ನೆಲೆಮಾವ್ ನಲ್ಲಿ ಕುಸಿದ ಬಾವಿ ಸ್ಥಳೀಯ ಸಾರ್ವಜನಿಕ ರಲ್ಲಿ ಹೆಚ್ಚಿದ ಆತಂಕ
ಸಿದ್ದಾಪುರ ತಾಲೂಕಿನ ಅಣಲೇ ಬೈಲ್ ಗ್ರಾಮ ಪಂಚಾಯತ್ ವ್ಯಾಪ್ತಿಯ ನೆಲೆಮಾವ್ ಎಸ್ ಸಿ ಕೆರಿಯಲ್ಲಿರುವ ಬಾವಿಯು ಕುಸಿದಿದ್ದು ಸುತ್ತಮುತ್ತಲಿನ ಪ್ರದೇಶದಲ್ಲೂ ಸಹ ಕುಸಿತ ಉಂಟಾಗಿದೆ ಈ ಘಟನೆ ಯಿಂದ ಸ್ಥಳೀಯ ಸಾರ್ವಜನಿಕ ರಲ್ಲಿ ಆತಂಕ ಉಂಟಾಗಿದ್ದು ಘಟನೆ ನಡೆಯಲು ಕಾರಣ ಹಾಗೂ ಸಂಪೂರ್ಣ ಮಾಹಿತಿಯನ್ನು ಅಧಿಕಾರಿಗಳು ನೀಡಬೇಕು ಎಂದು ಸ್ಥಳೀಯರು ಒತ್ತಾಯ ಮಾಡಿದ್ದಾರೆ.
ಇದು ಸ್ವಲ್ಪ ಹಳೆಯ ಮಣ್ಣಿನ ಬಾವಿ ಯಾಗಿದ್ದು ಕುಸಿದಿದೆ ಬಾವಿಯ ಸುತ್ತಲೂ ಸುರಕ್ಷತೆಗೆ ಬೇಲಿ ಮಾಡಲಾಗಿದೆ ಜನರು ಯಾವುದೇ ಆತಂಕ ಪಡುವ ಅಗತ್ಯವಿಲ್ಲ ಮಳೆಗಾಲ ಮುಗಿದ ನಂತರ ಅಲ್ಲಿ ಬಾವಿ ನಿರ್ಮಿಸಿ ಕೊಡಲಾಗುವುದು ಎಂದು ಸ್ಥಳೀಯ ಪಂಚಾಯತ್ ಪಿಡಿಓ ಸುಬ್ರಮಣ್ಯ ಹೆಗಡೆ ಮಾಹಿತಿ ನೀಡಿದ್ದಾರೆ.
VARA
ಉತ್ತರಕನ್ನಡ: ಪತ್ನಿಗೆ ಚಾಕುವಿನಿಂದ ಇರಿದ ಪತಿ
ಪತ್ನಿಯ ಮೇಲೆ ಅನುಮಾನಗೊಂಡ ಪತಿ ಆಕೆಯ ಮೇಲೆ ಚಾಕುವಿನಿಂದ ಇರಿದು ಮಾರಣಾಂತಿಕ ಹಲ್ಲೆ ನಡೆಸಿದ ಹೊನ್ನಾವರದಲ್ಲಿ ನಡೆದಿದೆ.
ಕಾರವಾರ(ಉತ್ತರಕನ್ನಡ): ಪತ್ನಿಯ ಮೇಲೆ ಸಂಶಯಗೊಂಡ ಪತಿಯೋರ್ವ ಮನಬಂದಂತೆ ಚಾಕುವಿನಿಂದ ಇರಿದು ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ಜಿಲ್ಲೆಯ ಹೊನ್ನಾವರ ತಾಲೂಕಿನ ಕಡತೋಕಾದಲ್ಲಿ ನಡೆದಿದೆ. ಮಂಜುನಾಥ ಶೆಟ್ಟಿ ಎಂಬಾತನೆ ಹಲ್ಲೆ ಮಾಡಿರುವ ಆರೋಪಿಯಾಗಿದ್ದಾನೆ.
ಡತೋಕಾದ ಆಶಾ ಶೆಟ್ಟಿ (50) ಹಲ್ಲೆಗೊಳಗಾದ ಮಹಿಳೆ. ಪತ್ನಿ ಮೇಲೆ ಸಂಶಯಗೊಂಡು ಸಿಟ್ಟಿಗೆದ್ದ ಮಂಜುನಾಥ ಚಾಕುವಿನಿಂದ ಕೈ, ಹೊಟ್ಟೆ, ಮುಖದ ಭಾಗಗಳಿಗೆ ಗಾಯಗೊಳಿಸಿದ್ದು ತೀವ್ರ ರಕ್ತಸ್ರಾವದಿಂದ ನಿತ್ರಾಣಗೊಂಡಿದ್ದ ಮಹಿಳೆಯನ್ನು ಹೊನ್ನಾವರದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಹೊನ್ನಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಚಾಕುವಿನಿಂದ ಇರಿತಕ್ಕೊಳಗಾದ ಪತ್ನಿ
ಜೋಯಿಡಾದಲ್ಲಿ ರೈತನ ಮೇಲೆ ಕರಡಿ ದಾಳಿ: ಗದ್ದೆಯಲ್ಲಿ ಕೆಲಸ ಮಾಡುತ್ತಿದ್ದ ರೈತನೋರ್ವನ ಮೇಲೆ ಕರಡಿ ದಾಳಿ ಮಾಡಿ ಗಾಯಗೊಳಿಸಿರುವ ಘಟನೆ ಉತ್ತರಕನ್ನಡ ಜಿಲ್ಲೆಯ ಜೋಯಿಡಾ ತಾಲೂಕಿನ ಬರಪಾಲಿ ಗ್ರಾಮದಲ್ಲಿ ನಡೆದಿದೆ. ಬರಪಾಲಿಯ ಸಂದೀಪ ಅಣಶಿಕರ (32) ಗಾಯಗೊಂಡ ರೈತ.
ಕರಡಿ ದಾಳಿಯಿಂದ ಗಾಯಗೊಂಡ ರೈತ
ಗದ್ದೆಯಲ್ಲಿ ಕೆಲಸ ಮಾಡುತ್ತಿದ್ದ ಸಂದರ್ಭದಲ್ಲಿ ಏಕಾಏಕಿಯಾಗಿ ಎರಗಿದ ಕರಡಿ, ಸಂದೀಪ ಮೇಲೆ ದಾಳಿ ನಡೆಸಿದೆ. ಗಾಬರಿಗೊಂಡು ಕರಡಿಯಿಂದ ತಪ್ಪಿಸಿಕೊಳ್ಳಲು ಕೂಗಾಡಿ ಸಾಕಷ್ಟು ಪ್ರಯತ್ನ ನಡೆಸಿದರೂ ಸಹ ಸಾಧ್ಯವಾಗಿಲ್ಲ. ಕೊನೆಗೂ ತಪ್ಪಿಸಿಕೊಂಡಿದ್ದು ಮೈ ಮೇಲೆ ಸಾಕಷ್ಟು ಗಾಯಗಳಾಗಿವೆ. ರೈತನನ್ನು ತಕ್ಷಣ ಸ್ಥಳೀಯರು ಜೋಯಿಡಾ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ. ಜೋಯಿಡಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. (etbk)