

ಸಿದ್ದಾಪುರ: ಸಿದ್ದಾಪುರ ಪಟ್ಟಣ ಪಂಚಾಯತ ವಿಶೇಷ ಅನುದಾನದಲ್ಲಿ ಶಾಸಕ ವಿಶ್ವೇಶ್ವರ ಹೆಗಡೆ ಕಾಗೇರಿಯವರು ಕೇವಲ ಮೂರು ಸದಸ್ಯರ ವಾರ್ಡಿಗೆ ಮಾತ್ರ ಅನುದಾನ ನೀಡಿ ಉಳಿದವರನ್ನು ಕಡೆಗಣಿಸಿದ್ದಾರೆ. ಹಾಗಾದರೆ ನಾವೇನು ಬಿಜೆಪಿ ಸದಸ್ಯರಲ್ಲವಾ ಎಂದು ಸ್ವಪಕ್ಷೀಯ ಸದಸ್ಯರು ಬಹಿರಂಗವಾಗಿ ಪ್ರಶ್ನಿಸಿದ ಘಟನೆ ಪಟ್ಟಣ ಪಂಚಾಯತ ಸಭೆಯಲ್ಲಿ ನಡೆದಿದೆ.
ಪಪಂ ಅಧ್ಯಕ್ಷೆ ಚಂದ್ರಕಲಾ ನಾಯ್ಕ ಅಧ್ಯಕ್ಷತೆಯಲ್ಲಿ ಮಂಗಳವಾರ ನಡೆದ ಸಾಮಾನ್ಯ ಸಭೆಯಲ್ಲಿ ಪಟ್ಟಣ ಪಂಚಾಯತನ ಬಿಜೆಪಿ ಬಹುತೇಕ ಸದಸ್ಯರು ಶಾಸಕರು ಅನುದಾನ ಹಂಚಿಕೆಯಲ್ಲಿ ತಾರತಮ್ಯ ಮಾಡಿದ್ದಾರೆ ಎಂದು ಅಸಮಧಾನ ವ್ಯಕ್ತಪಡಿಸಿದರು.
ಪಪಂನ ೧೫ ಸದಸ್ಯರಲ್ಲಿ ೧೪ ಜನ ಬಿಜೆಪಿಯಿಂದ ಆಯ್ಕೆಯಾದವರಿದ್ದೇವೆ. ೩ ಕೋಟಿ ವಿಶೇಷ ಅನುದಾನದಲ್ಲಿ ಮೂರು ಜನ ಸದಸ್ಯರ ವಾರ್ಡಿಗೆ ಮಾತ್ರ ೫೦-೯೦ ಲಕ್ಷ ಅನುದಾನ ನೀಡಿ ಉಳಿದವರಿಗೆ ಬಿಡಿಗಾಸು ನೀಡದೇ ಬೇಧಭಾವ ಮಾಡಿದ್ದಾರೆ. ಹಾಗಾದರೆ ನಾವು ಬಿಜೆಪಿ ಪರವಾಗಿ ಕೆಲಸ ಮಾಡಲಿಲ್ಲವಾ? ಶಾಸಕರೇನು ಬೇರೆ ಪಕ್ಷದವರಾ? ಮುಂದಿನ ಅನುದಾನದಲ್ಲಿ ಬಹುಮತದ ಆಧಾರದ ಮೇಲೆ ಅನುದಾನ ಹಂಚಿಕೆಯಾಗಲಿ ಎಂದು ವಾಗ್ವಾದ ನಡೆಸಿದರು.
೩ ಕೋಟಿ ಎಸ್.ಎಫ್.ಸಿ ವಿಶೇಷ ಅನುದಾನದಲ್ಲಿ ಸದಸ್ಯರಾದ ಮಾರುತಿ ನಾಯ್ಕ, ಗುರುರಾಜ ಶಾನಭಾಗ ಹಾಗೂ ನಂದನ ಬೋರಕರ್ ರ ವಾರ್ಡಿಗೆ ಮಾತ್ರ ಅನುದಾನ ನೀಡಿದ್ದರು, ಈಗಿರುವ ಅನುದಾನದಲ್ಲಿ ಬಹುಮತದ ಮೇರೆಗೆ ಅನುದಾನ ಹಂಚಬೇಕು ಎಂದು ಒತ್ತಾಯಿಸಿದರು.
ಪಟ್ಟಣ ಪಂಚಾಯತನಲ್ಲಿ ೧೪-೧೫ ಹುದ್ದೆಗಳ ಕೊರತೆಯಿದ್ದು, ಉತ್ತಮವಾಗಿ ಕೆಲಸ ಮಾಡುತ್ತಿರುವ ಅಧಿಕಾರಿಯನ್ನು ಬಾಗಲಕೋಟೆಗೆ ವರ್ಗಾವಣೆಗೊಳಿಸಿದ್ದಾರೆ. ಒಳ್ಳೆ ಕೆಲಸ ಮಾಡುವ ನೌಕರರನ್ನು ಇಲ್ಲಿಗೆ ತರುವ ಬದಲು ಇಲ್ಲಿರುವವರನ್ನೆ ಬೇರೆ ಕಡೆ ವರ್ಗ ಮಾಡಿಸುತ್ತಿದ್ದಾರೆ. ಒಟ್ಟಿನಲ್ಲಿ ಸಿದ್ದಾಪುರ ಪಟ್ಟಣ ಪಂಚಾಯತಗೆ ಕೆಟ್ಟ ಹೆಸರು ತರುವ ಕೆಲಸ ಕಾಣದ ಕೈಗಳಿಂದ ನಡೆಯುತ್ತಿದೆ ಎಂದು ಪಪಂ ಮಾಜಿ ಅಧ್ಯಕ್ಷ ಕೆ.ಜಿ.ನಾಯ್ಕ ಅಸಮಧಾನ ವ್ಯಕ್ತಪಡಿಸಿದರು.
