ಸರ್ಕಾರಿ ನೌಕರರ ಸಂಘದ ರಾಜ್ಯ ಅಧ್ಯಕ್ಷರಿಗೆ ಬರೆದ ವೈರಲ್‌ ಪತ್ರ!

ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ Mr. C.S. ಷಡಾಕ್ಷರಿ,

ನನ್ನ ತಂದೆ ಕೃಷ್ಣಾರೆಡ್ಡಿ ವಿ.ಯವರೂ 1970-80ರ ದಶಕದಲ್ಲಿ ಸರ್ಕಾರಿ ನೌಕರರಾಗಿದ್ದವರು. ಹಾಗಾಗಿ ಸರ್ಕಾರದ ಹಾಗೂ ಜನರ ತೆರಿಗೆಯ ಹಣದ ಋಣ ನನ್ನ ಮತ್ತು ನನ್ನ ಕುಟುಂಬದ ಮೇಲಿದೆ. ಆ ಹಿನ್ನೆಲೆಯಲ್ಲಿ ನಾನು ಅತ್ಯಂತ ಪ್ರೀತಿ, ನೋವು, ಬೇಸರ, ದುಃಖ, ಕಾಳಜಿ, ಅಸಹನೆ ಮುಂತಾದುವುಗಳಿಂದ ಕೂಡಿದ ಮಿಶ್ರಭಾವದಿಂದ ನಿಮಗೆ ಮತ್ತು ನಿಮ್ಮ ಸಂಘದ ಎಲ್ಲಾ ಪದಾಧಿಕಾರಿಗಳಿಗೆ ಈ ಬಹಿರಂಗ ಪತ್ರವನ್ನು ಬರೆಯುತ್ತಿದ್ದೇನೆ.

ನಿಮ್ಮ ದುರಾಲೋಚನೆ, ವ್ಯಾಪ್ತಿಮೀರಿದ ನಡವಳಿಕೆ ಮತ್ತು ದುಷ್ಕೃತ್ಯದಿಂದಾಗಿ ನೀವು ರಾಜ್ಯದ ಲಕ್ಷಾಂತರ #ಪ್ರಾಮಾಣಿಕಸರ್ಕಾರಿನೌಕರ‘ರ ಘನತೆ ಮತ್ತು ಗೌರವಕ್ಕೆ ಚ್ಯುತಿ ತಂದಿದ್ದೀರಿ. ರಾಜ್ಯದ ಮುಖ್ಯಮಂತ್ರಿಯನ್ನು ಮತ್ತು DPAR ಇಲಾಖೆಯ ಅಯೋಗ್ಯ ಅಧಿಕಾರಿಗಳನ್ನು ದಾರಿ ತಪ್ಪಿಸಿ, ಅವರಿಂದ ಕಾನೂನುಬಾಹಿರ ಮತ್ತು ಜನವಿರೋಧಿ ಆದೇಶವನ್ನು ಹೊರಡಿಸಿ, ತದನಂತರ ಕೇವಲ ಒಂದೇ ದಿನದಲ್ಲಿ ಜನಾಕ್ರೋಶಕೆ ಮಣಿದು ಸರ್ಕಾರ ಆ Draconian ಆದೇಶವನ್ನು ಹಿಂಪಡೆಯುವಂತೆ ಆಗಿ, ರಾಜ್ಯ ಸರ್ಕಾರಕ್ಕೆ ಹಾಗೂ ಅದರ ನೌಕರರಿಗೆ ಮುಜುಗರ ಮತ್ತು ಅವಮಾನ ಆಗುವಂತಾಗಲು ನೇರ ಕಾರಣ ಆಗಿದ್ದೀರಿ. ಮತ್ತು ಆ ದುರುದ್ದೇಶಪೂರಿತ ಆದೇಶಕ್ಕೆ ನಾನೇ ಕಾರಣ ಎಂದು ಆಲಮಟ್ಟಿಯಲ್ಲಿ ನಡೆದ ಸಭೆಯಲ್ಲಿ ಕೊಚ್ಚಿಕೊಳ್ಳುವ ಮೂಲಕ ನಿಮ್ಮ ತಪ್ಪನ್ನು ಒಪ್ಪಿಕೊಂಡಿದ್ದೀರಿ.

