ರಸ್ತೆಯಂಚಿನ ತುಂಬರಗೋಡ್‌ ಸುಂದರಿ!

ಮಲೆನಾಡಿನಲ್ಲಿ ಸುರಿಯುತ್ತಿರುವ ವರ್ಷಧಾರೆ ಕಾಡು,ನಾಡುಗಳನ್ನೆಲ್ಲಾ ಒದ್ದೆ ಮಾಡಿಟ್ಟಿದೆ. ವರ್ಷದ ಮಳೆಗಾಲವೆಂದರೆ ಜನರಿಗೆ ಮಳೆ,ನೆರೆ ತೊಂದರೆಗಳ ನೆನಪಿನ ಬುತ್ತಿ ಆದರೆ ಮಳೆ ಕಡಿಮೆಯಾಗುತ್ತಲೇ ನೆನಪಾಗುವುದು ಜಲಪಾತಗಳು. ಉತ್ತರ ಕನ್ನಡ ಜಿಲ್ಲೆಯನ್ನು ಜಲಪಾತಗಳ ಜಿಲ್ಲೆ ಎನ್ನಲಾಗುತ್ತದೆ.ಇಲ್ಲಿ ನದಿ,ಬೆಟ್ಟಗಳ ಅಂಚುಗಳಲ್ಲೆಲ್ಲಾ ಜಲಪಾತಗಳ ಜಾತ್ರೆ.ಆದರೆ ಈ ಮಳೆಗಾಲದಲ್ಲಿ ದುರ್ಗಮ ರಸ್ತೆ ಹಳ್ಳ-ಕೊಳ್ಳಗಳನ್ನೆಲ್ಲಾ ದಾಟಿ ಜಲಪಾತಗಳನ್ನು ನೋಡುವುದು ಹೇಗೆ ಎಂದು ಆತಂಕಗೊಳ್ಳುವವರಿಗೂ ಸುಲಭ ಮಾರ್ಗಗಳಿವೆ. ಹೆಚ್ಚಿನ ಜಲಪಾತಗಳು ಗುಡ್ಡ-ಬೆಟ್ಟಗಳ ನಡುವೆ ಧುಮುಕಿದರೆ ಕೆಲವುಕೂಗಳತೆ,ಕಾಲ್ನಡಿಗೆ ದೂರದಲ್ಲಿ ಸಿಗುತ್ತವೆ.
ಅಂಥ ಜಲಪಾತಗಳಲ್ಲಿ ಸಿದ್ಧಾಪುರದ ತುಂಬರಗೋಡ್‌ ಜಲಪಾತ ಒಂದು.

ವರ್ಷದ ಆರುತಿಂಗಳಿಗೂ ಹೆಚ್ಚು ಅವಧಿ ಕಂಡುಬರುವ ಸಿದ್ಧಾಪುರ ತಾಲೂಕಿನ ಶಿರಸಿ-ಸಿದ್ದಾಪುರ ರಸ್ತೆಯ ಪಕ್ಕದ ಜಲಪಾತ ಶಿರಸಿ ಬೆಂಗಳೂರು ರಸ್ತೆಯ ಪಕ್ಕಕ್ಕೇ ಹರಿಯುತ್ತದೆ. ಹಾರ್ಸಿಕಟ್ಟಾ ಪಂಚಾಯತ್‌ ವ್ಯಾಪ್ತಿಯ ಈ ಜಲಪಾತದ ವಿಶೇಶವೆಂದರೆ ಈ ಜಲಪಾತ ರಸ್ತೆಯ ಪಕ್ಕಕ್ಕೆ ನೂರು ಮೀಟರ್‌ ದೂರದಲ್ಲಿದೆ. ಶಿರಸಿ ರಸ್ತೆ ಪಕ್ಕ ವಾಹನ ನಿಲುಗಡೆ ಮಾಡಿ ನೂರು ಮೀಟರ್‌ ನಡೆಯುತ್ತಲೇ ಬೃಹತ್‌ ಗಾತ್ರದ ಬಂಡೆಮೇಲಿಂದ ಧುಮುಕುವ ಈ ಜಲಪಾತವನ್ನು ಪ್ರಯಾಸವಿಲ್ಲದೆ ಕಣ್ತಂಬಿಕೊಳ್ಳಬಹುದು. ಮಾವಿನಕೊಪ್ಪ ಹೊಳೆ ಸೃಷ್ಟಿಸಿರುವ ಈ ಸುಂದರ ಜಲಪಾತದ ಮೇಲೆ ಪ್ರಪಾತದಂಥಹ ನೀರಿನ ಗುಂಡಿಯೊಂದಿದೆ.ಅದರ ಕೆಳಗೆ ಹರಿಯುವ ತುಂಬರಗೋಡು ಜಲಪಾತಚಿಕ್ಕದಾಗಿದ್ದರೂ ಸುಂದರವಾಗಿದೆ.


