚಣೆ ಉಂಟುಮಾಡಿದೆ. ವಿಳಂಬವಾಗಿ ಪ್ರಾರಂಭವಾಗಿ ರಭಸದಿಂದ ಬೀಳುತ್ತಿರುವ ಮಳೆಯಿಂದ ಕೃಷಿ ಚಟುವಟಿಕೆಗಳಿಗೂ ತೊಂದರೆಯಾಗಿದೆ.
https://l.facebook.com/l.php?u=https%253A%252F%252Fsamajamukhi.net%252F2022%252F06%252F21%252Fabout-harsha-kugve%252F%253Ffbclid%253DIwA
ಜಿಲ್ಲಾ ಕೇಂದ್ರ ಕಾರವಾರ ಸೇರಿದಂತೆ ಕರಾವಳಿಭಾಗದಲ್ಲಿ ಕಳೆದ ಎರಡುದಿವಸಗಳ ಮಳೆ ಸ್ಥಳೀಯ ಜನಜೀವನದ ಮೇಲೆ ಪರಿಣಾಮ ಬೀರಿದೆ. ಮಳೆಯ ರಭಸ, ಪ್ರವಾಹದ ಭೀತಿಯಿಂದಾಗಿ ಸರ್ಕಾರಿ ಕಾರ್ಯಕ್ರಮಗಳೊಂದಿಗೆ ಇತರ ಚಟುವಟಿಕೆಗಳಿಗೂ ಹಿನ್ನಡೆಯಾಗುವ ಸಾಧ್ಯತೆ ಇದೆ. ಕಾರವಾರದಲ್ಲಿ ಶಾಸಕಿ ರೂಪಾಲಿ ನಾಯ್ಕ ಮಳೆಯಿಂದ ತೊಂದರೆಗೆ ಒಳಗಾದವರ ಅಹವಾಲು ಕೇಳಿದ್ದಾರೆ. ಜಿಲ್ಲಾಧಿಕಾರಿಗಳು ಪ್ರವಾಹಪೀಡಿತರ ನೆರವಿಗೆ ವಿಶೇಶ ಪಡೆಯೊಂದನ್ನು ಸಿದ್ಧಪಡಿಸಿದ್ದಾರೆ. ಜಿಲ್ಲಾ ಉಸ್ತವಾರಿ ಸಚಿವ ಶ್ರೀನಿವಾಸ ಪೂಜಾರಿ ಜಿಲ್ಲೆಯ ಪ್ರವಾಹ ಪರಿಸ್ಥಿತಿ,ಮಳೆ ಅನಾನುಕೂಲತೆ ಬಗ್ಗೆ ಜಿಲ್ಲಾಡಳಿತದಿಂದ ಮಾಹಿತಿ ತರಿಸಿಕೊಳ್ಳುತಿದ್ದು ಜಿಲ್ಲಾಡಳಿತ ಮಳೆ, ಪ್ರವಾಹದ ತೊಂದರೆಗಳಿಗೆ ಶೀಘ್ರ ಸ್ಪಂದಿಸಲು ಆದೇಶ ಮಾಡಿದ್ದಾರೆ.
ರೈತರಿಗೆ ತೊಂದರೆ- ಮಳೆಗಾಲ ಪ್ರಾರಂಭದಲ್ಲಿ ರೈತರಿಗೆ ನೀಡುವ ಬೆಳೆಸಾಲದ ವಿಚಾರದಲ್ಲಿ ಹೊಸ ನಿಯಮಗಳಿಂದ ರೈತರಿಗೆ ತೊಂದರೆಯಾಗಿದೆ. ಪಹಣಿಪತ್ರಿಕೆಯಲ್ಲಿ ಸಾಮೂಹಿಕ ಹಕ್ಕುದಾರರು ಪ್ರತ್ಯೇಕವಾಗಿ ದಾಖಲಾತಿ ನೀಡುವ ಆದೇಶಕ್ಕೆ ರೈತರ ವಿರೋಧ ವ್ಯಕ್ತವಾಗಿದೆ. ತೋಟಗಾರಿಕೆ ಇಲಾಖೆಯ ಫ್ರೂಟ್ ನೋಂದಣಿ, ಪ್ರತ್ಯೇಕವಾಗಿ ಪಹಣಿಪತ್ರದ ಹಕ್ಕು ಮಾನ್ಯತೆ ಧೃಢೀಕರಣ ಪತ್ರ ನೀಡುವ ವಿಷಯ ರೈತರಿಗೆ ಬಿಸಿತುಪ್ಪವಾಗಿದೆ. ಕರ್ನಾಟಕ ಸರ್ಕಾರದ ಹಕ್ಕುಪತ್ರದ ಪಹಣಿಪತ್ರಿಕೆ ದಾಖಲಾತಿ ಬದಲಾವಣೆ, ಸಾಮೂಹಿಕ ಹಕ್ಕುದಾರರ ಪ್ರತ್ಯೇಕ ಪ್ರಮಾಣ ಪತ್ರ ನೀಡಿಕೆ ವಿಚಾರವಾಗಿ ಜಿಲ್ಲಾಡಳಿತ ಸ್ಫಷ್ಟನೆ ನೀಡಿಲ್ಲ. ಆದರೆ ಬೆಳೆಸಾಲ ಪಡೆಯಲು ಹೋಗುತ್ತಿರುವ ರೈತರು ಈ ಹೊಸ ನಿಯಮದ ಬಗ್ಗೆ ಕೇಳಿ ಮನನೊಂದು ಬರುವಂತಾಗಿರುವುದು ರೈತರ ಕೋಪಕ್ಕೆ ಕಾರಣವಾಗಿದೆ. ಮುಂಗಾರಿನ ಬಿತ್ತನೆ ಮೊದಲು ಬೆಳೆಸಾಲ ದೊರೆಯದಿರುವುದು ಮುಂಗಾರಿನ ಮಳೆ ಕಣ್ಣುಮುಚ್ಚಾಲೆ ಆಟ ಆಡುತ್ತಿರುವುದು. ಈ ವಿದ್ಯಮಾನಗಳಿಗೆ ಸರ್ಕಾರ ಸ್ಫಂದಿಸದಿರುವುದು ರೈತ ರ ದುಗುಡ ಹೆಚ್ಚಿಸಿದೆ. ಈ ವರ್ಷದ ಬಿತ್ತನೆ ಮೊದಲು ಅನಿರೀಕ್ಷಿತ ಬೆಳವಣಿಗೆಗಳಾಗಿರುವುದು ರೈತ ಸಮೂಹದ ಅಸಮಾಧಾನಕ್ಕೆ ಕಾರಣವಾಗಿದೆ.