ಆ ಮೂಲಕ, ಇದರಲ್ಲಿ ಯಾವ ಪಾತ್ರವೂ ಇಲ್ಲದ ಮತ್ತು ಈ ಘಟನೆಯ ಕಾರಣಕ್ಕಾಗಿ ತೀವ್ರವಾಗಿ ನೊಂದಿರುವ ರಾಜ್ಯದ ಲಕ್ಷಾಂತರ #ಪ್ರಾಮಾಣಿಕಸರ್ಕಾರಿನೌಕರ‘ರ ಭಾವನೆಗಳಿಗೆ ಧಕ್ಕೆ ತಂದಿದ್ದೀರಿ.

ಹಾಗಾಗಿ, ಈ ಕೂಡಲೇ ನೀವು ರಾಜ್ಯದ ಎಲ್ಲಾ ಸರ್ಕಾರಿ ನೌಕರರಲ್ಲಿ Unconditional ಕ್ಷಮೆ ಯಾಚಿಸಬೇಕು ಎಂದು ನಾನು ಮೊದಲಿಗೆ ಆಗ್ರಹಿಸುತ್ತೇನೆ.

***

ಅಂದಹಾಗೆ, ನೀವು ಸರ್ಕಾರಿ ನೌಕರರ ಸ್ವಾಭಿಮಾನದ ಬಗ್ಗೆ ಮಾತನಾಡಿದ್ದೀರಿ. ರಾಜ್ಯದ 6 ಲಕ್ಷ ಸರ್ಕಾರಿ ನೌಕರರಲ್ಲಿ ಕನಿಷ್ಠ ನಾಲ್ಕೈದು ಲಕ್ಷ ಸರ್ಕಾರಿ ನೌಕರರು ಈಗಲೂ ಸ್ವಾಭಿಮಾನ ಮತ್ತು ಘನತೆಯಿಂದ ಬದುಕುತ್ತಿದ್ದಾರೆ. ಯಾಕೆಂದರೆ ಅವರ ಇಲಾಖೆಗಳಲ್ಲಿ ಭ್ರಷ್ಟಾಚಾರ ಮತ್ತು ಲಂಚಕ್ಕೆ ಅವಕಾಶ ಬಹಳ ಕಡಿಮೆ ಇರುತ್ತದೆ. ಲಂಚಗುಳಿತನ ಮತ್ತು ಅಕ್ರಮಗಳಿಗೆ ಅಪಾರ ಅವಕಾಶ ಇರುವ ಕಂದಾಯ ಇಲಾಖೆ, ಪೊಲೀಸ್ ಇಲಾಖೆ, RDPR ಇಲಾಖೆ, ಅಬಕಾರಿ ಇಲಾಖೆ, ಕೃಷಿ ಇಲಾಖೆಯಂತಹ ಕೆಲವೇ ಇಲಾಖೆಗಳಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದೆ. ಇಲ್ಲಿಯೂ ಎಲ್ಲರೂ ಭ್ರಷ್ಟರಲ್ಲ. ಆದರೆ ಭ್ರಷ್ಟರ ಅಟ್ಟಹಾಸ ಮಾತ್ರ ಮಿತಿಮೀರಿದೆ. ತಮ್ಮ ಹಾಗೆ ಎಲ್ಲರೂ ಪರಮಭ್ರಷ್ಟರೇ ಎನ್ನುವ ಸಾರ್ವತ್ರಿಕ ಭಾವನೆಯನ್ನು ಸೃಷ್ಟಿಸಿರುವುದು ಆ ಅಲ್ಪಸಂಖ್ಯಾತ ಭ್ರಷ್ಟರೇ. ಬಹುಸಂಖ್ಯಾತ ಪ್ರಾಮಾಣಿಕ ನೌಕರರು ಹೆದರುಪುಕ್ಕಲರಾಗಿ ಭ್ರಷ್ಟಾಚಾರ ಬೆಳೆಯಲು ಪರೋಕ್ಷವಾಗಿ ಕಾರಣರಾಗಿದ್ದಾರೆ ಮತ್ತು ಆ ಕಾರಣದಿಂದಾಗಿಯೇ ಅವರೂ ಆರೋಪಗಳಿಗೆ ಗುರಿಯಾಗುತ್ತಿದ್ದಾರೆ.

