

ರಾಷ್ಟ್ರದಲ್ಲಿ ಮತೀಯವಾದಿ ಶಕ್ತಿಗಳ ಪ್ರಾಬಲ್ಯ, ಮನೋಪೊಲಿ ಎದುರು ಎದೆಒಡ್ಡಿ ನಿಲ್ಲಬಲ್ಲ ಬೆರಳೆಣಿಕೆಯ ನಾಯಕರನ್ನು ಅಧಿಕಾರದ ಬಲದಿಂದ ಸುಮ್ಮನಿರಿಸಲಾಗಿದೆ,ಕೆಲವರನ್ನು ಹೆದರಿಸಿ ಜೊತೆಗಿರಿಸಿಕೊಳ್ಳಲಾಗಿದೆ. ಕೆಲವರಿಗೆ ಜೈಲಿನೊಳಗೆ ಕೊಳೆಸಲಾಗುತ್ತಿದೆ. ಈ ಅಘೋಶಿತ ತುರ್ತು ಪರಿಸ್ಥಿತಿಯನ್ನು ದೇಶದಲ್ಲಿ ಬೆಳೆಸುತ್ತಿರುವ ಅಧಿಕಾರದಾಹಿ ನಕಲಿ ದೇಶಭಕ್ತರು ಎಲ್ಲರನ್ನೂ ಹೆದರಿಸಿ, ಬೆದರಿಸಿ ಬಾಯಿಮುಚ್ಚಿಸುತ್ತಿರುವ ಸಂದರ್ಭದಲ್ಲಿ ಸುಬ್ರಮಣ್ಯ ಸ್ವಾಮಿ ಕೆಲವೊಮ್ಮ ಕರ್ನಾಟಕದ ವಿಶ್ವನಾಥರಂತೆ ಸತ್ಯ ಹೇಳುತಿದ್ದಾರೆ.
ಯಶವಂತಸಿನ್ಹಾ,ಶರದ್ ಪವಾರ್ ಬಿಟ್ಟರೆ ದೇಶದಲ್ಲಿ ಈಗಲೂ ಎದೆಯುಬ್ಬಿಸಿ ಸತ್ಯ ಹೇಳುತ್ತಿರುವವರು ಇಬ್ಬರೇ ಅವರಲ್ಲಿ ಒಬ್ಬರು ಕಾಂಗ್ರೆಸ್ ನ ರಾಹುಲ್ಗಾಂಧಿ ಮತ್ತೊಬ್ಬರು ಬಿ.ಜೆ.ಪಿ.ಯ ವರುಣ್ ಗಾಂಧಿ! ಆದರೆ ಮತೀಯವಾದಿ ಅಧಿಕಾರದಾಹಿ ಕುತರ್ಕದ ರಾಷ್ಟ್ರೀಯವಾದಿಗಳು ಸುಬ್ರಮಣ್ಯ ಸ್ವಾಮಿ,ವರುಣ್ ಗಾಂಧಿ ಕಿಂತ ರಾಹುಲ್ ಬಗ್ಗೆ ತಲೆಕೆಡಿಸಿಕೊಳ್ಳಲು ಕಾರಣ ಅವರ ಧೈರ್ಯ ಮತ್ತು ನಾಯಕತ್ವ ಈ ಪರಿಸ್ಥಿತಿಯಲ್ಲಿ ಕರ್ನಾಟಕದಲ್ಲಿ ಸಿದ್ಧರಾಮಯ್ಯ ಬಿಟ್ಟರೆ ಮತ್ತ್ಯಾರೂ ಮತಾಂಧ ಸುಳ್ಳುಕೋರರನ್ನು ಎದುರುಹಾಕಿಕೊಳ್ಳುತ್ತಿಲ್ಲ ಇದಕ್ಕೆ ಅನೇಕ ಕಾರಣಗಳಿವೆ. ಈ ದುಸ್ಥಿತಿಯಲ್ಲಿ ರಾಜ್ಯಕ್ಕೆ ಸಿಕ್ಕ ಇನ್ನೊಬ್ಬ ನೇರ ನುಡಿಯ ಸಮರ್ಥ ನಾಯಕ ಬಿ.ಕೆ. ಹರಿಪ್ರಸಾದ್. ಈ ಹರಿಪ್ರಸಾದ್ ಈಗ ರಾಹುಲ್ ಗಾಂಧಿ ಟೀಮಿನ ಪ್ರಮುಖರಲ್ಲೊಬ್ಬರಾಗಿ ಮುಂದಿನ ದಿನಗಳಲ್ಲಿ ರಾಜ್ಯ ಅಥವಾ ಕೇಂದ್ರದಿಂದ ಪ್ರಮುಖ ಸಚಿವರಾಗುವ ಪಟ್ಟಿಯಲ್ಲಿದ್ದಾರೆ. ಹರಿಪ್ರಸಾದ್ ಈಗಲೇ ತಾವು ಉತ್ತರ ಕನ್ನಡದಿಂದ ಕಾಂಗ್ರೆಸ್ ನ ಲೋಕಸಭೆಯ ಅಭ್ಯರ್ಥಿ ಎಂದು ಹೇಳಿಕೊಂಡಿರುವುದರಿಂದ ಉತ್ತರ ಕನ್ನಡದೊಂದಿಗೆ ರಾಜ್ಯದಲ್ಲಿ ಕಾಂಗ್ರೆಸ್ ಬಲವರ್ಧನೆಗೆ ಶ್ರಮಿಸಲು ಹೆಣಗಾಡುತಿದ್ದಾರೆ.
