

——————————————–
ಕಾರವಾರ: ಪ್ರತಿ ಸಲ ಚುನಾವಣೆ ಹತ್ತಿರ ಬಂದಾಗ ಮುಖ್ಯಮಂತ್ರಿ ಗಳಾದಿಯಾಗಿ ಜಿಲ್ಲಾ ಮಂತ್ರಿಗಳು , ಎಂ.ಎಲ್.ಎ. ಗಳು ಸೇರಿ ಆಡಳಿತ ನಡೆಸುವವರಿಗೆ ಹುಬ್ಬಳ್ಳಿ-ಅಂಕೋಲಾ ರೇಲ್ವೆ ಯೋಜನೆ ನೆನಪಾಗುತ್ತದೆ. ಕೆಲವೇ ತಿಂಗಳುಗಳಲ್ಲಿ ಉ.ಕ.ಜಿಲ್ಲೆಯ ಅಭಿವೃದ್ಧಿ ಶಕೆ ಆರಂಭ ಎಂದು ಪ್ರಚಾರ ನಡೆಸಲಾಗುತ್ತದೆ. ಈಗ ಮತ್ತೇ ಅದೇ ನಡೆದಿದೆ. ಒಬ್ಬರನೊಬ್ಬರು ಹೇಳಿಕೆ ಕೊಟ್ಟು ಅಭಿನಂದಿಸಿಕೊಳ್ಳಲು ಪೈಪೋಟಿ ಆರಂಬಿಸಿದ್ದಾರೆ. ಹತ್ತಾರು ಸುಳ್ಳುಗಳ ಗೋಪುರ ಕಟ್ಟಲಾಗುತ್ತದೆ.
ವಾಸ್ತವವಾಗಿ ರೇಲ್ವೆ ಯೋಜನೆ ಜಾರಿ ಬಗ್ಗೆ ಆಡಳಿತ ನಡೆಸುವವರಿಗೆ ರಾಜಕೀಯ ಇಚ್ಚಾ ಶಕ್ತಿ ಕೊರತೆ ಇದೆ.ಪರಿಸರವಾದಿಗಳು ಪದೇ ಪದೇ ಅಡ್ಡಿ ಬಂದರು ಅದನ್ನು ಪರಿಹರಿಸಲು ಪ್ರಾಮಾಣಿಕ ಪ್ರಯತ್ನ ಇಲ್ಲ. 6 ತಿಂಗಳಲ್ಲಿ ಎಲ್ಲಾ ಸಮಸ್ಯೆ ಬಗೆಹರಿಯಲಿದೆ ಎನ್ನುವ ಮುಖ್ಯ ಮಂತ್ರಿಗಳ ಹೇಳಿಕೆ ಬಗ್ಗೆ ನಿರ್ದಿಷ್ಟ ಆಧಾರವಿಲ್ಲ, ಆದರೂ ಮುಖ್ಯಮಂತ್ರಿಗಳು ಹೇಳುತ್ತಿದ್ದಾರೆ . ಕೆಳಗಿನವರು ಹಾಡಿಹೊಗಳಿ ಬಹುಪರಾಕ ಹೇಳುತ್ತಿದ್ದಾರೆ, ಇದರಿಂದ ರೇಲ್ವೆ ಯೋಜನೆ ಜಾರಿಗೆ ಬರುವುದಿಲ್ಲ.
ಸರಕಾರಕ್ಕೆ ನಿಜವಾದ ಇಚ್ಛಾಶಕ್ತಿ ಇದ್ದರೆ ರೇಲ್ವೆ ಯೋಜನೆ ಜಾರಿಗಾಗಿ ಉನ್ನತ ಮಟ್ಟದ ಜವಬ್ದಾರಿ ಸಮಿತಿ ರಚಿಸಿ ಎಲ್ಲಾ ಕಾನೂನು ತೊಡುಕು ಇತ್ಯಾದಿ ಸಮಸ್ಯೆ ಬಗೆಹರಿಸುವ ಕಾಲಮಿತಿ ಜವಬ್ದಾರಿ ನೀಡಿ ಕೆಲಸ ಮಾಡಿಸುವ ರಾಜಕೀಯ ಇಚ್ಛಾಶಕ್ತಿಯನ್ನು ಕೇಂದ್ರ ಮತ್ತು ರಾಜ್ಯ ಸರಕಾರಗಳು ತೋರಿಸಬೇಕೆಂದು ಕರ್ನಾಟಕ ಪ್ರಾಂತ ರೈತ ಸಂಘದ ಉತ್ತರ ಕನ್ನಡ ಜಿಲ್ಲಾ ಸಮಿತಿ ಒತ್ತಾಯಿಸುತ್ತದೆಯೆಂದು ಜಿಲ್ಲಾಧ್ಯಕ್ಷರಾದ ಶಾಂತಾರಾಮ ನಾಯಕ ತಿಳಿಸಿದ್ದಾರೆ.