ಅಂದ ಹಾಗೆ, #ಸ್ವಾಭಿಮಾನ ಇರುವ ಯಾವುದೇ ನೌಕರ ಭ್ರಷ್ಟ ಅಥವ ಲಂಚಕೋರ ಆಗಲು ಸಾಧ್ಯವಿಲ್ಲ. ಹಾಗಾಗಿ ಭ್ರಷ್ಟರನ್ನು ಮತ್ತು ಲಂಚಕೋರರನ್ನು ಪ್ರಶ್ನಿಸಿದಾಗ ಮಾನಧನರೇ ಅಲ್ಲದ ಅವರ ಯಾವ ರೀತಿಯ ಸ್ವಾಭಿಮಾನಕ್ಕೆ ಧಕ್ಕೆ ಆಗುತ್ತದೆ?

ನೀವು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ. ಇಂದು ಸರ್ಕಾರಿ ನೌಕರರ ಘನತೆಗೆ ಹೆಚ್ಚು ಚ್ಯುತಿ ಬಂದಿರುವುದು ಈಗಾಗಲೇ ಹೇಳಿದಂತೆ ನಿಮ್ಮಲ್ಲಿಯ ಕೆಲವರು ಮಾಡುವ ಭ್ರಷ್ಟಾಚಾರ, ಲಂಚಕೋರತನ, ಕರ್ತವ್ಯಲೋಪ, ಸಾರ್ವಜನಿಕರೊಂದಿಗಿನ ದುರ್ನಡತೆ ಮುಂತಾದ ಅವಗುಣಗಳ ಕಾರಣಕ್ಕೆ; ಸರ್ಕಾರಿ ನೌಕರ/ನೌಕರಳಿಗೆ ತಕ್ಕುದಲ್ಲದ ನಡವಳಿಕೆಯ ಕಾರಣಕ್ಕೆ. ಸಮಾಜದಲ್ಲಿ ಸರ್ಕಾರಿ ನೌಕರರ ಘನತೆ ಮತ್ತು ಗೌರವ ಹೆಚ್ಚಾಗಬೇಕು ಎಂದರೆ ಅವರು ತಮ್ಮ ದುರ್ನಡತೆ, ದುಷ್ಕೃತ್ಯ, ಅಕ್ರಮ ಮತ್ತು ಕಾನೂನುಬಾಹಿರ ಕೆಲಸಗಳನ್ನು ನಿಲ್ಲಿಸಬೇಕು. ಜನರ ವಿಶ್ವಾಸ ಪಡೆಯಬೇಕು.

ಹಾಗಾಗಿ ನೀವು ಸರ್ಕಾರಿ ನೌಕರರ ಯಾವುದೇ ಸಭೆಯಲ್ಲಿ ನಿಮ್ಮ ಸಹನೌಕರರಿಗೆ ಅವರು “ಯಾವುದೇ ಕಾರಣಕ್ಕೂ ಲಂಚ ತೆಗೆದುಕೊಳ್ಳಬಾರದು, ಅಕ್ರಮಗಳನ್ನು ಮಾಡಬಾರದು, ಸಾರ್ವಜನಿಕರನ್ನು ವಿನಾ ಸತಾಯಿಸಬಾರದು, ಅವರೊಂದಿಗೆ ಸೌಜನ್ಯ ಮತ್ತು ಗೌರವದಿಂದ ನಡೆದುಕೊಳ್ಳಬೇಕು” ಎಂದು ಎಂದಾದರೂ ಹೇಳಿದ್ದೀರಾ? ಇಲ್ಲವಾದಲ್ಲಿ ನೀವು ಎಂತಹ ನೌಕರರ ಸಂಘದ ಅಧ್ಯಕ್ಷ? ನಿಮ್ಮ ಸಂಘದ ಲಕ್ಷಾಂತರ ಸದಸ್ಯರ ಗೌರವ ಮತ್ತು ಘನತೆಯನ್ನು ನೀವು ಇನ್ಯಾವ ರೀತಿ ಕಾಪಾಡುತ್ತೀರಿ, ಹೆಚ್ಚಿಸುತ್ತೀರಿ?

