ಸಿದ್ದಾಪುರ: ನಿವೃತ್ತ ಸೈನಿಕರ ಸಂಘ ಸಿದ್ದಾಪುರ ಹಾಗೂ ಗೆಳೆಯರ ಬಳಗದ ವತಿಯಿಂದ ಜುಲೈ 26 ರಂದು ಸಂಜೆ ಪಟ್ಟಣದಲ್ಲಿ ಕಾರ್ಗಿಲ್ ವಿಜಯೋತ್ಸವ ಆಚರಿಸಲಾಗುವುದು.
https://samajamukhi.net/2022/07/24/haladakatta-hs-samsat-inaguration/?fbclid=IwAR1Rokir2MskkHZtWi_eOlec5rowJGn
ಈ ಕುರಿತು ಪಟ್ಟಣದ ಬಾಲಭವನದಲ್ಲಿ ಸಂಘದ ಅಧ್ಯಕ್ಷ ವೀರಭದ್ರ ಪಾಟೀಲ್ ಮಾಹಿತಿ ನೀಡಿ, ಕಾರ್ಗಿಲ್ ವಿಜಯ ದಿವಸ ಹಿನ್ನೆಲೆಯಲ್ಲಿ ಸಿದ್ದಾಪುರ ಪಟ್ಟಣದ ರಾಮಕೃಷ್ಣ ಹೆಗಡೆ ವೃತ್ತದಲ್ಲಿ ಮಂಗಳವಾರ ಸಂಜೆ 6.30 ಕ್ಕೆ ಕಾರ್ಯಕ್ರಮ ನಡೆಯಲಿದೆ. ಅದಕ್ಕೂ ಪೂರ್ವದಲ್ಲಿ ಪ್ರಮುಖ ಬೀದಿಗಳಲ್ಲಿ ಪಂಜಿನ ಮೆರವಣಿಗೆ ನಡೆಯಲಿದೆ.
ಭಾರತ ಮಾತೆಯ ಭಾವಚಿತ್ರಕ್ಕೆ ಪುಷ್ಪಾರ್ಚನೆ, ಕಾರ್ಗಿಲ್ ಯುದ್ದದಲ್ಲಿ ಹುತಾತ್ಮರಾದ ವೀರ ಯೋಧರಿಗೆ ಶ್ರದ್ಧಾಂಜಲಿ ಸಲ್ಲಿಸಲಾಗುವುದು. ನಂತರ ರಾಷ್ಟ್ರಗೀತೆಯೊಂದಿಗೆ ಕಾರ್ಯಕ್ರಮ ಮುಕ್ತಾಯಗೊಳ್ಳಲಿದೆ. ದೇಶಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು ಎಂದರು.
ಈ ವೇಳೆ ಸಂಘದ ಉಪಾಧ್ಯಕ್ಷ ರಾಜೇಶ ನಾಯ್ಕ, ಕಾರ್ಯದರ್ಶಿ ಕುಮಾರ ಗೌಡ, ನಿವೃತ್ತ ಸೈನಿಕ ಗಣಪತಿ ಮೇಸ್ತಾ, ಗೆಳೆಯರ ಬಳಗದ ಎ.ಜಿ.ನಾಯ್ಕ ಕಡಕೇರಿ ಉಪಸ್ಥಿತರಿದ್ದರು.