ಹೀಗೆ ಕಾಂಗ್ರೆಸ್ ನಲ್ಲಿ ರಾಹುಲ್ ಗಾಂಧಿ ಟೀಮ್ ಬಂಡವಾಳಶಾಹಿ ಬಲಪಂಥೀಯ ಕಾಲಾಳುಗಳ ವಿರುದ್ಧ ಬಡವರ ಧ್ವನಿಯಾಗುತಿದ್ದರೆ ಕಾಂಗ್ರೆಸ್ ನ ಕೆಲವು ಪ್ರಮುಖ ಮೃಧು ಹಿಂದುತ್ವವಾದಿಗಳು ಕಾಂಗ್ರೆಸ್ ಗೇ ಕಂಟಕವಾಗಿ ಪರೋಕ್ಷವಾಗಿ ಮತಾಂಧರಿಗೆ ನೆರವಾಗುತ್ತಿರುವ ವಿದ್ಯಮಾನ ಹೊಸತೇನಲ್ಲ. ಕಾಂಗ್ರೆಸ್ ನಲ್ಲಿರುವ ಕೆಲವು ಮೇಲ್ವರ್ಗದ ನಾಯಕರಿಗೆ ಇ.ಡಿ.ಆಯ್.ಟಿ.ಗಳಿಂದ ವಿನಾಯಿತಿ ನೀಡಿರುವ ಬ್ರಷ್ಟ ಕೋಮುವಾದಿ ಪರಿವಾರದ ನಾಯಕರು ಕಾಂಗ್ರೆಸ್ ವಿರುದ್ಧ ಕಾಂಗ್ರೆಸ್ ನಲ್ಲೇ ಕೋಟೆ ಕಟ್ಟುತಿದ್ದಾರೆ. ಇದರ ಪರಿಣಾಮ ದೇಶ ಈಗ ಪ್ರಬಲ ವಿರೋಧ ಪಕ್ಷವನ್ನೂ ಕಳೆದುಕೊಳ್ಳುವ ಅಪಾಯದಲ್ಲಿದೆ. ಈ ಸ್ಥಿತಿಯಲ್ಲಿ ರಾಜ್ಯದಲ್ಲಿ ಕೆಲವು ಕಡೆ ಕಾಂಗ್ರೆಸ್ ಪಕ್ಷಕ್ಕೆ ಕಾಂಗ್ರೆಸ್ ನಾಯಕರೇ ಮಾರಕವಾಗಿದ್ದಾರೆ ಅವರಲ್ಲಿ ಬಹುತೇಕರು ಹಳೆ ತಲೆಗಳಾಗಿರುವುದು ವಿಶೇಶ.
ಈ ವಿದ್ಯಮಾನಗಳ ಹಿನ್ನೆಲೆಯಲ್ಲಿ ಶಿವಮೊಗ್ಗ, ಮಂಗಳೂರು, ಉಡುಪಿಗಳಲ್ಲೂ ಹಿರಿಯ ಕಾಂಗ್ರೆಸ್ ಮುಖಂಡರೇ ಕಾಂಗ್ರೆಸ್ ಗೆ ಮಾರಕವಾಗಿದ್ದು ಇದರ ಲಾಭ ಮತೀಯವಾದಿ ಶಕ್ತಿಗಳಿಗಾಗುತ್ತಿದೆ ಎನ್ನುವ ಗುರುತರ ಆರೋಪಗಳಿವೆ ಈ ಹಿನ್ನೆಲೆಯಲ್ಲಿ ಉತ್ತರ ಕನ್ನಡದಲ್ಲಿ ಕಾಂಗ್ರೆಸ್ ಗೆ ಮಾರಕವಾಗಿರುವ ನಾಯಕರ್ಯಾರು? ಎನ್ನುವ ಪ್ರಶ್ನೆಗೆ ಉತ್ತರ ಮುಂದಿನ ಕಂತಿನಲ್ಲಿದೆ.
