

ಸಿದ್ದಾಪುರ : ಜಿಲ್ಲಾ ಕಾಂಗ್ರೆಸ್ ಹಿಂದುಳಿದ ವರ್ಗಗಳ ಅಧ್ಯಕ್ಷರಾದ ನಾಗರಾಜ ನಾರ್ವೇಕರವರ ಆದೇಶದ ಮೇರೆಗೆ ತಾಲೂಕಾ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ವಸಂತ ನಾಯ್ಕ ಹಾಗೂ ಕಾಂಗ್ರೆಸ್ ಮುಖಂಡರುಗಳ ನೇತೃತ್ವದಲ್ಲಿ ತಾಲೂಕು ಹಿಂದುಳಿದ ವರ್ಗಗಳ ಅಧ್ಯಕ್ಷರಾದ ಗಂಗಾಧರ ಜಿ. ಮಡಿವಾಳ ತಾಲೂಕಾ ಹಿಂದುಳಿದ ಬ್ಲಾಕ್ ಕಾಂಗೆಸ್ ಪದಾಧಿಕಾರಿಗಳನ್ನು ಆಯ್ಕೆ ಮಾಡಿದ್ದಾ ರೆ.
ಹಲಗೇರಿ ಜಿ.ಪಂ. ಕ್ಷೇತ್ರದ ಉಪಾಧ್ಯಕ್ಷರಾಗಿ ಅಣ್ಣಪ್ಪ ಕೆ. ನಾಯ್ಕ ಸುಂಕತ್ತಿ, ಕಾರ್ಯದರ್ಶಿಯಾಗಿ ಉಮೇಶ ಎಂ.
ನಾಯ್ಕ ಗೋಳಗೋಡ.
ದೊಡ್ಮನೆ ಜಿ.ಪಂ. ಕ್ಷೇತ್ರದ ಉಪಾಧ್ಯಕ್ಷರಾಗಿ ರಮೇಶ ಗೌಡ ಬಳೂರು, ಕಾರ್ಯದರ್ಶಿಯಾಗಿ ಕೆ.ಟಿ.ನಾಯ್ಕ, ಕ್ಯಾದಗಿ ಆಯ್ಕೆಯಾಗಿರುತ್ತಾರೆ.
ಅಣಲೇಬೈಲ್ ಜಿ.ಪಂ. ಕ್ಷೇತ್ರದ ಉಪಾಧ್ಯಕ್ಷರಾಗಿ ಶಿವರಾಮ ಗೌಡ ಹೆಗ್ಗರಣಿ, ಕಾರ್ಯದರ್ಶಿಯಾಗಿ ಈಶ್ವರ ಮೊಗೆರ್
ಹಸರಗೋಡು .
ಕಾನಗೋಡು ಜಿ.ಪಂ. ಕ್ಷೇತ್ರದ ಉಪಾಧ್ಯಕ್ಷರಾಗಿ
ಉದಯ ಚೌಡ ನಾಯ್ಕ, ಕಾರ್ಯದರ್ಶಿಯಾಗಿ ಮಂಜುನಾಥ ಮಾರುತಿ ಮಡಿವಾಳ, ಕಾನಸೂರು ಆಯ್ಕೆಯಾಗಿದ್ದಾರೆ. ನಗರ ಘಟಕದ ಉಪಾಧ್ಯಕ್ಷರಾಗಿ ಶನೇಶ್ವರ
ಬಂಗಾರ್ಯ ಮಡಿವಾಳ ಹೊಸೂರು, ಕಾರ್ಯದರ್ಶಿಯಾಗಿ ಪ್ರವೀಣ ಬಿ. ನಾಯ್ಕ, ಕೊಂಡ್ಲಿ ಇವರುಗಳು
ಆಯ್ಕೆಯಾಗಿರುತ್ತಾರೆ ಎಂದು ಕಾಂಗ್ರೆಸ್ ತಾಲೂಕಾ ಹಿಂದುಳಿದ ವರ್ಗಗಳ
ಅಧ್ಯಕ್ಷ ಗಂಗಾಧರ ಜಿ. ಮಡಿವಾಳ ಕಡಕೇರಿ ಪತ್ರಿಕಾ ಪ್ರಕಟಣೆ ಯಲ್ಲಿ ತಿಳಿಸಿದ್ದಾರೆ.

ಪಠ್ಯ ಜ್ಞಾನದೊಂದಿಗೆ ಪಠ್ಯೇತರ ಜ್ಞಾನವನ್ನು ಹೆಚ್ಚು ಸಂಪಾದಿಸಬೇಕು.