(-ಶಾಂತಾರಾಮ ನಾಯಕ
ಜಿಲ್ಲಾಧ್ಯಕ್ಷರು)
ಸಿದ್ದಾಪುರ; ಸಮಾಜ ನಮಗೇನು ಕೊಟ್ಟಿದಿಯೋ ಅದರ ಋಣವನ್ನು ಮರಳಿಸುವ ಕಾರ್ಯವನ್ನು ಸ್ಪಂದನ ಸೇವಾ ಸಂಸ್ಥೆಯವರು ಮಾಡುತ್ತಿದ್ದಾರೆ. ಸಮಾಜ ಸೇವೆ ಒಂದಿಷ್ಟು ಆತ್ಮತೃಪ್ತಿ ಹಾಗೂ ಸಾರ್ಥಕತೆಯನ್ನು ಕೊಡುವಂತ ಕೆಲಸ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಸದಾನಂದ ಸ್ವಾಮಿ ಹೇಳಿದರು.
ಅವರು ತಾಲೂಕಿನ ಬೇಡ್ಕಣಿಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪಟ್ಟಣದ ಸ್ಪಂದನಾ ಸೇವಾ ಸಂಸ್ಥೆ (ರಿ) ಇವರಿಂದ ಏಕ ಪಾಲಕತ್ವ ಹೊಂದಿದ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿಗೆ ನೆರವು ಕಾರ್ಯಕ್ರಮ-೨೦೨೨ ಉದ್ಘಾಟಿಸಿ ಮಾತನಾಡಿದರು. ವಿದ್ಯಾರ್ಥಿಗಳು ಚೆನ್ನಾಗಿ ಓದಿ ಸಾಧನೆಯನ್ನು ಮಾಡಬೇಕು. ನಂತರದಲ್ಲಿ ಇತರರಿಗೆ ನೆರವಾಗುವಂತೆ ಆಗಬೇಕು ಎಂದರು.
ಮುಖ್ಯ ಅಥಿತಿಗಳಾಗಿ ಫೆವಾರ್ಡ್ ಉತ್ತರ ಕನ್ನಡದ ಅಧ್ಯಕ್ಷ ನಾಗರಾಜ ನಾಯ್ಕ ಮಾಳ್ಕೋಡ ಮಾತನಾಡಿ ಗುಡಿ , ಗುಂಡಾರಗಳನ್ನು ಕಟ್ಟುವುದಕ್ಕೆ ನಾವು ನೀಡುವ ದೇಣಿಗೆಯಂತೆ ಶಾಲೆಗಳ, ವಿದ್ಯಾರ್ಥಿಗಳ ಅಭಿವೃದ್ಧಿಗೆ ಸಮಾಜ ಸಹಕರಿಸಬೇಕಾದ ಅಗತ್ಯ ಇದೆ. ಅಂಕಗಳ ಜೊತೆ ನಮ್ಮ ಬದುಕನ್ನು ಕಟ್ಟಿಕೊಡುವಂತ ಭರವಸೆಯನ್ನು ತುಂಬುವ ಶಿಕ್ಷಣ ಇಂದಿನ ಅಗತ್ಯವಾಗಿದೆ ಎಂದರು.
ಸಂಸ್ಥೆಯ ಅಧ್ಯಕ್ಷ ರಾಘವೇಂದ್ರ ನಾಯ್ಕ ಅಧ್ಯಕ್ಷತೆ ವಹಿಸಿ ಮಾತನಾಡಿ ಮುಂದಿನ ದಿನಗಳಲ್ಲಿ ಹೆಚ್ಚಿನ ನೆರವನ್ನು ವಿದ್ಯಾರ್ಥಿಗಳಿಗೆ ನೀಡುವ ಯೋಚನೆಯನ್ನು ಹೊಂದಿದ್ದೇವೆ. ನಮ್ಮ ಮಿತಿಯಲ್ಲಿ ಸಾದ್ಯವಾದಷ್ಟು ಸಹಕಾರವನ್ನು ನೀಡುತ್ತಿದ್ದೇವೆ ಎಂದರು.
ಎಸ್.ಡಿ.ಎಂ.ಸಿ ಅಧ್ಯಕ್ಷ ಉಮೇಶ ನಾಯ್ಕ , ಮುಖ್ಯ ಶಿಕ್ಷಕ ಆರ್.ಎಸ್.ಶಿರನಾಳ ಮಾತನಾಡಿದರು. ವೇದಿಕೆಯಲ್ಲಿ ಶಿಕ್ಷಣ ಸಂಯೋಜಕ ಮಹೇಶ ಹೆಗಡೆ, ಸಿ.ಆರ್.ಪಿ ಚಂದ್ರು ಉಪಸ್ಥಿತರಿದ್ದರು.
ಸ್ಪಂದನ ಸೇವಾ ಸಂಸ್ಥೆಯ ನಿರ್ದೇಶಕರುಗಳಾದ ಪ್ರಜ್ವಲ್ ನಾಯ್ಕ ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದರು.ರಂಗನಾಥ ಶೇಟ್ ವಂದಿಸಿದರು. ಸುಧಾರಾಣಿ ನಾಯ್ಕ ಕಾರ್ಯಕ್ರಮ ನಿರ್ವಹಿಸಿದರು.