ಬಹುಶಃ, ಮೊನ್ನೆ ಮಾಡಿದ ರೀತಿಯಲ್ಲಿಯೇ ಇರಬೇಕು. ಒಬ್ಬ ಸುಳ್ಳುಗಾರ ಮತ್ತು ಅದಕ್ಷ ಮುಖ್ಯಮಂತ್ರಿಯ ಜೊತೆ ಕಾರಿನಲ್ಲಿ ಖಾಸಗಿಯಾಗಿ ಕುಳಿತು ಅವರಿಂದ ಹೀನ ಮತ್ತು ಜನದ್ರೋಹಿ ಆದೇಶ ಹೊರಡಿಸುವಂತೆ ಮಾಡುವ ಮೂಲಕ ಅಲ್ಲವೇ? ಸರ್ಕಾರಿ ಕಚೇರಿಗಳಲ್ಲಿ ಸಾರ್ವಜನಿಕರು ಫೋಟೋ/ವಿಡಿಯೋ ತೆಗೆಯಬಾರದು ಎಂದು ಸರ್ಕಾರ ಆದೇಶ ಹೊರಡಿಸಿದ ನಂತರ ನಡೆದ ಕ್ಷಿಪ್ರ ಬೆಳವಣಿಗೆಯಲ್ಲಿ ರಾಜ್ಯದ ಸರ್ಕಾರಿ ನೌಕರರ ಮಾನ ಮತ್ತು ಮರ್ಯಾದೆ ಯಾವ ರೀತಿ ಹರಾಜು ಆಗಿದೆ ಎಂದು ನಿಮಗೆ ಗೊತ್ತಿದೆಯೇ?

ಈ ವಿಷಯದಲ್ಲಿ ನಿಮ್ಮ ದುರಾಲೋಚನೆ ಮತ್ತು ಅಹಂಕಾರದ ಏಕೈಕ ಕಾರಣದಿಂದಾಗಿ ತಮಗಾಗಿರುವ ಮಾನಹಾನಿ ಕುರಿತು ಸರ್ಕಾರಿ ನೌಕರರು ಇಷ್ಟೊತ್ತಿಗೆ ನಿಮ್ಮಿಂದ ರಾಜೀನಾಮೆ ಪಡೆಯಬೇಕಿತ್ತು. ಆದರೆ ಅದನ್ನು ಮಾಡದ ಅವರ ಮೌನವೂ ಸಹ ಸರ್ಕಾರಿ ನೌಕರರು ಈಗ ಯಾವ ಮನಸ್ಥಿತಿಗೆ ತಲುಪಿದ್ದಾರೆ ಎನ್ನುವುದನ್ನು ಸೂಚಿಸುತ್ತದೆ. ದುರಂತ.

***

ನಮಗೆ ತಿಳಿದು ಬಂದಿರುವ ಹಾಗೆ, ನೀವೂ ಸೇರಿದಂತೆ ಸರ್ಕಾರಿ ನೌಕರರ ಸಂಘದ ಪದಾಧಿಕಾರಿಗಳಾಗಿರುವ ಅನೇಕರು ಸರ್ಕಾರದಲ್ಲಿ ತಮಗೆ ಕೊಟ್ಟಿರುವ ಕೆಲಸ ಮಾಡುವುದನ್ನು ಬಿಟ್ಟು ಇತರೆ ನೌಕರರ ವರ್ಗಾವಣೆ ಮಾಡಿಸುವುದು, ಭ್ರಷ್ಟರನ್ನು ಕಾನೂನಿನ ಪ್ರಕ್ರಿಯೆಗಳಿಂದ ರಕ್ಷಿಸುವುದು, ಕೆಲವು ಭ್ರಷ್ಟ ರಾಜಕಾರಣಿಗಳ ಚೇಲಾಗಳಾಗಿ ವರ್ತಿಸುವುದು, ತಮ್ಮ ಮಾತು ಒಪ್ಪದ ಇತರೆ ಪ್ರಾಮಾಣಿಕ ಸರ್ಕಾರಿ ನೌಕರರ ಮೇಲೆ ದಬ್ಬಾಳಿಕೆ ಮಾಡುವುದೂ ಸೇರಿದಂತೆ ಹಲವು ಕುಕೃತ್ಯ ಮತ್ತು ಸರ್ಕಾರಿ ನೌಕರರಿಗೆ ತಕ್ಕುದಲ್ಲದ ನಡವಳಿಕೆಯಲ್ಲಿ ತೊಡಗಿರುವ ಕುರಿತು ಆರೋಪಗಳಿವೆ. ನೀವಂತೂ KAS/IAS/IPS ಅಧಿಕಾರಿಗಳನ್ನೂ ವರ್ಗಾವಣೆ ಮಾಡಿಸುವಷ್ಟು ಪ್ರಭಾವಶಾಲಿ ಎನ್ನುತ್ತಾರೆ. ನಿಮ್ಮಂತಹವರ ಇಂತಹ ಅನುಚಿತ ಮತ್ತು ವ್ಯಾಪ್ತಿ ಮೀರಿದ ನಡವಳಿಕೆಯೂ ಇವತ್ತಿನ ದುರಾಡಳಿತಕ್ಕೆ ತನ್ನದೇ ಆದ ಕೆಟ್ಟ ಕೊಡುಗೆ ನೀಡಿದೆ.

