

ಸಿದ್ದಾಪುರ: ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ನೆರೆ ಪರಿಹಾರ ನೀಡುವಲ್ಲಿ ತಾರತಮ್ಯ ನೀತಿ ಅನುಸರಿಸುತಿದ್ದಾರೆ. ಜಾತಿ ರಾಜಕಾರಣ ಮಾಡುತ್ತಿದ್ದಾರೆ ಎಂದು ತಾಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಸಂತ ನಾಯ್ಕ ಮನಮನೆ ಆರೋಪಿಸಿದರು.
ಅವರು ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.
ತಾರೇಸರದಲ್ಲಿ ಹೊಳೆಯಲ್ಲಿ ಜಾರಿ ಮ್ರತಪಟ್ಟಿರವ ಪರಮೇಶ್ವರ ಹೆಗಡೆ ಗೆ ತಕ್ಷಣ ಪರಿಹಾರ ನೀಡಿದ್ದಾರೆ ಆದರೆ ಕಳೆದ ವರ್ಷ ಮಳೆಗಾಲದಲ್ಲಿ ಹಾರ್ಸಿಕಟ್ಟಾದ ನಾಗರಾಜ ಮಡಿವಾಳ ಮಗಳು ಸಾವಿಗಿಡಾಗಿದ್ದಕ್ಕೆ ಇನ್ನೂ ಪರಿಹಾರ ಒದಗಿಸಿಲ್ಲ.ಇದು ತಾರತಮ್ಯ ನೀತಿ ತೋರಿಸುತ್ತದೆ ಮತ್ತು ಜಾತಿಯತೆ ಯನ್ನು ತೋರಿಸುತ್ತಿದೆ. ಜನಪ್ರತಿನಿದಿಗಳಾದವರು ಜಾತಿ ಮತ ಪಂತವಿಲ್ಲದೆ ಅಧಿಕಾರಿಗಳಿಗೆ ಸೂಚನೆ ನೀಡಿ ಮಾನವೀಯತೆ ದ್ರಷ್ಟಿಯಿಂದ ಪರಿಹಾರ ಒದಗಿಸಿಕೊಡಬೇಕು. ಜವಾಬ್ದಾರಿ ಸ್ಥಾನ ದಲ್ಲಿರುವವರು ತಮ್ಮ ಸ್ಥಾನವರಿತು ಕೆಲಸ ಮಾಡಬೇಕು. ಒಬ್ಬರಿಗೊಂದು ಮತ್ತೋಬ್ಬರಿಗೊಂದು ರೀತಿ ಮಾಡಬಾರದು. ಕೂಡಲೇ ನಾಗರಾಜ ಮಡಿವಾಳ ಕುಟುಂಬ ಕ್ಕೆ ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು.
ತಾಲೂಕಿನಾದ್ಯಂತ ಅಂಗಡಿಗಳಲ್ಲಿ ಅನಧಿಕೃತ ವಾಗಿ ಸರಾಯಿ ಮಾರಾಟ ನಡೆಯುತ್ತಿದೆ. ಇದನ್ನು ಕೂಡಲೇ ನಿಲ್ಲಿಸಬೇಕು. ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್ ಭೀಮಣ್ಣ ಆಯ್ಕೆ ಯಾದರೇ ಹಳ್ಳಿ ಹಳ್ಳಿಗಳಲ್ಲಿ ಸರಾಯಿ ಮಾರಾಟ ಮಾಡತಾರೇ ಅಂತ ಹೇಳಿ ಈಗ ಏನು ಮಾಡ್ತಿದ್ದಾರೆ. ಇದನ್ನು ನಿಲ್ಲಿಸದಿದ್ದರೆ ಸಭಾಧ್ಯಕ್ಷರ ಮನೆ ಎದುರೇ ಧರಣಿ ನಡೆಸುವುದಾಗಿ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಬಾಲಕ್ರಷ್ಣ ನಾಯ್ಕ ಕೋಲಸಿರ್ಸಿ, ನಾಸಿರ ವಲ್ಲಿ ಖಾನ, ಸುರೇಂದ್ರ ಗೌಡ, ಸಂತೋಷ ಹಾರ್ಸಿಕಟ್ಟಾ, ಮುನಾವರ ಗುರ್ಖಾರ, ಗಂಗಾಧರ ಮಡಿವಾಳ, ಸಾವೇರ್ ಡಿ ಸಿಲ್ವಾ ಉಪಸ್ಥಿತ ರಿದ್ದರು.