ಬಹುತೇಕ ಜಲಪಾತಗಳಲ್ಲಿ ಸುರಕ್ಷತೆಯ ಕಾಳಜಿವಹಿಸದಿದ್ದರೆ ಜೀವಕ್ಕೇ ಅಪಾಯ ಈ ತುಂಬರಗೋಡು ಜಲಪಾತದ ವೈಶಿಷ್ಟ್ಯವೆಂದರೆ ಇಲ್ಲಿ ಅಪಾಯವಿಲ್ಲ.ವಯಸ್ಸಿನ ಭೇದವಿಲ್ಲದೆ ಎಲ್ಲರೂ ನೋಡಿ ಆನಂದಿಸಬಹುದಾದ ಈ ಜಲಪಾತದ ಅನನ್ಯತೆ ಬಳಸಿಕೊಂಡು ಪ್ರವಾಸಿ ಆಕರ್ಷಣೆಯ ಕೇಂದ್ರ ಮಾಡುವ ಮೂಲಕ ಈ ಜಲಪಾತದ ಸೊಬಗನ್ನು ಪರಿಚಯಿಸಿ ಅದರಿಂದ ಸ್ಥಳಿಯರಿಗೆ ಉದ್ಯೋಗಾವಕಾಶಗಳನ್ನೂ ಸೃಷ್ಟಿಸಲು ಅವಕಾಶವಿದೆ. ಅಪಾಯ,ಸವಾಲುಗಳಿಲ್ಲದ ಈ ಜಲಪಾತದ ಮಳೆಗಾಲದ ನೋಟವಂತೂ ಎಂಥವರಿಗೂ ಮುದ ನೀಡುತ್ತದೆ.

_______________________________________________________________

ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi

_______________________________________________________________

Latest Posts

ಗ್ರಾಮೀಣ ಸೇವಾ ಸಹಕಾರಿ ಸಂಘಗಳು ಮುಳುಗುತ್ತಿವೆ..! ಜಾಗೃತೆ..

ರೈತರ ಅನುಕೂಲಕ್ಕಿರುವ ಗ್ರಾಮೀಣ ಸೇವಾ ಸಹಕಾರಿ ಸಂಘಗಳು ಮುಳುಗುತ್ತಿವೆ ಎನ್ನುವುದಕ್ಕೆ ಅನೇಕ ದೃಷ್ಟಾಂತಗಳಿವೆ. ಆದರೆ ಸಹಕಾರಿ ಕ್ಷೇತ್ರ ನಿಯಂತ್ರಿಸುವವರು ತಮ್ಮ ಅನುಕೂಲಕ್ಕೆ ಸಂಘಗಳನ್ನು ಬಳಸಿಕೊಂಡು...

bhaarat jodo… ಯುವ ಸಂಘ ನೋಂದಣಿಗೆ ಶಾಸಕರ ಮನವಿ

ಸಿದ್ದಾಪುರ: ರಾಜ್ಯದ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ರ ಮಹತ್ವಾಕಾಂಕ್ಷೆ ಭಾರತ್ ಜೋಡೋ ಯುವ ಸಂಘಗಳನ್ನು ತಕ್ಷಣ ನೊಂದಣಿ ಮಾಡಿಸಿಕೊಂಡು ಸರ್ಕಾರದ ಅನುದಾನ ಸದುಪಯೋಗ ಪಡಿಸಿಕೊಳ್ಳುವಂತೆ ಶಿರಸಿ-ಸಿದ್ದಾಪುರ...