ಅಂದಹಾಗೆ, ನೀವು–ಸರ್ಕಾರಿ ನೌಕರರ ಸಂಘದ ಪದಾಧಿಕಾರಿಗಳು–ಸಂಘದ ಕೆಲಸ ಕಾರ್ಯಗಳನ್ನು ಕಛೇರಿಯ ಅವಧಿಯ ನಂತರ ಮಾಡಬೇಕೇ ವಿನಃ ದಿನಪೂರ್ತಿ ಅದನ್ನೇ ಮಾಡುವಂತಿಲ್ಲ. ಆ ರೀತಿಯ ವಿಶೇಷ ಹಕ್ಕುಗಳು ನೌಕರರ ಸಂಘದ ಪದಾಧಿಕಾರಿಗಳಿಗೆ ಇಲ್ಲ. ಯಾವ ಕೆಲಸಕ್ಕಾಗಿ ನಿಮಗೆ ಜನರ ತೆರಿಗೆಯ ಹಣವನ್ನು ಸರ್ಕಾರ ಸಂಬಳವಾಗಿ ನೀಡುತ್ತಿದೆಯೋ, ಅದನ್ನು ಮಾಡಿಯೇ ನೀವು ಇತರೆ ಖಾಸಗಿ ಕೆಲಸಗಳನ್ನು ಮಾಡಬೇಕು. ಆದರೆ ನೀವು ನಿಮ್ಮ ದುಷ್ಪ್ರಭಾವ ಬಳಸಿ ನಿಮ್ಮ ಅಧಿಕೃತ ಸರ್ಕಾರಿ ಕೆಲಸವನ್ನೇ ಮಾಡುತ್ತಿಲ್ಲ ಎನ್ನುವ ಮಾಹಿತಿ ಬಂದಿದೆ.

ಇದೆಲ್ಲವೂ ಭ್ರಷ್ಟ J.C.B ಪಕ್ಷಗಳ ಕಾಲದಲ್ಲಿ ನಡೆಯುತ್ತಿತ್ತು. ಈಗ ಜನ ಎಚ್ಚತ್ತಿದ್ದಾರೆ. KRS ಪಕ್ಷದ ನಿರಂತರ ಹೋರಾಟದ ಕಾರಣಕ್ಕೆ ಇಂದು ರಾಜ್ಯದ ಲಕ್ಷಾಂತರ ಜನಸಾಮಾನ್ಯರಲ್ಲಿ ನವಚೈತನ್ಯ ಸಂಚರಿಸುತ್ತಿದೆ. ಅನ್ಯಾಯವನ್ನು ಸಾರ್ವಜನಿಕವಾಗಿ ಪ್ರಶ್ನಿಸುವ ಸ್ಥೈರ್ಯ ಬೆಳೆಸಿಕೊಂಡಿದ್ದಾರೆ. ಹಾಗಾಗಿ ನೀವೂ ಸೇರಿದಂತೆ ಯಾವೆಲ್ಲಾ ಸರ್ಕಾರಿ ನೌಕರರು ತಮ್ಮ ನಿಯೋಜಿತ ಸ್ಥಾನದಲ್ಲಿ ಕರ್ತವ್ಯ ನಿರ್ವಹಣೆ ಮಾಡುವುದನ್ನು ಬಿಟ್ಟು ರಾಜಕಾರಣಿಗಳ ಹಾಗೆ ಊರೂರು ಸುತ್ತಿ ಸರ್ಕಾರಿ ನೌಕರರ ದಾರಿ ತಪ್ಪಿಸುವ ಕೆಲಸವನ್ನು ಮಾಡುತ್ತಿದ್ದೀರೋ, ಅದೆಲ್ಲವೂ ಈ ಕೂಡಲೇ ಬಂದ್ ಆಗಬೇಕು.

