

ಮಳೆಯಿಂದ ರಕ್ಷಣೆ ಪಡೆಯಲು ಹೋಗಿ ಮಸಣ ಸೇರಿದ: ಛಾವಣಿ ಕುಸಿದು ಕಾರ್ಮಿಕ ಸಾವು!
ಹಳೇ ಮನೆಯ ಛಾವಣಿ ಕುಸಿದು ಬಿದ್ದ ಪರಿಣಾಮ ಕಾರ್ಮಿಕ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಶಿವಮೊಗ್ಗ: ಮಳೆಯಿಂದ ರಕ್ಷಣೆ ಪಡೆಯಲು ಮನೆಯ ಮುಂಭಾಗ ನಿಂತಿದ್ದ ಕೂಲಿ ಕಾರ್ಮಿಕನ ಮೇಲೆ ಛಾವಣಿ ಕುಸಿದು ಬಿದ್ದ ಪರಿಣಾಮ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಸೊರಬದಲ್ಲಿ ನಡೆದಿದೆ.

ಮೃತರ ಅಂತಿಮ ದರ್ಶನ ಪಡೆದ ಶಾಸಕ ಕುಮಾರ ಬಂಗಾರಪ್ಪ
ಸೊರಬ ತಾಲೂಕಿನ ಉಳಿವಿ ಹೋಬಳಿಯ ಚಿಟ್ಟೂರು ಗ್ರಾಮದ ಅಶೋಕ (30) ಎಂಬುವವರು ಮಳೆ ಬರುತ್ತಿದೆ ಎಂದು ಮನೆಯೊಂದರ ಬಳಿ ನಿಂತಿದ್ದಾನೆ. ಅದು ಹಳೇ ಮನೆಯಾಗಿದ್ದು, ಜೋರಾದ ಮಳೆಗೆ ಮನೆ ಕುಸಿದು ಬಿದ್ದಿದೆ. ಇದರಿಂದ ಅಶೋಕ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ. ಈ ಕುರಿತು ಸೊರಬ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಶಾಸಕ ಕುಮಾರ ಬಂಗಾರಪ್ಪರಿಂದ ಅಂತಿಮ ದರ್ಶನ: ಮೃತ ಅಶೋಕನ ಶವವನ್ನು ಸೊರಬ ತಾಲೂಕು ಆಸ್ಪತ್ರೆಯಲ್ಲಿ ಇಡಲಾಗಿತ್ತು. ಆಸ್ಪತ್ರೆಯ ಶವಾಗಾರಕ್ಕೆ ಬಂದ ಶಾಸಕ ಕುಮಾರ ಬಂಗಾರಪ್ಪ ಮೃತರ ಅಂತಿಮ ದರ್ಶನ ಪಡೆದು ಬಳಿಕ ಸರ್ಕಾರದಿಂದ ಪರಿಹಾರ ಒದಗಿಸುವ ಭರವಸೆ ನೀಡಿದ್ದಾರೆ. (etbk)
