

ಕರ್ನಾಟಕ ರತ್ನ ಪುನೀತ್ ರಾಜ್ಕುಮಾರ್ ಹೀಗೆ ಬಂದು ಹಾಗೇ ಹೋದ ದೃವತಾರೆ. ಪುನೀತ್ ರಾಜ್ಕುಮಾರ ರನ್ನು ನೆನಪಿಸದ ದಿನಗಳೇ ಇಲ್ಲ. ಕಳೆದ ವರ್ಷ ಈ ಅವಧಿಯಲ್ಲಿ ಬದುಕಿದ್ದ ಪುನೀತ್ ರಾಜಕುಮಾರ ಎಂಥಾ ಸಮಾಜಮುಖಿ ವ್ಯಕ್ತಿ ಎನ್ನುವ ವಾಸ್ತವ ಅರಿವಾದದ್ದು ಅವರ ನಿಧನದ ನಂತರ. ಪುನೀತ್ ಎಡಗೈಯಲ್ಲಿ ಕೊಟ್ಟದ್ದು ಬಲಗೈಗೆ ಗೊತ್ತಾಗದಂತೆ ದಾನ ಧರ್ಮ ಮಾಡಿದ ಕಲಿಯುಗದ ಕರ್ಣ. ಪುನೀತ್ ನೆನಪಿಸುವ ಮೂಲಕ ಪುಳಕ ಹೊಂದ ದವರಿಲ್ಲ ಎನ್ನುವಷ್ಟು ಪುನೀತ್ ಸರ್ವಸ್ಫರ್ಶಿ,ಸರ್ವವ್ಯಾಪಿಯಾಗಿದ್ದಾರೆ. ಎಲ್ಲೆಡೆ ಅವರ ಹೆಸರಿನ ರಸ್ತೆಗಳು, ವೃತ್ತಗಳು ಪ್ರಾರಂಭವಾಗಿವೆ.
ಆರಿದ್ರಮಳೆಯಲ್ಲಿ ಮಿಂದ ಪುನೀತ್!
ಹೌದು ಆರಿದ್ರಮಳೆ ಮತ್ತು ಆರಿದ್ರಮಳೆ ಹಬ್ಬವೆಂದರೆ ಮಲೆನಾಡಿನ ಜನ ಕುಣಿದು ಕುಪ್ಪಳಿಸುವ ಮಲೆನಾಡಿನ ಹನಿ ಹಬ್ಬ, ಈ ಆರಿದ್ರಮಳೆಯ ಹನಿಹಬ್ಬದಲ್ಲಿ ಪೂರ್ವಜರು, ಸೈನಿಕರಾಗಿದ್ದ ಪೂರ್ವಜರ ಧೈರ್ಯ, ಸಾಹಸಗಳನ್ನು ನೆನಪಿಸುವ ಕಾರಣಕ್ಕೆ ಆರಿದ್ರಮಳೆಯಲ್ಲಿ ದೇವರ ಆರಾಧನೆಯ ಜೊತೆಗೆ ಗಾಮನ ಮುಖಗಳ ಮೆರವಣಿಗೆ,ಆರಾಧನಾ ಮೆರವಣಿಗೆಗಳನ್ನು ಮಾಡುವುದು ಮಾಮೂಲು.
ಶಿವಮೊಗ್ಗ ಜಿಲ್ಲೆಯ ಕೆಲೆವೆಡೆ ಉತ್ತರ ಕನ್ನಡ ಜಿಲ್ಲೆಯ ಶಿರಸಿ, ಸಿದ್ಧಾಪುರ ಸೊರಬ, ಸಾಗರಗಳ ಬಹುತೇಕ ಕಡೆ ಆರಿದ್ರಮಳೆ ಹಬ್ಬ ಮಾಡಿ ಕುಮಾರರಾಮನನ್ನು ಸ್ಮರಿಸುವುದು ಸಂಪ್ರದಾಯ ಮತ್ತು ರೂಢಿ ಇಂಥ ಆರಿದ್ರ ಮಲೆ ಹಬ್ಬದಲ್ಲಿ ಕುಮಾರ ರಾಮ, ಗಾಮ, ಗ್ರಾಮದೇವರುಗಳ ಜೊತೆಗೆ ಒಬ್ಬ ವಿಶೇಶ ವ್ಯಕ್ತಿಯ ಚಿತ್ರಪಟವನ್ನೂ ಮೆರವಣಿಗೆಯಲ್ಲಿ ಹೊತ್ತೊಯ್ದು ಗೌರವಿಸಲಾಯಿತು. ಆ ವ್ಯಕ್ತಿ ಪುನೀತ್ ರಾಜ್ ಕುಮಾರ. ದೀವರ ಆದಿ ಪುರುಷ ಕುಮಾರರಾಮನೊಂದಿಗೆ, ಗಾಮ, ಗ್ರಾಮದೇವರ ಹಬ್ಬದ ಮೆರವಣಿಗೆಯಲ್ಲಿ ಅವರಗುಪ್ಪಾದ ಯುವಕರು ಪುನೀತ್ ರಾಜ್ ಕುಮಾರ ಚಿತ್ರಪಟವನ್ನೂ ಮೆರವಣಿಯಲ್ಲಿ ಹೊತ್ತೊಯ್ದು ಗೌರವ ನೀಡಿದರು. ಆರಿದ್ರಮಳೆಯ ಗಾಮ, ರಾಮ, ಬೀರಲು,ಗ್ರಾಮ ದೇವರ ಜೊತೆ ಪುನೀತ್ ಕೂಡಾ ದೇವರಾಗಿ ಮೆರವಣಿಗೆಯಲ್ಲಿ ಸಾಗಿದ್ದು ವಿಶೇಶವೆನಿಸಿತು. ಆರಿದ್ರಮಳೆ ಹಬ್ಬದ ಆಚರಣೆಯಲ್ಲಿ ಮರವಣಿಯಲ್ಲಿ ಸಾಗಿದ ಪುನೀತ್ ರಾಜ್ ಕುಮಾರ ಚಿತ್ರಪಟ ನೋಡುಗರನ್ನು ಸೆಳೆಯಿತು.
ನಟರೊಬ್ಬರ ಚಿತ್ರ ಸಾಂಸ್ಕೃತಿಕ, ಪ್ರಾದೇಶಿಕ, ಜನಾಂಗೀಯ ರೂಢಿ, ಆಚರಣೆಗಳಲ್ಲಿ ಕಾಣಿಸಿಕೊಂಡದ್ದು ಪುನೀತ್ ರಾಜ್ ಕುಮಾರ ಜನಪ್ರೀಯತೆಗೆ ಸಾಕ್ಷಿಯಾಯಿತು.