ಇನ್ನು, ನೀವು ಮಾಡಿದ್ದೀರಿ ಎನ್ನಲಾದ ಹಲವು ಕುಕೃತ್ಯಗಳು ಮತ್ತು ಅಕ್ರಮ ಆಸ್ತಿಯ ಬಗ್ಗೆ ನಮಗೆ ಶಿವಮೊಗ್ಗ ಜಿಲ್ಲೆಯ ಹಲವರು ಕೆಲವು ವಿವರಗಳ ಸಹಿತ ಮಾಹಿತಿ ನೀಡಿದ್ದಾರೆ. ಮೇಲ್ನೋಟಕ್ಕೆ ಇವೆಲ್ಲವೂ ಗಂಭೀರ ಆರೋಪಗಳು. ಈ ವಿಚಾರದಲ್ಲಿ ಏನೆಲ್ಲಾ ಕಾನೂನು ಕ್ರಮಗಳನ್ನು ಜರುಗಿಸಬೇಕೋ ಅದನ್ನು ನಾವು ಶೀಘ್ರದಲ್ಲಿಯೇ ಜರುಗಿಸಲಿದ್ದೇವೆ.

ಅದರ ಜೊತೆಗೆ, ನೀವು ಯಾವ ಹುದ್ದೆಯಲ್ಲಿ ಮತ್ತು ಸ್ಥಳದಲ್ಲಿ ಕೆಲಸ ಮಾಡುತ್ತಿದ್ದೀರೋ ಅದೇ ಸ್ಥಳಕ್ಕೆ ಇಷ್ಟರಲ್ಲಿಯೇ KRS ಪಕ್ಷದ ನಿಯೋಗ ಭೇಟಿ ನೀಡಿ, ನಿಮ್ಮ ಅನುಚಿತ ವರ್ತನೆ, ಕೆಲಸದ ಸ್ಥಳದಲ್ಲಿ ಗೈರು ಹಾಜರಿ, ಕರ್ತವ್ಯಲೋಪ ಮುಂತಾದ ವಿಚಾರಗಳ ಕುರಿತು ನಿಮ್ಮ ಮೇಲಧಿಕಾರಿಗೆ ದೂರು ನೀಡಲಿದೆ. ಲೋಕಾಯುಕ್ತದ ಗಮನಕ್ಕೂ ತರಲಿದೆ.

#ಸಂಬಳನನ್ನಹಕ್ಕು, #ಗಿಂಬಳನನ್ನತಾಕತ್ತು, #ಕೆಲಸನನ್ನಮರ್ಜಿ ಎನ್ನುವ ಮನಸ್ಥಿತಿಯ ಕೆಲವು ಭ್ರಷ್ಟ ಸರ್ಕಾರಿ ನೌಕರರಿಗೆ ಅವರ ನೈಜಕರ್ತವ್ಯವನ್ನು ನೆನಪಿಸುವ ಕೆಲಸವನ್ನು ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷ ನಿರಂತರವಾಗಿ ಮಾಡುತ್ತಾ ಬಂದಿದೆ. ಆ ಮೂಲಕ #ಲಂಚಮುಕ್ತಕರ್ನಾಟಕ, ಬಸವಣ್ಣನ #ಕಲ್ಯಾಣಕರ್ನಾಟಕ, ಕುವೆಂಪುರ #ಸರ್ವೋದಯಕರ್ನಾಟಕ‘ವನ್ನು ಕಟ್ಟಲು ಕಟಿಬದ್ಧವಾಗಿದೆ. ಆ ಹಾದಿಯಲ್ಲಿ ಎದುರಾಗುವ ಎಂತಹ ದುಷ್ಟಶಕ್ತಿಗಳನ್ನೂ #ಜನಬಲ ಮತ್ತು #ಸಂಘಬಲ‘ದಿಂದ KRS ಪಕ್ಷ ಮೆಟ್ಟಿ ನಿಲ್ಲುತ್ತದೆ. ಇದು ಸತ್ಯ ಮತ್ತು ವಾಸ್ತವ.