ಶ್ರೇಷ್ಠ ಶಿಕ್ಷಕ ವಿರೂಪಾಕ್ಶಪ್ಪ ಮೇಟಿ

ಕೆ.ಪಿ.ಸಿ.ಸಿ ಯಿಂದ ನೀಡಲಾಗುವ ಮಾಜಿ ಪ್ರಧಾನಿ ಶ್ರೀ ರಾಜೀವ ಗಾಂಧಿ ರಾಜ್ಯ ಮಟ್ಟದ ಶ್ರೇಷ್ಠ ಶಿಕ್ಷಕ ಪ್ರಶಸ್ತಿಗೆ ಆಯ್ಕೆಯಾದ ಉಪನ್ಯಾಸಕ ವಿರುಪಾಕ್ಷಪ್ಪ ಮೇಟಿ ಸಿದ್ದಾಪುರ,ಸೆ,೩:-...

kolsirsi vss issue…part -04 ನಾನೇ ಹೊಣೆ ನಾನೇ ಜವಾಬ್ದಾರಿ ಎಂದ ಸಿಇಒ ಮಾಳವಿ….

ಕೋಲ ಶಿರಸಿ vss ನ ಪ್ರಕರಣ ಹಗರಣದ ಸ್ವರೂಪ ಪಡೆದಿದೆ… ಈ ಅಪರಾ ತಪರಾ ರೂವಾರಿ ಸಿಇಒ/ ಸೆಕ್ರೆಟರಿ ಎಂಬುದು ನಿರ್ವಿವಾದ. ಈ ಬಗ್ಗೆ...

ಕೋಲಶಿರಸಿ vss ಆಡಳಿತ ಸಮೀತಿ & ಸಿಇಒ ವಿರುದ್ಧ ಇಲಾಖೆಗೆ ದೂರು

ಸಿದ್ದಾಪುರ ತಾಲೂಕಿನ ಕೋಲಶಿರಸಿ vss ನಲ್ಲಿ ನಡೆದಿದೆ ಎನ್ನಲಾದ ಬಹುಕೋಟಿ ಹಗರಣದ ಹಿಂದೆ ಇರುವ ಹಾಲಿ ಆಡಳಿತ ಮಂಡಳಿ & ಸಿಇಒ/ ಕಾರ್ಯದರ್ಶಿ ಗಳ...

Latest Posts

ಗ್ರಾಮೀಣ ಸೇವಾ ಸಹಕಾರಿ ಸಂಘಗಳು ಮುಳುಗುತ್ತಿವೆ..! ಜಾಗೃತೆ..

ರೈತರ ಅನುಕೂಲಕ್ಕಿರುವ ಗ್ರಾಮೀಣ ಸೇವಾ ಸಹಕಾರಿ ಸಂಘಗಳು ಮುಳುಗುತ್ತಿವೆ ಎನ್ನುವುದಕ್ಕೆ ಅನೇಕ ದೃಷ್ಟಾಂತಗಳಿವೆ. ಆದರೆ ಸಹಕಾರಿ ಕ್ಷೇತ್ರ ನಿಯಂತ್ರಿಸುವವರು ತಮ್ಮ ಅನುಕೂಲಕ್ಕೆ ಸಂಘಗಳನ್ನು ಬಳಸಿಕೊಂಡು ಸಹಕಾರಿ ಕ್ಷೇತ್ರ ಜನಪರ ಎನ್ನುವ ಸುಳ್ಳು ಪ್ರಚಾರದಲ್ಲಿ ತೊಡಗಿದ್ದಾರೆ. ಸಿದ್ದಾಪುರ ಕೋಲಶಿರ್ಸಿ ಸೇವಾ ಸಹಕಾರಿ ಸಂಘದ ಬಹುಕೋಟಿ ಹಗರಣದ ನಂತರ ಒಂದೊಂದೇ ಗುಟ್ಟುಗಳು ರಟ್ಟಾಗತೊಡಗಿವೆ. ಸಿದ್ದಾಪುರದ ಪ್ರಮುಖ ಸಹಕಾರಿಗಳು,...

Recommended For You

About the Author: Kanneshwar Naik

Leave a Reply

Your email address will not be published. Required fields are marked *