

ಜೂನ್ ೨೫ ರಂದು ಸಿದ್ದಾಪುರ ಸೇರಿದಂತೆ ಉತ್ತರ ಕನ್ನಡ ಜಿಲ್ಲೆ ಮತ್ತು ರಾಜ್ಯದಲ್ಲಿ ನಡೆಯುತ್ತಿರುವ ಸ್ವಾತಂತ್ರ್ಯೋತ್ಸವ ಅಮೃತ ಮಹೋತ್ಸವ ಕಾರ್ಯಕ್ರಮದಲ್ಲಿ ಗಾಂಧಿ ಅವಗಣನೆ ಯಾಕೆ? ಈ ಕಾರ್ಯಕ್ರಮದ ಪ್ರಚಾರ ಫಲಕಗಳಲ್ಲಿ ಗಾಂಧಿ ಚಿತ್ರ ಮರೆಯಾಗಿದ್ದೇಕೆ? ಎಂದು ಕಾಂಗ್ರೆಸ್ ಪ್ರಶ್ನಿಸಿದೆ.
ಜೂನ್ ೨೫ ರ ಶನಿವಾರ ರಾಜ್ಯದಾದ್ಯಂತ ಅಮೃತಭಾರತಿಗೆ ಕನ್ನಡದಾರತಿ ಎನ್ನುವ ಕಾರ್ಯಕ್ರಮ ಅದ್ಧೂರಿಯಾಗಿ ನಡೆಯುತ್ತಿದೆ ಈ ಕಾರ್ಯಕ್ರಮ ಮತ್ತು ಇದರ ಪ್ರಚಾರ ಫಲಕಗಳಲ್ಲಿ ಮಹಾತ್ಮಾಗಾಂಧಿ ಹೊರತು ಪಡಿಸಿ ಸ್ಥಳಿಯ ನಾಯಕರ ಚಿತ್ರಗಳನ್ನು ಮಾತ್ರ ಪ್ರಚಾರ ಮಾಡಿದ್ದೇಕೆ? ಎಂದು ಕಾಂಗ್ರೆಸ್ ಪ್ರಶ್ನಿಸಿದೆ. ಈ ಬಗ್ಗೆ ಆಕ್ಷೇಪಿಸಿ ತಕರಾರು ಎತ್ತಿರುವ ಸಿದ್ಧಾಪುರ ಬ್ಲಾಕ್ ಕಾಂಗ್ರೆಸ್ ಸ್ವಾತಂತ್ರ್ಯ ಅಮೃತಮಹೋತ್ಸವ ಕಾರ್ಯಕ್ರಮ ಮತ್ತಿದರ ಪ್ರಚಾರ ಫಲಕಗಳಲ್ಲಿ ಮಹಾತ್ಮಾಗಾಂಧಿಯವರ ಚಿತ್ರ ಪ್ರಕಟಿಸಲು ಆಗ್ರಹಿಸಿದೆ.
ಈ ಬಗ್ಗೆ ಮಾಧ್ಯಮ ಪ್ರಕಟಣೆ ನೀಡಿರುವ ಸಿದ್ಧಾಪುರ ತಾಲೂಕಾ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಸಂತ ನಾಯ್ಕ ಮನಮನೆ ಈ ಬಗ್ಗೆ ಸಂಘಟಕರು ಮತ್ತು ಜಿಲ್ಲಾಡಳಿತದ ಗಮನ ಸೆಳೆದಿದ್ದಾರೆ.