ಇದನ್ನು ನೀವೂ ಸೇರಿದಂತೆ ಕರ್ನಾಟಕ ಸರ್ಕಾರಿ ನೌಕರರ ಸಂಘದ ಎಲ್ಲಾ ಪದಾಧಿಕಾರಿಗಳು ನೆನಪಿಡಬೇಕು. ಮತ್ತು ನಾಡು ಕಟ್ಟುವ ಕೆಲಸದಲ್ಲಿ ಪ್ರಾಮಾಣಿಕ ನೌಕರರು ನಮ್ಮೊಡನೆ ಕೈಜೋಡಿಸಬೇಕು ಎಂದು 🙏 ಮನವಿ ಮಾಡುತ್ತೇವೆ.

ಇದೆಲ್ಲವನ್ನೂ ನಾನು ಕರುನಾಡಿನ ಹಿತದೃಷ್ಟಿಯಿಂದ ಹೇಳಿದ್ದೇನೆ. ನೀವೂ ಸೇರಿದಂತೆ ರಾಜ್ಯದ ಎಲ್ಲಾ ಸರ್ಕಾರಿ ನೌಕರರು ಇದನ್ನು ಸಕಾರಾತ್ಮಕವಾಗಿ ಸ್ವೀಕರಿಸುತ್ತಾರೆ ಎನ್ನುವ ವಿಶ್ವಾಸ ನನಗಿದೆ.

ಏನೇ ಆಗಲಿ, ಒಳ್ಳೆಯದನ್ನೇ ಮಾಡಿ; ಮಾಡುತ್ತಲೇ ಇರಿ.

ಶುಭವಾಗಲಿ.

ವಂದನೆಗಳೊಂದಿಗೆ,

ರವಿ ಕೃಷ್ಣಾರೆಡ್ಡಿ

ರಾಜ್ಯಾಧ್ಯಕ್ಷ, ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷ.

18-07-2022. (kpc)

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ,...

ಮಂಜುಗುಣಿ ಜಾತ್ರೆ ಸಂಪನ್ನ, ಕದಂಬೋತ್ಸವ ೨೫ಕ್ಕೆ ಚಾಲನೆ,ಶಿವದರ್ಶನ! samajamukhi.net news round 12-04-25

ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಸಿದ್ಧಾಪುರ ಆಯೋಜಿಸಿರುವ ಶಿವದರ್ಶನ ಪ್ರವಚನ ಮಾಲಿಕೆಹಾಗೂ ಭಗವದ್ಗೀತೆಯ ಸಂದೇಶ ʼದ್ವಾದಶ ಜ್ಯೋತಿರ್ಲಿಂಗಗಳ ದಿವ್ಯ ದರ್ಶನ ಕಾರ್ಯಕ್ರಮ ಏ.೧೪ ರ...

ಇಂದಿನ ಸುದ್ದಿ…samajamukhi.net-news-round 11-04-25 ಒಕ್ಕಲಿಗರ ಬೃಹತ್‌ ಸಮಾವೇಶ,ಬೇಸಿಗೆ ಶಿಬಿರ ಪ್ರಾರಂಭ,ಕೃಷಿ ಇಲಾಖೆಯಸೌಲತ್ತು ವಿತರಣೆ,ಬಿ.ಜೆ.ಪಿ.ಗೆ ಜಾಡಿಸಿದ ಭೀಮಣ್ಣ

ರಾಜ್ಯ ಸರ್ಕಾರದ ವಿರುದ್ಧ ರಾಜ್ಯಾದ್ಯಂತ ಪ್ರತಿಭಟಿಸಿದ ಬಿ.ಜೆ.ಪಿ. ಕಾಂಗ್ರೆಸ್‌ ನಾಯಕರು ಮತ್ತು ಪಕ್ಷವನ್ನು ಗುರಿಯಾಗಿಸಿ ದೂಷಿಸಿದ್ದಾರೆ. ಬಿ.ಜೆ.ಪಿ. ಮುಖಂಡರ ಬಾಯಿಂದ ಮುಸ್ಲಿಂ ವಿರೋಧದ ಜೊತೆಗೆ...