ಜುಲೈ ೧ ರಿಂದ ಪಟ್ಟಣದಲ್ಲಿ ಪ್ಲಾಸ್ಟಿಕ್ ಸಂಪೂರ್ಣ ಬ್ಯಾನ್ ಮಾಡಲು ಚಿಂತನೆ ನಡೆಸಿದ್ದು, ಪ್ರಕಟಣೆ ಹಾಗೂ ಕರಪತ್ರದ ಮೂಲಕ ವ್ಯಾಪಕ ಪ್ರಚಾರ ನಡೆಸಲಾಗುವುದು ಎಂದು ಮುಖ್ಯಾಧಿಕಾರಿ ಕುಮಾರ ನಾಯ್ಕ ತಿಳಿಸಿದರು.
ಸಭೆಯಲ್ಲಿ ಪಟ್ಟಣ ಪಂಚಾಯತ ಉಪಾಧ್ಯಕ್ಷ ರವಿಕುಮಾರ ನಾಯ್ಕ, ಸ್ಥಾಯಿ ಸಮಿತಿ ಅಧ್ಯಕ್ಷ ವಿನಯ ಹೊನ್ನೆಗುಂಡಿ ಉಪಸ್ಥಿತರಿದ್ದರು.


ಅವರು ತಾಲೂಕಿನ ಅವರಗುಪ್ಪದಲ್ಲಿರುವ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ
ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಮೆಟ್ರಿಕ್ ನಂತರದ ಬಾಲಕರ ವಿದ್ಯಾರ್ಥಿ ನಿಲಯದ ವಿದ್ಯಾರ್ಥಿಗಳಿಗೆ ಸ್ಪೋಕನ್ ಇಂಗ್ಲಿಷ್ ತರಬೇತಿ ಉದ್ಘಾಟಿಸಿ ಮಾತನಾಡಿದರು.
ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ದೊರಕಬೇಕು. ಗುಣಮಟ್ಟದ ಶಿಕ್ಷಣ ನೀಡುವುದು ಶಿಕ್ಷಕರ ಜವಾಬ್ದಾರಿ. ತಮ್ಮ ಜವಾಬ್ದಾರಿಯನ್ನು ಶಿಕ್ಷಕರು ಸರಿಯಾಗಿ ನಿಭಾಯಿಸಬೇಕು. ಅದರಂತೆ ಮಕ್ಕಳು ತಮ್ಮ ಜವಾಬ್ದಾರಿಯನ್ನು ಅರಿತು ಕೊಳ್ಳಬೇಕು. ಎಲ್ಲಾ ಉದ್ಯೋಗಗಳಲ್ಲಿ ಹಾಗೂ ಜೀವನ ನಿರ್ವಹಣೆ ಗೆ ಇಂಗ್ಲಿಷ್ ಅವಶ್ಯಕತೆ ಇದೆ. ಇಲ್ಲಿ ಪ್ರಾರಂಭಿಸಿರುವ ಇಂಗ್ಲೀಷ್ ತರಬೇತಿ ನಿಮಗೆ ಮುಂದೆ ಅನುಕೂಲವಾಗಲಿದೆ ಎಂದರು
ಕಾಲೇಜಿಗೆ ಬೇಕಾದ ಎಲ್ಲ ಸೌಲಭ್ಯಗಳನ್ನು ಒದಗಿಸಲಾಗುತ್ತಿದೆ. ಇನ್ನು ಕೆಲವು ಅಭಿವೃದ್ಧಿ ಕೆಲಸಗಳಾಗಬೇಕು ಸರಕಾರದ ಮಟ್ಟದಲ್ಲಿ ಪ್ರಯತ್ನಿಸುವುದಾಗಿ ತಿಳಿಸಿದರು.
ಕಾರ್ಯಕ್ರಮದಲ್ಲಿ ಕೊಲ್ ಸಿರ್ಸಿ ಗ್ರಾಮ ಪಂಚಾಯತ ಉಪಾಧ್ಯಕ್ಷ ವಿನಾಯಕ ಕೆ ಆರ್, ಸದಸ್ಯರಾದ ಗೋವಿಂದ ನಾಯ್ಕ ಆನಂದ ಮಡಿವಾಳ ಕುಣಜಿ, ಮಹಾಬಲೇಶ್ವರ ನಾಯ್ಕ, ಗಣಪತಿ ಗೊಂಡ ಉಪಸ್ಥಿತರಿದ್ದರು.
ಕಾಲೇಜಿನ ಪ್ರಾಚಾರ್ಯ ಎಂ ಎ ಹೆಗಡೆ ಸ್ವಾಗತಿಸಿದರು.
