

ಮಲೆನಾಡಿನಲ್ಲಿ ಸುರಿಯುತ್ತಿರುವ ವರ್ಷಧಾರೆ ಕಾಡು,ನಾಡುಗಳನ್ನೆಲ್ಲಾ ಒದ್ದೆ ಮಾಡಿಟ್ಟಿದೆ. ವರ್ಷದ ಮಳೆಗಾಲವೆಂದರೆ ಜನರಿಗೆ ಮಳೆ,ನೆರೆ ತೊಂದರೆಗಳ ನೆನಪಿನ ಬುತ್ತಿ ಆದರೆ ಮಳೆ ಕಡಿಮೆಯಾಗುತ್ತಲೇ ನೆನಪಾಗುವುದು ಜಲಪಾತಗಳು. ಉತ್ತರ ಕನ್ನಡ ಜಿಲ್ಲೆಯನ್ನು ಜಲಪಾತಗಳ ಜಿಲ್ಲೆ ಎನ್ನಲಾಗುತ್ತದೆ.ಇಲ್ಲಿ ನದಿ,ಬೆಟ್ಟಗಳ ಅಂಚುಗಳಲ್ಲೆಲ್ಲಾ ಜಲಪಾತಗಳ ಜಾತ್ರೆ.ಆದರೆ ಈ ಮಳೆಗಾಲದಲ್ಲಿ ದುರ್ಗಮ ರಸ್ತೆ ಹಳ್ಳ-ಕೊಳ್ಳಗಳನ್ನೆಲ್ಲಾ ದಾಟಿ ಜಲಪಾತಗಳನ್ನು ನೋಡುವುದು ಹೇಗೆ ಎಂದು ಆತಂಕಗೊಳ್ಳುವವರಿಗೂ ಸುಲಭ ಮಾರ್ಗಗಳಿವೆ. ಹೆಚ್ಚಿನ ಜಲಪಾತಗಳು ಗುಡ್ಡ-ಬೆಟ್ಟಗಳ ನಡುವೆ ಧುಮುಕಿದರೆ ಕೆಲವುಕೂಗಳತೆ,ಕಾಲ್ನಡಿಗೆ ದೂರದಲ್ಲಿ ಸಿಗುತ್ತವೆ.
ಅಂಥ ಜಲಪಾತಗಳಲ್ಲಿ ಸಿದ್ಧಾಪುರದ ತುಂಬರಗೋಡ್ ಜಲಪಾತ ಒಂದು.


ವರ್ಷದ ಆರುತಿಂಗಳಿಗೂ ಹೆಚ್ಚು ಅವಧಿ ಕಂಡುಬರುವ ಸಿದ್ಧಾಪುರ ತಾಲೂಕಿನ ಶಿರಸಿ-ಸಿದ್ದಾಪುರ ರಸ್ತೆಯ ಪಕ್ಕದ ಜಲಪಾತ ಶಿರಸಿ ಬೆಂಗಳೂರು ರಸ್ತೆಯ ಪಕ್ಕಕ್ಕೇ ಹರಿಯುತ್ತದೆ. ಹಾರ್ಸಿಕಟ್ಟಾ ಪಂಚಾಯತ್ ವ್ಯಾಪ್ತಿಯ ಈ ಜಲಪಾತದ ವಿಶೇಶವೆಂದರೆ ಈ ಜಲಪಾತ ರಸ್ತೆಯ ಪಕ್ಕಕ್ಕೆ ನೂರು ಮೀಟರ್ ದೂರದಲ್ಲಿದೆ. ಶಿರಸಿ ರಸ್ತೆ ಪಕ್ಕ ವಾಹನ ನಿಲುಗಡೆ ಮಾಡಿ ನೂರು ಮೀಟರ್ ನಡೆಯುತ್ತಲೇ ಬೃಹತ್ ಗಾತ್ರದ ಬಂಡೆಮೇಲಿಂದ ಧುಮುಕುವ ಈ ಜಲಪಾತವನ್ನು ಪ್ರಯಾಸವಿಲ್ಲದೆ ಕಣ್ತಂಬಿಕೊಳ್ಳಬಹುದು. ಮಾವಿನಕೊಪ್ಪ ಹೊಳೆ ಸೃಷ್ಟಿಸಿರುವ ಈ ಸುಂದರ ಜಲಪಾತದ ಮೇಲೆ ಪ್ರಪಾತದಂಥಹ ನೀರಿನ ಗುಂಡಿಯೊಂದಿದೆ.ಅದರ ಕೆಳಗೆ ಹರಿಯುವ ತುಂಬರಗೋಡು ಜಲಪಾತಚಿಕ್ಕದಾಗಿದ್ದರೂ ಸುಂದರವಾಗಿದೆ.
ಬಹುತೇಕ ಜಲಪಾತಗಳಲ್ಲಿ ಸುರಕ್ಷತೆಯ ಕಾಳಜಿವಹಿಸದಿದ್ದರೆ ಜೀವಕ್ಕೇ ಅಪಾಯ ಈ ತುಂಬರಗೋಡು ಜಲಪಾತದ ವೈಶಿಷ್ಟ್ಯವೆಂದರೆ ಇಲ್ಲಿ ಅಪಾಯವಿಲ್ಲ.ವಯಸ್ಸಿನ ಭೇದವಿಲ್ಲದೆ ಎಲ್ಲರೂ ನೋಡಿ ಆನಂದಿಸಬಹುದಾದ ಈ ಜಲಪಾತದ ಅನನ್ಯತೆ ಬಳಸಿಕೊಂಡು ಪ್ರವಾಸಿ ಆಕರ್ಷಣೆಯ ಕೇಂದ್ರ ಮಾಡುವ ಮೂಲಕ ಈ ಜಲಪಾತದ ಸೊಬಗನ್ನು ಪರಿಚಯಿಸಿ ಅದರಿಂದ ಸ್ಥಳಿಯರಿಗೆ ಉದ್ಯೋಗಾವಕಾಶಗಳನ್ನೂ ಸೃಷ್ಟಿಸಲು ಅವಕಾಶವಿದೆ. ಅಪಾಯ,ಸವಾಲುಗಳಿಲ್ಲದ ಈ ಜಲಪಾತದ ಮಳೆಗಾಲದ ನೋಟವಂತೂ ಎಂಥವರಿಗೂ ಮುದ ನೀಡುತ್ತದೆ.