ಮಾರಿ ಜಾತ್ರೆ ಮುಕ್ತಾಯ…. ಮುಂಜಾನೆವರೆಗೆ ವಿಸರ್ಜನಾ ಮೆರವಣಿಗೆ , ಮತ್ತೆ ಮಳೆ! & ಇತರೆ…samajamukhi.net news round 09-04-25

ಸುದ್ದಿ,ವಿಡಿಯೋಗಳಿಗಾಗಿ ನೋಡಿ, samajamukhi.net news portal, samaajamukhi youtube chAnnel, samaajamukhi.net fb page ನಮ್ಮ ಘಟಕಗಳನ್ನು subscribe ಆಗಿ ಪ್ರೋತ್ಸಾಹಿಸಿ, ಜಾಹೀರಾತಿಗಾಗಿ ಸಂಪರ್ಕಿಸಿರಿ...

ಶುಕ್ರವಾರ ಸಿದ್ಧಾಪುರದಲ್ಲಿ ಒಕ್ಕಲಿಗರ ಬೃಹತ್‌ ಕಾರ್ಯಕ್ರಮ

ಸಿದ್ದಾಪುರ: ಸಿದ್ದಾಪುರ ತಾಲ್ಲೂಕಾ ಕರೆ ಒಕ್ಕಲಿಗರ ಸಂಘದಿಂದ ಏ.11 ರಂದು ತಾಲ್ಲೂಕಿನ ಹಲಗಡಿಕೊಪ್ಪದಲ್ಲಿ ಕರೆ ಒಕ್ಕಲಿಗರ ಸಮುದಾಯ ಭವನ ಶಂಕುಸ್ಥಾಪನಾ ಕಾರ್ಯಕ್ರಮ ಹಮ್ಮಿಕ್ಕೊಂಡಿದ್ದು, ಶ್ರೀ...

samajamukhi.net news round….ಉಂಚಳ್ಳಿ ಜಲಪಾತದ ಬಳಿ ಎನ್.ಎಸ್.ಎಸ್.‌ ಶ್ರಮದಾನ,ಇನ್ಮುಂದೆ ವಿಧಾನಸೌಧ ವೀಕ್ಷಣೆಗೂ ಶುಲ್ಕ: ಎಷ್ಟು…?

ಇನ್ಮುಂದೆ ವಿಧಾನಸೌಧ ವೀಕ್ಷಣೆಗೂ ಶುಲ್ಕ: ಎಷ್ಟು…?: ಇಲ್ಲಿದೆ ಮಾಹಿತಿ ಆಡಳಿತ ಶಕ್ತಿಕೇಂದ್ರ ವಿಧಾನಸೌಧಕ್ಕೆ ಶಾಶ್ವತ ವಿದ್ಯುತ್ ದೀಪಾಲಂಕಾರವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಭಾನುವಾರ ಲೋಕಾರ್ಪಣೆಗೊಳಿಸಿದ ಬೆನ್ನಲ್ಲೇ...

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ, ಬಿಂದು, ಬಿಂದುಶ್ರೀ ಭುವನಶ್ರೀ, c – ಚಿರಶ್ಮಿ, ಚಿತ್ರ, ಚಿತ್ರಪ್ರಭಾ, ಚಿಂತನಾ, ಚಿನ್ಮಯಿ, ಚಿಂಗಾರಿ, ಚಿತ್ತಾಕರ್ಶಿನಿ, ಚಿತ್ತಾಕರ್ಶಿಣಿ, D- ಧರಣಿ, ಧನ್ವಿತಾ, ಧ🎇ಮನಿ, dhanamani ಧಾರಿಣಿ, ದಮಯಂತಿ ,ಧೃತಿ,ದುರ್ಗಾ,...

Recommended For You

About the Author: Kanneshwar Naik

Leave a Reply

Your email address will not be published. Required fields are marked *