https://www.youtube.com/channel/UCTvZUkLGbidUHKd8BHTMJbg

ಕಾರ್ಯಾಗಾರ ಉದ್ಘಾಟಿಸಿದ ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ಪ್ರಶಾಂತ ರಾವ್ ಮಾತನಾಡಿ ಹೆಣ್ಣು ಮನಸ್ಸು ಮಾಡಿದರೆ ಸಾಧಿಸುತ್ತಾಳೆ, ಶ್ರದ್ಧೆ ಯಿಂದ ನಿರಂತರವಾಗಿ ಪ್ರಯತ್ನ ಪಟ್ಟರೆ ಸಮಾಜದಲ್ಲಿ ಮುಂದೆ ಬರಲು ಸಾಧ್ಯ. ತರಬೇತಿ ಯ ಲಾಭ ಪಡೆದುಕೊಳ್ಳಿ ಎಂದರು.
ವಿಜಯ ಆರ್ಥಿಕ ಸಾಕ್ಷರತಾ ಕೇಂದ್ರದ ಸಮಾಲೋಚಕರಾದ ಶಿವಶಂಕರ ಎನ್ ಕೆ ಮಾತನಾಡಿ ಬ್ಯಾಂಕ್ ನಲ್ಲಿರುವ ಯೋಜನೆಗಳು, ಪ್ರಧಾನ ಮಂತ್ರಿ ಸುರಕ್ಷಾ ಭೀಮಾ ಯೋಜನೆ ಪ್ರಧಾನ ಮಂತ್ರಿ ಸುರಕ್ಷಾ ಬೀಮಾ ಯೋಜನೆ, ಹಾಗೂ ಬ್ಯಾಂಕ್ ನಲ್ಲಿ ಇರುವ ಸೌಲಭ್ಯಗಳ ಕುರಿತು ಮಾಹಿತಿ ನೀಡಿದರು.
ಕುಮಟಾ ಆರ್ ಸೆಟ್ಟಿಯ ಗೌರೀಶ್ ನಾಯ್ಕ ಮಾತನಾಡಿ ಉದ್ಯೋಗ ಇಲ್ಲದಿದ್ದರೆ ಸಮಾಜದಲ್ಲಿ ಬೆಲೆ ಇಲ್ಲ, ಸರಕಾರ ಹಲವಾರು ಅವಕಾಶ ಮಾಡಿ ಕೊಟ್ಟು ತರಭೇತಿ ಹಾಗೂ ಸಾಲಸೌಲಭ್ಯ ನೀಡುತಿದೆ ಇದರ ಸದುಪಯೋಗ ಪಡೆದುಕೊಳ್ಳುವಂತೆ ತಿಳಿಸಿದರು.
ತಾಲೂಕು ಕಾರ್ಯ ಕ್ರಮ ವ್ಯವಸ್ಥಾಪಕ ನರ್ತನಕುಮಾರ ,ವಲಯ ಮೇಲ್ವಿಚಾರಕಿಯರಾದ ಮಾಲತಿ ನಾಯ್ಕ,ಉಷಾ, ಉಪಸ್ಥಿತರಿದ್ದರು.
ಮಾಲತಿ ನಾಯ್ಕ ಬೇಡ್ಕಣಿ ಸ್ವಾಗತಿಸಿ ನಿರೂಸಿದರು.