ಶಿಕ್ಷಕರ ಮಾತನ್ನು ಚಾಚುತಪ್ಪದೇ ಕೇಳಿದರೆ ಮುಂದೆ ನಮ್ಮ ಬಾಳು ಸುಂದರವಾಗುತ್ತದೆ ಎಂದು ಅಕ್ಷರ ದಾಸೋಹದ ಸಹಾಯಕ ನಿರ್ದೇಶಕ ಭೂಮೇಶ ಎ ಎಚ್ ಹೇಳಿದರು. ಅವರು ಪಟ್ಟಣದ ಹೊಸುರಿನ ಬಂಕೇಶ್ವರ ಪ್ರೌಢಶಾಲೆಯಲ್ಲಿ ನಡೆದ ವಿದ್ಯಾರ್ಥಿ ಸಂಸತ್ತಿನ ಉದ್ಘಾಟನೆ ಹಾಗೂ ಪ್ರತಿಭಾವಂತ ವಿದ್ಯಾರ್ಥಿ ಗಳಿಗೆ ಸನ್ಮಾನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪ್ರೌಢಶಾಲೆಯ ಅಧ್ಯಕ್ಷ ಕೆ ಅಜ್ಜಪ್ಪ ಮಾತನಾಡಿ ನಾವು ಕೇವಲ ನೌಕರಿಗಾಗಿ ಓದದೆ ನಮ್ಮ ಭದ್ರ ಜೀವನಕ್ಕಾಗಿ ಓದಬೇಕು. ವಿದ್ಯಾರ್ಥಿ ಪ್ರಾರಂಭದಿಂದಲೇ ಕಷ್ಟ ಪಟ್ಟು ಓದಬೇಕು. ಆವಾಗ ನಮ್ಮ ಗುರಿ ಈಡೇರುತ್ತದೆ ಸನ್ಮಾನಗಳು ನಮ್ಮನ್ನು ಹುಡುಕಿಕೊಂಡು ಬರುತ್ತವೆ. ಮನುಷ್ಯ ನಿಗೆ ಹಠ ಛಲ ಇರಬೇಕು. ಅಂದಾಗ ಮಾತ್ರ ನಾವು ಅಂದುಕೊಂಡಂತೆ ಗುರಿ ಮುಟ್ಟಲು ಸಾಧ್ಯವಾಗುತ್ತದೆ ಎಂದರು.
2021 – 22 ಸಾಲಿನ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ರಾಜ್ಯಕ್ಕೆ ಎಂಟನೆ ಸ್ಥಾನ ಗಳಿಸಿ ಪ್ರೌಢಶಾಲೆಗೆ ಪ್ರಥಮ ಸ್ಥಾನ ಪಡೆದ ಪವಿತ್ರ ನಾಯ್ಕ, ಶಾಲೆಗೆ ದ್ವಿತೀಯ ಸ್ಥಾನ ಪಡೆದ ಸಂಜನಾ ಶೇಟ್, ತೃತೀಯ ಸ್ಥಾನ ಪಡೆದ ರಾಘವೇಂದ್ರ ನಾಯ್ಕ ರವರನ್ನು ಸನ್ಮಾನಿಸಲಾಯಿತು.
ಪತ್ರಕರ್ತರ ಸುರೇಶ ಮಾಡಿವಾಳ ಕಡಕೇರಿ.
ಸೊರಬ ಗ್ರಾ.ಪಂ ಸದಸ್ಯರಾದ ಶಿವಕುಮಾರ ಮಾತನಾಡಿದರು.
ವಿದ್ಯಾರ್ಥಿ ಸಂಸತ್ತಿನ ಪ್ರತಿನಿಧಿ ಯಶೋಧರ ಎಸ್ ನಾಯ್ಕ ವೇದಿಕೆಯಲ್ಲಿದ್ದರು.
ಶಿಕ್ಷಕ ಎಮ್ ಬಿ ನಾಯ್ಕ ವಿದ್ಯಾರ್ಥಿ ಸಂಸತ್ತಿಗೆ ಆಯ್ಕೆಯಾದ ಪ್ರತಿನಿಧಿಗಳಿಗೆ ಪ್ರಮಾಣವಚನ ಬೋಧಿಸಿದರು.
ವಿದ್ಯಾರ್ಥಿನಿಯರು ಪ್ರಾರ್ಥಿಸಿದರು. ಮುಖ್ಯೋಧ್ಯಾ ಪಕರಾದ ಲೋಕೇಶ ನಾಯ್ಕ ಪ್ರಾಸ್ತಾವಿಕ ವಾಗಿ ಮಾತನಾಡಿ ಸ್ವಾಗತಿಸಿದರು. ಶಿಕ್ಷಕ ಟಿ ಸಿ ನಾಯ್ಕ ನಿರೂಪಿಸಿದರು. ಶಿಕ್ಷಕ ವಿ.ಟಿ ನಾಯ್ಕ ವಂದಿಸಿದರು.
